‘ಕಾರ್ಡಿಯಾಕ್‌ ಅರೆಸ್ಟ್‌’ ಆಗಿರುವ ರೋಗಿಗೆ ‘ಕೋಲ್ಸ್ – ಕಂಪ್ರೆಶನ್‌ ಓನ್ಲೀ ಲೈಫ್‌ ಸಪೋರ್ಟ್‌’ ಈ ಕಾರ್ಡಿಯಾಕ್‌ ರಿಸಸ್ಸಿಟೇಶನ್’ (ಹೃದಯ-ಪುನರುಜ್ಜೀವನ ತಂತ್ರ’) ಪ್ರಕ್ರಿಯೆ, ಇದೊಂದು ಸಂಜೀವನಿ !

‘ವಿದೇಶಗಳಲ್ಲಿನ ಸಾಮಾನ್ಯ ನಾಗರಿಕರಿಗೂ ‘ಕಾರ್ಡಿಯಾಕ್‌ ರಿಸಸ್ಸಿಟೇಶನ್‌’ನ ಮಾಹಿತಿ  ಇರುತ್ತದೆ. ಆದ್ದರಿಂದ ಅವರಿಗೆ ರೋಗಿಗಳಿಗೆ ತಕ್ಷಣ ಪ್ರಥಮೋಪಚಾರ ನೀಡಿ ಆಸ್ಪತ್ರೆಗೆ ತಲುಪುವ ವರೆಗೆ ಪ್ರಾಣ ಉಳಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಕೆಲವೊಂದು ಪ್ರದೇಶಗಳಲ್ಲಿ ಈ ಚಿಕಿತ್ಸಾ ಪದ್ಧತಿಯನ್ನು ಕಲಿಸುವ ಪ್ರಕ್ರಿಯೆ ಆರಂಭವಾಗಿದೆ; ಆದರೆ ಇನ್ನೂ ಎಲ್ಲ ಕಡೆಗಳಲ್ಲಿ ಆಗಿಲ್ಲ. ‘ಸಾಮಾನ್ಯ ವ್ಯಕ್ತಿ ಕೂಡ ರೋಗಿ ನಾಗರಿಕರಿಗೆ  ಸಹಾಯ ಮಾಡಬಹುದು’, ಎಂಬುದು ಎಲ್ಲರಿಗೂ ತಿಳಿಯಬೇಕು, ಎಂಬುದರ ಬಗ್ಗೆ ಪ್ರಬೋಧನೆ ಮಾಡುವುದು ಕಾಲದ ಅವಶ್ಯಕತೆ ಆಗಿದೆ.

ಇತ್ತೀಚೆಗೆ ‘ಕೋವಿಡ್’ ಮಹಾಮಾರಿಯ ನಂತರ ‘ಕಾರ್ಡಿಯಾಕ್‌ ಅರೆಸ್ಟ್‌’ ಆಗುವ (ಹೃದಯ ಅನಿರೀಕ್ಷಿತ ನಿಂತು ಹೋಗುವ) ಪ್ರಮಾಣ ಯುವಪೀಳಿಗೆಯಲ್ಲಿಯೂ ಹೆಚ್ಚಾಗಿದೆ. ಒಂದು ವೇಳೆ ೩-೪ ನಿಮಿಷಗಳಲ್ಲಿ ರೋಗಿಯ ಹೃದಯ ಬಡಿತ ಆರಂಭವಾಗದಿದ್ದರೆ, ಮೆದುಳಿನ ರಕ್ತ ಪೂರೈಕೆ ನಿಂತು ಹೋಗಿ ಅವನ ಮೆದುಳಿನ ಕಾರ್ಯಕ್ಷಮತೆ ನಿಂತು ಹೋಗುತ್ತದೆ. ಅದರಿಂದ ಮೆದುಳು ನಿಷ್ಕ್ರಿಯವಾಗುತ್ತದೆ (ಡ್ಯಾಮೇಜ್‌). ಇಂತಹ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ‘ಕಾರ್ಡಿಯಾಕ್‌ ರಿಸಸ್ಸಿಟೇಶನ್’ ಅಂದರೆ ‘ಹೃದಯ-ಪುನರುಜ್ಜೀವನ ತಂತ್ರ’ ತಿಳಿದಿರಬೇಕು. ಇದರ ಮಾಹಿತಿಯನ್ನು ಮುಂದೆ ಕೊಡಲಾಗಿದೆ.

