ಗೋಪುರ (ಟವರ್) ಮುದ್ರೆಯನ್ನು ಮಾಡಿ ದೇಹದ ಆವರಣ ತೆಗೆಯುವ ಪದ್ಧತಿ

(ಸದ್ಗುರು) ಡಾ. ಮುಕುಲ ಗಾಡಗೀಳ

೧. ‘ಗೋಪುರ (ಟಾವರ್) ಮುದ್ರೆ’ಯನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಕಂಡುಹಿಡಿಯುವುದು ‘ಸೆಪ್ಟಂಬರ್ ೨೦೧೮ ರಲ್ಲಿ ಒಂದು ದಿನ ಓರ್ವ ಸಾಧಕನಿಗೆ ಕೆಟ್ಟ ಶಕ್ತಿಗಳಿಂದ ತುಂಬಾ ತೊಂದರೆ ಆಗುತ್ತಿರುವುದರಿಂದ ನಾನು ಅವನಿಗಾಗಿ ನಾಮಜಪದ ಮೂಲಕ ಉಪಾಯವನ್ನು ಮಾಡುತ್ತಿದ್ದೆನು. ಯಾವುದೇ ಶಾರೀರಿಕ ಕಾರಣಗಳಿಂದಲ್ಲ, ಕೇವಲ ಕೆಟ್ಟ ಶಕ್ತಿಗಳ ತೊಂದರೆಯಿಂದ ಅವನ ಹೊಟ್ಟೆಯಲ್ಲಿ ಅಸಹನೀಯ ನೋವಾಗುತ್ತಿತ್ತು ಮತ್ತು ೩ ಗಂಟೆ ಉಪಾಯ ಮಾಡಿದರೂ ಅವನ ಆ ತೊಂದರೆ ಸ್ವಲ್ಪವೂ ಕಡಿಮೆ ಆಗುತ್ತಿರಲಿಲ್ಲ. ಈ ವಿಷಯವನ್ನು ನಾನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರಿಗೆ ಹೇಳಿದ ನಂತರ ಅವರು ವಿನೂತನವಾದ ‘ಗೋಪುರ (ಟಾವರ್) ಮುದ್ರೆ’ಯನ್ನು ಮಣಿಪುರಚಕ್ರದ ಎದುರಿಗೆ ಹೊಟ್ಟೆನೋವು ಕಡಿಮೆ ಆಗುವವರೆಗೂ ಹಿಡಿಯಲು ಹೇಳಿದರು. ಆಗ ಆ ಸಾಧಕನ ತೊಂದರೆ ದೂರವಾಗಲು ನನ್ನ ಮಣಿಪುರಚಕ್ರದ ಎದುರಿಗೆ ಆ ಮುದ್ರೆಯನ್ನು ಹಿಡಿದು ನಾಮಜಪವನ್ನು ಮಾಡಿದೆನು. ಆ ಮುದ್ರೆಯನ್ನು ಮಾಡುವಾಗ ನಾನು ನನ್ನ ಎರಡೂ ಕೈಗಳ ಮಣಿಕಟ್ಟುಗಳನ್ನು ಹೊಟ್ಟೆಯ ಮೇಲೆ ತಾಗಿಸಿದೆನು. ಆ ರೀತಿ ಅರ್ಧ ಗಂಟೆಗಳ ವರೆಗೆ ಉಪಾಯ ಮಾಡಿದ ನಂತರ ಆ ಸಾಧಕನ ಹೊಟ್ಟೆನೋವು ಪೂರ್ಣ ಕಡಿಮೆ ಆಯಿತು. ಈ ರೀತಿ ವಿನೂತನ ‘ಗೋಪುರ ಮುದ್ರೆ’ಯ ಮಹತ್ವವು ಗಮನಕ್ಕೆ ಬಂದಿತು.

