ಕಂಗನಾ ತಪ್ಪಿದ್ದೆಲ್ಲಿ ?

ನಟಿ ಕಂಗನಾ ರಾಣಾವತ್

ನಟಿ ಮತ್ತು ಹಿಮಾಚಲ ಪ್ರದೇಶದ ಮಂಡಿಯ ಸಂಸದೆ ಕಂಗನಾ ರಣಾವತ ಇವರು ಯಾವಾಗಲೂ ‘ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿರುತ್ತಾರೆ’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅವರನ್ನು ಟೀಕಿಸಲಾಗುತ್ತದೆ. ಯಾವುದೇ ಹೇಳಿಕೆಗಳು, ಯಾವಾಗ ಅನೇಕ ಜನರಿಗೆ ಅದು ತಪ್ಪೆಂದು ಅನಿಸಿದಾಗ ಅಥವಾ ಇಷ್ಟವಾಗದಿದ್ದಾಗ ವಿವಾದಾಸ್ಪದವೆಂದು ಅನಿಸುತ್ತದೆ. ಕಂಗನಾ ಇವರು ತಮ್ಮ ಹಿಂದುತ್ವನಿಷ್ಠ ಮತ್ತು ರಾಷ್ಟ್ರನಿಷ್ಠ ನಿಲುವನ್ನು ಎಂದಿಗೂ ಮರೆಮಾಚಲಿಲ್ಲ. ಅವರು
ರಾಷ್ಟ್ರದ ಸಮಸ್ಯೆಗಳ ವಿμÀಯದಲ್ಲಿ ಅನೇಕ ಬಾರಿ ಖಡಾಖಂಡಿತ ವಾಗಿ ಮತ್ತು ಪ್ರಖರ ನಿಲುವನ್ನು ತಳೆದಿದ್ದಾರೆ. ಈ ಹೇಳಿಕೆಯು ಸಮಾಜವಾದಿ ಮಾಧ್ಯಮಗಳು ಮತ್ತು ಹಿಂದೂವಿರೋಧಿ ಜನರಿಗೆ ಚುಚ್ಚುತ್ತಿರುವುದರಿಂದಲೇ ಅವರ ಹೇಳಿಕೆಗಳು ‘ವಿವಾದಾತ್ಮಕ’ವಾಯಿತು. ಕಂಗನಾ ಇವರು ದಿನಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ‘ಕೃಷಿ ಆಂದೋಲನಗಳಲ್ಲಿಯೂ ಬಾಂಗ್ಲಾದೇಶ ದಲ್ಲಿ ಆಗಿರುವಂತೆಯೇ ಅಂತಾರಾಷ್ಟ್ರೀಯ ಷಡ್ಯಂತ್ರವಿತ್ತು. ಅಲ್ಲಿ ಅತ್ಯಾಚಾರಗಳು ಮತ್ತು ಕೊಲೆಗಳು ನಡೆದವು’ ಎಂದು ಹೇಳಿದ್ದರು. ಅವರ ಈ ಹೇಳಿಕೆಯಿಂದ ವಿಪಕ್ಷಗಳು ಅವರ ಮೇಲೆ ಮುಗಿಬಿದ್ದವು. ಭಾಜಪ ಕೂಡ ವಿವಾದ ಬೆಳೆಯದಿರಲು ‘ಕಂಗನಾ ಅವರ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿ ಜಾರಿಕೊಂಡಿದೆ. ಇರಲಿ ಇದು ರಾಜಕಾರಣವಾಗಿದೆ; ಆದರೆ ‘ರಾಷ್ಟ್ರವಿರೋಧಿ ಶಕ್ತಿಗಳ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಹೋರಾಡುವುದನ್ನು ಮುಂದುವರಿಸಬೇಕು’ ಎನ್ನುವುದನ್ನು ಯಾರೂ ಅಲ್ಲಗಳೆಯುವುದಿಲ್ಲ. ಕೃಷಿ ಆಂದೋಲನದ ಸಮಯದಲ್ಲಿ ಬಲಾತ್ಕಾರ ನಡೆದಿರುವ ಮತ್ತು ಆಂದೋಲನದ ಸಮಯದಲ್ಲಿ ವ್ಯಕ್ತಿ ಸಾವನ್ನಪ್ಪಿರುವ ಸುದ್ದಿ ಬಂದಿತ್ತು. ಜನರು ಬಾಂಗ್ಲಾದೇಶದ ಸ್ಥಿತಿಯಿಂದಾದಷ್ಟು ಉದ್ರಿಕ್ತವಾಗದೇ ಇದ್ದರೂ, ಕೃಷಿ ಆಂದೋಲನದ ಹಿಂದೆ ಮತ್ತು ಬಾಂಗ್ಲಾದೇಶದ ಆಂದೋಲನದ ಹಿಂದೆ ಅಂತಾರಾಷ್ಟ್ರೀಯ ಭಾರತವಿರೋಧಿ ಶಕ್ತಿಗಳು ಸಕ್ರಿಯವಾಗಿದೆ. ಈ ಹೋಲಿಕೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ.