‘ಎದೆ ಒತ್ತುವ’ ಚಿಕಿತ್ಸಾ ಪದ್ಧತಿ ಏಕೆ ತಿಳಿದಿರಬೇಕು ? 

೨೦೨೨ ರಲ್ಲಿ ಅಮೇರಿಕಾದ ಟೆಕ್ಸಾಸ್‌ನಲ್ಲಿ ಒಬ್ಬ ಬಾಕ್ಸರ್‌ ‘ಕಾರ್ಡಿಯಾಕ್‌ ಎರೆಸ್ಟ್ ಆಗಿ ಕುಸಿದು ಬಿದ್ದನು. ಅವನ ಜೊತೆಗಿದ್ದ ಬಾಕ್ಸರ್‌ಗೆ ‘ಕಾರ್ಡಿಯಾಕ್‌ ರಿಸಸ್ಸಿಟೇಶನ್’ (ಹೃದಯ-ಪುನರುಜ್ಜೀವನ ತಂತ್ರ’) ತಿಳಿದಿತ್ತು, ಅವರು ಅವನಿಗೆ ಚಿಕಿತ್ಸೆ ಮಾಡಿ ಅವನ ಪ್ರಾಣ ಉಳಿಸಿದರು. ಆಗಸ್ಟ್ ೨೦೨೩ ರಲ್ಲಿ ಭಾರತದಲ್ಲಿ ೫೨ ವರ್ಷ ವಯಸ್ಸಿನ ಒಬ್ಬ ಬ್ಯಾಡ್‌ಮಿಂಟನ್‌ ಆಟಗಾರ ಕುಸಿದು ಬಿದ್ದು ಸ್ಥಳದಲ್ಲಿಯೇ ಪ್ರಾಣ ಬಿಟ್ಟರು; ಏಕೆಂದರೆ ಸಮೀಪವಿದ್ದ ಆಟಗಾರರಿಗೆ ‘ಇಂತಹ ಪ್ರಸಂಗದಲ್ಲಿ ಏನು ಮಾಡಬೇಕು’, ಎಂಬುದು ತಿಳಿದಿರಲಿಲ್ಲ. ಇದರಿಂದ ‘ಕಾರ್ಡಿಯಾಕ್‌ ರಿಸಸ್ಸಿಟೇಶನ್’ ತಿಳಿದಿರುವುದರ ಮಹತ್ವ ಗಮನಕ್ಕೆ ಬರುತ್ತದೆ.

ಕೋಲ್ಸ್ – ಕಂಪ್ರೇಶ್ಸನ್‌ ಓನ್ಲೀ ಲೈಫ್‌ ಸಪೋರ್ಟ್‌’ (COLS: Compression Only Life Support)’ಈ ‘ಕಾರ್ಡಿಯಾಕ್‌ ರಿಸಸ್ಸಿಟೇಶನ್‌’ನ ಪ್ರಕ್ರಿಯೆ ಕಲಿತುಕೊಳ್ಳಲು ಸ್ಥಳೀಯ ಆರೋಗ್ಯ ಕೇಂದ್ರ ಅಥವಾ ಸರಕಾರಿ ಆಸ್ಪತ್ರೆಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಈ ಪ್ರಕ್ರಿಯೆ ಯನ್ನು ಗೊಂಬೆಯ ಮೇಲೆ ಕಲಿಸಲಾಗುತ್ತದೆ ಹಾಗೂ ಅದರ ಅಭ್ಯಾಸವನ್ನೂ ಮಾಡಿಸಿಕೊಳ್ಳಲಾಗುತ್ತದೆ. ಈ ವಿಷಯವನ್ನು ತಜ್ಞರಿಂದ ಕಲಿತುಕೊಂಡು ನಾವು ಜನರ ಪ್ರಾಣ ಉಳಿಸಬಹುದು !’

ಡಾ. (ಸೌ.) ಲಿಂಡಾ ಬೋರಕರ, ಫೋಂಡಾ ಗೋವಾ. (೨೦.೩.೨೦೨೪) 

ಡಾ. (ಸೌ.) ಲಿಂಡಾ ಬೋರಕರ

೧. ರೋಗಿಗೆ ಚಿಕಿತ್ಸೆ ನೀಡುವಾಗ ಯಾವ ಕಾಳಜಿ ವಹಿಸಬೇಕು ?

೧ ಅ. ಮೊದಲು ತನ್ನ ಮತ್ತು ರೋಗಿಯ ಸುರಕ್ಷತೆಯನ್ನು ನೋಡಿಕೊಳ್ಳ ಬೇಕು ! : ‘ತನಗೆ ಮತ್ತು ರೋಗಿಗೆ ಸ್ಥಳ ಸುರಕ್ಷಿತವಾಗಿದೆಯೆ ?’, ಎಂಬುದನ್ನು ಮೊದಲು ನೋಡಬೇಕು. ರೋಗಿಯನ್ನು ಅಪಘಾತದ ಸ್ಥಳದಿಂದ ಬದಿಗೆ ತರಬೇಕು, ಉದಾಹರಣೆಗೆ ಆ ಸ್ಥಳ ಹೆದ್ದಾರಿಯಲ್ಲಿರಬಹುದು, ಅಂತಹ ಸಂದರ್ಭದಲ್ಲಿ ‘ನಾವು ಕೂಡ ಸುರಕ್ಷಿತ ವಾಗಿರಬೇಕು’, ಎಂಬುದನ್ನು ಗಮನದಲ್ಲಿಡಬೇಕು.

೧ ಆ. ‘ರೋಗಿಗೆ ಪ್ರಜ್ಞೆ ಇದೆಯೆ ?’, ಎಂಬುದನ್ನು ನೋಡಬೇಕು ! : ‘ರೋಗಿಗೆ ಪ್ರಜ್ಞೆ ಇದೆಯೆ ? ಎಂಬುದನ್ನು ತಿಳಿದುಕೊಳ್ಳಲು ಅವನ ಭುಜಕ್ಕೆ ೨-೩ ಸಲ ತಟ್ಟಿ ಅವನ ಹೆಸರನ್ನು ಕೇಳಬೇಕು ಹಾಗೂ ಅವನಿಂದ ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಬೇಕು. ‘ರೋಗಿಯು ಉಸಿರಾಡುತ್ತಿದ್ದಾನೆಯೇ’ ಎಂಬುದನ್ನು ನೋಡಬೇಕು.

೧ ಇ. ತತ್ಪರತೆಯಿಂದ ಸಹಾಯ ಪಡೆಯುವುದು : ಎದೆ ಒತ್ತಲು ಆರಂಭಿಸುವ ಮೊದಲು ತಕ್ಷಣ ತಾನೇ ಅಥವಾ ಇತರರಿಗೆ ಹೇಳಿ ಸ್ಥಳೀಯ ಆಪತ್ಕಾಲೀನ ಸಹಾಯ ಕೇಂದ್ರದ ಸಂಪರ್ಕ ಕ್ರಮಾಂಕವನ್ನು (೧೦೮) ಸಂಪರ್ಕಿಸಿ ‘ರೋಗಿ ಇರುವ ಸ್ಥಳವನ್ನು ತಿಳಿಸಬೇಕು, ಅದರಿಂದ ಅಂಬ್ಯೂಲೆನ್ಸ್ ಬರುವ ಪ್ರಕ್ರಿಯೆ ಆರಂಭವಾಗುವುದು !

೨. ‘ಕೋಲ್ಸ್ – ಕಂಪ್ರೆಶನ್‌ ಓನ್ಲೀ ಲೈಫ್‌ ಸಪೋರ್ಟ್‌’ ಈ ಚಿಕಿತ್ಸಾಪದ್ಧತಿ ಎಂದರೇನು ?

