ತಿಲಕ, ಟಿಕ್ಲಿ ಮತ್ತು ಹಿಜಾಬ್‌ !

ಮುಂಬಯಿಯ ಚೆಂಬೂರಿನಲ್ಲಿ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಮಹಾ ವಿದ್ಯಾಲಯವು ಸಮವಸ್ತ್ರದ ಕಾರಣದಿಂದ ಹಿಜಾಬ್, ಬುರ್ಖಾದ ಮೇಲೆ ಹೇರಿದ್ದ ನಿಷೇಧದ ವಿರುದ್ಧ ಕೆಲವು ಮುಸಲ್ಮಾನ ವಿದ್ಯಾರ್ಥಿನಿಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರು. ಆಗಸ್ಟ್ ೯ ರಂದು ತನ್ನ ಮೊದಲ ಆಲಿಕೆಯಲ್ಲಿ, ಕಾಲೇಜು ತರಗತಿಗಳಲ್ಲಿ ಹಿಜಾಬ್‌ ಧರಿಸುವುದರ ಮೇಲಿನ ನಿಷೇಧವನ್ನು ಸರ್ವೋಚ್ಚ ನ್ಯಾಯಾಲಯ ಎತ್ತಿಹಿಡಿದಿದೆ; ಆದರೆ ಮಹಾವಿದ್ಯಾಲಯದ ಆವರಣದಲ್ಲಿ ಹಿಜಾಬ್‌ ಮತ್ತು ಬುರ್ಖಾ ಧರಿಸುವ ಬಗ್ಗೆ ಮಹಾವಿದ್ಯಾಲಯವು ಅದೇ ನಿರ್ಧಾರ ತೆಗೆದು ಕೊಳ್ಳುತ್ತದೆಯೇ ? ತಿಲಕ ಮತ್ತು ಟಿಕ್ಲಿ ಬಗ್ಗೆ ಏನು ತೀರ್ಪು ನೀಡುವುದು ? ಮಹಾವಿದ್ಯಾಲಯ ಸ್ಥಾಪನೆಯಾದಾಗ ಆ ಕಾಲದಲ್ಲಿ ಡ್ರೆಸ್‌ ಕೋಡ್‌ ಏಕೆ ಇರಲಿಲ್ಲ ?’ ಎಂದು ಕೆಲವು ಪ್ರಶ್ನೆಗಳನ್ನು ಎತ್ತಲಾಯಿತು. ಬುರ್ಖಾ ಮತ್ತು ಹಿಜಾಬ್‌ ಧರಿಸುವುದನ್ನು ತಿಲಕ ಮತ್ತು ಕುಂಕುಮ ಇಟ್ಟುಕೊಳ್ಳಲು ಹೋಲಿಸಿ ಸರ್ವೋಚ್ಚ ನ್ಯಾಯಾಲಯ ಈ ಪ್ರಶ್ನೆಗಳನ್ನು ಎತ್ತಿದೆ. ಆದ್ದರಿಂದ ಬುರ್ಖಾ, ಹಿಜಾಬ್‌ ಇವುಗಳನ್ನು ನಿಷೇಧಿಸಿದರೆ ಹಿಂದೂ ಮಹಿಳೆಯರು ಬಳೆ, ಮೂಗುತಿ ತೊಡಲು, ಪುರುಷರು ಜನಿವಾರ, ಕುಂಡಲ ಹಾಕುವುದು, ಜುಟ್ಟು ಬಿಡುವುದು ಮುಂತಾದವುಗಳನ್ನು ಸಹ ಸರ್ವಧರ್ಮ ಸಮಭಾವದ ಹೆಸರಿನಲ್ಲಿ ಭವಿಷ್ಯದಲ್ಲಿ ಯಾರಾದರೂ ನಿಷೇಧಕ್ಕೆ ಆಗ್ರಹಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಭವಿಷ್ಯದಲ್ಲಿ ಈ ಪ್ರಶ್ನೆಗಳು ಮತ್ತೆ ನ್ಯಾಯಾಲಯದಲ್ಲಿ ಬಂದರೆ, ನ್ಯಾಯಾಧೀಶರು ಮತ್ತೆ ಇದೇ ರೀತಿಯ ಹೇಳಿಕೆಗಳನ್ನು ನೀಡಿದರೆ ಧರ್ಮಶಿಕ್ಷಣವಿಲ್ಲದ ಹಿಂದೂ ಸಮಾಜವನ್ನು ಗೊಂದಲಗೊಳಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ. ನ್ಯಾಯಾಂಗವು ಪುರಾವೆಗಳನ್ನು ಆಧರಿಸಿ ನ್ಯಾಯವನ್ನು ನೀಡುತ್ತದೆ. ಆದ್ದರಿಂದ ನ್ಯಾಯಾಧೀಶರ ಈ ಹೇಳಿಕೆಗಳು ಸತ್ಯ ಹೊರಬರಲು ಸಹ ಇರಬಹುದು ಎಂದು ನಾವು ನಂಬುತ್ತೇವೆ. ಆದ್ದರಿಂದ ಮಹಾವಿದ್ಯಾಲಯದ ಪರವಾಗಿ ಅವರ ವಕೀಲರು ತಮ್ಮ ಪಕ್ಷವನ್ನು ಮಂಡಿಸುತ್ತಾರೆ; ಆದರೆ ನ್ಯಾಯಾಲಯದ ಈ ಹೇಳಿಕೆಗಳು ಮಹಾವಿದ್ಯಾಲಯಗಳಿಗೆ ಮಾತ್ರ ಸೀಮಿತವಾಗಿಲ್ಲ. ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿರುವ ಸಾಂಸ್ಕೃತಿಕ ಆಚರಣೆಗಳು ಮತ್ತು ಧಾರ್ಮಿಕ ಮೂಲ ಭೂತವಾದದ ನಡುವಿನ ವ್ಯತ್ಯಾಸದ ಬಗ್ಗೆ ನಾವು ನ್ಯಾಯಾಲಯದ ಗಮನವನ್ನು ಸೆಳೆಯಲು ಬಯಸುತ್ತೇವೆ.

ಈ ಸರ್ವಧರ್ಮವವು ದೇಶಕ್ಕೆ ಅನ್ವಯವಾಗುವುದೇ ?

ಮುಸಲ್ಮಾನರ ಈ ಮೂಲಭೂತವಾದವು ಮಹಾವಿದ್ಯಾಲಯ ದಲ್ಲಿ ಬುರ್ಖಾ ಅಥವಾ ಹಿಜಾಬ್‌ ಧರಿಸುವುದಕ್ಕೆ ಸೀಮಿತವಾಗಿಲ್ಲ. ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯಗಳು ಧಾರ್ಮಿಕ ಸ್ಥಳಗಳಿಂದ ಬೋಂಗಾಗಳನ್ನು ತೆಗೆದುಹಾಕಲು ಈ ಹಿಂದೆಯೂ ಆಗಾಗ ಆದೇಶಿಸಿವೆ; ಆದರೆ ಅವರ ಹೊರತಾಗಿಯೂ, ಮುಸಲ್ಮಾನರು ಮಸೀದಿಗಳಲ್ಲಿ ಕರ್ಣಕರ್ಕಶ ಧ್ವನಿಯಲ್ಲಿ ಬೋಂಗಾ ಹಾಕುತ್ತಾರೆ. ೨೦೧೨ ರಲ್ಲಿ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ರಾಜ್ಯ ಮೀಸಲು ಪೊಲೀಸ್‌ ಪಡೆಯ ಮುಸಲ್ಮಾನ ಪೊಲೀಸ್‌ ಸಿಬ್ಬಂದಿ ಜಹಿರೋದ್ದೀನ್‌ ಬೆದಡೆ ಎಂಬವನು ಗಡ್ಡ ಬಿಟ್ಟಿದ್ದರು. ಗಡ್ಡ ಬಿಡದಂತೆ ರಾಜ್ಯ ಸರಕಾರ ಸೂಚನೆ ನೀಡಿದಾಗಲೂ ಗಡ್ಡ ಇಟ್ಟುಕೊಂಡಿದ್ದರು. ಇದಕ್ಕಾಗಿ ಅವರನ್ನು ಶಿಸ್ತು ಕ್ರಮದ ಮೂಲಕ ಅಮಾನತುಗೊಳಿಸಲಾಯಿತು.

