ಭಾರತದ ಚಂದ್ರಯಾನ ೩ ರ ಜೊತೆಗೆ ಸ್ಪರ್ಧಿಸಲು ರಷ್ಯಾದಿಂದ ಚಂದ್ರನ ಮೇಲೆ ಇಂದು ‘ಲುನಾ ೨೫’ ಯಾನ !

ಕೇವಲ ೧೨ ದಿನಗಳಲ್ಲಿ ಭಾರತಕ್ಕೆ ಹಿಂದಿಕ್ಕಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯುವ ಅಂತರಾಷ್ಟ್ರೀಯ ದಾಖಲೆ ನಿರ್ಮಿಸುವ ರಷ್ಯಾದ ಪ್ರಯತ್ನ !

ಮಾಸ್ಕೋ (ರಷ್ಯಾ) – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಅಂದರೆ ಇಸ್ರೋದಿಂದ ಪ್ರಕ್ಷೇಪಿತ ಗೊಳಿಸಿರುವ ‘ಚಂದ್ರಯಾನ ೩’ ಇದು ಚಂದ್ರನ ಭೂಮಿಯ ಮೇಲೆ ಆಗಸ್ಟ್ ೨೩ ರಂದು ಯಶಸ್ವಿಯಾಗಿ ಇಳಿಸಲು ಪ್ರಯತ್ನ ನಡೆಯುತ್ತಿದೆ, ಹೀಗೆ ಆದರೆ ಭಾರತ ಇದು ಚಂದ್ರನ ಮೇಲೆ ಇಳಿಯುವ ನಾಲ್ಕನೆಯ ದೇಶವಾಗುವುದು, ಹಾಗೂ ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಡುವ ಮೊದಲ ದೇಶವಾಗುವ ಬಹುಮಾನ ಕೂಡ ಭಾರತಕ್ಕೆ ಲಭಿಸುವುದು.

ಇಂತಹದರಲ್ಲಿ ಕಳೆದ ೨ ವರ್ಷದಿಂದ ಮುಂದೂಡಿಕೆ ಆಗುತ್ತಿರುವ ರಷ್ಯಾದ ‘ಲೂನ ೨೫’ ಈ ಯಾನ ಆಗಸ್ಟ್ ೧೧ ರಂದು ಚಂದ್ರನ ಮೇಲೆ ಪ್ರಕ್ಷೇಪಿತಗೊಳಿಸಲಾಗುವುದು, ಎಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ ‘ರಾಸಕಾಸಮಾಸ್’ ‘ಘೋಷಿಸಿದೆ. ‘ಲೂನಾ ೨೫’ ರ ರಾಕೆಟ್ ಅತ್ಯಂತ ಶಕ್ತಿಶಾಲಿಯಾಗಿದ್ದು ಅದು ಕೇವಲ ೧೨ ದಿನದಲ್ಲಿಯೇ ಅಂದರೆ ಆಗಸ್ಟ್ ೨೩ ರಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯುವ ಪ್ರಯತ್ನ ಮಾಡುವುದು. ಇದರಿಂದ ಈಗ ಭಾರತ ಮತ್ತು ರಷ್ಯಾ ಇವರಲ್ಲಿನ ಯಾರ ಯಾನ ಮೊದಲು ಇಳಿಯುವುದು, ಇದರ ಕಡೆಗೆ ಜಗತ್ತಿನ ಗಮನವಿದೆ. ಈಗ ಚಂದ್ರಯಾನ ೩ ಚಂದ್ರನ ೧ ಸಾವಿರದ ೪೩೬ ಕಿಲೋಮೀಟರ್ ಅಂತರದಲ್ಲಿ ಚಂದ್ರನಿಗೆ ಪ್ರದಕ್ಷಿಣೆ ಹಾಕುತ್ತಿದೆ.

ಚಂದ್ರನ ದಕ್ಷಿಣ ಧ್ರುವದ ಮಹತ್ವ !