ಕೇವಲ ಎದೆಯ ಮೇಲೆ ಒತ್ತಡ ನೀಡಿ ರೋಗಿಯ ಪ್ರಾಣವನ್ನು ಉಳಿಸಬಹುದು. ‘ಕೋಲ್ಸ್‌-ಕಂಪ್ರೆಶನ್‌ ಓನ್ಲೀ ಲೈಪ್‌ ಸಪೋರ್ಟ್‌’ (COLS : Compression Only Life Support) ಇದೊಂದು ಚಿಕಿತ್ಸಾ ಪದ್ಧತಿಯಾಗಿದ್ದು ಅದು ‘ಕಾರ್ಡಿಯಾಕ್‌ ಅರೆಸ್ಟ್‌’ (ಅನಿರೀಕ್ಷಿತವಾಗಿ ಹೃದಯ ನಿಂತು ಹೋಗುವುದು) ಆಗಿರುವುದನ್ನು ಬೇಗನೆ ಗುರುತಿಸಿ ಹೃದಯಕ್ರಿಯೆಯನ್ನು ಪುನರುಜ್ಜೀವನಗೊಳಿಸಲು ರೋಗಿಯ ಎದೆಯ ಮೇಲೆ ತಕ್ಷಣ ಒತ್ತಡ ನೀಡುವುದು ಹಾಗೂ ವೈದ್ಯಕೀಯ ಸೌಲಭ್ಯವನ್ನು ನೀಡಲು ರೋಗಿಯನ್ನು ತ್ವರಿತಗತಿಯಲ್ಲಿ ಆಸ್ಪತ್ರೆಗೆ ಸೇರಿಸುವುದು’, ಇದರ ಮೇಲೆ ಒತ್ತಡವನ್ನು ಕೊಡುತ್ತದೆ.

೩. ರೋಗಿಯ ಎದೆಯನ್ನು (Chest Compression) ಹೇಗೆ ಒತ್ತುವುದು ?

ಮೊದಲು ರೋಗಿಯ ಹೃದಯ (ಹಾರ್ಟ್‌) ಕೆಲಸ ಮಾಡುವುದನ್ನು ನಿಲ್ಲಿಸಿದೆಯೇ ಎಂಬುದನ್ನು ನೋಡಬೇಕು. ಇದನ್ನು ಕೈಯ ಅಥವಾ ಕುತ್ತಿಗೆಯಲ್ಲಿನ ನಾಡಿಯನ್ನು (ಪಲ್ಸ್‌) ನೋಡಿ ತಿಳಿದುಕೊಳ್ಳಬಹುದು

೩ ಅ. ರೋಗಿಯನ್ನು ಸಮತಟ್ಟಾದ ಸ್ಥಳದಲ್ಲಿ ಅಂಗಾತ ಮಲಗಿಸ ಬೇಕು ! : ಗಂಭೀರ ಸ್ಥಿತಿಯಲ್ಲಿರುವ ರೋಗಿಯನ್ನು ನೆಲದ ಮೇಲೆ ಅಥವಾ ಯಾವುದಾದರೂ ಸಮತಟ್ಟಾದ ಸ್ಥಳದಲ್ಲಿ ಅಂಗಾತವಾಗಿ ಮಲಗಿಸಬೇಕು. ಅಂತಹ ಸ್ಥಳ ಇಲ್ಲದಿದ್ದರೆ ಅಂಗಾತ ಮಲಗಿರುವ ರೋಗಿಗೆ ಅವನು ಇರುವ ಸ್ಥಿತಿಯಲ್ಲಿಯೆ ಪ್ರಥಮೋಪಚಾರ ಆರಂಭಿಸಬೇಕು.

೩ ಆ. ಪ್ರಥಮೋಪಚಾರ ಮಾಡುವ ವ್ಯಕ್ತಿ ರೋಗಿಯ ಪಕ್ಕದಲ್ಲಿ ಮೊಣಕಾಲೂರಿ ಕುಳಿತುಕೊಳ್ಳಬೇಕು !