ಜಹಿರೋದ್ದೀನ್‌ ಬೇದಡೆ ಈತನು ಇದರ ವಿರುದ್ಧ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ; ಆದರೆ ನ್ಯಾಯಾಲಯ ಅವನ ಅರ್ಜಿಯನ್ನು ತಿರಸ್ಕರಿಸಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ಸವಾಲು ಹಾಕಿ ಅವರು, ‘ಸಿಖ್ಖರಿಗೆ ಗಡ್ಡ ಬಿಡಲು ಅವಕಾಶ ನೀಡಿದರೆ, ನನಗೂ ನೀಡಬೇಕು’ ಎಂದು ಆಗ್ರಹಿಸಿದ. ಸರ್ವೋಚ್ಚ ನ್ಯಾಯಾಲಯ ಅವರ ಅರ್ಜಿಯನ್ನು ತಿರಸ್ಕರಿಸಿ ಗಡ್ಡವನ್ನು ಬೋಳಿಸಿ ಸೇವೆಗೆ ಸೇರಲು ಆದೇಶಿಸಿತು; ಆದರೆ ಗಡ್ಡ ಬೋಳಿಸಬೇಕು ಎಂಬ ಕಾರಣಕ್ಕೆ ಜಹಿರೋದ್ದೀನ್‌ ಕೆಲಸ ಬಿಟ್ಟನು. ಇದನ್ನು ‘ಧಾರ್ಮಿಕ ಮೂಲಭೂತವಾದ’ ಎನ್ನುತ್ತಾರೆ. ಈ ಹಿಂದೆಯೂ ಮುಸಲ್ಮಾನರು ಮಹಾರಾಷ್ಟ್ರದ ವಿಧಾನಮಂಡಲದಲ್ಲಿ ನಮಾಜ್‌ ಮಾಡಲು ಸ್ಥಳ ಕೇಳಿದ್ದರು ಮತ್ತು ಅಲ್ಲಿ ನಮಾಜ್‌ ಆರಂಭಿಸಿದ್ದರು. ಈ ಘಟನೆಯನ್ನು ಆಗಿಂದಾಗಲೇ ನಿಲ್ಲಿಸಲಾಯಿತು. ಇಲ್ಲದಿದ್ದರೆ ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ ನಮಾಜು ಪಠಣ ಆರಂಭವಾಗುತ್ತಿತ್ತು. ಅದೇ ರೀತಿ ಎನ್‌.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿನಲ್ಲಿ ಬುರ್ಖಾ ಮತ್ತು ಹಿಜಾಬ್‌ಗೆ ಅವಕಾಶ ನೀಡಿದರೆ, ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಮುಸಲ್ಮಾನರು ಅದೇ ರೀತಿ ಒತ್ತಾಯಿಸುತ್ತಾರೆ. ಭವಿಷ್ಯದಲ್ಲಿ ಈ ಮೂಲಭೂತವಾದವು ಶಿಕ್ಷಣಸಂಸ್ಥೆಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಆಸ್ಪತ್ರೆಗಳು, ನ್ಯಾಯಾಲಯಗಳು, ಸರಕಾರಿ ಅಥವಾ ಖಾಸಗಿ ಕಚೇರಿಗಳು ಇತ್ಯಾದಿಗಳಲ್ಲಿ ಕೆಲಸ ಮಾಡುವ ಮುಸಲ್ಮಾನ ಮಹಿಳೆಯರು ಬುರ್ಖಾ ಮತ್ತು ಹಿಜಾಬ್‌ ಧರಿಸಲು ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಾರೆ ಮತ್ತು ನ್ಯಾಯಾಲಯದ ತೀರ್ಪಿನಿಂದ ಅದನ್ನು ಬೆಂಬಲಿಸುತ್ತಾರೆ. ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಈ ಮೂಲಭೂತವಾದವು ದೇಶಕ್ಕೆ ದುಬಾರಿಯಾಗಲಿದೆ. ಫ್ರಾನ್ಸ್ ಮತ್ತು ಬ್ರಿಟನ್‌ನಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಮುಸಲ್ಮಾನರು ಬುರ್ಖಾ ಮತ್ತು ಹಿಜಾಬ್‌ ಧರಿಸಲು ಪ್ರಾರಂಭಿಸಿದರು. ಈ ಎರಡು ದೇಶಗಳು ಪ್ರಸ್ತುತ ಈ ಧಾರ್ಮಿಕ ಸ್ವಾತಂತ್ರ್ಯದ ಫಲವನ್ನು ಅನುಭವಿಸುತ್ತಿವೆ. ಮುಸಲ್ಮಾನರು ಈಗ ಅವರಿಗೆ ತಲೆಭಾರವಾಗಿದ್ದಾರೆ. ಕೆಲವೇ ವರ್ಷಗಳಲ್ಲಿ ಈ ಪ್ರಮೇಯ ಭಾರತಕ್ಕೆ ಬರಲಿದೆ. ಬುರ್ಖಾ ಮತ್ತು ಹಿಜಾಬ್‌ ಧರಿಸುವ ಸ್ವಾತಂತ್ರ್ಯವು ಅದಕ್ಕೆ ಪೂರಕವಾಗಿರಲಿದೆ.