ಸ್ವಾರ್ಥಿ ಮತ್ತು ವಿರೋಧಿ ಶಕ್ತಿಗಳ ಬೆಂಬಲಿತ ಕೃಷಿ ಆಂದೋಲನ

ದೆಹಲಿಯ ಗಡಿಭಾಗದಲ್ಲಿ ನಡೆದ ಕೃಷಿ ಆಂದೋಲನದಿಂದ ದೇಶಕ್ಕೆ ಮತ್ತು ಸರಕಾರಕ್ಕೆ ತೊಂದರೆಯಾಗಿತ್ತು ಎನ್ನುವುದನ್ನುಯಾರು ತಾನೆ ಮರೆಯಲು ಸಾಧ್ಯ ? ಭಾರತೀಯ ಕಿಸಾನ್ ಯೂನಿಯನ್ನ ನಾಯಕ ರಾಕೇಶ ಟಿಕಾಯತ ಇವರು, ‘ಈ ಆಂದೋಲನ ೧೩ ತಿಂಗಳ ಕಾಲ ಶಾಂತಿಯುತವಾಗಿ ನಡೆಯಿತು’ ಎಂದು ಹೇಳಿದ್ದಾರೆ. ದೇಶಕ್ಕೆ ಅನುಕೂಲವಾಗಿದ್ದ ಕೃಷಿ ಕಾನೂನುಗಳನ್ನು ವಿರೋಧಿಸಲು ಈ ಆಂದೋಲನ ನಡೆಸಲಾಗಿತ್ತು. ೧೩ ತಿಂಗಳಿನಿಂದ ಮತ್ತು ಈಗಲೂ ದೇಶದ ರಾಜಧಾನಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಆಂದೋಲನಕಾರರನ್ನು ತಡೆಯಲು ಸರಕಾರಕ್ಕೆ ಸಾಧ್ಯವಾಗಲಿಲ್ಲ ಮತ್ತು ಅವರನ್ನು ಸಮಾಧಾನ ಗೊಳಿಸಲೂ ಸಾಧ್ಯವಾಗಲಿಲ್ಲ. ನಡೆದಿದ್ದ ಆಂದೋಲನವು ಅಯೋಗ್ಯ ವಾಗಿತ್ತು ಎಂದು ಹೇಳಲು ಬೇರೆ ಕನ್ನಡಿಯೇಕೆ ಬೇಕು ? ಆಂದೋಲನಕ್ಕಾಗಿ ಬಹಳ ದೊಡ್ಡ ಪ್ರಮಾಣದಲ್ಲಿ ವಿದೇಶದಿಂದ ಹಣ ಹರಿದುಬಂದಿತು. ಈ ಹಣದಿಂದಲೇ ಅವರ ಊಟೋಪಚಾರಗಳು ಅದ್ದೂರಿಯಾಗಿ ನಡೆಯುತ್ತಿತ್ತು, ಅದರಲ್ಲಿ ಹಲವು ಬಾರಿ ದೇಶವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು, ಇದೆಲ್ಲವೂ ದೇಶದ ಹಿತದ ರಕ್ಷಣೆಗೆ ಆಗಿತ್ತೇ ? ಅಥವಾ ಈ ಆಂದೋಲನ ಕೃಷಿಗಾದರೂ ಪ್ರಯೋಜನಕಾರಿಯಾಗಿತ್ತೇ ? ರೈತರಿಗೆ ತಮ್ಮ ಕೃಷಿ ಕೆಲಸ ಬಿಟ್ಟು ಹಲವು ತಿಂಗಳು ರಸ್ತೆಯಲ್ಲೇ ಬಿಸಿಲು, ಚಳಿಯಲ್ಲಿ ಕಳೆಯಬೇಕಾಯಿತು. ಅವರ ದೈನಂದಿನ ಕ್ರಿಯೆಗಳಾದ, ಪ್ರಾತಃವಿಧಿ, ಸ್ನಾನ ಇತ್ಯಾದಿ ವಿಷಯಗಳನ್ನು ಅವರು ಹೇಗೆ ನಿಭಾಯಿಸಿರಬಹುದು ? ಎಲ್ಲಿ ಮಲಗಿರಬಹುದು ?