೨. ಶರೀರದ ಮೇಲೆ ಬಂದಿರುವ ಆವರಣದ ಪಟ್ಟಿಯನ್ನು ದೂರಗೊಳಿಸಲು ‘ಗೋಪುರ ಮುದ್ರೆ’ಯನ್ನು ಹೇಗೆ ಉಪಯೋಗಿಸಬೇಕೆಂದು ಮೊದಲಬಾರಿಗೆ ಗುರುಕೃಪೆಯಿಂದ ಶೋಧನೆಯಾಗುವುದು ಮರುದಿನ ಪುನಃ ಆ ಸಾಧಕನ ಹೊಟ್ಟೆಯಲ್ಲಿ ಅಸಹನೀಯ ನೋವಾಗುತ್ತಿತ್ತು. ಆಗ ನನಗೆ ‘ಆ ಸಾಧಕನ ಆಜ್ಞಾಚಕ್ರದಿಂದ ಹಿಡಿದು ಅದು ಮಣಿಪುರಚಕ್ರದ ವರೆಗೆ ಆವರಣದ ಪಟ್ಟಿಯಿದೆ’ ಎಂದು ಗಮನಕ್ಕೆ ಬಂದಿತು. ಇಂತಹ ಆವರಣವನ್ನು ನಾನು ಇದೇ ಮೊದಲಬಾರಿಗೆ ಅನುಭವಿಸುತ್ತಿದ್ದೆ. ನಾನು ಆ ಆವರಣದ ಪಟ್ಟಿಯನ್ನು ‘ಮುಷ್ಟಿಯಿಂದ ಆವರಣ ತೆಗೆಯುವುದು’ ಈ ಪದ್ಧತಿಯಿಂದ ತೆಗೆಯಲು ಪ್ರಯತ್ನಿಸುತ್ತಿದ್ದೆ; ಆದರೆ ಅದು ಕಡಿಮೆ ಆಗುತ್ತಿರಲಿಲ್ಲ. ಆಗ ನನಗೆ ದೇವರು ‘ಗೋಪುರ ಮುದ್ರೆ’ಯನ್ನು ತಲೆಯಿಂದ ಹಿಡಿದು ಹೊಟ್ಟೆಯ ವರೆಗೆ ನಾಮಜಪವನ್ನು ಮಾಡುತ್ತ ತಿರುಗಿಸಲು ಸೂಚಿಸಿದೆನು. ಈ ರೀತಿ ಉಪಾಯ ಮಾಡಿದ ನಂತರ ಶರೀರದ ಮೇಲಿನ ಆವರಣವು ೧೦ ನಿಮಿಷಗಳಲ್ಲಿ ಕಡಿಮೆ ಆಯಿತು ಮತ್ತು ಆ ಸಾಧಕನ ತೊಂದರೆಯೂ ಬಹಳಷ್ಟು ಪ್ರಮಾಣದಲ್ಲಿ ಕಡಿಮೆ ಆಯಿತು. ಆಗ ನನಗೆ ಆವರಣ ವನ್ನು ತೆಗೆಯಲು ‘ಗೋಪುರ ಮುದ್ರೆ’ಯ ಬಳಕೆಯನ್ನು ಆಗ ನಾನು ಮೊದಲಬಾರಿಗೆ ಕಂಡುಹಿಡಿದೆ. ಅಂದರೆ ಅದು ಗುರುದೇವರ ಕೃಪೆಯೇ ಆಗಿತ್ತು.

