‘ಆನ್‌ಲೈನ್ ಗ್ಯಾಂಬ್ಲಿಂಗ್ : ಒಂದು ಪ್ರತಿಷ್ಠಿತ ಜೂಜಾಟ !

ಗೋವಾ ರಾಜ್ಯದಲ್ಲಿ ‘ಅನ್‌ಲೈನ್ ಗ್ಯಾಂಬ್ಲಿಂಗ್’ (ಜೂಜಾಟ) ನಡೆಯುತ್ತಿದ್ದರೆ ಅದರ ವಿರುದ್ಧ ಕಠೋರ ಕ್ರಮ ತೆಗೆದುಕೊಳ್ಳಲಾಗುವುದು, ಎಂದು ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಇವರು ಜುಲೈ ೨೪ ರಂದು ಮಹಾರಾಷ್ಟ್ರದ ವಿಧಾನಪರಿಷತ್ತಿನಲ್ಲಿ ಆಶ್ವಾಸನೆ ನೀಡಿದ್ದರು.

ಇದರ ಜೊತೆಗೆ ಯಾವುದು ‘ಗೇಮ್ ಆಫ್ ಸ್ಕಿಲ್’ ಅಂದರೆ ಯಾವುದು ಕೌಶಲ್ಯದ ಆಟವಾಗಿರುತ್ತದೆಯೋ ಅವುಗಳಿಗೆ ಮಾತ್ರ ಕಾನೂನು ಪ್ರಕಾರ ಅನುಮತಿ ಇರುವುದರಿಂದ ಅವುಗಳು ಹಾಗೆಯೆ ಮುಂದುವರಿಯಬಹುದು, ಎಂದು ಕೂಡ ಅವರು ಆ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದರು. ‘ಅನಧಿಕೃತ ಆಟಗಳಲ್ಲಿ ಪೊಲೀಸ್ ಅಧಿಕಾರಿಗಳ ಕೈವಾಡ ಕಂಡುಬಂದರೆ ಅವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವೆವು’, ಎಂದು ಅವರು ಹೇಳಿದ್ದರು.

ಆನ್‌ಲೈನ್ ರಮೀ : ಒಂದು ಪ್ರತಿಷ್ಠಿತ ಜೂಜು !

ಇಷ್ಟರವರೆಗೆ ಜೂಜು ಅಥವಾ ‘ಅಕ್ರಮ ವಹಿವಾಟು’ ಎಂಬುದನ್ನು ನಾವು ಕೇಳಿದ್ದೆವು. ಸದ್ಯ ಕಾನೂನಿನಿಂದ ಪಾರಾಗಲು ಸಕ್ರಮಗೊಳಿಸಲಾಗಿರುವ ಹಾಗೂ ಮೇಲ್ನೋಟಕ್ಕೆ ಆಟವೆಂದು ‘ಆನ್‌ಲೈನ್’ನ ಲೇಬಲ್ ಹಚ್ಚಿಕೊಂಡು ಆಡುವ ಅದೆಷ್ಟೋ ಆಟಗಳು, ನಿಜವಾಗಿಯೂ ಒಂದು ರೀತಿಯ ಜೂಜಾಟಗಳೇ ಆಗಿವೆ. ಯಾವುದೇ ಆಟಕ್ಕೆ ಕೌಶಲ್ಯ ಬೇಕೇ ಬೇಕು; ಅದು ಮನೋರಂಜನೆಗಾಗಿ ಆಡುವುದಿರಲಿ ಅಥವಾ ಜೂಜಾಟದ ಉದ್ದೇಶದಿಂದ ಆಡುವುದಿರಲಿ; ಅದರೆ ಜೂಜಾಟದಲ್ಲಿ ಇತರರಿಗೆ ಹಣ ಹೂಡುವಂತೆ ಮಾಡಿ, ಆಡುವವರನ್ನು ಸೋಲಿಸಿ ಮಾಲೀಕನು ಮಾತ್ರ ಕೋಟಿಗಟ್ಟಲೆ ಹಣ ಗಳಿಸುತ್ತಿದ್ದಾನೆ, ಆದ್ದರಿಂದ ಈ ಕೌಶಲ್ಯದ ಉದ್ದೇಶ ಶುದ್ಧವಾಗಿರದ ಕಾರಣ ಅದು ಜೂಜಾಟವಾಗುತ್ತದೆ ಹಾಗೂ ಅದು ಅನೈತಿಕವಾಗಿದೆ. ಸದ್ಯ ‘ಆನ್‌ಲೈನ್ ರಮೀ’ ಎಂಬ ಹೆಸರಿನಲ್ಲಿ ಭಾರೀ ಜಾಹೀರಾತು ಮಾಡಿ ದೊಡ್ಡ ಪ್ರಮಾಣದಲ್ಲಿ ಜೂಜಾಟದ ಸಂತೆಯನ್ನೇ ಮಂಡಿಸಲಾಗಿದೆ, ಅದನ್ನು ಸರಕಾರ-ಆಡಳಿತ ಸಹಿತ ಎಲ್ಲ ಜಾಗರೂಕ ನಾಗರಿಕರು ಕೂಡ ತೆರೆದ ಕಣ್ಣುಗಳಿಂದ ನೋಡುತ್ತಿದ್ದಾರೆ. ಹೇಗೆ ಗೋವಾದಲ್ಲಿ ‘ಕ್ಯಾಸಿನೋ’ದಂತಹ ಜೂಜಾಟವನ್ನು ಪ್ರತಿಷ್ಠಿತಗೊಳಿಸಿ ಅದಕ್ಕೆ ಅಧಿಕೃತ ಸ್ವರೂಪವನ್ನು ನೀಡಲಾಗಿದೆ. ಕೌಶಲ್ಯದ ನೆಪದಲ್ಲಿ ಕಾನೂನುಬದ್ಧ ಗೊಳಿಸಬಹುದಾದ ಹಲವಾರು ’ಆನ್‌ಲೈನ್’ ಆಟಗಳು ವಾಸ್ತವವಾಗಿ ಜೂಜಾಟವಾಗಿದ್ದರೂ ಅವು ಅಧಿಕೃತಗೊಳಿಸಲ್ಪಟ್ಟಿರು ವುದರಿಂದ ಪ್ರತಿಷ್ಠೆಯನ್ನು ಗಳಿಸಿವೆ.

