ಗಣೇಶೋತ್ಸವದ ಸಮಯದಲ್ಲಿಯೇ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ೪ ದಿನಗಳ ಹಿಂದೆ ಮುಸ್ಲಿಮರು ಶ್ರೀ ಗಣೇಶಮೂರ್ತಿ ವಿಸರ್ಜನೆಯ ಮೆರವಣಿಗೆ ಮೇಲೆ ಕಲ್ಲು ಮತ್ತು ಪೆಟ್ರೋಲ್ ಬಾಂಬ್ ಎಸೆಯುವ ಮೂಲಕ ದಾಳಿ ನಡೆಸಿದರು. ಹಿಂದೂಗಳ ಅಂಗಡಿಗಳನ್ನು ಸುಟ್ಟು ಕೋಟ್ಯಂತರ ರೂಪಾಯಿ ನಷ್ಟಗೊಳಿಸಿದರು. ಈ ಸಂದರ್ಭದಲ್ಲಿ ಭುಗಿಲೆದ್ದ ಗಲಭೆಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದೂಗಳ ಆಸ್ತಿಗೆ ಹಾನಿಯಾಗಿದೆ. ಈ ಘಟನೆಯನ್ನು ಪ್ರತಿಭಟಿಸಿ, ಬೆಂಗಳೂರಿನಲ್ಲಿ ಹಿಂದುತ್ವನಿಷ್ಠರು ಪ್ರತಿಭಟನೆ ನಡೆಸಿದ್ದರು ಮತ್ತು ಈ ಸಮಯದಲ್ಲಿ ಅವರ ಬಳಿ ಇದ್ದ ಶ್ರೀ ಗಣೇಶಮೂರ್ತಿಯನ್ನು ಪೊಲೀಸರು ವಶಕ್ಕೆ ಪಡೆದು ಆರೋಪಿಯಂತೆ ಪೊಲೀಸರ ವಾಹನದಲ್ಲಿ ಇರಿಸಿದರು. ಅಂದರೆ ಮೊದಲು ಹಿಂದೂಗಳ ಹಬ್ಬದಲ್ಲಿ ಮುಸಲ್ಮಾನರು ಗಲಭೆ ನಡೆಸಿದಾಗ ಪೊಲೀಸರು ನಿಷ್ಕ್ರಿಯರಾಗಿದ್ದರು ಮತ್ತು ಹಿಂದೂಗಳು ಬೀದಿಗೆ ಬಂದು ಪ್ರತಿಭಟಿಸಿದಾಗ ಮೂರ್ತಿ ಸಮೇತ ಹಿಂದೂಗಳನ್ನು ಪೊಲೀಸರ ವಾಹನಕ್ಕೆ ತಳ್ಳಿ ಪ್ರತಿಭಟಿಸುವಂತಿಲ್ಲ ಎನ್ನುವಂತಹ ನಿಲುವು ತೆಗೆದುಕೊಂಡರು. ಇದು ಯಾವ ರೀತಿ (ನ್ಯಾಯ ?) ಇದು ಕರ್ನಾಟಕದ ಕಾಂಗ್ರೆಸ್ ಸರಕಾರದ ಹಿಂದೂ ವಿರೋಧಿ ನೀತಿಯಾಗಿದೆ. (ಮೊಗಲರ ಆಡಳಿತವೆನ್ನ ಬಹುದು ?) ಉತ್ಸವದ ಸಂದರ್ಭದಲ್ಲಿಯೇ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕಾಲಡಿ ಹೊಸಕಿ ಹಾಕುವುದು, ಹಿಂದೂಗಳಿಗೆ ರಕ್ಷಣೆ ನೀಡದಿರುವುದು, ಮುಸಲ್ಮಾನರು ಗಲಭೆ ಪ್ರಾರಂಭಿಸಿದ್ದರೂ ಮುಸಲ್ಮಾನರನ್ನು ಮಾತ್ರವಲ್ಲ ಹಿಂದೂಗಳ ಮೇಲೂ ಅಪರಾಧ ಗಳನ್ನು ದಾಖಲಿಸಿ, ಹಿಂದೂ ಯುವಕರನ್ನು