ಕೋಲಕಾತಾದ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆಯುತ್ತಿದ್ದ ಆಧುನಿಕ ವೈದ್ಯೆಯ ಮೇಲಾದ ಬಲಾತ್ಕಾರದ ಪ್ರಕರಣದಿಂದ ಇಡೀ ದೇಶವೇ ಬೆಚ್ಚಿಬಿದ್ದಿದೆ. ಈ ಘಟನೆಯನ್ನು ಖಂಡಿಸಿ ‘ಇಂಡಿಯನ್ ಮೆಡಿಕಲ್ ಅಸೋಸಿಯೇಶನ’ ಆಗಸ್ಟ್ ೧೭ ರಂದು ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿತ್ತು. ಬಲಾತ್ಕಾರದ ಘಟನೆಯಿಂದ ದೇಶಕ್ಕೆ ಕಪ್ಪುಚುಕ್ಕೆ ತಗಲಿದೆ. ಆದರೆ ಅದರೊಂದಿಗೆ ಬೇಜವಾಬ್ದಾರಿತನದ ಮತ್ತು ಹೊಣೆಗಾರಿಕೆಯಿಲ್ಲದ ಹೇಳಿಕೆಗಳನ್ನು ನೀಡುವ ನಾಯಕರೂ ಭಾರತದಲ್ಲಿರುವುದರಿಂದ ಅಳಿದುಳಿದ ಮಾನವನ್ನೂ ಹರಾಜು ಹಾಕಿದ್ದಾರೆ. ಈ ಪ್ರಕರಣದ ಕುರಿತು ತೃಣಮೂಲ ಕಾಂಗ್ರೆಸ್ಸಿನ ನಾಯಕ ಕುಣಾಲ ಘೋಷರ ಹೇಳಿಕೆಯೇನೆಂದರೆ, ”ಬಲಾತ್ಕಾರ ಇತರ ರಾಜ್ಯಗಳಲ್ಲಿಯೂ ನಡೆಯುತ್ತವೆ. ಬಲಾತ್ಕಾರಗಳು ನಡೆಯದೇ ಇರುವಂತಹ ಒಂದೇ ಒಂದು ರಾಜ್ಯದ ಹೆಸರು ಹೇಳಿರಿ’’. ಇದು ಲಜ್ಜೆಗೇಡಿತನದ ಪರಮಾವಧಿಯಾಗಿದೆ. ಮಹಿಳೆಯರ ರಕ್ಷಣೆಯಂತೂ ದೂರವೇ ಉಳಿಯಿತು; ಆದರೆ ಇಂತಹ ಹೇಳಿಕೆಯನ್ನು ನೀಡಿ ಬಲಾತ್ಕಾರವನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಂತಿದೆ. ಸರಕಾರವು ಇಂತಹ ಹೇಳಿಕೆಗಳನ್ನು ನೀಡುವವರನ್ನು ಬಿಡದೇ, ಅವರು ಪುನಃ ಇಂತಹ ಹೇಳಿಕೆಗಳನ್ನು ನೀಡದಂತೆ ಅವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಆವಶ್ಯಕವಾಗಿದೆ. ಬಲಾತ್ಕಾರದ ಘಟನೆಯು ಎಷ್ಟು ಹೇಯ ಮತ್ತು ದುರದೃಷ್ಟ ಕರವಾಗಿತ್ತೋ, ಅದಕ್ಕಿಂತಲೂ ಭಯಾನಕ ಘಟನೆಯು ಕೋಲಕಾತಾದಲ್ಲಿ ನಡೆಯಿತು. ಅದೆಂದರೆ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಗೂಂಡಾಗಳು ನಡೆಸಿರುವ ಗಲಭೆ ಮತ್ತು ವಿಧ್ವಂಸಕ ಕೃತ್ಯಗಳಿಂದ ಪೊಲೀಸರೂ ಗಾಯಗೊಂಡರು. ಈ ಗೂಂಡಾಗಳು ಮತ್ತಿನ್ಯಾರಲ್ಲ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರೇ ಕಳುಹಿಸಿದ ತೃಣಮೂಲ ಕಾಂಗ್ರೆಸ್ಸಿನ ಗೂಂಡಾಗಳೇ ಆಗಿದ್ದಾರೆಂದು ಭಾಜಪ ಮುಖಂಡ ಸುವೇಂದೂ ಅಧಿಕಾರಿಯವರು