ವಂದೇ ಮಾತರಮ್ ಹಾಡನ್ನು ಪೂರ್ಣ ಹಾಡಿರಿ !

ವಂದೇ ಮಾತರಮ್ ಇದು ಸಂಸ್ಕೃತ ಭಾಷೆಯಲ್ಲಿದೆ. ಹಾಗೆಯೇ ಅದರಲ್ಲಿ ಮಾತೃಭೂಮಿಗೆ ವಂದನೆ ಹಾಗೂ ಸ್ತುತಿಯಿದೆ. ಅದರಲ್ಲಿ ಚೈತನ್ಯ ಹಾಗೂ ಶಕ್ತಿಯಿರುವುದರಿಂದ ರಾಷ್ಟ್ರ ವಿಷಯದ ಭಕ್ತಿ ಹೆಚ್ಚಿ ರಾಷ್ಟ್ರನಿಷ್ಠೆಯು ಪ್ರಬಲವಾಗುತ್ತದೆ. ಸ್ವಾತಂತ್ರ್ಯದ ಹಿಂದೆಯೇ ಮುಸಲ್ಮಾನರಿಂದ ಈ ಗೀತೆಗೆ ವಿರೋಧವಿತ್ತು. ಮಾತೃಭೂಮಿಯು ದೇವಿ ಸ್ವರೂಪವಾಗಿರುವುದರಿಂದ ವಂದೇ ಮಾತರಮ್ನ ಕೊನೆಯ ೪ ಸಾಲುಗಳಲ್ಲಿ ವಂದನೆಯನ್ನು ಮಾಡಲಾಗಿದೆ. ರಾಷ್ಟ್ರೀಯ ಗೀತೆಯೆಂದು ಮಾನ್ಯತೆಯನ್ನು ನೀಡುವ ಪ್ರಸ್ತಾವಕ್ಕೆ ಕಾಂಗ್ರೆಸ್ ಸಮ್ಮತಿಯನ್ನು ಮಾಡಿಸಿಕೊಂಡಿತು ಹಾಗೂ ನಂತರ ಅದನ್ನೆ ಶಾಲೆಯಲ್ಲಿ ಹಾಗೂ ಎಲ್ಲಾ ಕಡೆ ಹೇಳಲಾಗುತ್ತಿತ್ತು. ಇನ್ನು ಮುಂದೆ ಸಂಪೂರ್ಣ ವಂದೇ ಮಾತರಮ್ ಎಲ್ಲೆಡೆ ಹೇಳಬೇಕು.