ಜಗತ್ತಿನ ಆಧುನಿಕರಣದೊಂದಿಗೆ ಸಂಭವಿಸಿದ ದೈಹಿಕ ಸಮಸ್ಯೆ ಗಳಿಗೆ ‘ವ್ಯಾಯಾಮ’ವು ಒಂದು ಪರಿಣಾಮಕಾರಿ ಉಪಾಯವಾಗಿದೆ. ಇತ್ತೀಚೆಗೆ ಈ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಮತ್ತು ಆ ಬಗ್ಗೆ ಜಾಗರೂಕತೆ ಮೂಡಿದ್ದರೂ, ವ್ಯಾಯಾಮ ಮಾಡುವ ಪ್ರಮಾಣ ಮಾತ್ರ ಅತ್ಯಲ್ಯವಿರುವುದು ಕಂಡುಬರುತ್ತದೆ ಇನ್ನೂ ಅನೇಕರಿಗೆ ಮನಸ್ಸಿನಲ್ಲಿ ವ್ಯಾಯಾಮ ವಿಷಯದ ಬಗ್ಗೆ ಕೆಲವು ಸಂದೇಹಗಳಿರುವುದು ಕಂಡು ಬರುತ್ತದೆ. ಸದ್ಯ ಆಗುತ್ತಿರುವ ಅನೇಕ ದೈಹಿಕ ಸಮಸ್ಯೆಗಳಿಗೆ ಉದಾ. ಬೆನ್ನುಮೂಳೆಯ ಕಾಯಿಲೆ, ಮಧುಮೇಹ, ಸ್ಥೂಲಕಾಯಗಳಿಗೆ ಉಪಾಯವೆಂದು ಔಷಧೋಪಚಾರ, ಪಥ್ಯ, ಪವಾಸ, ಹೀಗೆ ಅನೇಕ ಮಾರ್ಗಗಳನ್ನು ಆಯ್ಕೆ ಮಾಡುತ್ತಾರೆ. ಈ ಅಂಕಣದಿಂದ ನಾವು ವ್ಯಾಯಾಮ ಮಾಡುವ ಬಗ್ಗೆ ಜಾಗರೂಕತೆಯನ್ನು ಮೂಡಿಸÀಲಿದ್ದೇವೆ. ಇದರ ಆವಶ್ಯಕತೆ ಮತ್ತು ಮಹತ್ವವನ್ನು ತಿಳಿದುಕೊಳ್ಳಲಿದ್ದೇವೆ, ಹಾಗೆಯೇ ವ್ಯಾಯಾಮ ವಿಷಯದಲ್ಲಿನ ಸಂದೇಹ ನಿವಾರಣೆ ಮಾಡಲಿದ್ದೇವೆ. (ಭಾಗ ೧೧)

‘ವ್ಯಾಯಾಮ ಮಾಡುವಾಗ ದೇಹವು ಬಿಸಿಯಾಗಿರುವುದರಿಂದ ಬೆವರು ಬರುವುದು’, ಇದೊಂದು ನೈಸರ್ಗಿಕ ಪ್ರಕ್ರಿಯೆ ಇರುತ್ತದೆ; ಆದರೆ ಈ ಪ್ರಕ್ರಿಯೆಯು ಯಾವಾಗಲೂ ವ್ಯಾಯಾಮದ ಪರಿಣಾಮವನ್ನು ತೋರಿಸುವುದಿಲ್ಲ. ‘ಕಾರ್ಡಿಯೋ’, ಅಂದರೆ ಹೃದಯ ಮತ್ತು ಪುಪ್ಪುಸಗಳ ಕ್ಷಮತೆಯನ್ನು ಹೆಚ್ಚಿಸುವ ವ್ಯಾಯಾಮದ ಪ್ರಕಾರಗಳು, ಉದಾ, ಓಡುವುದು, ಸೈಕಲ್ ನಡೆಸುವುದು ಇತ್ಯಾದಿಗಳನ್ನು ಮಾಡುವಾಗ ಬೆವರು ಬರುತ್ತದೆ ಮತ್ತು ಶಕ್ತಿ ಹೆಚ್ಚಿಸುವ ವ್ಯಾಯಾಮದ ಪ್ರಕಾರಗಳು (ಸ್ಟ್ರೆಂಥ ಟ್ರೆನಿಂಗ್), ಉದಾ. ಡಿಪ್ಸ್, ಉಟಾಬೈಸಿ, ‘ವೆಟ್ ಲಿಫ್ಟಿಂಗ್’ ಇತ್ಯಾದಿಗಳು ಮತ್ತು ಯೋಗಾಸನಗಳನ್ನು ಮಾಡುವಾಗ ಅಷ್ಟೊಂದು ಬೆವರು ಬರುವುದಿಲ್ಲ, ಆದರೂ ಅವು ಲಾಭದಾಯಕವಾಗಿವೆ.
ವ್ಯಾಯಾಮದಿಂದ ದೇಹದ ಮೇಲೆ ಆಂತರಿಕ ಪರಿಣಾಮವಾಗುವುದು, ಉದಾ. ಹೃದಯದ ಬಡಿತಗಳನ್ನು ಹೆಚ್ಚಿಸುವುದು, ಸ್ನಾಯುಗಳ ಕ್ಷಮತೆಯನ್ನು ಹೆಚ್ಚಿಸುವುದು ಇತ್ಯಾದಿಗಳು ಹೆಚ್ಚು ಮಹತ್ವದ್ದಾಗಿವೆ ಮತ್ತು ವ್ಯಾಯಾಮವನ್ನು ಮಾಡುವಾಗ ಅದು ತನ್ನಷ್ಟಕ್ಕೆ ಆಗುತ್ತಲೇ ಇರುತ್ತದೆ; ಆದ್ದರಿಂದ ವ್ಯಾಯಾಮವನ್ನು ಮಾಡುವಾಗ ಬೆವರು ಬರದಿದ್ದರೆ, ಕಾಳಜಿ ಮಾಡದೇ ಸಕ್ರಿಯವಾಗಿ ಚಟುವಟಿಕೆಯಿಂದ ಇರುವುದರ ಕಡೆಗೆ ಗಮನ ಕೊಡಿ !’
ಶ್ರೀ. ನಿಮಿಷ ತ್ರಿಭುವನ ಮ್ಹಾತ್ರೆ, ಭೌತಿಕೋಪಚಾರ ತಜ್ಞ (ಫಿಜಿಯೋಥೆರಪಿಸ್ಟ್), ಪೋಂಡಾ, ಗೋವಾ. (೮.೯.೨೦೨೪)