ಸುರಾಜ್ಯದ ಪಥದತ್ತ…!

ಸ್ವತಂತ್ರ ಭಾರತದ ೭೫ ನೇ ವರ್ಷವನ್ನು ಆಚರಿಸುವ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ವರ್ಷವಿಡೀ ವಿವಿಧ ಚಟುವಟಿಕೆಗಳನ್ನು ಜಾರಿಗೊಳಿಸಿತು. ಈ ಸಂದರ್ಭದಲ್ಲಿ ಅವರು ವಿವಿಧ ವಿಷಯಗಳನ್ನು ಕೈಗೆತ್ತಿಕೊಂಡಿದ್ದರು. ದೇಶಕ್ಕಾಗಿ ಬಲಿದಾನ ಮಾಡಿದ ಅಜ್ಞಾತ ಕ್ರಾಂತಿಕಾರಿಗಳ ಕಥೆಗಳನ್ನು ಹುಡುಕುವುದು ‘ನನ್ನ ಹಳ್ಳಿ, ನನ್ನ ಸಂಸ್ಕೃತಿ’, ‘ಕೋಟೆಗಳ ಕಥೆಗಳು’, ‘ಕಲಾಂಜಲಿ’ ಹೀಗೆ ಹಲವು ಚಟುವಟಿಕೆಗಳನ್ನು ಕಳೆದ ವರ್ಷದಿಂದ ಜಾರಿಗೊಳಿಸಲಾಗುತ್ತಿದೆ. ಈ ನಿಮಿತ್ತದಿಂದ ದೇಶದ ಸಂಸ್ಕೃತಿಯೊಂದಿಗೆ ಒಂದಾಗಲು ಕೈಜೋಡಿಸಲ್ಪಡುವುದು.
ಪ್ರಧಾನಿ ದೇಶದ ಆರ್ಥಿಕತೆಯನ್ನು ಕೆಲವೇ ವರ್ಷಗಳಲ್ಲಿ ೫ ನೇ ಸ್ಥಾನದಿಂದ ೩ ನೇ ಸ್ಥಾನಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದಾರೆ. ದೇಶದ ಭದ್ರತಾ ವ್ಯವಸ್ಥೆಯನ್ನು ಅಧಿಕ ಬಲಪಡಿಸಲು ವಿವಿಧ ಶಸ್ತ್ರಾಸ್ತ್ರಗಳು, ಯುದ್ಧವಿಮಾನಗಳು, ಜಲಾಂತರ್ಗಾಮಿ ನೌಕೆಗಳನ್ನು ಉತ್ಪಾದಿಸಲಾಗುತ್ತಿದೆ. ಈ ಚಿತ್ರಣವು ಯಾವುದೇ ದೇಶಭಕ್ತನಿಗೆ ಹೆಮ್ಮೆ ತರುವಂತಹದ್ದಾಗಿದೆ. ‘ಶ್ರೀರಾಮ ಮಂದಿರ ನಿರ್ಮಾಣ’ ಮತ್ತು ‘೩೭೦ ಕಲಂ ರದ್ದತಿ’ಯಂತಹ ಅಸಾಧ್ಯವೆನಿಸುತ್ತಿದ್ದ ಕೆಲಸಗಳನ್ನು ಸರಕಾರ ಮಾಡಿ ತೋರಿಸಿದೆ. ಯಶಸ್ಸಿನತ್ತ ಸಾಗುತ್ತಿರುವ ಚಂದ್ರಯಾನ ಅಥವಾ ಇಸ್ರೋ ದ ಇನ್ನಿತರ ಅಭಿಯಾನಗಳು ಸಹ ದೇಶದ ಕಿರೀಟಕ್ಕೆ ಹೆಮ್ಮೆಯ ಗರಿಯನ್ನು ತರುವಂತಹದ್ದಾಗಿದೆ.

