‘ಕಾಶ್ಮೀರಿ ಜನರನ್ನು ಬಂಧನದಲ್ಲಿಟ್ಟ ಶಕ್ತಿಗಳಿಂದ ಸ್ವಾತಂತ್ರ್ಯಸಿಗಲಿದೆ’ ! (ಅಂತೆ) – ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್

ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಸೇನಾ ಮುಖ್ಯಸ್ಥರು ಕಾಶ್ಮೀರ ಸೂತ್ರವನ್ನು ಎತ್ತಿದರು

ಇಸ್ಲಾಮಾಬಾದ್ – ಪಾಕಿಸ್ತಾನದ ಸ್ವಾತಂತ್ರ್ಯ ದಿನದಂದು ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಕಾಶ್ಮೀರದ ವಿಷಯವನ್ನು ಪ್ರಸ್ತಾಪಿಸಿದರು. ಅವರು, 76 ವರ್ಷಗಳ ಹಿಂದೆ ನಮಗೆ ಸ್ವಾತಂತ್ರ್ಯಸಿಕ್ಕಿದಂತೆಯೇ ಕಾಶ್ಮೀರದ ಜನರಿಗೂ ಸೆರೆಯಲ್ಲಿಟ್ಟಿರುವ ಶಕ್ತಿಗಳಿಂದ ಸ್ವಾತಂತ್ರ್ಯ ಸಿಗಲಿದೆ ಎಂದರು. ಪಾಕಿಸ್ತಾನದ ಕಾಕುಲ್‌ನಲ್ಲಿರುವ ಮಿಲಿಟರಿ ಅಕಾಡೆಮಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಸೈನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಪಾಕಿಸ್ತಾನವನ್ನು ನಾಶ ಮಾಡುವಂತಹ ಯಾವುದೇ ಶಕ್ತಿ ಜಗತ್ತಿನಲ್ಲಿ ಇಲ್ಲ. ಭಾರತವನ್ನು ಆರೋಪಿಸುತ್ತಾ ಪಾಕಿಸ್ತಾನ ಸೇನಾ ಮುಖ್ಯಸ್ಥರವರು, ನಮ್ಮ ಎದುರಾಳಿ ರಾಜಕೀಯ ಲಾಭ ಪಡೆಯಲು ನಮ್ಮ ವಿರುದ್ಧ ರಹಸ್ಯವಾಗಿ ಹೋರಾಡುತ್ತಿದ್ದಾರೆ..ಮುನೀರನು ಚೀನಾವು ಪಾಕಿಸ್ತಾನದ ನಿಜವಾದ ಸ್ನೇಹಿತ ಎಂದು ಹೇಳಿದ್ದಾರೆ. ಬಲೂಚಿಸ್ತಾನದ ಜನರು ಆಗಸ್ಟ್ 14 ರಂದು ‘ಕಪ್ಪು ದಿನ’ವೆಂದು ಆಚರಿಸಲು ನಿರ್ಧರಿಸಿದರು. ಬಲೂಚಿಸ್ತಾನದ ನಾಗರಿಕರು 1947-48 ರಿಂದ ತಮ್ಮನ್ನು ಪಾಕಿಸ್ತಾನದ ಭಾಗವೆಂದು ಪರಿಗಣಿಸುವುದಿಲ್ಲ.

ಸಂಪಾದಕೀಯ ನಿಲುವು

ಪಾಕಿಸ್ತಾನದ ಆರ್ಥಿಕ ದಿವಾಳಿಯಾಗಿದೆ. ಆದರೂ ಕಾಶ್ಮೀರವನ್ನು ಪಡೆಯುವ ಅವರ ಮಹತ್ವಾಕಾಂಕ್ಷೆ ಕಡಿಮೆಯಾಗುತ್ತಿಲ್ಲ. ಅಂತಹ ಪಾಕಿಸ್ತಾನಕ್ಕೆ ಅದರ ಯೋಗ್ಯತೆಯನ್ನು ತೋರಿಸಬೇಕು !