ಬಂಧಿಸುವ ಮೂಲಕ ಪೊಲೀಸರ ಮತ್ತು ಆಡಳಿತದ ಹಿಂದೂ ದ್ವೇಷ ಬಹಿರಂಗವಾಗುತ್ತಿದೆ. ‘ಕಾಂಗ್ರೆಸ್ ಕೈ(ಬಲ ?) ಎನ್ನುವ ಸಮೀಕರಣ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಆಗಿತ್ತು. ಮುಸಲ್ಮಾನರಿಗೆ ಸಹಾಯ ಮಾಡಲು, ಅವರು ಅಪರಾಧ ಮಾಡಿದ್ದರೆ, ಗಲಭೆ ಮಾಡಿದ್ದರೆ, ಅವರೊಂದಿಗೆ ಅಲ್ಲಿ ಹಿಂದೂಗಳ ತಪ್ಪು ಇರಲಿ ಅಥವಾ ಇಲ್ಲದಿರಲಿ; ಹಿಂದೂಗಳನ್ನು ಸಹ ಆರೋಪಿಗಳನ್ನಾಗಿ ಮಾಡಲಾಗುತ್ತಿತ್ತು. ! ಹಿಂದೂ-ಮುಸ್ಲಿಮರ ನಡುವಿನ ವಿವಾದ, ಘರ್ಷಣೆ ಅಥವಾ ಗಲಭೆಯೇ ಆಗಿರಲಿ ಕಾಂಗ್ರೆಸ್ ಯಾವಾಗಲೂ ಮುಸಲ್ಮಾನರ ಪರ ನಿಂತಿದೆ. ಇದರ ಪರಿಣಾಮವಾಗಿ ಹಿಂದೂಗಳು ನ್ಯಾಯದಿಂದ ವಂಚಿತರಾಗಿದ್ದಾರೆ ಮತ್ತು ಒಂದು ರೀತಿಯ ಭಯವನ್ನು ಹಿಂದೂಗಳಲ್ಲಿ ಕಾಂಗ್ರೆಸ್ ನಿರ್ಮಾಣ ಮಾಡಿದೆ. ಅದರ ಉದಾಹರಣೆ ನಾಗಮಂಗಲದಲ್ಲಿ ನೋಡಲು ಸಿಗುತ್ತದೆ. ಪೊಲೀಸರ ಅನ್ಯಾಯದ ಬಂಧನದಿಂದ ತಪ್ಪಿಸಿಕೊಳ್ಳಲು ನಾಗಮಂಗಲ ಗ್ರಾಮದ ನೂರಾರು ಹಿಂದುತ್ವನಿಷ್ಠ ಯುವಕರು ಗ್ರಾಮವನ್ನು ತೊರೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಹಬ್ಬದ ಸಮಯದಲ್ಲಿ ಗಣಪತಿಯನ್ನು ಪೂಜಿಸಲು ಯುವಕರು ಲಭ್ಯರಿಲ್ಲ. ಗ್ರಾಮದಲ್ಲಿ ಕೇವಲ ವೃದ್ಧರು ಮಾತ್ರ ಉಳಿದಿದ್ದಾರೆ. ಪೊಲೀಸರ ಮೇಲಿನ ಈ ನಂಬಿಕೆ (ಅಪನಂಬಿಕೆ ?) ಯಾವುದರಿಂದ ನಿರ್ಮಾಣವಾಗಿದೆ. ಪೊಲೀಸರು ನಿರ್ದಿಷ್ಟ ಉದ್ದೇಶವನ್ನು ಇಟ್ಟುಕೊಂಡು ಅಥವಾ ಹಿಂದೂ-ದ್ವೇಷಿಗಳ ಹೇಳಿಕೆಯಂತೆ ಕ್ರಮ ಕೈಕೊಳ್ಳುತ್ತಿದ್ದಾರೆ ಎಂದು ಹಿಂದುತ್ವನಿಷ್ಠ ಯುವಕರ ಗಮನಕ್ಕೆ ಬಂದಿದೆ. ಆದರೆ ಕಾಂಗ್ರೆಸ್ ರಾಜ್ಯದ ಪೊಲೀಸರು ಹಿಂದೂ ದ್ವೇಷಿಗಳು ಎಂಬುದನ್ನು ಕೂಡ ಇದು ಸಾಬೀತುಪಡಿಸುತ್ತದೆ.
ಕಾರಾಗೃಹದಲ್ಲಿ ಹಿಂದೂ ಯುವಕರನ್ನು ಉದ್ದೇಶಪೂರ್ವಕ ವಾಗಿ ಹಲವು ದಿನಗಳ ಕಾಲ ಕೂಡಿಡಲಾಗುತ್ತದೆ. ಜಾಮೀನು ಸಿಗಲು ಹಲವಾರು ದಿನಗಳು ಅಥವಾ ತಿಂಗಳುಗಳು ತಗಲುತ್ತದೆ. ಈ ಮೂಲಕ ಅವರಲ್ಲಿ ಹಿಂದುತ್ವದ ಕೆಲಸ ಮಾಡುವ ಬಗ್ಗೆ ಭಯ ಹುಟ್ಟಿಸುತ್ತದೆ. ಇದು ಒಟ್ಟಾರೆ ಇದು ಹಿಂದೂದ್ವೇಷಿ ಪೊಲೀಸರ ಕಾರ್ಯಪದ್ಧತಿಯಾಗಿದ್ದು, ಕಾಂಗ್ರೆಸ್ ರಾಜ್ಯದಲ್ಲಿಯೇ ಇದು ಸೃಷ್ಟಿಯಾಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ‘ಬಹುಸಂಖ್ಯಾತರಿಗೆ ಕಾನೂನು ಮತ್ತು ಅಲ್ಪಸಂಖ್ಯಾತರಿಗೆ ಲಾಭ’ ಎಂಬ ಸಮೀಕರಣವೂ ಇದೆ.
ಮೊದಲ ಆರೋಪಿಗಳೆಲ್ಲ ಹಿಂದೂಗಳೇ ?
ಭಾಜಪ ಶಾಸಕ ಬಸವರಾಜ ಪಾಟೀಲ ಯತ್ನಾಳ ಇವರು ಮುಂದಿನಂತೆ ಆರೋಪಿಸಿದ್ದಾರೆ. ‘ಪೊಲೀಸರು ನಂ. ೧ ರಿಂದ ೨೩ ರವರೆಗಿನ ಎಲ್ಲಾ ಆರೋಪಿಗಳೆಂದು ಹಿಂದೂಗಳ ಹೆಸರುಗಳನ್ನು ದಾಖಲಿಸಿದ್ದಾರೆ. ಇದು ಹೇಗೆ ಆಗುತ್ತದೆ ? ಮೂರ್ತಿಯನ್ನು ಪ್ರತಿಷ್ಠಾಪಿಸಿದ ಗಣೇಶಭಕ್ತರನ್ನು ಪ್ರಮುಖ ಆರೋಪಿ ನಂ.೧ ಮಾಡಲಾಗಿದೆ’. ಇದು ಬಹುದೊಡ್ಡ ಅನ್ಯಾಯವಾಗಿದೆ. ಇದರಿಂದ ಪೊಲೀಸರಿಂದ ಹಿಂದೂಗಳಿಗೆ ಶ್ರೀ ಗಣೇಶಮೂರ್ತಿ ಪ್ರತಿಷ್ಠಾಪನೆಗೂ ವಿರೋಧವಿದೆ ಅಂದರೆ ಹಿಂದೂ ಧರ್ಮಾಚರಣೆಗೇ ವಿರೋಧವಿದೆ ಎಂದು ಗಮನಕ್ಕೆ ಬರುತ್ತದೆ. ಇಂತಹ ಪೊಲೀಸರನ್ನು ಹೊಂದಿರುವ ಕಾಂಗ್ರೆಸ್ ರಾಜ್ಯದಲ್ಲಿ ಹಿಂದೂಗಳು ಹಬ್ಬಗಳನ್ನು ಹೇಗೆ ಆಚರಿಸುವರು ? ಹಿಂದೂಗಳು ಭಯದ ನೆರಳಿನಲ್ಲಿ ಬದುಕ ಬೇಕೆಂದು ಕಾಂಗ್ರೆಸ್ ನಿರೀಕ್ಷಿಸುತ್ತದೆಯೇ ? ಶ್ರೀ ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದಾರೆಂದು ಪ್ರಕರಣ ದಾಖಲಾಗುವುದು ಎಂದರೆ ಮೊಗಲರ ಭಯಾನಕ ಕಾಲಾವಧಿಯ ಪುನರಾವರ್ತನೆ ಆಗಿದೆ ಎನ್ನಬಹುದು. ‘ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿದ್ದರು. ಅದು ಏಕೆ ಆವಶ್ಯಕವಾಗಿದೆ ? ಎಂದು ಇಲ್ಲಿ ಗಮನಕ್ಕೆ ಬರುತ್ತದೆ.