೩. ‘ಗೋಪುರ ಮುದ್ರೆ’ಯನ್ನು ಶರೀರದ ಮೇಲೆ ತಿರುಗಿಸುವ ಆವಶ್ಯಕತೆ ಈ ಹಿಂದೆ ಕೆಟ್ಟ ಶಕ್ತಿಗಳು ಶರೀರದ ಮೇಲೆ ಆವರಣ ತರುತ್ತಿದ್ದವು, ಆಗ ಆ ಆವರಣವನ್ನು ಯಾವುದಾದರೊಂದು ಚಕ್ರದ ಮೇಲೆ ಅಥವಾ ಹೆಚ್ಚೆಂದರೆ ೨ ಚಕ್ರಗಳ ಮೇಲೆ ಇರುತ್ತಿತ್ತು; ಆದರೆ ಈಗ ಸೂಕ್ಷ್ಮದಲ್ಲಿನ ಯುದ್ಧದ ಮಟ್ಟವು ಹೆಚ್ಚಾಗಿದೆ. ಆರನೇ ಮತ್ತು ಏಳನೇ ಪಾತಾಳಗಳ ದೊಡ್ಡ ಕೆಟ್ಟ ಶಕ್ತಿಗಳು ದಾಳಿ ಮಾಡುತ್ತಿವೆ. ಆದ್ದರಿಂದ ಆ ಶರೀರದ ಮೇಲೆ ಒಂದೆರಡು ಚಕ್ರಗಳ ಮೇಲೆ ಆವರಣವನ್ನು ತರದೇ ತಲೆಯಿಂದ ಹಿಡಿದು ಎದೆಯ ವರೆಗೆ ಅಥವಾ ತಲೆಯಿಂದ ಹಿಡಿದು ಸೊಂಟದ ವರೆಗೆ ಆವರಣ ತಂದು ಅನುಕ್ರಮವಾಗಿ ೪ ಚಕ್ರಗಳಲ್ಲಿ (ಸಹಸ್ರಾರದಿಂದ ಹಿಡಿದು ಅನಾಹತಚಕ್ರ) ಅಥವಾ ೬ ಚಕ್ರಗಳನ್ನು (ಸಹಸ್ರಾರದಿಂದ ಹಿಡಿದು ಸ್ವಾಧಿಷ್ಠಾನಚಕ್ರ) ಆವರಣದಿಂದ ತುಂಬಿಸುತ್ತವೆ. ಹಾಗೆಯೇ ಅವುಗಳು ಹಾಕಿರುವ ಆವರಣವು ಸತತವಾಗಿ ಮೇಲಿಂದ ಕೆಳಗಿನ ವರೆಗೆ ಇರುತ್ತದೆ. ಇದು ಅವುಗಳ ನಿರ್ಗುಣ ಸ್ತರದ ಆಕ್ರಮಣವಾಗಿದೆ. ಆದ್ದರಿಂದ ಆ ಆವರಣವು ‘ಮುಷ್ಟಿಯಿಂದ ಆವರಣ ತೆಗೆಯುವುದು’ ಈ ಪದ್ಧತಿಯಿಂದ ಕಡಿಮೆ ಆಗುವುದಿಲ್ಲ. ಅದಕ್ಕಾಗಿ ‘ಗೋಪುರ (ಟಾವರ್) ಮುದ್ರೆ’ಯನ್ನು ಶರೀರದ ಮೇಲಿಂದ ತಿರುಗಿಸುವುದು’ ಈ ಪದ್ಧತಿಯನ್ನೇ ಉಪಯೋಗಿಸಬೇಕಾಗುತ್ತದೆ.

೪. ‘ಗೋಪುರ ಮುದ್ರೆ’ಯನ್ನು ಶರೀರದ ಮೇಲಿಂದ ತಿರುಗಿಸುವ ಪದ್ಧತಿ ಎರಡು ಕೈಗಳ ನಡುವಿನ ಬೆರಳುಗಳನ್ನು ಒಂದಕ್ಕೊಂದು ಜೋಡಿಸಿ ಮತ್ತು ಮಣಿಕಟ್ಟುಗಳನ್ನು ತಲೆಯ ಎರಡು ಬದಿ ಯಲ್ಲಿಟ್ಟು ಗೋಪುರ ಮುದ್ರೆ’ಯನ್ನು ಮಾಡಬೇಕು ಮತ್ತು ಆ ಮುದ್ರೆಯನ್ನು ಕುಂಡಲಿನೀಚಕ್ರಗಳ ಮೇಲಿಂದ (ಸಹಸ್ರಾರದಿಂದ ಸ್ವಾಧಿಷ್ಠಾನಚಕ್ರಗಳ ಮೇಲಿಂದ) ‘ಮೇಲಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ’ ಹೀಗೆ ೭-೮ ಬಾರಿ ತಿರುಗಿಸಬೇಕು.