ಹಿಂದೂಗಳ ನಡವಳಿಕೆ ಮೂಲಭೂತವಾದವಲ್ಲ !

ಹಿಂದೂ ಮಹಿಳೆಯರು ಟಿಕಲಿ ಅಥವಾ ಕುಂಕುಮ ಹಚ್ಚಿ ಕೊಳ್ಳುವುದು, ಮೂಗುತಿ, ಬಳೆಗಳನ್ನು ಧರಿಸುವುದು ಅಥವಾ ಪುರುಷರು ತಿಲಕ ಅಥವಾ ಜುಟ್ಟನ್ನು ಬಿಡುವುದು ಇವು ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಯ ಭಾಗವಾಗಿದೆ. ಇದು ಆಧ್ಯಾತ್ಮಿಕ ಅಂಗವಾಗಿದೆ. ಇದರಲ್ಲಿ ಶಕ್ತ್ತಿಪ್ರದರ್ಶನ ಮಾಡುವ ಅಥವಾ ಮೂಲಭೂತವಾದವನ್ನು ಬೆಳೆಸುವ ಉದ್ದೇಶವಿಲ್ಲ. ಹಿಂದೂ ಸಮಾಜವು ಭಾರತದ ಮೂಲ ನಿವಾಸಿಯಾಗಿದೆ. ಮನೆಯಲ್ಲಿ ಅಥವಾ ಸಮಾಜದಲ್ಲಿ ತಮ್ಮದೇ ಆದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿಕೊಂಡು ಇತರ ಧರ್ಮಗಳನ್ನು ದೂಷಿಸಲು ಅವರು ಇದನ್ನು ಮಾಡುವುದಿಲ್ಲ. ಮತ್ತೊಂದೆಡೆ, ಮುಸಲ್ಮಾನರ ಧಾರ್ಮಿಕ ಮೂಲಭೂತವಾದವು ಇತರ ಧರ್ಮಗಳನ್ನು ನಾಶ ಪಡಿಸುತ್ತದೆ. ಅಲ್ಪಸಂಖ್ಯಾತರಾಗಿದ್ದರೂ, ಮುಸಲ್ಮಾನರು ರಸ್ತೆ ಗಳಲ್ಲಿ ನಮಾಜುಪಠಣ ಮಾಡುವ ಮೂಲಕ ಸಂಚಾರವನ್ನು ನಿರ್ಬಂಧಿಸುತ್ತಾರೆ ಮತ್ತು ಇತರ ಸಮಾಜಕ್ಕೆ ಕಿರುಕುಳ ನೀಡುತ್ತಾರೆ. ಹಿಂದೂಗಳು ಮೂಲಭೂತವಾದಿಗಳಾಗಿದ್ದರೆ, ಅವರು ಬಹುಸಂಖ್ಯಾತರು ಎಂಬ ಲಾಭವನ್ನು ಪಡೆದು ಅಲ್ಪಸಂಖ್ಯಾತರ ಮೇಲೆ ತಮ್ಮ ಧರ್ಮವನ್ನು ಹೇರುತ್ತಿದ್ದರು. ಇದಕ್ಕೆ ವ್ಯತಿರಿಕ್ತವಾಗಿ, ಭಾರತದಲ್ಲಿ ಅಲ್ಪಸಂಖ್ಯಾತರಾದ ಮುಸಲ್ಮಾನರು ಮತ್ತು ಕ್ರೈಸ್ತರು ಹಿಂದೂಗಳಿಗೆ ಆಮಿಷವೊಡ್ಡುತ್ತಾರೆ ಮತ್ತು ಮತಾಂತರಿಸುತ್ತಾರೆ. ತನ್ನದೇ ಆದ ಪ್ರತಿಷ್ಠೆಯನ್ನು ಹೆಚ್ಚಿಸುವ ಮೂಲಕ ಭಾರತವನ್ನು ಇಸ್ಲಾಮೀಕರಣಗೊಳಿಸುವ ಧಾರ್ಮಿಕ ಕಾರ್ಯಸೂಚಿಯು ಸ್ಪಷ್ಟವಾಗಿದೆ. ಹಿಂದೂಗಳ ಸಾಂಸ್ಕೃತಿಕ ಆಚರಣೆಗಳು ದೇಶದ ಸಾಂಸ್ಕೃತಿಕ ಪರಂಪರೆಯಾಗಿವೆ. ಹಾಗಾಗಿ ಅದನ್ನು ಬುರ್ಖಾ, ಹಿಜಾಬ್‌ ಜೊತೆ ಹೋಲಿಸುವ ತಪ್ಪನ್ನು ಯಾರೂ ಮಾಡಬಾರದು. ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಬಹುಸಂಖ್ಯಾತರ ನಿಯಮಗಳನ್ನು ಮಾತ್ರ ಅನುಸರಿಸಲಾಗುತ್ತದೆ ಮತ್ತು ಭಾರತವು ಬಹು ಸಂಖ್ಯಾತ ಹಿಂದೂ ಗಳ ದೇಶವಾಗಿದೆ ಮತ್ತು ಹಿಂದೂಗಳ ಧಾರ್ಮಿಕ ಸ್ವಾತಂತ್ರ್ಯ ವನ್ನು ಇಲ್ಲಿ ಸಂರಕ್ಷಿಸಬೇಕು ಎಂಬುದರಲ್ಲಿ ಸಂದೇಹವಿಲ್ಲ.

ಇಂದು ಕಾಲೇಜುಗಳಲ್ಲಿ ಬುರ್ಖಾ ಮತ್ತು ಹಿಜಾಬ್‌ಗಳನ್ನು ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿರುವವರು, ಮುಸಲ್ಮಾನ ಮಹಿಳೆಯರು ಭವಿಷ್ಯದಲ್ಲಿ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ಮತ್ತು ವಕೀಲರು. ಬುರ್ಖಾ ಮತ್ತು ಹಿಜಾಬ್‌ ಧರಿಸಲು ಅವಕಾಶ ನೀಡುವಂತೆ ಒತ್ತಾಯಿಸಬಹುದು. ಹಾಗಾದರೆ ಈ ಬೇಡಿಕೆಯನ್ನು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ಗುರುತಿಸಬೇಕೆ ? ಇದನ್ನು ಸಹ ಪರಿಗಣಿಸಬೇಕು. ಅದು ಬುರ್ಖಾ ಅಥವಾ ಹಿಜಾಬ್‌ ಆಗಿರಲಿ, ಅಭಿವ್ಯಕ್ತಿ ಸ್ವಾತಂತ್ರ್ಯ ಅಥವಾ ಸರ್ವಧರ್ಮೀಯ ಇತ್ಯಾದಿ ಎಂದು ಒಬ್ಬರು ಭಾವಿಸಿದರೂ, ಇದು ಮೂಲಭೂತವಾದ ಮತ್ತು ಸ್ವಾಭಿಮಾನವನ್ನು ಹೆಚ್ಚಿಸುವ ಉದ್ದೇಶವಾಗಿದೆ ಎಂದು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಇದನ್ನೇ ಮುಂದಿಟ್ಟುಕೊಂಡು ನಾಳೆ ಭಾರತವನ್ನು ಇಬ್ಭಾಗ ಮಾಡಿ ಪ್ರತ್ಯೇಕ ಇಸ್ಲಾಮಿಕ್‌ ರಾಷ್ಟ್ರಕ್ಕೆ ಬೇಡಿಕೆ ಇಟ್ಟರೆ ಅಚ್ಚರಿಯಿಲ್ಲ. ಇಂದು ಇದನ್ನು ಗಣನೆಗೆ ತೆಗೆದುಕೊಳ್ಳದಿದ್ದರೆ, ಭವಿಷ್ಯದಲ್ಲಿ ಭಾರತವು ಫ್ರಾನ್ಸ್‌ನಂತೆ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.