ಪ್ರವಾದಿ ಮುಹಮ್ಮದ್ ರನ್ನು ಅವಹೇಳನ ಮಾಡುವವರ ಶಿರಚ್ಛೇದ ಬೆದರಿಕೆ ಹಾಕಿದವರ ಬಂಧನ !

ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್

ಯಾದಗಿರಿ – ಪ್ರವಾದಿ ಮುಹಮ್ಮದ್ ರನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅವಹೇಳನ ಮಾಡಿದವರ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಹಾಕಿದ್ದ ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ನನ್ನು ರಾಜ್ಯದ ಯಾದಗಿರಿ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಅಯಾಜ್ ಮತ್ತು ಅಕ್ಬರ್ ಸೈಯದ್ ೨೦೧೨ ರಲ್ಲಿ ‘ಎಂಐಎಂ’ನ ನಾಯಕ ಅಕ್ಬರುದ್ದೀನ್ ಓವೈಸಿ ಅವರ ಹೇಳಿಕೆಯನ್ನು ಪುನರುಚ್ಚರಿಸಿದನು, ‘೧೫ ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿ, ನಂತರ ಯಾರು ಹೆಚ್ಚು ಶಕ್ತಿಶಾಲಿ ಎಂದು ನೋಡುತ್ತೇವೆ’. (ಹಿಂದೂ ಬಹುಸಂಖ್ಯಾತ ಭಾರತದಲ್ಲಿ ತಮ್ಮನ್ನು ಅಲ್ಪಸಂಖ್ಯಾತರು ಎಂದು ಕರೆದುಕೊಳ್ಳುವ ಮುಸ್ಲಿಮರು ಇಂತಹ ಬಹಿರಂಗವಾಗಿ ಬೆದರಿಕೆಗಳನ್ನು ನೀಡುತ್ತಾರೆ ಮತ್ತು ‘ಭಾರತದಲ್ಲಿ ಅಲ್ಪಸಂಖ್ಯಾತರು ಅಪಾಯದಲ್ಲಿದ್ದಾರೆ’ ಎಂದು ಹೇಳುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರು ಏನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ ! – ಸಂಪಾದಕರು)

ಯಾದಗಿರಿಯ ಹತ್ತಿಕುಣಿ ನಿವಾಸಿಗಳಾದ ಮೊಹಮ್ಮದ್ ಅಯಾಝ್ ಮತ್ತು ಅಕ್ಬರ್ ಸೈಯದ್ ಇವರ ದ್ವೇಷದ ಭಾಷಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರೆ ಹಿಂದೂ ಸಂಘಟನೆಗಳು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದವು. ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ವೇದಮೂರ್ತಿ ಇವರು ಒಂದು ಪತ್ರಿಕಾ ಪ್ರಕಟಣೆಯಲ್ಲಿ, ಆರೋಪಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಸಮುದಾಯದವರನ್ನು ಪ್ರಚೋದಿಸುವ ಉದ್ದೇಶದಿಂದ ಈ ವಿಡಿಯೋವನ್ನು ಹರಿಬಿಟ್ಟಿದ್ದರು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೫೩ (ಗಲಭೆ ಎಬ್ಬಿಸಲು ಇತರರನ್ನು ಪ್ರಚೋದಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.