ಜನರ ಭಾವನೆಗೆ ಮಾಯಾವೀ ಮಂತ್ರದಂಡ !

ಬಂಗಾಲದಲ್ಲಿ ನಡೆದ ಬಲಾತ್ಕಾರದ ಕ್ರೂರ ಘಟನೆಗಳಿಂದ ಕಳೆದ ಎರಡು ವಾರಗಳಿಂದ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ತೃಣಮೂಲ ಕಾಂಗ್ರೆಸ್ ಸರಕಾರವು ದೇಶಾದ್ಯಂತ ಟೀಕೆಗೊಳಗಾಗಿದೆ. ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸ್ವತಃ ಈ ವಿμÀಯದಲ್ಲಿ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅμಟ್Éà ಅಲ್ಲ, ಬಂಗಾಲದ ಜನರು ಅದರಲ್ಲೂ ವಿಶೇಷವಾಗಿ ಯುವತಿಯರು ಮತ್ತು ಮಹಿಳೆಯರು ಈಗ ಬಹಿರಂಗವಾಗಿ ಮಮತಾ ವಿರುದ್ಧ ಮಾತನಾಡಲಾರಂಭಿಸಿದ್ದಾರೆ. ಈ ಮಹಿಳೆಯರ ಆಕ್ರೋಶಕಾರಿ ಭಾವನೆಯನ್ನು ನಾವೆಲ್ಲರೂ ಸುದ್ದಿವಾಹಿನಿಗಳಲ್ಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ನೋಡಿರಬಹುದು ಮತ್ತು ಕೇಳಿರ ಬಹುದು. ಮಮತಾ ಅವರ ಇಲ್ಲಿಯವರೆಗಿನ ದಬ್ಬಾಳಿಕೆಯ ಆಡಳಿತದ ವಿರುದ್ಧ ಇμÀಟ್Ä ಬಹಿರಂಗವಾಗಿ ಇದೇ ಮೊದಲ ಬಾರಿಗೆ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅದರ ನಡುವೆ ರಾಜ್ಯದಲ್ಲಿ ಭಾಜಪಕ್ಕೆ ಹೆಚ್ಚುತ್ತಿರುವ ಜನಬೆಂಬಲ ಮತ್ತು ಬಂಗಾಲದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಬಗ್ಗೆ ಕಾವೇರುತ್ತಿರುವ ಚರ್ಚೆ, ಇವುಗಳಿಂದಲೇ ಮಮತಾ ಅಸ್ವಸ್ಥರಾಗಿದ್ದರು. ಒಟ್ಟಾರೆ ಈ ಎಲ್ಲ ಘಟನೆಗಳಿಂದಾಗಿ ಮಮತಾ ಅವರ ಕುರ್ಚಿ ಅಲುಗಾಡಬಹುದು ಎನ್ನುವ ನಡುಕ ಒಳಗಿಂದೊಳಗೆ ಆಗುತ್ತಿರಬಹುದು. ಹಾಗಾಗಿ ಅದಕ್ಕೆ ಉಪಾಯವೆಂಬಂತೆ ಅವರು ಬಂಗಾಲದಲ್ಲಿ ‘ಬಲಾತ್ಕಾರ ವಿರೋಧಿ ಕಾಯಿದೆ’ ಜಾರಿಗೊಳಿಸಿದರು. ಈ ಕಾಯಿದೆಯನ್ನು ಜಾರಿಗೊಳಿಸಿ, ಮಮತಾ ಬಂಗಾಲದಲ್ಲಿರುವ ಜನಾಕ್ರೋಶವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಅವರು ಈ ಕಾಯಿದೆಯನ್ನು ಜಾರಿಗೊಳಿಸಿ ಈ ಜನಾಕ್ರೋಶವು ಮತಪೆಟ್ಟಿಗೆಗಳ ವರೆಗೆ ತಲುಪದಂತೆ ಸಂಪೂರ್ಣ ಕಾಳಜಿಯನ್ನು ವಹಿಸಿದರು. ಅವರು ಈ ಕಾಯಿದೆಗೆ ‘ಅಪರಾಜಿತಾ’ (ಅಪರಾಭವ) ಎಂದು ಹೆಸರನ್ನಿಟ್ಟರು. ವಾಸ್ತವದಲ್ಲಿ ಮಮತಾರ ಆಡಳಿತಾವಧಿಯಲ್ಲಿ ನೈತಿಕತೆ, ಓಲೈಕೆ, ಮನುμಯ್Àತ್ವ, ಬಾಂಧವ್ಯ, ಪ್ರಾಮಾಣಿಕತನ ಇವೆಲ್ಲ ಯಾವತ್ತೋ ಪರಾಭವಗೊಂಡಿದೆ. ಈ ಕಾಯಿದೆಯನ್ನು ರೂಪಿಸಿ ಅವರು ‘ಬಲಾತ್ಕಾರವನ್ನು ತಡೆಯಲು ನಾನು ಏನಾದರೂ ಮಾಡುತ್ತಿದ್ದೇನೆ’, ಎಂದು ತೋರಿಸುವ ಕರುಣಾಜನಕ ಪ್ರಯತ್ನವನ್ನು ಮಾಡಿದ್ದಾರೆ. ಮಮತಾ ಈ ಹೊಸ ಆಟವನ್ನು ಆಡಿ ಒಂದು ರೀತಿಯಲ್ಲಿ ಕೇಂದ್ರದ ಭಾಜಪ ಸರಕಾರಕ್ಕೆ ಸೆಡ್ಡು ಹೊಡೆದಿರಬಹುದು ಆದರೆ ಬಂಗಾಲದ ಅಪರಾಧ ಮತ್ತು ಹಿಂದೂದ್ವೇμÀದ ಅನೇಕ ಪ್ರಶ್ನೆಗಳಿಗೆ ಮಾತ್ರ ಈಗಲೂ ಉತ್ತರ ದೊರಕಿಲ್ಲ.

ಶುದ್ಧ ಪ್ರಹಸನ !

ಮಮತಾ ಆಡಳಿತದಲ್ಲಿ ಬಲಾತ್ಕಾರ ನಡೆದಿರುವುದು ಇದೇ ಮೊದಲಲ್ಲ. ಈ ಹಿಂದೆ ನೂರಾರು ಅತ್ಯಾಚಾರದ ಘಟನೆಗಳು ನಡೆದಿವೆ. ಇವು ಬಹಿರಂಗವಾಗಿರುವ ಘಟನೆಗಳಾಗಿವೆ; ಮುಚ್ಚಿ ಹಾಕಿರುವ ಘಟನೆಗಳು ಎಷ್ಟಿರಬಹುದು ? ಇದಕ್ಕೆ ಯಾವುದೇ ಲೆಕ್ಕವಿಲ್ಲ. ಅವರ ರಾಜ್ಯದಲ್ಲಿ ‘ಬಲಾತ್ಕಾರ ಒಂದು ಸಾಮಾನ್ಯ ಅಪರಾಧ ಎಂಬಂತಹ’ ಚಿತ್ರಣವಿದೆ. ಬಂಗಾಲದಲ್ಲಿ ಇಂತಹ ಘಟನೆಗಳು ನಡೆದಾಗಲೆಲ್ಲ ಇಂತಹ ಕೂಗು ಕೇಳಿ ಬರುತ್ತಿತ್ತು. ಹಾಗಿರುವಾಗ ಈ ಕಾಯಿದೆ ರೂಪಿಸುವ ಬುದ್ಧಿ ಅವರಿಗೆ ಆಗಲೇ ಏಕೆ ಬರಲಿಲ್ಲ ? ಈಗ ಅವರು ಹೊಸ ಕಾಯಿದೆಯಲ್ಲಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆಯಾಗುವ ನಿಬಂಧನೆಗಳಿವೆ. ಇದರೊಂದಿಗೆ ಕಾಯಿದೆಯನುಸಾರ ಸಾಮೂಹಿಕ ಬಲಾತ್ಕಾರ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಮೇಲಿಂದ ಮೇಲೆ ಇಂತಹ ಕೃತ್ಯಗಳನ್ನು ಮಾಡುವವರಿಗೆ ಮರಣದಂಡನೆಯ ಶಿಕ್ಷೆಯನ್ನೂ ನೀಡುವ ನಿಬಂಧನೆಗಳು ಈ ಕಾಯಿದೆಯಲ್ಲಿದೆ. ಇμಟ್Éà ಅಲ್ಲ ಯಾವುದೇ ಹುಡುಗಿ, ಯುವತಿ ಅಥವಾ ಮಹಿಳೆಯ ಮೇಲೆ ‘ಆಸಿಡ್’ ‘(ಆಮ್ಲ) ಎಸೆದು ದಾಳಿ ನಡೆಸಿದರೆ, ಅಂತಹ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ನೀಡಲಾಗುವುದು. ಹಾಗೆ ನೋಡಿದರೆ, ಈ ಎಲ್ಲ ನಿಬಂಧನೆಗಳು ಚಪ್ಪಾಳೆ ತಟ್ಟುವಂತಹವಾಗಿವೆ. ಏಕೆಂದರೆ ಇμÀಟ್Ä ಕಠಿಣ ನಿಬಂಧನೆಗಳು ಸದ್ಯ ಅಸ್ತಿತ್ವದಲ್ಲಿರುವ ‘ಭಾರತೀಯ ನ್ಯಾಯ ಸಂಹಿತೆ’ಯ ಕಲಂಗಳಲ್ಲಿ ಕೂಡ ಇಲ್ಲ. ಆದಾಗ್ಯೂ ಪ್ರಶ್ನೆಯೇನೆಂದರೆ, ಅದನ್ನು ಪ್ರಭಾವಿಯಾಗಿ ಕಾರ್ಯಗತಗೊಳಿಸುವುದಾಗಿದೆ. ಮಮತಾ ಬ್ಯಾನರ್ಜಿ ಓಲೈಕೆಪ್ರೇಮಿಯಾಗಿದ್ದು, ಅವರ ಆಡಳಿತವು ಅಲ್ಪ ಸಂಖ್ಯಾತರಿಗೆ ಮೀಸಲಾಗಿದೆ. ಮುಸಲ್ಮಾನರ ಬಗ್ಗೆ ಅವರಿಗಿರುವ ವಿಶೇμÀ ‘ಮಮತೆ’ ಎದ್ದು ಕಾಣುತ್ತಿದೆ. ನಿರ್ದಿμಟ್Àವಾಗಿ ಬಂಗಾಲ ದಲ್ಲಿ ಲವ್ ಜಿಹಾದ್, ಬಲಾತ್ಕಾರ, ಅಪಹರಣ, ಮತಾಂತರ ಮುಂತಾದ ಅಪರಾಧಗಳಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರದ್ದೇ ಸಂಖ್ಯೆ ಇರುವುದು ಇಲ್ಲಿಯವರೆಗಿನ ಅಂಕಿಅಂಶಗಳು ತೋರಿಸು
ತ್ತವೆ. ಹೀಗಿರುವಾಗ, ಅವರು ಅವರ ಪ್ರೀತಿಯ ಮುಸಲ್ಮಾನ ಬಾಂಧವರಿಗೆ ಜೀವಾವಧಿ ಶಿಕ್ಷೆ ಅಥವಾ ಗಲ್ಲು ಶಿಕ್ಷೆ ಎಂದಾದರೂ ನೀಡುತ್ತಾರೆಯೇ ? ಯಾರ ಆಡಳಿತಾವಧಿಯಲ್ಲಿ ಹಿಂದೂಗಳ ಮೇಲಿನ ಅನ್ಯಾಯದ ಬಗ್ಗೆ ಬಾಯಿ ತೆರೆಯಬಾರದೆಂದು ಅಪರಾಧಿ ಗಳ ವಿರುದ್ಧ ಸಾಮಾನ್ಯ ದೂರನ್ನು ಕೂಡ ದಾಖಲಿಸುವುದಿಲ್ಲ

ಕೇಂದ್ರ ಸರಕಾರ ಕಠಿಣವಾಗಬೇಕು !