ಈಗ ಮುಖ್ಯ ವಿಷಯವೆಂದರೆ ಮಂಡ್ಯದ ನಾಗಮಂಗಲದಲ್ಲಿ ಕಳೆದ ವರ್ಷವೂ ಗಲಭೆಯಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು; ಆದರೆ ಪೊಲೀಸರು ಆ ಘಟನೆಯನ್ನು ಹತ್ತಿಕ್ಕಿದರು ಅಥವಾ ಪರಿಸ್ಥಿತಿಯನ್ನು ನಿಭಾಯಿಸಿ ಹೊರಗೆ ಬರಲು ಬಿಡಲಿಲ್ಲ. ಅಂದರೆ ವಾಸ್ತವವಾಗಿ, ಕಳೆದ ವರ್ಷದಿಂದ ಅಲ್ಲಿನ ಮುಸ್ಲಿಮರು ತೊಂದರೆಯನ್ನುಂಟು ಮಾಡಲು ಪ್ರಾರಂಭಿಸಿದ್ದಾರೆ. ಹೀಗಿರುವಾಗ ಈ ವರ್ಷ ಪೊಲೀಸರು ಹೆಚ್ಚು ಎಚ್ಚರಿಕೆ ಮತ್ತು ಜಾಗರೂಕರಾಗಿರುವುದು ಆವಶ್ಯಕವಾಗಿತ್ತು. ಅದನ್ನು ಮಾಡದೇ ಪೊಲೀಸರು ಗಲಭೆ ಭುಗಿಲೇಳಲು ಬಿಟ್ಟರು. ಹಿಂದೂಗಳ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ನಷ್ಟವಾಗಲು ಬಿಟ್ಟರು. ಘಟನೆ ನಡೆದ ಕೆಲವು ದಿನಗಳ ನಂತರ, ಗಲಭೆಗಳನ್ನು ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಗಲಭೆಗಳಲ್ಲಿ ಪೆಟ್ರೋಲ್ಬಾಂಬ್, ತಲವಾರುಗಳನ್ನು ಬಳಸುತ್ತಾರೆ, ಮತಾಂಧರ ಗುಂಪುಗಳು ಇದ್ದಕ್ಕಿದ್ದಂತೆ ಬರುತ್ತವೆ; ಅಂದರೆ ಈ ಗಲಭೆ ಪೂರ್ವಯೋಜಿತ ಎಂಬುದು ಸ್ಪಷ್ಟವಾಗಿದೆ; ಆದರೆ ಪೊಲೀಸರು ಅದನ್ನು ನಿರ್ಲಕ್ಷಿಸಿದರೋ ಅಥವಾ ಉದ್ದೇಶಪೂರ್ವಕ ಕ್ರಮಕೈಗೊಳ್ಳಲಿಲ್ಲವೋ ಎಂಬುದು ಹಿಂದೂಗಳಿಗೆ ತಿಳಿಯ ಬೇಕಾಗಿದೆ. ಒಬ್ಬ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ ಹಿಂದೂಗಳಲ್ಲಿ ಸೃಷ್ಟಿಯಾಗಿರುವ ಭಯ ಕಡಿಮೆ ಯಾಗುವುದೇ ? ಹಿಂದೂ ಸಂಪತ್ತಿನ ಹಾನಿಯನ್ನು ಸರಿದೂಗಿಸಲಾಗುತ್ತದೆಯೇ ? ಇದು ಪೊಲೀಸರು