೧. ಪ್ರಥಮೋಪಚಾರ ಮಾಡುವ ವ್ಯಕ್ತಿ ರೋಗಿಯ ಭುಜ ಮತ್ತು ಎದೆಯ ಒಂದು ಪಕ್ಕದಲ್ಲಿ ಮೊಣಕಾಲೂರಿ ಕುಳಿತುಕೊಳ್ಳಬೇಕು.

೨. ರೋಗಿಯು ಬಟ್ಟೆಯನ್ನು ಧರಿಸಿದ್ದರೆ ಎದೆಯ ಭಾಗವನ್ನು ತೆರವು ಗೊಳಿಸಬೇಕು. ಪೂರ್ಣ ಬಟ್ಟೆಯನ್ನು ತೆಗೆಯಲು ಸಮಯ ವ್ಯರ್ಥ ಮಾಡಬಾರದು (ಹೆಣ್ಣು ಮಕ್ಕಳಾದರೆ ಕಾಳಜಿ ವಹಿಸಬೇಕು)

೩ ಇ. ಒಂದು ಕೈಯ ಅಂಗೈಯನ್ನು ರೋಗಿಯ ಎದೆಯ ಮಧ್ಯಭಾಗದ ಎಲುಬಿನ (‘ಸ್ಟರ್ನಮ್‌’ನ) ಕೆಳಭಾಗದಲ್ಲಿಡಬೇಕು !

೧. ಒಂದು ಕೈಯ ತರ್ಜನಿ (ಹೆಬ್ಬರಳಿನ ಪಕ್ಕದ ಬೆರಳು) ಮತ್ತು ಮಧ್ಯಮಾದ (ಮಧ್ಯದ ಬೆರಳು) ಸಹಾಯದಿಂದ ರೋಗಿಯ ಎದೆಯ ಎಲ್ಲಕ್ಕಿಂತ ಕೆಳಗಿನ ಪಕ್ಕೆಲುಬನ್ನು ಕಂಡು ಹಿಡಿಯಬೇಕು.

೨. ತರ್ಜನಿ ಮತ್ತು ಮಧ್ಯಮಾ ಇವೆರಡೂ ಬೆರಳುಗಳಿಂದ ಪಕ್ಕೆಲುಬುಗಳ ಕೆಳಗಿನ ಭಾಗದ ಆಧಾರದಲ್ಲಿ ಎದೆ ಮತ್ತು ಹೊಟ್ಟೆಯ ಅಂಚಿನಲ್ಲಿರುವ ಕುಳಿಯನ್ನು ಸ್ಪರ್ಶ ಮಾಡಬೇಕು. (ಅಲ್ಲಿ ಪಕ್ಕೆಲುಬು ಮತ್ತು ಎದೆಯ ಎಲುಬು (‘ಸ್ಟರ್ನಮ್‌’) ಜೋಡಿಸಲ್ಪಟ್ಟಿರುತ್ತವೆ.)

೩. ಎದೆಯ ಮಧ್ಯಭಾಗದ ಎಲುಬಿನ ಕೆಳಗಿನ ತುದಿಯಿಂದ ೨-೩ ಸೆಂ.ಮೀ. ಅಂತರದಲ್ಲಿ ಇನ್ನೊಂದು ಕೈಯ ಅಂಗೈಯ ಮಣಿಕಟ್ಟಿನ ಮೃದುವಾದ ಭಾಗವನ್ನಿಡಬೇಕು.

೪. ರೋಗಿಯ ಎದೆಯ ಮೇಲಿಟ್ಟಿರುವ ಮೊದಲ ಕೈಯ ಮೇಲೆ ಇನ್ನೊಂದು ಕೈಯ ಅಂಗೈಯನ್ನಿಡುವಾಗ ಇನ್ನೊಂದು ಕೈಯ ಬೆರಳುಗಳು ಮೊದಲ ಕೈಯ ಬೆರಳುಗಳ ನಡುವೆ ಪೋಣಿಸಬೇಕು. (ಇಂಟರ್‌ಲಾಕ್‌ ಆಗಬೇಕು) ಮೊದಲ ಕೈಯ ಬೆರಳುಗಳ ಮುಂದಿನ ಭಾಗಗಳನ್ನು ಸಾಧ್ಯವಿದ್ದಷ್ಟು ರೋಗಿಯ ಎದೆಯ ಮೇಲಿಡಬಾರದು. (ಛಾಯಾಚಿತ್ರ ೧)

೩ ಈ. ರೋಗಿಯ ಎದೆಯನ್ನು ಹೇಗೆ ಒತ್ತಬೇಕು ?