ಆರೋಪಿಸಿದ್ದಾರೆ. ‘ಮಮತಾಬಾನೋ ಪ್ರತಿಭಟನೆಯ ಗೂಂಡಾಗಳನ್ನು ಕಳುಹಿಸಿ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಗಲಾಟೆ ನಡೆಸಿದರು. ಪೊಲೀಸರು ಗೂಂಡಾಗಳಿಗೆ ದಾಖಲೆಗಳನ್ನು ನಾಶಪಡಿಸಲು ಮಾರ್ಗವನ್ನು ಒದಗಿಸಿಕೊಟ್ಟರು. ಆದ್ದರಿಂದ, ಸಿಬೈಗೆ ಆ ದಾಖಲೆಗಳು ಸಿಗಲಿಲ್ಲ. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆಯು ತ್ತಿರುವಾಗ, ಕೇವಲ ವಿಶ್ವವಿದ್ಯಾಲಯದಲ್ಲಿ ಮಾತ್ರ ಹಿಂಸಾಚಾರ ಏಕೆ ನಡೆಯಿತು?’ ಎಂದೂ ಅವರು ಕೇಳಿದರು. ಅರ್ಥಾತ್ ತೃಣಮೂಲ ಕಾಂಗ್ರೆಸ್ ಪಕ್ಷ ಈಗ ಹೀಗೆ ಮಾಡುತ್ತದೆ ಎಂದು ಈಗ ಜನತೆಗೂ ತಿಳಿದಿದೆ; ಏಕೆಂದರೆ ಅದು ಅವರ ಪದ್ಧತಿಯೇ ಆಗಿದೆ. ಮಮತಾ ಬ್ಯಾನರ್ಜಿಯವರಿಗೆ ಈ ಪ್ರಕರಣದಲ್ಲಿ ಬೇರೆ ‘ನರೇಟಿವ್’(ನಿರೂಪಣೆ) (ಸುಳ್ಳು ಕಥೆ) ನಿರ್ಮಿಸುವುದಿತ್ತೇ ? ಎನ್ನುವ ಪ್ರಶ್ನೆಯೂ ಉದ್ಭವಿಸುತ್ತದೆ. ದೇಶದಲ್ಲಿ ಏನಾದರೂ ಸಂಭವಿಸಿದರೆ, ಅಲ್ಲಿಗೆ ಹೋಗಿ ಹಿಂಸಾತ್ಮಕ ಕೃತ್ಯಗಳನ್ನು ನಡೆಸುವುದು ಮತ್ತು ರಾಜಕೀಯ ಲಾಭವನ್ನು ಪಡೆಯುವುದು, ಇದು ಅವರ ಗೆಲುವಿನ ಮಾರ್ಗವಾಗಿದೆ. ‘ಬಂಗಾಳ ಮತ್ತು ಹಿಂಸಾಚಾರ’, ಈ ಸಮೀಕರಣ ಯಾವಾಗ ಬದಲಾಗುವುದು ? ತೃಣಮೂಲ ಕಾಂಗ್ರೆಸ್ ಸರಕಾರ ವಿಸರ್ಜನೆಯಾಗದ ಹೊರತು ಹಿಂಸಾಚಾರ ನಿಲ್ಲುವುದಿಲ್ಲ ಎನ್ನುವುದೂ ಅಷ್ಟು ಸತ್ಯವಾಗಿದೆ. ಮಮತಾ ಬ್ಯಾನರ್ಜಿ ಅವರ ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರಾಗಿದ್ದಾರೆ, ಇದನ್ನು ಅನೇಕ ದಶಕಗಳಿಂದ ಭಾರತ ನೋಡುತ್ತಿದೆ. ಕೋಲಕಾತಾದ ಪ್ರಕರಣವೆಂದರೆ ಅದರ ಇನ್ನೊಂದು ಪುನರಾವರ್ತನೆಯಾಗಿದೆ. ಇತ್ತೀಚೆಗೆ ಸ್ತ್ರೀಸ್ವಾತಂತ್ರ್ಯದ ಕಹಳೆ ಮೊಳಗಿಸುವ ಪ್ರಗತಿಪರರು, ಕಮ್ಯುನಿಸ್ಟರು, ಮಾನವಾಧಿಕಾರವಾದಿಗಳು, ಪುರಸ್ಕಾರಗಳನ್ನು ಮರಳಿಸಿರುವವರು ಈ ಪ್ರಕರಣದ ಸಮಯದಲ್ಲಿ ಮಾತ್ರ ‘ಕಣ್ಣುಮುಚ್ಚಿಕೊಂಡು ಕುಳಿತುಕೊಳ್ಳುವ’ ನೀತಿಯನ್ನು ಅಂಗೀಕರಿಸಿದ್ದಾರೆಂದು ಅನಿಸುತ್ತದೆ. ಏಕೆಂದರೆ ಯಾರೂ ಈ ಘಟನೆಯ ವಿರುದ್ಧ ‘ಚಕಾರ’ವೆತ್ತುತ್ತಿಲ್ಲ.