ಏನಾದರೂ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಕೃತಿಯಾಗುತ್ತಿದೆ. ಕಾಂಗ್ರೆಸಿನ ಆಶೀರ್ವಾದದಿಂದ ಗಲಭೆಕೋರರ ಮತಾಂಧರು ನೆಮ್ಮದಿಯಿಂದ ಇದ್ದಾರೆ, ಗಲಭೆಗಳನ್ನು ಸಹಿಸಿಕೊಂಡ ಹಿಂದೂಗಳು (?) ನಿದ್ದೆಯಿಲ್ಲದ ರಾತ್ರಿ ಕಳೆಯುತ್ತಿದ್ದಾರೆ. ! ಅಂಗಡಿ ಮತ್ತು ಅಂಗಡಿಯಲ್ಲಿನ ಸಾಮಗ್ರಿಗಳನ್ನು ಸುಟ್ಟು ಕೋಟ್ಯಂತರ ರೂಪಾಯಿ ಕಳೆದುಕೊಂಡಿರುವ ಹಿಂದೂಗಳ ಎದುರು ಈಗ ‘ಎಲ್ಲವನ್ನೂ ಮರುನಿರ್ಮಾಣ ಮಾಡುವುದು ಹೇಗೆ ?’ ಎಂಬ ಪ್ರಶ್ನೆ ಇದೆ. ”ನಾವು ಹೇಗೋ ನಮ್ಮ ಜೀವವನ್ನು ಉಳಿಸಿಕೊಂಡೆವು. ನೂರಾರು ಜನರ ಮುಂದೆ ಅಂಗಡಿಯನ್ನು ಉಳಿಸುವುದು ಹೇಗೆ ? ಎನ್ನುವ ಬಿಕ್ಕಟ್ಟು ಎದುರಾಗಿತ್ತು !’ ಎಂದು ಹಿಂದೂ ಅಂಗಡಿಯವರೊಬ್ಬರು ಹೇಳಿದರು. ಹಿಂದೂಗಳ ಪ್ರಮುಖ ಧಾರ್ಮಿಕ ಹಬ್ಬದಲ್ಲಿ ಮುಸ್ಲಿಮರು ಸುಲಭವಾಗಿ ಉಪದ್ರವ ಸೃಷ್ಟಿಸುತ್ತಾರೆ; ಅಂದರೆ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬುದು ಖಚಿತವಾಗಿದೆ. ಇದೇ ರೀತಿಯ ಸ್ವಾತಂತ್ರ್ಯವು ಮುಸ್ಲಿಮರಿಗೆ ಕಾಂಗ್ರೆಸ್ ಆಡಳಿತವಿರುವ ಇತರ ರಾಜ್ಯಗಳಲ್ಲಿದೆ. ಹಾಗಾಗಿ ಅಲ್ಲಿ ಕೇವಲ ಗಲಭೆಗಳನ್ನು ನಡೆಸುವುದಷ್ಟೇ ಅಲ್ಲ, ಅನಧಿಕೃತ ಮಸೀದಿ, ಮದರಸಾಗಳನ್ನು ಕಟ್ಟುವುದು, ಭೂ ಜಿಹಾದ್ ಮೂಲಕ ಸರಕಾರಿ ಮತ್ತು ಸಾರ್ವಜನಿಕ ಭೂಮಿಯನ್ನು ವಶಕ್ಕೆ ಪಡೆಯುವುದು, ಹಿಂದೂ ದೇವಸ್ಥಾನಗಳ ಮೇಲೆ ದಾಳಿ ಮಾಡುವುದು, ದೇವಸ್ಥಾನ ಗಳ ಮುಂದೆ ಗೋಮಾಂಸದ ತುಂಡುಗಳನ್ನು ಎಸೆಯುವುದು, ಲವ್ ಜಿಹಾದ್ ಮಾಡುವುದು, ಹಿಂದೂ ಹಬ್ಬಗಳಲ್ಲಿ ಗಲಭೆ ಮಾಡುವುದು ಇತ್ಯಾದಿ ಮಾಡುತ್ತಿರುತ್ತಾರೆ.