೧. ಪ್ರಥಮೋಪಚಾರ ಮಾಡುವ ವ್ಯಕ್ತಿ ಮೊಣಕಾಲೂರಿ ಮೊಣಕಾಲುಗಳ ಮೇಲೆ ನಿಲ್ಲಬೇಕು.

೨. ಎರಡೂ ಕೈಗಳ ಮಣಿಕಟ್ಟಿನಿಂದ ಭುಜದ ವರೆಗೆ ಆಯಾ ಕೈಯ ಅಂಗೈಯೊಂದಿಗೆ ಲಂಬಕೋನದಲ್ಲಿಡಬೇಕು.

೩. ಎರಡೂ ಮೊಣಕೈಗಳು ನೇರ ಇರಬೇಕು.

೪. ಶರೀರದ ಮೇಲ್ಭಾಗದ ಭಾರವನ್ನು ಸಂಪೂರ್ಣ ಉಪಯೋಗಿಸಿ, ಅಂದರೆ ಭುಜಗಳಿಂದ ಶಕ್ತಿ ಹಾಕಿ ಕೈಗಳ ಅಂಗೈಯಿಂದ ರೋಗಿಯ ಎದೆಯ ಮಧ್ಯಭಾಗದ ಎಲುಬಿನ ಮೇಲೆ ಒತ್ತಡ ಹಾಕಬೇಕು. (ಛಾಯಾಚಿತ್ರ ೨)

೫. ಒತ್ತಡ ನೀಡುವಾಗ ಎದೆಯ ಎಲುಬು ಕನಿಷ್ಠ ೫ ಸೆಂ. ಮೀ.ನಷ್ಟು ಒಳಗೆ ಹೋಗುವಷ್ಟು ಒತ್ತಡ ಹಾಕಬೇಕು.

೬. ಒತ್ತಡದ ವೇಗ ಕನಿಷ್ಠ ‘ಪ್ರತಿ ೧೮ ಸೆಕೆಂಡ್‌ಗಳಿಗೆ ೩೦ ಸಲ, ಹೀಗಿರಬೇಕು. ೧, ೨, ೩… ಹೀಗೆ ೩೦ ಅಂಕಗಳನ್ನು ಎಣಿಸುವಷ್ಟರವರೆಗೆ ಒತ್ತಡ ನೀಡಬೇಕು. ‘೩೦ ಅಂಕಗಳ ವರೆಗೆ ಒತ್ತಡ ನೀಡಿ ಆದ ನಂತರ ಪುನಃ ೧ ರಿಂದ ೩೦ ರ ವರೆಗೆ ಎಣಿಸುತ್ತಾ ಒತ್ತಡ ನೀಡಬೇಕು. ಹೀಗೆ ೫ ಬಾರಿ ಮಾಡಬೇಕು.

೭. ಎದೆಗೆ ಒಮ್ಮೆ ಒತ್ತಡ ನೀಡಿ ಆದನಂತರ ಅಲ್ಲಿಂದ ಕೈ ತೆಗೆಯ ಬಾರದು; ಆದರೆ ಈಗ ಒತ್ತಡ ನೀಡಬಾರದು.

೮. ಎಲ್ಲಿಯವರೆಗೆ ರೋಗಿಯ ಉಸಿರಾಟ ಮತ್ತು ಚಲನವಲನ ಆಗುವುದಿಲ್ಲವೋ, ಅಷ್ಟರ ವರೆಗೆ ಅಥವಾ ವೈದ್ಯಕೀಯ ಸೌಲಭ್ಯಕ್ಕಾಗಿ ಆಸ್ಪತ್ರೆಗೆ ತಲಪುವ ವರೆಗೆ ಎದೆ ಒತ್ತುವುದನ್ನು ಮುಂದುವರಿಸಬೇಕು.