ಇದರಲ್ಲಿ ಭಾಗವಹಿಸಿದ್ದವರಲ್ಲಿ ಎಷ್ಟು ಜನರು ನಿಜವಾದ ರೈತರಾಗಿದ್ದರು ? ಎನ್ನುವ ಪ್ರಶ್ನೆಯು ಈ ಸಂದರ್ಭದಲ್ಲಿ ಎದ್ದಿತ್ತು. ಈ ಸಂಘಟನೆಯ ಸದಸ್ಯನು ಕೆಂಪು ಕೋಟೆಯ ಮೇಲೆ ತಮ್ಮ ಬಾವುಟವನ್ನು ಹಾರಿಸಿದನು. ಈ ಆಂದೋಲನವು ಕೆನಡಾ ಬೆಂಬಲಿತ ಖಲಿಸ್ತಾನವಾದಿಗಳ ಪ್ರೇರಣೆಯಿಂದ ಪ್ರಾರಂಭ ವಾಗಿತ್ತು ಎನ್ನುವುದನ್ನು ಎಲ್ಲಿಯೂ ಮುಚ್ಚಿಡಲು ಸಾಧ್ಯವಿಲ್ಲ. ನಿರ್ವಾಹವಿಲ್ಲದೇ ಸರಕಾರಕ್ಕೆ ತಾತ್ಕಾಲಿಕವಾಗಿ ಕೃಷಿ ಕಾನೂನು ಹಿಂಪಡೆದು ಆಂದೋಲನಕಾರರನ್ನು ಶಾಂತಗೊಳಿಸಬೇಕಾಯಿತು. ಆದರೆ ಅದಕ್ಕಾಗಿ ಅವರು ಅಭಿವೃದ್ಧಿಗೆ ಅಡ್ಡಿಯಾಗುವ ದೊಡ್ಡ ಬೆಲೆಯನ್ನು ತೆರಬೇಕಾಯಿತು ಎನ್ನುವುದು ಬಹಿರಂಗ.

ಪ್ರಧಾನಿಯ ಹತ್ಯೆಗೆ ಸಿದ್ಧರಾಗಿರುವ ಖಲಿಸ್ತಾನವಾದಿಗಳು

ಪ್ರಧಾನಿಯವರು ಪಂಜಾಬ್ ಪ್ರವಾಸಕ್ಕೆ ತೆರಳಿದ್ದಾಗ, ಅವರ ವಾಹನದಿಂದ ಕೆಲವು ಅಂತರದಲ್ಲಿದ್ದ ವೃತ್ತದಲ್ಲಿ ಇದೇ ಕೃಷಿ ಆಂದೋಲನಕಾರರು ರಸ್ತೆ ತಡೆದರು. ಪ್ರಧಾನಿಗಳ ರಸ್ತೆಯನ್ನು ತಡೆಯುವಲ್ಲಿ ಅಲ್ಲಿನ ಪೊಲೀಸ ಇಲಾಖೆಯೂ ಕೈ ಜೋಡಿಸಿರುವುದು ಬಹಿರಂಗವಾಯಿತು. ದೇಶದ ಪ್ರಧಾನಿಯವರನ್ನು ತಡೆಯುವಷ್ಟು ಧೈರ್ಯ ತೋರಿಸಿದ್ದರಿಂದ, ಪ್ರಧಾನಿಯವರು ತಮ್ಮ ಪ್ರವಾಸ ವನ್ನು ಕೈಬಿಡಬೇಕಾಯಿತು. ಪ್ರಧಾನಿಯವರನ್ನು ತಡೆದು ಅವರ ಮೇಲೆ ದಾಳಿ ನಡೆಸುವ ಅವರ ಯೋಜನೆಯು ತದನಂತರ ದೊಡ್ಡ ಪ್ರಮಾಣದಲ್ಲಿ ಬಹಿರಂಗವಾಯಿತು. ಈ ಎಲ್ಲ ಆಂದೋಲನಕಾರರಿಗೆ ಖಲಿಸ್ತಾನವಾದಿಗಳ ಬೆಂಬಲವಿತ್ತು. ಇಷ್ಟು ಮಾತ್ರವಲ್ಲ, ಪ್ರಧಾನಿಯನ್ನು ಕೊಲ್ಲುವ ಅವರ ಯೋಜನೆ ಕೆಲವು ವರ್ಷಗಳ ಹಿಂದೆಯೇ ನಡೆದಿತ್ತು.

ಇತ್ತೀಚೆಗೆ ಕೃಷಿ ಆಂದೋಲನದ ನಾಯಕ ಟಿಕಾಯತ ಅವರು, ‘ಬಾಂಗ್ಲಾದೇಶದಂತೆ ನಾವು ಮೋದಿಯನ್ನು ಕೆಳಗಿಳಿಸುತ್ತೇವೆ’ ಎಂದು ಹೇಳಿದ್ದಾರೆ. ಇದರಿಂದ ಅವರ ದೇಶವಿಧ್ವಂಸಕ ಹೇಳಿಕೆ ಗಳನ್ನು ಅವರು ಸ್ಪಷ್ಟವಾಗಿಯೇ ಹೇಳಿದ್ದಾರೆ. ಅವರ ಈ ದೇಶ ವಿರೋಧಕ್ಕೆ ಇನ್ನೆಷ್ಟು ಬೇರೆ ಪುರಾವೆಗಳನ್ನು ನೀಡಬೇಕು ? ಅವರಿಗೆ ದೇಶದ ಪ್ರಧಾನಿಯಿಂದ ಎಷ್ಟು ಕಿರಿಕಿರಿಯಾಗುತ್ತಿದೆ ಮತ್ತು ಕೃಷಿ ಆಂದೋಲನವು ಕೇವಲ ನಿಮಿತ್ತವಾಗಿದೆ; ಎನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಆವಶ್ಯಕತೆಯಿಲ್ಲ.

ಕೃಷಿ ಆಂದೋಲನವು ‘ಕಮ್ಯುನಿಸ್ಟ ಇಕೊಸಿಸ್ಟಮ್’ ಭಾಗ

ಮೋದಿ ಸರಕಾರ ಜಾರಿಗೊಳಿಸುತ್ತಿದ್ದ ಕೃಷಿ ಕಾನೂನು ರೈತರ ಹಿತದೃಷ್ಟಿಯಿಂದ ಆಗಿದ್ದವು; ರೈತರು ಮತ್ತು ವ್ಯಾಪಾರಿಗಳ ನಡುವಿನ ಮಧ್ಯವರ್ತಿಗಳು ಇಲ್ಲವಾಗಿ, ರೈತರಿಗೆ ನೇರವಾಗಿ ಲಾಭ ಸಿಗುತ್ತಿತ್ತು; ಆದರೆ ಸರಕಾರವು ‘ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆಯನ್ನು ನೀಡುವುದಿಲ್ಲ’ ಮತ್ತು ‘ಸರಕಾರ ದೊಡ್ಡ ಸಂಸ್ಥೆಗಳ ಹಿತಾಸಕ್ತಿಗಳನ್ನು ಪೂರೈಸುತ್ತಿದೆ’ ಎಂದು ನೆಪವೊಡ್ಡಿ, ಆಂದೋಲನವನ್ನು ಪ್ರಾರಂಭಿಸಲಾಯಿತು. ರೈತ ರಿಗೆ ಹಾನಿಯಾಗುತ್ತಿದ್ದರೆ, ಇಡೀ ದೇಶದ ರೈತರು ಇದರಲ್ಲಿ ಸಹ ಭಾಗಿಯಾಗುತ್ತಿದ್ದರು; ಆದರೆ ಆ ರೀತಿ ಆಗಲಿಲ್ಲ. ಮುಖ್ಯವಾಗಿ ಪಂಜಾಬ, ಹರಿಯಾಣ ಮತ್ತು ಸ್ವಲ್ಪ ಪ್ರಮಾಣದಲ್ಲಿ ಗುಜರಾತನ ರೈತರು ಭಾಗವಹಿಸಿದ್ದರು. ರೈತ ಸಂಘಟನೆ ಮಾಡಿದ ಈ ನೆಪ ‘ಕಮ್ಯುನಿಸ್ಟ್ ಇಕೋಸಿಸ್ಟಮ್’ನ (ಏಕತೆಯನ್ನು ಬೆಂಬಲಿಸುವ ರಾಷ್ಟ್ರವಿರೋಧಿ ವ್ಯವಸ್ಥೆ) ಭಾಗವಾಗಿದೆ. ಇದಕ್ಕೆ ಯಾವುದೇ ಸಂಬಂಧವಿಲ್ಲದ ವಿದೇಶೀ ಗಾಯಕಿಯೊಬ್ಬಳು ಈ ಆಂದೋಲನವನ್ನು ಬೆಂಬಲಿಸುವುದು ಕೂಡ ಅಂತಾರಾಷ್ಟ್ರೀಯ ‘ಕಮ್ಯುನಿಸ್ಟ್ ಇಕೋಸಿಸ್ಟಮ್’ ಭಾಗವಾಗಿರುವುದು ಗಮನಕ್ಕೆ ಬಂದಿತು. ದೇಶದ ಯಾವುದೇ ಚಿಕ್ಕ-ದೊಡ್ಡ ವಿμÀಯಗಳನ್ನು ಪ್ರಸಾರ ಮಾಧ್ಯಮಗಳು ದೊಡ್ಡದನ್ನಾಗಿ ಮಾಡುವುದು, ಕಾರ್ಯ ಕರ್ತರಿಂದ ರಸ್ತೆಯ ಮೇಲೆ ಆಂದೋಲನ ಮಾಡಿಸಿಕೊಳ್ಳುವುದು, ಅದಕ್ಕಾಗಿ ವಿದೇಶದಿಂದ ಹಣವನ್ನು ಪಡೆಯುವುದು, ಹೆಸರಾಂತ ವ್ಯಕ್ತಿ ಆ ವಿμÀಯದಲ್ಲಿ ಸಾಮಾಜಿಕ ಮಾಧ್ಯಮದಿಂದ ಹೇಳಿಕೆ ನೀಡುವುದು ಈ ಎಲ್ಲ ‘ಇಕೋಸಿಸ್ಟಮ್’ ನಾಶಗೊಳಿಸಲು ಈಗ ರಾಷ್ಟ್ರಹಿತದ ವಿಚಾರಧಾರೆಯೊಂದಿಗೆ ಮುಂದೆ ಬರುವುದು ಆವಶ್ಯಕವಾಗಿದೆ.