ವಿಧಾನಸಭೆಯಲ್ಲಿ ಈ ಕಾಯಿದೆ ಮಂಡಿಸುವಾಗ ಮಮತಾ ಇವರು ಭಾಜಪ ಆಡಳಿತವಿರುವ ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ ಘಟನೆಗಳ ಕುರಿತು ತಪ್ಪದೇ ಪ್ರಸ್ತಾಪಿಸಿದರು. ‘ಉತ್ತರ ಪ್ರದೇಶ, ಒಡಿಶಾ ಮೊದಲಾದ ರಾಜ್ಯಗಳಲ್ಲಿ ನಡೆದ ಅತ್ಯಾಚಾರದ ಘಟನೆಗಳ ಕುರಿತು ಚರ್ಚೆಗಳಾಗುತ್ತಿಲ್ಲ; ಬಂಗಾಲದ ಘಟನೆಗಳ ಬಗ್ಗೆ ಮಾತ್ರವೇ ಚರ್ಚೆಯೇಕೆ ?’, ಎಂದು ಅವರು ಪ್ರಶ್ನಿಸಿದರು. ‘ಕೇಂದ್ರ ಸಚಿವರು ನಿರಂತರವಾಗಿ ಬಂಗಾಲ ರಾಜ್ಯದ ವಿರುದ್ಧ ಮಾತನಾಡುತ್ತಾರೆ ಮತ್ತು ಬಂಗಾಲದ ಮಾನಹಾನಿ ಮಾಡುತ್ತಾರೆ’ ಎಂದು ಅವರು ಆರೋಪಿಸಿದರು. ಮೂಲದಲ್ಲಿ ಆರೋಪಗಳನ್ನು ಮಾಡುವುದು ಎಂದರೆ ಸ್ವಂತ ರಾಜ್ಯದಲ್ಲಿ ನಡೆಯುತ್ತಿರುವ ಹೇಯ ಘಟನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದಂತಲ್ಲವೇ ?

ವಾಸ್ತವದಲ್ಲಿ ಕೇಂದ್ರ ಸರಕಾರವೂ ಆತ್ಮಾವಲೋಕನ ಮಾಡಿ ಕೊಳ್ಳುವುದು ಆವಶ್ಯಕವಾಗಿದೆ. ಹೆಚ್ಚುತ್ತಿರುವ ಬಲಾತ್ಕಾರದ ಘಟನೆಗಳು, ಅದು ಯಾವುದೇ ರಾಜ್ಯಗಳಲ್ಲಿರಲಿ, ಅದನ್ನು ಎಂದಿಗೂ ಸಹಿಸಿಕೊಳ್ಳಬಾರದು. ಬಲಾತ್ಕಾರಿಗಳಿಗೆ ಕಾನೂನಿನ ಭಯ ಎಳ್ಳμÀಟ್Æ ಉಳಿದಿಲ್ಲ. ಬದಲಾಗಿ ಅವರು ಕಾನೂನನ್ನು ಅಣಕಿಸುವ ಕೃತ್ಯವನ್ನು ಮಾಡುತ್ತಿದ್ದಾರೆ. ಒಂದು ವೇಳೆ ಕಾನೂನಿನ ಭಯವೇ ಇಲ್ಲವಾದರೆ, ಸಹಜವಾಗಿ ಅಪರಾಧಗಳು ಹೆಚ್ಚಾಗುತ್ತವೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರವು ಕೈಯಲ್ಲಿ ದಂಡವನ್ನು ತೆಗೆದುಕೊಳ್ಳಬೇಕು ಮತ್ತು ಬಲಾತ್ಕಾರಿಗಳಿಗೆ ತಕ್ಕಪಾಠ ಕಲಿಸುವ ಶಿಕ್ಷೆಯನ್ನು ನೀಡಬೇಕು. ದೇಶದಲ್ಲಿ ಬಲಾತ್ಕಾರದ ಅನೇಕ ಘಟನೆಗಳು