೯. ೫ ಬಾರಿ ಎದೆ ಒತ್ತಿದ ನಂತರ ಇನ್ನೊಬ್ಬ ಪ್ರಥಮೋಪಚಾರಕನ ಸಹಾಯ ಸಿಕ್ಕಿದರೆ ಅವನು ತಕ್ಷಣ ಚಿಕಿತ್ಸೆ ಪ್ರಾರಂಭಿಸಬೇಕು. ಮೊದಲಿನ ವ್ಯಕ್ತಿ ತುಂಬಾ ಆಯಾಸಗೊಂಡಿದ್ದರೆ, ಒತ್ತುವುದನ್ನು ನಿಲ್ಲಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇತರರ ಸಹಾಯ ಪಡೆಯಬೇಕಾಗುತ್ತದೆ. – ಆಧಾರ : ಸನಾತನದ ಪ್ರಕಾಶನ – ಪ್ರಥಮೋಪಚಾರ ತರಬೇತಿ (ಭಾಗ ೧) ಹಾಗೂಡಾ. ಸೌ. ಲಿಂಡಾ ಬೋರಕರ್, ಫೋಂಡಾ ಗೋವಾ. (೨೦.೩.೨೦೨೪)

೪. ಎದೆ ಒತ್ತುವ ಪ್ರಥಮೋಪಚಾರಮಾಡಿದಾಗ ರೋಗಿಯ ಪ್ರಾಣ ಉಳಿದಿರುವ ವೈಶಿಷ್ಟ್ಯಪೂರ್ಣ ಅನುಭೂತಿಗಳು !

೪ ಅ. ಪ್ರಥಮೋಪಚಾರವರ್ಗಕ್ಕೆ ಬರುವ ಜಿಜ್ಞಾಸು ಮಹಿಳೆ ಅವರ ಅತ್ತೆಗೆ ಎದೆ ಒತ್ತುವ ಚಿಕಿತ್ಸೆ ಮಾಡಿದಾಗ ಅವರ ಪ್ರಜ್ಞೆ ಬಂದು ಅವರಿಗೆ ನೆಮ್ಮದಿಯೆನಿಸುವುದು : ‘ಒಂದು ರಾತ್ರಿ ಚೋಪಡಾ (ಮಹಾರಾಷ್ಟ್ರ) ದಲ್ಲಿನ ಜಿಜ್ಞಾಸು ಸೌ. ನಿರ್ಮಾಲಾ ಅಲಕರೀ ಇವರ ಅತ್ತೆಗೆ ಮೂರ್ಛೆ ತಪ್ಪಿ ಅವರ ಉಸಿರಾಟ ನಿಂತು ಹೋಯಿತು. ಆಗ ಸೌ. ನಿರ್ಮಾಲಾ ಇವರು ಪ್ರಥಮೋಪಚಾರವರ್ಗದಲ್ಲಿ ಕಲಿಸಿರುವ ಹಾಗೆಯೆ ಅತ್ತೆಗೆ ‘ಎದೆ ಒತ್ತುವ’ ಚಿಕಿತ್ಸೆ ಮಾಡಿದರು. ಅದರಿಂದ ಸ್ವಲ್ಪ ಸಮಯದಲ್ಲಿ ಅವರ ಉಸಿರಾಟ ಪುನಃ ಆರಂಭವಾಯಿತು. ಮರುದಿನ ಬೆಳಿಗ್ಗೆ ಅವರನ್ನು ಆಸ್ಪತ್ರೆಗೆ ಸಾಗಿಸಿ ಅವರ ವೈದ್ಯಕೀಯ ಪರಿಶೀಲನೆ ಮಾಡಲಾಯಿತು. ಆಗ ಆಧುನಿಕ ವೈದ್ಯರು, ‘ಅಜ್ಜಿಗೆ ಕಾರ್ಡಿಯಾಕ್‌ ಅರೆಸ್ಟ್ (ಹೃದಯ ಕ್ರಿಯೆ ನಿಂತು ಹೋಗುವುದು)’ ಆಗಿರುವಾಗ ನೀವು ರಾತ್ರಿ ಏನು ಮಾಡಿದಿರಿ ? ಆಗ ಮಿರ್ಮಲಾ ಅಲಕರೀ ಹೇಳಿದರು, ”ಪ್ರಥಮೋಪಚಾರವರ್ಗದಲ್ಲಿ ಕಲಿಸಿದ ಹಾಗೆಯೆ ನಾನು ಅತ್ತೆಗೆ ‘ಎದೆಒತ್ತುವ’ ಚಿಕಿತ್ಸೆ ಮಾಡಿದ ನಂತರ ಅವರಿಗೆ ಆರಾಮವೆನಿಸಿತು.” ಆಗ ಆಧುನಿಕ ವೈದ್ಯರು ಅವರನ್ನು ಪ್ರಶಂಸಿಸಿದರು.’ – ಸೌ. ಸುನಿತಾ ವ್ಯಾಸ, ಜಳಗಾವ (೨೦೧೯)

