‘ಮಳೆಗಾಲದಲ್ಲಿ ಕಾಲುಗಳು ಹೆಚ್ಚು ಸಮಯ ನೀರಿನಲ್ಲಿರುವುದರಿಂದ ಕೆಲವರಿಗೆ ಕಾಲ್ಬೆರಳುಗಳ ನಡುವೆ ಒಂದು ರೀತಿಯ ಚರ್ಮರೋಗವಾಗುತ್ತದೆ. ಈ ರೋಗಕ್ಕೆ ‘ಕೆಸರುಹುಣ್ಣು’ ಎನ್ನುತ್ತಾರೆ. ಇದರಲ್ಲಿ ಬೆರಳುಗಳ ನಡುವೆ ಬಿರುಕುಗಳು ಬೀಳುತ್ತವೆ, ಅಲ್ಲಿನ ಚರ್ಮವು ಹಸಿಯಾಗಿದ್ದು ಅದಕ್ಕೆ ದುರ್ಗಂಧ ಬರುವುದು, ತುರಿಸುವುದು, ಈ ರೀತಿಯ ತೊಂದರೆಗಳಾಗುತ್ತವೆ. ಇದಕ್ಕಾಗಿ ಮುಂದಿನಂತೆ ಸುಲಭ ಪರಿಹಾರನ್ನು ಮಾಡಿ ನೋಡಬೇಕು.
ಪ್ರತಿದಿನ ರಾತ್ರಿ ಮಲಗುವ ಮುನ್ನ ಕಾಲುಗಳನ್ನು ಸಾಬೂನಿನಿಂದ ಸ್ವಚ್ಛವಾಗಿ ತೊಳೆಯಬೇಕು ಮತ್ತು ಬೆರಳುಗಳಲ್ಲಿನ ಬಿರುಕುಗಳಿಗೆ ಕೊಬ್ಬರಿಎಣ್ಣೆಯನ್ನು ಹಚ್ಚಬೇಕು. ತೊಂದರೆ ಹೆಚ್ಚಿದ್ದರೆ ಎಣ್ಣೆಯನ್ನು ಹಚ್ಚುವ ಮೊದಲು ಕೆಂಡದ ಮೇಲೆ ಧೂಪವನ್ನು ಹಾಕಿ ಸುಮಾರು ೫ ನಿಮಿಷಗಳ ವರೆಗೆ ಅದರ ಹೊಗೆಯಲ್ಲಿ ಪಾದಗಳನ್ನಿಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೩೧.೭.೨೦೨೩)