೫. ‘ಗೋಪುರ ಮುದ್ರೆ’ಯನ್ನು ಶರೀರದ ಮೇಲಿಂದ ತಿರುಗಿಸುವಾಗ ನಾಮಜಪ ಮಾಡುವುದು ಆವಶ್ಯಕ ‘ಗೋಪುರ ಮುದ್ರೆ’ಯನ್ನು ಶರೀರದ ಮೇಲೆ ತಿರುಗಿಸುವ ಮೊದಲು ‘ಪ್ರಾಣಶಕ್ತಿವಹನ ಉಪಾಯ ಪದ್ಧತಿ’ಯಿಂದ (‘ಶರೀರ ಮತ್ತು ಶರೀರದ ಚಕ್ರಗಳ ಮೇಲಿಂದ ಕೈಗಳ ಬೆರಳುಗಳನ್ನು ತಿರುಗಿಸಿ ಬೆರಳುಗಳಿಂದ ಪ್ರಕ್ಷೇಪಿಸುವ ಪ್ರಾಣಶಕ್ತಿಯಿಂದ ಆಧ್ಯಾತ್ಮಿಕ ತೊಂದರೆ ಅಥವಾ ರೋಗಗಳನ್ನುಂಟು ಮಾಡುವ ಶರೀರದಲ್ಲಿನ ಅಡತಡೆಗಳ ಸ್ಥಾನವನ್ನು ಹುಡುಕಬೇಕು. ಅನಂತರ ಆ ಸ್ಥಾನದ ಮೇಲಿನ ಅಡತಡೆಗೆ (ತೊಂದರೆಯ) ತೀವ್ರತೆಗನುಸಾರ ಕೈ ಬೆರಳುಗಳ ಮುದ್ರೆ ಮತ್ತು ನಾಮಜಪವನ್ನು ಹುಡುಕಿ ಅವುಗಳ ಮೂಲಕ ಉಪಾಯವನ್ನು ಮಾಡುವುದು) ‘ಯಾವ ಜಪ ಮಾಡಬೇಕು ? ಎಂಬುದನ್ನು ಹುಡುಕಬೇಕು.

‘ಗೋಪುರ ಮುದ್ರೆಯನ್ನು ಶರೀರದ ಮೇಲಿನಿಂದ ತಿರುಗಿಸುವಾಗ ಹುಡುಕಿ ತೆಗೆದ ಜಪವನ್ನು ಮಾಡಬೇಕು. ಆ ಜಪ ಮಾಡಿದರೆ ಮುದ್ರೆ ಮಾಡುವಾಗ ಎರಡು ಕೈಗಳ ನಡುವಿನ ಬೆರಳುಗಳನ್ನು ಜೋಡಿಸಿದ ತುದಿಯಿಂದ (ಗೋಪುರ ಮಾಡಿದ ಬೆರಳುಗಳ ರಚನೆಯಿಂದ) ನಾಮಜಪದ ಸ್ಪಂದನಗಳು ಎರಡೂ ಕೈಗಳ ಅಂಗೈಗಳಲ್ಲಿನ ಮಧ್ಯದ ಭಾಗಕ್ಕೆ ಬಂದು ಅವು ಶರೀರದ ಮೇಲೆ ಹರಡುತ್ತವೆ, ಹಾಗೆಯೇ ಚಕ್ರಗಳ ಮಾಧ್ಯಮದಿಂದ ಶರೀರದೊಳಗೂ ಹೋಗುತ್ತವೆ. ನಾಮಜಪದ ಸ್ಪಂದನಗಳಿಂದ ಶರೀರದಲ್ಲಿನ ಆವರಣವು ನಾಶವಾಗಲು ಸಹಾಯವಾಗುತ್ತದೆ. ಆದ್ದರಿಂದ ಶರೀರದಲ್ಲಿ ಮತ್ತು ಶರೀರದ ಮೇಲೆ ಸತತ ಇರುವ ಆವರಣವು ನಾಶವಾಗುತ್ತದೆ. ಮುಂದೆ ಉಳಿದ ಆವರಣವನ್ನು ನಾವು ‘ಮುಷ್ಟಿಯಿಂದ ಆವರಣ ತೆಗೆಯುವುದು (‘ಶರೀರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ಎರಡು ಕೈಗಳ ಮುಷ್ಟಿಗಳಲ್ಲಿ ಸಂಗ್ರಹಿಸುವುದು ಮತ್ತು ಅದನ್ನು ಶರೀರದಿಂದ ದೂರ ಚೆಲ್ಲುವುದು) ಈ ಪದ್ಧತಿಯಿಂದ ದೂರ ಮಾಡಬಹುದು.

ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ (‘ಟಾವರ್ಮುದ್ರೆ), ಹಾಗೆಯೇ ‘ಪರ್ವತಮುದ್ರೆಗಳಿಂದ ಕೆಟ್ಟ ಶಕ್ತಿಗಳ ತೊಂದರೆ ಬೇಗ ದೂರವಾಗಲು ಸಹಾಯವಾಗುವುದು ‘ಶರೀರದ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯಲು ‘ಗೋಪುರ ಮುದ್ರೆ (‘ಟಾವರ್ನ ಮುದ್ರೆ) ಹೇಗೆ ಲಾಭದಾಯಕವಾಗಿದೆ, ಎಂಬುದನ್ನು ಸಾಧಕರು ಅನುಭವಿಸುತ್ತಲೇ ಇದ್ದಾರೆ. ಪ್ರಯೋಗದಿಂದ ಬಂದ ನಾಮಜಪವನ್ನು ಮಾಡುತ್ತ ನಮ್ಮ ಸಹಸ್ರಾರಚಕ್ರದಿಂದ ಹಿಡಿದು ಸ್ವಾಧಿಷ್ಠಾನಚಕ್ರದ ಮೇಲಿಂದ ‘ಗೋಪುರ ಮುದ್ರೆ ಯನ್ನು ಮೇಲಿಂದ ಕೆಳಗೆ ಮತ್ತು ಕೆಳಗಿನಿಂದ ಮೇಲೆ ಹೀಗೆ ೫-೬ ಬಾರಿ ನಿಧಾನವಾಗಿ ತಿರುಗಿಸಿದಾಗ, ಶರೀರದ ಮೇಲೆ ಬಂದಿರುವ ಆವರಣವು ದೂರವಾಗುತ್ತದೆ. ಆಧ್ಯಾತ್ಮಿಕ ಉಪಾಯವನ್ನು ಮಾಡುವಾಗ ನನಗೆ ‘ಗೋಪುರ ಮುದ್ರೆಯ ಇನ್ನೊಂದು ಲಾಭವು ಗಮನಕ್ಕೆ ಬಂದಿತು.