ಸ್ವಾತಂತ್ರ್ಯಪೂರ್ವದಿಂದಲೂ ಜಾರಿಯಲ್ಲಿದ್ದ ಬ್ರಿಟಿಷ್‌ ಕಾನೂನುಗಳನ್ನು ರದ್ದುಗೊಳಿಸಿ, ಹೊಸದಾಗಿ ತರಲಾಗಿರುವ ‘ದಂಡ ಪ್ರಕ್ರಿಯೆ ಮಸೂದೆ ಸಂಶೋಧನ ವಿಧೇಯಕ’ ಇದು ಸುರಾಜ್ಯದ ದಿಕ್ಕಿನಲ್ಲಿ ಕರೆದೊಯ್ಯುವ ಪ್ರಮುಖ ಐತಿಹಾಸಿಕ ಬದಲಾವಣೆಯಾಗಿದೆ. ಹೊಸ ಕಾನೂನುಗಳ ನಿಬಂಧನೆಗಳ ಪ್ರಕಾರ, ದೇಶದ ಮೇಲೆ ಬಂದೆರಗಿರುವ ಲವ್‌ ಜಿಹಾದ್‌ನಂತಹ ಬಿಕ್ಕಟ್ಟಿನ ಕೆಲವು ಪ್ರಕರಣಗಳಲ್ಲಿಯಾದರೂ ಶಿಕ್ಷೆಯಾಗಬಹುದು. ಸರಕಾರ ನೇರವಾಗಿ ಕೇಂದ್ರ ಮಟ್ಟದಲ್ಲಿ ಈ ನಿಬಂಧನೆಗಳನ್ನು ಮಾಡುವ ಮೂಲಕ ಒಂದು ದೊಡ್ಡ ಹಂತವನ್ನು ತಲುಪಿದೆ. ‘ಇಂದು ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿಲ್ಲ’, ಎನ್ನುವ ಸ್ಥಿತಿ ಇದೆ. ರಾಮರಾಜ್ಯದಂತೆ ಮಹಿಳೆಯರಿಗೆ ನಿರ್ಭೀತ ವಾತಾವರಣವನ್ನು ನಿರ್ಮಿಸುವುದು ಸುರಾಜ್ಯದ ಸಂಕೇತವಾಗಿದೆ. ಪ್ರಸ್ತುತ ಜಾರಿಗೊಳಿಸಿರುವ ಕಾನೂನಿನಲ್ಲಿರುವ ನಿಬಂಧನೆಗಳಿಂದ ಮಹಿಳೆಯರ ಮೇಲಿನ ವಿವಿಧ ರೀತಿಯ ಲೈಂಗಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಕಠಿಣ ಶಿಕ್ಷೆಗಳನ್ನು ಒಳಗೊಂಡಿದೆ ಎಂಬುದು ಸಮಾಧಾನದ ವಿಷಯವಾಗಿದೆ. ಈಗ ಅದು ಸಮರ್ಪಕವಾಗಿ ಕಾರ್ಯರೂಪಕ್ಕೆ ಬರುವುದು ಸುರಾಜ್ಯದ ಲಕ್ಷಣವಾಗಿದೆ. ಅದು ಆಗಬೇಕಾದರೆ ಪ್ರಾಮಾಣಿಕ, ನಿಸ್ವಾರ್ಥ, ತಳಮಳ ಹೊಂದಿರುವ, ಕರ್ತವ್ಯನಿಷ್ಠ ಅಧಿಕಾರಿಗಳಿರುವ ಆಡಳಿತ ಆವಶ್ಯಕವಾಗಿದೆ. ಒಟ್ಟಿನಲ್ಲಿ, ‘ಆಡಳಿತ ಮತ್ತು ಸರಕಾರ ಆದರ್ಶ ಮತ್ತು ಸಮರ್ಥವಾಗಿರುವುದು’ ಸುರಾಜ್ಯದ ಒಂದು ವಿಶಿಷ್ಟ ಲಕ್ಷಣವಾಗಿದೆ. ಸರಕಾರ, ರಾಜಕಾರಣಿ, ಮತ್ತು ಪ್ರಜೆಗಳು ಈ ಮೂವರೂ ನೀತಿವಂತರು ಮತ್ತು ಮೌಲ್ಯಾಧಾರಿತರಾದಾಗ ಮಾತ್ರ ರಾಮರಾಜ್ಯ ಬರಲು ಸಾಧ್ಯ. ಈ ನೈತಿಕತೆ ಧರ್ಮಾಚರಣೆ ಮತ್ತು ಧರ್ಮಾಚರಣೆ ಬಲದಿಂದ ಮಾತ್ರ ಬರುತ್ತದೆ ಎಂದು ಮೇಲಿಂದ ಮೇಲೆ ಒತ್ತಿಹೇಳಬೇಕಾಗುತ್ತದೆ. ಭಾರತದ ಪ್ರಾಚೀನ ಪರಂಪರೆಯು ಪ್ರಪಂಚದಲ್ಲಿ ಪ್ರಾಬಲ್ಯವನ್ನು ಮೆರೆದಿದೆ. ಈ ಪ್ರಭುತ್ವವು ಆಡಳಿತದಲ್ಲಿ ಧರ್ಮದ ಅಂಕುಶವಿರುವ ಕಾರಣದಿಂದ ಮಾತ್ರ ಸಾಧ್ಯವಾಯಿತು; ಏಕೆಂದರೆ (ಹಿಂದೂ) ‘ಧರ್ಮ’ ರಾಷ್ಟ್ರಕ್ಕಿಂತ ಹೆಚ್ಚು ಅತಿವ್ಯಾಪಕ ಮತ್ತು ಪರಿಪೂರ್ಣವಾಗಿದೆ. ರಾಷ್ಟ್ರವು ಅದರ ಒಂದು ಭಾಗವಾಗಿದೆ. ಯಾವಾಗ ಆಡಳಿತದಲ್ಲಿ ಎಲ್ಲರಲ್ಲಿ ಧರ್ಮಾಚರಣೆಯ ಅಂದರೆ, ಈ ಕಾರಣದಿಂದ ತಾನಾಗಿಯೇ ಬರುವ ಕರ್ತವ್ಯಪರಾಯಣತೆಯ ಆಡಳಿತ ಅಭಿವೃದ್ಧಿ ಹೊಂದುವುದು, ಆಗ ಮತ್ತು ಆಗ ಮಾತ್ರ ಸಮೃದ್ಧಿ ಬರುವುದು; ಏಕೆಂದರೆ ಧರ್ಮಪರಾಯಣತೆಯು ಆದರ್ಶ ರಾಜ್ಯಕ್ಕೆ ಆವಶ್ಯಕವಿರುವ ಸರ್ವ ಗುಣಗಳ ಸಂಗಮವಾಗಿದೆ. ಯಾವ ಗತಿಯಲ್ಲಿ ಸರಕಾರ ಮುನ್ನಡೆಯುತ್ತಿದೆಯೋ, ಅದೇ ಗತಿಯಲ್ಲಿ ಸಂವಿಧಾನದಲ್ಲಿ ತುರುಕಿಸಲಾಗಿರುವ ‘ಜಾತ್ಯತೀತ’ ಶಬ್ದವನ್ನು ಕಿತ್ತೆಸೆದು ಅಲ್ಲಿ ‘ಹಿಂದೂ ರಾಷ್ಟ್ರ’ ಈ ನಿಬಂಧನೆಯನ್ನು ಹಾಕಿದರೆ, ಮಾತ್ರ ಸುರಾಜ್ಯ ಬರಲು ಬೃಹತ್‌ ವೇಗ ಸಿಗಲಿದೆ; ಕಾರಣ ‘ಹಿಂದೂ ರಾಷ್ಟ್ರ’ ಕೇವಲ ಶಬ್ದದ ಕಾರಣದಿಂದ ದೇಶದೊಳಗಡೆ ಮತ್ತು ದೇಶದ ಹೊರಗೆ ಅನೇಕ ಶತ್ರುಗಳಿಗೆ ಭಯ ನಿರ್ಮಾಣವಾಗಲಿದೆ ಮತ್ತು ಕೆಲವು ಸಮಸ್ಯೆಗಳು ಅಲ್ಲಿಯೇ ನಿವಾರಣೆಗೊಳ್ಳಲು ಸಹಾಯವಾಗಲಿದೆ.