ಸ್ತ್ರೀತ್ವದ ಹತ್ಯೆ !
ಕೋಲಕಾತಾದಲ್ಲಿ ಏನು ನಡೆದಿದೆಯೋ, ಅದಕ್ಕಿಂತಲೂ ಅತಿಭಯಂಕರ ಷಡ್ಯಂತ್ರ್ಯವನ್ನು ರೂಪಿಸಲಾಗಿದೆ. ಅದೆಂದರೆ ಬಲಾತ್ಕಾರದ ಪ್ರಕರಣವನ್ನು ಹತ್ತಿಕ್ಕುವುದು: ಆದುದರಿಂದ ಇದು ಮತ್ತಷ್ಟು ಅಮಾನವೀಯವಾಗಿದೆ. ಮಮತಾ ಸರಕಾರವೇ ಆರೋಪಿಯನ್ನು ರಕ್ಷಿಸಿದೆ. ಸಂತ್ರಸ್ತೆಯ ಮೇಲೆ ಬಲಾತ್ಕಾರವಾಗಿದ್ದರೂ ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಅವಳ ಪೋಷಕರಿಗೆ ತಿಳಿಸಲಾಯಿತು. ಪೊಲೀಸರಿಗೆ ಆತ್ಮಹತ್ಯೆಯ ಅಪರಾಧವನ್ನು ದಾಖಲಿಸುವಂತೆ ಆದೇಶ ನೀಡಲಾಯಿತು. ಸಂತ್ರಸ್ಥೆಯ ಕುಟುಂಬದವರಿಗೆ ಬೆದರಿಕೆ ಹಾಕಲಾಯಿತು. ಸಾಮೂಹಿಕ ಬಲಾತ್ಕಾರ ಆಗಿರುವುದು ಕಂಡು ಬಂದಿರುವಾಗಲೂ ಈ ಪ್ರಕರಣವನ್ನು ಹತ್ತಿಕ್ಕುವ ಪ್ರಯತ್ನಗಳನ್ನು ಮಾಡಲಾಯಿತು. ಇಷ್ಟು ಗಂಭೀರವಾದ ಅಪರಾಧವಾಗಿದ್ದರೂ ಅದನ್ನು ಮುಚ್ಚಿಡಲಾಗುತ್ತದೆಯೆಂದರೆ ಅದು ಪೊಲೀಸರ ಬೆಂಬಲವಿಲ್ಲದೇ ಅಸಾಧ್ಯವಾಗಿದೆ. ಈ ಪೊಲೀಸರಿಗೆ ‘ಮಮತೆ’ಯ ಆಶ್ರಯ ಸಿಗುತ್ತದೆಯೆನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ. ಇಂತಹ ಪೊಲೀಸರ ಮೇಲೆಯೂ ಕ್ರಮವನ್ನು ಜರುಗಿಸಬೇಕಾಗಿದೆ. ಬಂಗಾಳದಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ನೋಡಿದರೆ, ಬಹಿರಂಗವಾಗಿ ನಡೆಯುವ ಸ್ತ್ರೀತ್ವದ ಹತ್ಯೆಯೇ ಆಗಿದೆ. ಇನ್ನುಳಿದ ಆರೋಪಿಗಳನ್ನು ಸರಕಾರ ಯಾವಾಗ ಬಂಧಿಸುತ್ತದೆ ? ಅವರ ವಿರುದ್ಧ ಯಾವಾಗ ಕ್ರಮಗಳನ್ನು ಕೈಗೊಳ್ಳುವುದು ? ಎನ್ನುವುದಕ್ಕೆ ಸರಕಾರವೇ ಉತ್ತರ ನೀಡಬೇಕು. ಬಂಗಾಳದಲ್ಲಿ ಇದಕ್ಕಿಂತಲೂ ಮೊದಲೂ ಮಹಿಳೆಯ ಮೇಲೆ ಬಲಾತ್ಕಾರಗಳು ನಡೆದಿವೆ. ರಾಜ್ಯದಲ್ಲಿ-ಒಬ್ಬ ಮಹಿಳಾ ಮುಖ್ಯಮಂತ್ರಿಯಿದ್ದರೂ ಮಹಿಳೆಯರ ಮಾನವನ್ನು ಹರಾಜು ಮಾಡಲಾಗುತ್ತದೆ, ಕಾನೂನು ಸುವ್ಯವಸ್ಥೆಯನ್ನು ಕೂಡ ಹರಾಜು ಮಾಡಲಾಗುತ್ತದೆ, ಇದು ನಾಚಿಕೆಗೇಡಿನ ಮತ್ತು ಅಷ್ಟು ದುಃಖಕರವಾಗಿದೆ. ಕೆಲವು ತಿಂಗಳ ಹಿಂದೆ ಪೂರ್ವಬಂಗಾಳದ ಸಂದೇಶಖಾಲಿಯಲ್ಲಿ ತೃಣಮೂಲದ ಮತಾಂಧ ನಾಯಕನೊಬ್ಬ ಅಲ್ಲಿನ ಅನೇಕ ಹೆಣ್ಣುಮಕ್ಕಳು ಮತ್ತು ಮಹಿಳೆಯರ ಮೇಲೆ ಬಲಾತ್ಕಾರ ನಡೆಸಿದನು. ಅವನು ಅನೇಕ ಜನರ ಭೂಮಿಯನ್ನು ಕಬಳಿಸಿದನು. ಈ ಎಲ್ಲ ಪ್ರಕರಣದಿಂದ ಮಮತಾ ಬ್ಯಾನರ್ಜಿಯ ಉದ್ದೇಶ ಮತ್ತು ಅವರು ನಿರ್ದಿಷ್ಟುವಾಗಿ ಯಾರನ್ನು ರಕ್ಷಿಸುತ್ತಿದ್ದಾರೆ ? ಎನ್ನುವ ವಿಷಯದಲ್ಲಿ ಪ್ರಶ್ನೆಗಳು ಉದ್ಭವಿಸುತ್ತವೆ. ಇಂತಹ ಪ್ರಕರಣದಲ್ಲಿ ಸ್ತ್ರೀ ಸ್ವಾತಂತ್ರ್ಯದ ಕಹಳೆ ಮೊಳಗಿಸುವ ಸಂಘಟನೆಗಳು ಈ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿಯನ್ನು ಜವಾಬ್ದಾರರನ್ನಾಗಿ ಮಾಡುತ್ತಿಲ್ಲ ಅಥವಾ ಅವರಿಗೆ ಈ ವಿಷಯದಲ್ಲಿ ಯಾವತ್ತೂ ಕಠಿಣವಾಗಿ ಕೇಳುವುದಿಲ್ಲ ಎನ್ನುವುದನ್ನು ಗಮನಿಸಬೇಕಾಗಿದೆ. ಕೋಲಕಾತಾದ ಅರಾಜಕತೆ ಯನ್ನು ನೋಡಿದರೆ ಕೇಂದ್ರ ಸರಕಾರವು ಇದರಲ್ಲಿ ಗಮನ ಹರಿಸಿ ದೇಶಕ್ಕೆ ನ್ಯಾಯವನ್ನು ಒದಗಿಸಿಕೊಡಬೇಕು.