೪ ಆ. ಅನಿರೀಕ್ಷಿತವಾಗಿ ಎದೆಯಲ್ಲಿ ನೋವಾಗಿ ಪ್ರಜ್ಞೆ ತಪ್ಪಿರುವ ವಾಹನ ಚಾಲಕನಿಗೆ ತಕ್ಷಣ ಎದೆ ಒತ್ತುವ ಪ್ರಥಮೋಪಚಾರ ಮಾಡಿದಾಗ ಚಾಲಕನ ಪ್ರಾಣ ಉಳಿಯುವುದು : ‘ಶ್ರೀ. ಬಂಡೂ ಚೆಚರೆ ಇವರು ರತ್ನಾಗಿರಿಗೆ ಕೆಲಸಕ್ಕೆ ಹೋಗಿದ್ದರು. ಅವರ ಜೊತೆಗಿರುವ ಒಬ್ಬ ಚಾಲಕನ ಎದೆಯಲ್ಲಿ ಅನಿರೀಕ್ಷಿತವಾಗಿ ನೋವು ಆರಂಭವಾಯಿತು. ಅವನ ಕೈ-ಕಾಲುಗಳ ಬೆರಳುಗಳು ಕಪ್ಪು-ನೀಲಿ ಬಣ್ಣಕ್ಕೆ ತಿರುಗಿದವು ಹಾಗೂ ಅವನು ಮೂರ್ಛೆ ಹೋದನು. ಆಗ ಅವನಿಂದ ಏನೂ ಪ್ರತಿಕ್ರಿಯೆ ಬರುತ್ತಿರಲಿಲ್ಲ. ಅವನ ಉಸಿರಾಟ ನಿಂತು ಹೋಗಿತ್ತು. ಚೇಚರೆ ಇವರು ಅವನಿಗೆ ಎದೆ ಒತ್ತುವ ಚಿಕಿತ್ಸೆ ಮಾಡಿದರು. ಆಗ ಅವನಿಗೆ ಪ್ರಜ್ಞೆ ಬಂತು. ಶ್ರೀ. ಚೆಚರೆ ಇವರಿಗೆ ಹೆಚ್ಚಿನ ಶಿಕ್ಷಣವಿರಲಿಲ್ಲ; ಆದರೆ ಪ್ರಥಮೋಪಚಾರವರ್ಗದಲ್ಲಿ ಕಲಿಸಿರುವ ಹಾಗೆ ಚಿಕಿತ್ಸೆ ಮಾಡಿದ ಕಾರಣ ಆ ಚಾಲಕನ ಪ್ರಾಣ ಉಳಿಸಲು ಸಾಧ್ಯವಾಯಿತು.’

ಸೌ. ಸಮೃದ್ಧಿ ಸಚಿನ ಸನಗರೆ, ರತ್ನಾಗಿರಿ (೨೮.೧.೨೦೨೨)’ (ಆಧಾರ : ಸನಾತನದ ಪ್ರಕಾಶನ – ಪ್ರಥಮೋಪಚಾರ ತರಬೇತಿ (ಭಾಗ ೧)