ಸುರಾಜ್ಯಕ್ಕಾಗಿ ಇದನ್ನೂ ಮಾಡಬೇಕು

ಇಂದು ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವಷ್ಟು ಭದ್ರತೆ ನಿರ್ಮಾಣವಾಗಿರುವ ಚಿತ್ರಣ ಒಂದೆಡೆ ಇರುವಾಗಲೇ ಪುನಃ ಭಯೋತ್ಪಾದನೆ ತಲೆ ಎತ್ತಿದೆ ಮತ್ತು ಅದರ ದೇಶಾದ್ಯಂತವಿರುವ ಜಾಲಗಳು ಅನೇಕ ಸ್ಥಳಗಳಲ್ಲಿ ಸಿಕ್ಕಿಬೀಳುವ ಭಯೋತ್ಪಾದಕರಿಂದ ಬಹಿರಂಗವಾಗುತ್ತಿದೆ. ಭಯೋತ್ಪಾದನೆಯ ಮೂಲವನ್ನು ನಷ್ಟಗೊಳಿಸಲು ಹಣಕಾಸಿನ ಸಾಗಾಟ ಬಂದ್‌ ಮಾಡುವುದು ಮತ್ತು ‘ಸರ್ಜಿಕಲ್‌ ಸ್ಟ್ರೈಕ್‌’ಗಳಂತಹ ಕಠಿಣ ಪ್ರಯತ್ನಗಳ ಅವಶ್ಯಕತೆಯಿದೆ. ಸರಕಾರವೂ ಸಂಪೂರ್ಣ ಪಠ್ಯಕ್ರಮವನ್ನೇ ಬದಲಾಯಿಸಿದೆ. ಅದರ ಪ್ರಯೋಜನ ಕೇವಲ ನಮ್ಮ ಇತಿಹಾಸವನ್ನು ಮಾತ್ರವಲ್ಲ, ನಮ್ಮ ಧರ್ಮವನ್ನೂ ಅರ್ಥಮಾಡಿಕೊಳ್ಳಲು ಆವಶ್ಯಕವಾಗಿದೆ. ದೇಶವನ್ನು ಕಟ್ಟುವ ಭವಿಷ್ಯದ ಪೀಳಿಗೆಗೆ ಉತ್ತಮ ಸಂಸ್ಕಾರ ಮಾತ್ರ ಸಮೃದ್ಧಿಯನ್ನು ತರುತ್ತದೆ. ಅವರಿಗೆ ದೇಶಭಕ್ತಿ ಮತ್ತು ಧರ್ಮಾಚರಣೆಯ ಸಂಸ್ಕಾರ ನೀಡುವ ಶಿಕ್ಷಣ ಮಾತ್ರ ದೇಶದ ಉಜ್ವಲ ಭವಿಷ್ಯವನ್ನು ಸೃಷ್ಟಿಸುತ್ತದೆ. ಇದಕ್ಕಾಗಿ ನಶಿಸಿ ಹೋಗಿರುವ ಗುರುಕುಲ ಪದ್ಧತಿಯನ್ನು ಹೊಸದಾಗಿ ಆರಂಭಿಸುವ ಅಗತ್ಯವಿದೆ. ಪ್ರಾಚೀನ ವಿದ್ಯೆಗಳ, ಪ್ರಾಚೀನ ವಿಜ್ಞಾನಗಳ ಪುನರುಜ್ಜೀವನ ಪ್ರಾರಂಭವಾಗಿದೆ, ಅದು ಹೇಗೆ ಅಭಿವೃದ್ಧಿಗೊಳ್ಳುತ್ತದೆ? ಎಂದು ಕೂಡ ನೋಡಬೇಕಾಗಿದೆ. ಅದಕ್ಕೆ ದೇಶದಲ್ಲಿ ಗೌರವ ಸಿಕ್ಕರೆ ಜಾಗತಿಕ ಮಟ್ಟದಲ್ಲಿಯೂ ಸಿಗುತ್ತದೆ, ಆಗ ಭಾರತ ನಿಜವಾದ ಅರ್ಥದಲ್ಲಿ ವಿಶ್ವಗುರುವಾಗುವ ಕಾಲ ದೂರವಿಲ್ಲ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಆಗಸ್ಟ್ ೧೩ ರಿಂದ ಅಗಸ್ಟ ೧೫ ರವರೆಗೆ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಸರ್ಕಾರ ಮನವಿ ಮಾಡಿದೆ. ಈ ಕೃತಿಯು ಖಂಡಿತವಾಗಿಯೂ ರಾಷ್ಟ್ರ ಪ್ರಜ್ಞೆಯನ್ನು ಮೂಡಿಸುತ್ತದೆ; ಆದರೆ ಇಷ್ಟು ದೊಡ್ಡ ಮಟ್ಟದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವಾಗ ಅದಕ್ಕೆ ಅಗೌರವ ತೋರದಂತೆ, ಹೆಚ್ಚಿನ ಕಾಳಜಿ ವಹಿಸಬೇಕು ಮತ್ತು ಅದರ ಬಗ್ಗೆ ಜನಜಾಗೃತಿಯನ್ನೂ ಮೂಡಿಸಬೇಕಾಗಿದೆ. ಉದ್ದೇಶಪೂರ್ವಕವಾಗಿ ತ್ರಿವರ್ಣ ಧ್ವಜಕ್ಕೆ ಅಗೌರವ ತೋರುವವರಿಗೂ ಕಠಿಣ ಶಿಕ್ಷೆಯಾಗಬೇಕು. ಅದೇ ರೀತಿ ಕೇವಲ ಮೊಬೈಲ್‌ ನಲ್ಲಿ ‘ಸ್ಟೇಟಸ್‌ ಹಾಕುವುದು’ ಅಥವಾ ‘ತ್ರಿವರ್ಣ ಧ್ವಜದೊಂದಿಗೆ ಫೋಟೋ ತೆಗೆದು ಕಳುಹಿಸುವುದು’ ಇಷ್ಟಕ್ಕೆ ಮಾತ್ರ ರಾಷ್ಟ್ರಭಕ್ತಿ ಸೀಮಿತವಾಗದಂತೆ ರಾಷ್ಟ್ರಕರ್ತವ್ಯದ ಅರಿವು ಪ್ರಬಲವಾಗಬೇಕು. ಇದಕ್ಕಾಗಿ ಮಾರ್ಗದರ್ಶನ ನೀಡಬೇಕು. ‘ರಸ್ತೆಯಲ್ಲಿ ಕಸ ಹಾಕದಿರುವುದರಿಂದ ಹಿಡಿದು ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರೆಗೆ’ ಇದೇ ದೇಶಪ್ರೇಮ’ ಎಂಬುದನ್ನು ಪ್ರತಿಯೊಬ್ಬ ಪ್ರಜೆಯೂ ಅರಿತುಕೊಳ್ಳುವುದೇ ಸುರಾಜ್ಯದೆಡೆಗಿನ ನಿಜವಾದ ಹೆಜ್ಜೆಯಾಗಿದೆ.

ಹಿಂದೂದ್ವೇಷಿ ನೆಹರೂ ಸರಕಾರ ಈ ಮಣ್ಣಿನೊಂದಿಗೆ ಏಕರೂಪವಾಗಿರುವ ಯಾವುದನ್ನೂ ಸ್ವೀಕರಿಸದೆ ಸರಕಾರ ಮತ್ತು ಆಡಳಿತ ಎಲ್ಲ ವಿದೇಶಿ ವಿಷಯಗಳನ್ನು ಅಂಗೀಕರಿಸುವಂತೆ ಮಾಡಿತು. ಇದರಿಂದ ಭಾರತದ ಅತ್ಯುತ್ತಮ ಕಾಲಗಣನೆ ‘ತಿಥಿ’ ಸಂಸ್ಕೃತಿಯನ್ನು ಸಹ ಮರೆತುಬಿಡಲಾಯಿತು. ಆದ್ದರಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ದಿನಾಂಕದ ಪ್ರಕಾರ ಆಚರಿಸಲು ಪ್ರಾರಂಭಿಸಲಾಯಿತು. ಮುಂಬರುವ ಸುರಾಜ್ಯದಲ್ಲಿ ಅದು ತಿಥಿಯನುಸಾರ ‘ಶ್ರಾವಣ ಕೃಷ್ಣ ಚತುರ್ದಶಿ’ಯಂದು ಆಚರಿಸಲಾಗುವುದು ಎನ್ನುವ ಆಶಯವಿದೆ. ಸರಕಾರ ಸುರಾಜ್ಯಕ್ಕಾಗಿ ಪ್ರಯತ್ನಿಸುತ್ತಿದೆ, ಅದು ಮತ್ತಷ್ಟು ಅಭಿವೃದ್ಧಿ ಹೊಂದಲಿ ಎಂದು ಸ್ವಾತಂತ್ರ್ಯದಿನದ ನಿಮಿತ್ತದಿಂದ ಶುಭಾಶಯಗಳು.

ಸ್ವರಾಜ್ಯದ ಆದಷ್ಟು ಬೇಗನೆ ಸುರಾಜ್ಯದಲ್ಲಿ ರೂಪಾಂತರಗೊಳ್ಳಲು ಎಲ್ಲರೂ ಶೀಘ್ರದಲ್ಲಿ ಪ್ರಯತ್ನಿಸುವುದು ಆವಶ್ಯಕವಾಗಿದೆ.