ಕೋಲಕಾತಾದಲ್ಲಿ ನಡೆದ ಘಟನೆಯು ೨೦೧೯ ರಲ್ಲಿ ಭಾಗ್ಯನಗರದಲ್ಲಿ (ತೆಲಂಗಾಣ) ಪಶುವೈದ್ಯೆಯ ಮೇಲೆ ನಡೆದ ಸಾಮೂಹಿಕ ಬಲಾತ್ಕಾರವನ್ನು ನೆನಪಿಸುತ್ತದೆ. ಆ ಸಮಯದಲ್ಲಿ ಬಲಾತ್ಕಾರ ನಡೆಸಿ ಆಕೆಯ ಮೃತದೇಹವನ್ನು ಸುಡಲಾಗಿತ್ತು. ಈ ಹತ್ಯೆಯ ಪ್ರಕರಣದ ನಾಲ್ವರೂ ಆರೋಪಿಗಳನ್ನು ಚಕಮಕಿಯಲ್ಲಿ ಹತ್ಯೆ ಮಾಡಲಾಗಿತ್ತು. ಇದರಿಂದ ಆ ಪ್ರಕರಣದಲ್ಲಿ ಒಂದು ರೀತಿಯಲ್ಲಿ ನ್ಯಾಯ ದೊರಕಿತು; ಆದರೆ ಕೋಲಕಾತಾದ ಪ್ರಕರಣವೂ ಇದೇ ರೀತಿ ತ್ರಿಶಂಕುವಾಗಿ ಉಳಿಯಲಿದೆಯೇ ? ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದಿದ್ದರೆ ಮತ್ತೊಬ್ಬ ಹುಡುಗಿ ಅಥವಾ ಯುವತಿ ಬಲಾತ್ಕಾರಕ್ಕೆ ಬಲಿಯಾಗಬಹುದು ಎನ್ನುವುದನ್ನು ಸರಕಾರವು ಗಮನಿಸಿ ತಕ್ಷಣವೇ ಕ್ರಮ ಕೈಕೊಳ್ಳಬೇಕು.
ಸ್ವಾತಂತ್ರ್ಯವೋ ಅಥವಾ ಪಾರತಂತ್ರ್ಯ ?
ಆಗಸ್ಟ ೧೫ ರಂದು ಭಾರತದ ೭೮ ನೇ ಸ್ವಾತಂತ್ರ್ಯದಿನವನ್ನು ಆಚರಿಸಲಾಯಿತು; ಆದರೆ ಕೋಲಕಾತಾದ ಪ್ರಕರಣ ಮತ್ತು ಅದು ಸಾಗುತ್ತಿರುವ ಹಾದಿಯನ್ನು ನೋಡಿದರೆ ‘ನಾವು ಸ್ವಾತಂತ್ರ್ಯದಿನವನ್ನು ಆಚರಿಸುವುದೂ ನಾಚಿಕೆಗೇಡಿನ ಸಂಗತಿ’ ಎಂದು ಹೇಳಬೇಕಾಗುವುದು. ಕೋಲಕಾತಾ ಇರಲಿ ಅಥವಾ ಇತರೆಡೆಯದ್ದಿರಲಿ ಕ್ರೂರ ಮತ್ತು ನಿರ್ದಯ ಬಲಾತ್ಕಾರ ಮಾಡಿರುವ ಘಟನೆಯನ್ನು ನೋಡಿದರೆ ಎಷ್ಟು ಹುಡುಗಿಯರು, ಯುವತಿಯರು ಮತ್ತು ಮಹಿಳೆಯರು ತಮ್ಮ ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಜೀವನವನ್ನು ಸಾಗಿಸುತ್ತಿರಬಹುದು. ಅವರ ಮನಸ್ಸಿನ ಮೇಲೆ ಏನು ಪರಿಣಾಮವಾಗಿರಬಹುದು ಎನ್ನುವ ವಿಚಾರವನ್ನೂ ನಾವು ಮಾಡಲು ಸಾಧ್ಯವಿಲ್ಲ. ನಮ್ಮದೇ ದೇಶದಲ್ಲಿ ಅಸುರಕ್ಷತೆಯ ಭಾವನೆಯಿಂದ ಜೀವಿಸುವುದು ಸ್ವಾತಂತ್ರ್ಯವಲ್ಲ. ರಾಮರಾಜ್ಯದಲ್ಲಿ ಪ್ರತಿಯೊಬ್ಬ ಸ್ತ್ರೀಯು ಸುರಕ್ಷಿತವಾಗಿ ಮತ್ತು ಗೌರವದಿಂದ ಜೀವಿಸುತ್ತಿದ್ದರು. ಅಂತಹ ರಾಮರಾಜ್ಯವನ್ನು ಪುನಃ ಅನುಭವಿಸಲು ನೀಡುವ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಆವಶ್ಯಕವಾಗಿದೆ.