ನಡೆಯುತ್ತಿರುವಾಗ ಕೇಂದ್ರ ಸರಕಾರವು ಇಂದಿನ ವರೆಗೆ ಎμÀಟ್Ä ಬಲಾತ್ಕಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸಿದೆ ? ಎμÀಟ್Ä ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ? ಈ ಪ್ರಶ್ನೆಗಳಿಗೆ ಸಮಾಧಾನಕರ ಮತ್ತು ಅಪೇಕ್ಷಿತವಿರುವಂತಹ ಉತ್ತರ ಖಂಡಿತವಾಗಿಯೂ ಇಲ್ಲ. ಇದು ವಸ್ತುಸ್ಥಿತಿಯಾಗಿದೆ. ಸರಕಾರವು ಮೊದಲಿನಿಂದಲೂ ಬಲಾತ್ಕಾರಿಗಳಿಗೆ ಭಯ ಮೂಡುವಂತೆ ಕ್ರಮವನ್ನು ಕೈಗೊಂಡಿದ್ದರೆ ಮಮತಾ ಬ್ಯಾನರ್ಜಿಯವರಿಗೆ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ನಿಜ ಹೇಳಬೇಕೆಂದರೆ, ಬಂಗಾಲದಲ್ಲಿನ ಅಪರಾಧಗಳ ಅಂಕಿ-ಅಂಶಗಳಿಂದ ಕೇಂದ್ರ ಸರಕಾರವು ಇಲ್ಲಿಯವರೆಗೆ ಬಂಗಾಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕಾಗಿತ್ತು. ಅದು ಹಾಗಾಗದಿರುವ ಕಾರಣ ಒಗಟಾಗಿದೆ.

ಬಂಗಾಲ ಸರಕಾರವು ಕೇಂದ್ರ ಸರಕಾರದ ಕಾನೂನಿಗಿಂತ ಕಠಿಣ ಕಾನೂನು ಜಾರಿಗೊಳಿಸಿದ್ದರೂ, ಅದು ಅಪರಾಧಿಗಳಿಗೆ ಶಿಕ್ಷೆ ನೀಡುವ ಕಾನೂನು ಮಾಡಿದೆ, ಅಪರಾಧವನ್ನು ತಡೆಗಟ್ಟಲು ಮಾಡಿಲ್ಲ. ನಮ್ಮ ದೇಶದ ಶೋಚನೀಯ ಸ್ಥಿತಿಯಾಗಿದೆ. ಅಪರಾಧ ನಡೆದ ಬಳಿಕ ಶಿಕ್ಷೆಯನ್ನು ನೀಡಲಾಗುತ್ತದೆ; ಆದರೆ ಅಪರಾಧಗಳು ಘಟಿಸದಂತೆ ಯಾವುದೇ ಉಪಾಯಯೋಜನೆ ಮಾಡಿರು ವುದಿಲ್ಲ. ಅಂತಹ ಕಾನೂನು ರೂಪಿಸುವ ದೃಷ್ಟಿಯಿಂದ ವಿಚಾರಗಳು ನಡೆಯಬೇಕು. ಅದಕ್ಕಾಗಿ ವಿವಿಧ ಮಾರ್ಗಗಳಿಂದ ಸಮಾಜವನ್ನು ಜಾಗರೂಕಗೊಳಿಸುವ ಕಾರ್ಯವನ್ನು ಕೈಗೊಳ್ಳಬೇಕು. ಅದಕ್ಕಾಗಿ ಸಂತರ ಸಹಾಯವನ್ನು ಪಡೆದುಕೊಳ್ಳ ಬೇಕು. ಆಗ ಮಾತ್ರ ಅಪರಾಧಗಳ ಸಂಖ್ಯೆ ಕ್ಷೀಣಿಸಬಹುದು.