ನಮ್ಮ ಶರೀರದ ಮೇಲಿನ ಆವರಣವು ಕಡಿಮೆಯಾದ ನಂತರ ‘ಗೋಪುರ ಮುದ್ರೆಯನ್ನು ಮಾಡಿ ಅದನ್ನು ನಮ್ಮ ಸಹಸ್ರಾರಚಕ್ರದ ಮೇಲೆ, ಅಂದರೆ ತಲೆಯ ಮೇಲೆ ಛಾಯಾ ಚಿತ್ರದಲ್ಲಿ ತೋರಿಸಿದಂತೆ ೪-೫ ನಿಮಿಷಗಳ ವರೆಗೆ ಹಿಡಿದು ನಾಮಜಪವನ್ನು ಮಾಡಿದರೆ, ‘ನಮಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯು ಶೀಘ್ರವಾಗಿ ನಿವಾರಣೆಯಾಗುತ್ತದೆ, ಎಂದು ಗಮನಕ್ಕೆ ಬಂದಿತು. ಇದರ ಕಾರಣವೇನೆಂದರೆ ಸಹಸ್ರಾರಚಕ್ರದ ಮೇಲೆ ಹಿಡಿದ ‘ಗೋಪುರ ಮುದ್ರೆ, ಹಾಗೆಯೇ ನಾಮಜಪದಿಂದ ಈಶ್ವರನಿಂದ ಬಂದಿರುವ ಚೈತನ್ಯವು ನಮ್ಮ ಬ್ರಹ್ಮರಂಧ್ರದ ಮೂಲಕ ಒಳಗೆ ಹೋಗಿ ಅದು ನಮ್ಮ ಎಲ್ಲ ಚಕ್ರಗಳಲ್ಲಿ ಮತ್ತು ಶರೀರದಲ್ಲೆಲ್ಲ ಹರಡುತ್ತದೆ. ಆದ್ದರಿಂದ ನಮಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯು ಶೀಘ್ರತೆಯಿಂದ ದೂರವಾಗಲು ಸಹಾಯವಾಗುತ್ತದೆ.

‘ಗೋಪುರ ಮುದ್ರೆಯ ಈ ಪರಿಣಾಮವನ್ನು ಅನುಭವಿಸು ವಾಗ ನನಗೆ, ‘ಹಿಂದಿನ ಕಾಲದಲ್ಲಿ ಋಷಿಮುನಿಗಳು ತಪಶ್ಚರ್ಯವನ್ನು ಮಾಡುವಾಗ ತಲೆಯ ಮೇಲೆ ಎರಡೂ ಕೈಗಳನ್ನು ನೇರವಾಗಿಟ್ಟು ನಮಸ್ಕಾರದ ಮುದ್ರೆಯನ್ನು ಮಾಡುತ್ತಿದ್ದರು. ಅದಕ್ಕೆ ‘ಪರ್ವತಮುದ್ರೆ ಎನ್ನುತ್ತಾರೆ. ನಾನು ಆ ಮುದ್ರೆಯನ್ನು ಮಾಡಿನೋಡಿದಾಗ ‘ಆ ಮುದ್ರೆಯಿಂದಲೂ ತುಂಬಾ ಪ್ರಮಾಣದಲ್ಲಿ ಚೈತನ್ಯದ ಪ್ರವಾಹವು ನಮ್ಮ ಶರೀರದ ಮೇಲೆ ಹರಿಯುತ್ತದೆ, ಎಂದು ಗಮನಕ್ಕೆ ಬಂದಿತು. ಈ ಮುದ್ರೆಯಿಂದ ನಮಗೆ ಆಗುತ್ತಿರುವ ಕೆಟ್ಟ ಶಕ್ತಿಗಳ ತೊಂದರೆಯೂ ಬೇಗ ದೂರವಾಗಲು ಸಹಾಯವಾಗುತ್ತದೆ.

– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೪.೬.೨೦೨೩)

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ‘ಆಪತ್ಕಾಲದಲ್ಲಿ ಆಧುನಿಕ ವೈದ್ಯರು ಮತ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಿರುವುದಿಲ್ಲ. ಆಗ ತಮಗಾಗಿ ಮತ್ತು ಇತರರಿಗಾಗಿ ಆಧ್ಯಾತ್ಮಿಕ ಮಟ್ಟದಲ್ಲಿ ಉಪಾಯಗಳನ್ನು ಮಾಡಲು ಉಪಾಯಗಳ ಸಂದರ್ಭದ ಎಲ್ಲ ಲೇಖನ ಗಳನ್ನು ಸಂಗ್ರಹಿಸಿರಿ ಮತ್ತು ಈ ಉಪಾಯಗಳ ಬಗ್ಗೆ ಇಂದಿನಿಂದಲೇ ಅಭ್ಯಾಸ ಮಾಡಿರಿ !’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೧೭.೭.೨೦೨೩)