ಕಂಗನಾರ ಹೇಳಿಕೆಯಿಂದ ಇಕೊಸಿಸ್ಟಮ್ನಲ್ಲಿ ಬಿರುಕು !

ಕೃಷಿ ಆಂದೋಲನದಿಂದ ದೇಶದ ರಾಜಧಾನಿಯನ್ನು ಸುತ್ತುವರಿದು ದೇಶದ ಅಂತಾರಾಷ್ಟ್ರೀಯ ಗೌರವವನ್ನು ಹಾಳು ಮಾಡುವುದು, ಮೋದಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಈಗ ಈ ಆಂದೋಲನಕಾರರು ದೇಶದ ಪ್ರಧಾನಿಯನ್ನು ಅಧಿಕಾರ ದಿಂದ ಕೆಳಗಿಳಿಸುವ ಅಂದರೆ ದೇಶದಲ್ಲಿ ಅರಾಜಕತೆಯನ್ನು ಹರಡುವ ಹೇಳಿಕೆಯನ್ನು ನೀಡುವುದು, ಇದೆಲ್ಲ ಏನು ? ಈ ರೀತಿಯ ಆಂದೋಲನಗಳು ನಡೆದ ಕೂಡಲೇ ದೇಶದ ಎಲ್ಲ ವಿಪಕ್ಷಗಳು ಪ್ರಧಾನಿಗಳ ವಿರುದ್ಧ ಒಂದಾಗಿ ಆಂದೋಲನವನ್ನು ಬೆಂಬಲಿಸುತ್ತಾರೆ. ಅವರೂ ಒಂದು ರೀತಿ ಈ ‘ಇಕೊಸಿಸ್ಟಮ’ ಭಾಗವಾಗುತ್ತಾರೆ. ಈ ಆಂದೋಲನದ ಕುರಿತು ಸಂಸದೆ ಕಂಗನಾ ಇವರ ಹೇಳಿಕೆಯಿಂದ ಈ ದೇಶವಿರೋಧಿ ‘ಇಕೊಸಿಸ್ಟಮ’ಗೆ ಒಂದು ರೀತಿಯಲ್ಲಿ ಧಕ್ಕೆಯಾಗಿದೆ. ಆಂದೋಲನಕಾರರ ಸುಳ್ಳು ಮತ್ತು ದೇಶವಿರೋಧಿ ಕೃತ್ಯಗಳನ್ನು ಮಾಡುವ ರಹಸ್ಯವನ್ನು ಕಂಗನಾ ಒಂದು ರೀತಿಯಲ್ಲಿ ಬಹಿರಂಗಪಡಿಸಿದ್ದಾರೆ, ಎಂದು ಹೇಳಿದರೆ ತಪ್ಪಾಗಲಾರದು. ಹಾಗಾಗಿ ಯಾರಾದರೂ ಕಂಗನಾರಿಗೆ ಏನೇ ಹೇಳಿದರೂ ಅವರ ಹೇಳಿಕೆಯಿಂದ ಅನೇಕ ವಿಷಯಗಳು ಸಾಧ್ಯವಾಗಿದೆಯೆನ್ನುವುದೂ ಅಷ್ಟೂ ನಿಜವಾಗಿದೆ.