ಚಂದ್ರನ ದಕ್ಷಿಣ ಧ್ರುವದಲ್ಲಿ ನೀರಿನ ಅಂಶ (ಮಂಜುಗಡ್ಡೆ) ಇರುವುದೆಂದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. ಇದು ಅದರ ಅಭ್ಯಾಸ ನಡೆಸುವುದು. ಅಲ್ಲಿಯ ಸತ್ಯಾಸತ್ಯತೆ ಏನಾದರೂ ತಿಳಿದರೆ, ಮಂಜುಗಡ್ಡೆಯ ಮೂಲಕ ಕುಡಿಯುವ ನೀರಿನ ಜೊತೆಗೆ ಪ್ರಾಣ ವಾಯು ಮತ್ತು ಇಂಧನವನ್ನು ನಿರ್ಮಿಸಬಹುದೆಂದು ವಿಜ್ಞಾನಿಗಳಿಗೆ ಅನಿಸುತ್ತಿದೆ. ಇದರಿಂದ ಭವಿಷ್ಯದಲ್ಲಿ ಚಂದ್ರನ ಮೇಲೆ ಮಾನವರು ವಸಾಹತು ನಿರ್ಮಿಸಬಹುದು, ಎಂದು ವಿಜ್ಞಾನಿಗಳ ಕನಸಾಗಿದೆ.

‘ಲೂನಾ ೨೫ ರ ವೈಶಿಷ್ಟ್ಯ !

ರಷ್ಯಾ ಅದರ ‘ಲೂನಾ ೨೫’ ಈ ಯಾನದ ಮೂಲಕ ೪೭ ವರ್ಷದ ನಂತರ ಚಂದ್ರನ ಮೇಲೆ ಇಳಿಯುವುದು. ಈ ಹಿಂದೆ ೧೯೭೭ ರಲ್ಲಿ ರಷ್ಯಾ ಅದರ ಯಾನ ಚಂದ್ರನ ಭೂಮಿಯಲ್ಲಿ ಇಳಿಸಿತ್ತು. ‘ರಾಸಕಾಸಮಾಸ್’ ಇವರು, ಲೂನಾ ೨೫ ಚಂದ್ರನ ಕಕ್ಷೆಗೆ ತಲುಪಲು ಕೇವಲ ೫ ದಿನ ಬೇಕಾಗುವುದು. ಚಂದ್ರನಿಗೆ ಪ್ರದಕ್ಷಣೆ ಹಾಕುವುದಕ್ಕೆ ಅದಕ್ಕೆ ೫ – ೭ ದಿನಾ ಬೇಕಾಗುವುದು ಮತ್ತು ಅದರ ನಂತರ ಅದು ಚಂದ್ರನ ಮೇಲೆ ಇಳಿಯುವುದು. ಚಂದ್ರಯಾನ ೩ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಂತರ ಕೇವಲ ಎರಡು ವಾರ ಅಲ್ಲಿಯ ಭೂಮಿಯ ಅಭ್ಯಾಸ ನಡೆಸುವುದು. ಇನ್ನೊಂದು ಕಡೆ ‘ಲೂನಾ ೨೫’ ಇದು ಮುಂದಿನ ಒಂದು ವರ್ಷ ಅಲ್ಲಿಯ ಪುಷ್ಟಭೂಮಿ ಹಾಗೂ ಭೂಮಿಯ ಕೆಳಗಿನ ೬ ಇಂಚಗಳವರೆಗಿನ ವಿಷಯಗಳು ಅಭ್ಯಾಸ ಮಾಡಲಿದೆ.

 

ಸಂಪಾದಕೀಯ ನಿಲುವು

ರಷ್ಯಾ ಭಾರತದ ಸಾಂಪ್ರದಾಯಿಕ ಸ್ನೇಹಿತ ಎಂದು ತಿಳಿಯಲಾಗಿತ್ತು; ಆದರೆ ಅದರ ಈ ಕೃತ್ಯ ಭಾರತವನ್ನು ಮೀರಿಸುವುದಕ್ಕೆ ರಷ್ಯಾದ ಧೂರ್ತ ಉದ್ದೇಶ ಸ್ಪಷ್ಟವಾಗುತ್ತದೆ !