ಪ್ರಖರ ಹಿಂದುತ್ವನಿಷ್ಠ ಡಾ. ಸುಬ್ರಹ್ಮಣ್ಯಮ್ ಸ್ವಾಮಿ ಅವರು ಈ ಕುರಿತು, ನನಗೆ ಸಾಕ್ಷ್ಯಾಧಾರ ನೀಡಿದರೆ ಈ ವಿಚಾರದಲ್ಲಿ ನಾನು ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ ನಡೆಸುತ್ತೇನೆ ಎಂದಿದ್ದಾರೆ. ಹಿಂದೂಗಳ ಪರವಾಗಿ ಧ್ವನಿ ಎತ್ತುತ್ತಿರುವ ಡಾ. ಸ್ವಾಮಿ ಹಿಂದೂಗಳಿಗೆ ಆದರ್ಶವಾಗಿದ್ದಾರೆ; ಆದರೆ ಮೆರವಣಿಗೆಯ ಮೇಲಿನ ದಾಳಿಯ ಬಗ್ಗೆ ಪ್ರಗತಿ(ಅಧೋ)ಗಾಮಿಗಳು ಏಕೆ ಮೌನ ವಾಗಿದ್ದಾರೆ ? ಇದೇ ಮುಸಲ್ಮಾನರ ಬಗ್ಗೆ ಸ್ವಲ್ಪ (ಇರುವೆ ಕಚ್ಚಿ ದಷ್ಟು ನೋವು ಆಗಿದ್ದರೂ ?) ಏನಾದರೂ ಹೇಳಿದ್ದರೂ, ಭಾವನೆಗಳನ್ನು ನೋಯಿಸುತ್ತಾರೆ, ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರು ಎನ್ನುವವರೆಲ್ಲ ಈಗ ಎಲ್ಲಿ ಅಡಗಿದ್ದಾರೆ ? ಇದೇ ರೀತಿ ಮುಸಲ್ಮಾನರ ಮೆರವಣಿಗೆಯಲ್ಲಿ ಹಿಂದೂಗಳಿಂದ ಏನಾದರೂ ಆಗಿದ್ದರೆ ‘ೈಸಿಎಸ್’ ಎಂಬ ಮುಸಲ್ಮಾನÀ ಜಾಗತಿಕ ಸಂಘಟನೆಯೂ ಭಾರತವನ್ನು ಟೀಕಿಸುತ್ತಿತ್ತು. ಇದೇ ಕಾಂಗ್ರೆಸ್ಸಿನ ಜಾತ್ಯಾತೀತವಾದ ಅಥವಾ ಸರ್ವಧರ್ಮ ಸಮಭಾವವಾಗಿದೆ ! ಇಂತಹ ಕಾಂಗ್ರೆಸ್ ಭಾರತದ ಕೆಲವು ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವುದು ಹಿಂದೂಗಳಿಗೆ ಅಪಾಯಕಾರಿ ಪರಿಸ್ಥಿತಿಯಾಗಿದೆ. ಆದ್ದರಿಂದ, ಕಾಂಗ್ರೆಸ್ನ ರಾಜಕೀಯ ಅಸ್ತಿತ್ವವನ್ನು ಕೊನೆ ಗೊಳಿಸುವುದು ಹಿಂದೂಗಳ ಅಸ್ತಿತ್ವಕ್ಕಾಗಿ ಅವಶ್ಯಕವಾಗಿದೆ.