‘ಆನ್‌ಲೈನ್’ ಕೇರಮ್, ಲ್ಯುಡೋ, ರಮೀ ಇವೆಲ್ಲ ಆಟಗಳಲ್ಲಿ ಹಣವನ್ನು ಹೂಡಲಾಗುತ್ತದೆ. ಈ ಹಿಂದೆ ಸಣ್ಣ ಮಕ್ಕಳು ಲ್ಯುಡೋದಂತಹ ಆಟ ಆಡುತ್ತಿದ್ದರು, ಅದರಲ್ಲಿ ಒಂದು ಪ್ರಕಾರದ ಹರ್ಷ ಹಾಗೂ ಮುಗ್ಧತೆ ಇರುತ್ತಿತ್ತು. ಈಗ ಈ ‘ಆನ್‌ಲೈನ್’ ಆಟದ ಹೆಸರಿನಲ್ಲಿ ಜೂಜಾಟದ ಒಂದು ರಾಕ್ಷಸಿ ಸ್ವರೂಪ ಮುಂದೆ ಬಂದಿದೆ.

ಕಲಾವಿದರ ಸಾಮಾಜಿಕ ನಂಟು ಒಂದು ಕಾಲದಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿದ್ದ ಮರಾಠಿಯಲ್ಲಿನ ಓರ್ವ ಪ್ರಖ್ಯಾತ ಕಲಾವಿದರು ಈಗ ‘ಆನ್‌ಲೈನ್ ರಮಿ’ಯ ಜಾಹೀರಾತಿಗೆ ರಾಯಭಾರಿಯಾಗಿದ್ದಾರೆ ಹಾಗೂ ಗುಟ್ಖಾದ ಜಾಹೀರಾತು ನೀಡುವ ಇನ್ನೊಬ್ಬ ಪ್ರಸಿದ್ಧ ಕಲಾವಿದರೂ ಈ ಜಾಹೀರಾತಿಗೆ ರೂಪದರ್ಶಿಯಾಗಿದ್ದಾರೆ. ಕೆಲವು ಕಲಾವಿದರು ಮಾತ್ರ ಸಮಾಜಕ್ಕೆ ಹಾನಿಕರ ಉತ್ಪಾದನೆಗಳ ಜಾಹೀರಾತಿಗೆ ರಾಯಭಾರಿಯಾಗಲು ನಿರಾಕರಿಸುತ್ತಾರೆ. ‘ಫೆಅರ್ ಎಂಡ್ ಲೌಲೀ’, ಎತ್ತರವನ್ನು ಹೆಚ್ಚಿಸುವ ಪೌಡರ್, ಹಾನಿಕರ ಕೋಲ್ಡ್-ಡ್ರಿಂಕ್ಸ್ ಇತ್ಯಾದಿಗಳ ಜಾಹೀರಾತುಗಳನ್ನು ಕೆಲವು ಕಲಾವಿದರು ನಿರಾಕರಿಸಿದ್ದಾರೆ. ಆದರೆ ಕೆಲವು ಕಲಾವಿದರು ಸರಾಗವಾಗಿ ಗುಟ್ಖಾ, ಮದ್ಯ, ಜೂಜಾಟ ಇತ್ಯಾದಿಗಳ ಜಾಹೀರಾತಿಗೆ ರೂಪದರ್ಶಿಯಾಗುತ್ತಾರೆ. ‘ಯಾವ ಸಮಾಜ ಅವರಿಗೆ ಹಣ ಮತ್ತು ಪ್ರತಿಷ್ಠೆಯನ್ನು ಗಳಿಸಿಕೊಡುತ್ತದೆಯೋ, ಅದೇ ಸಮಾಜದ ಜೀವನವನ್ನು ಹಾಳುಗೆಡವಲು ಅವುಗಳನ್ನು ಪ್ರೋತ್ಸಾಹಿಸುತ್ತಾರೆ ಎಂದು ಹೇಳಿದರೆ ಅದರಲ್ಲಿ ಅತಿಶಯೋಕ್ತಿ ಏನಿಲ್ಲ. ಇದು ಉಂಡ ಮನೆಗೆ ದ್ರೋಹ ಬಗೆದಂತಾಗಿದೆ.

‘ಆನ್‌ಲೈನ್ ಗೇಮ್’ನಿಂದಾಗುವ ಹಾನಿ ‘ಆನ್‌ಲೈನ್ ಗೇಮ್’ನ ತೀನ್ ಪತ್ತಿ, ರಮೀ ಹಾಗೂ ಕ್ಯಾಸಿನೋ ಇಂತಹ ಆಟಗಳಲ್ಲಿ ಹಣ ಹೂಡಿದರೆ ಪ್ರತಿದಿನ ಲಕ್ಷಗಟ್ಟಲೆ ರೂಪಾಯಿಗಳಷ್ಟು ಲಾಭಗಳಿಸುವ ಆಮಿಷ ತೋರಿಸಿ ಗೋಂದಿಯಾದಲ್ಲಿನ ಜೈನ್ ಎಂಬ ಹೆಸರಿನ ವ್ಯಕ್ತಿ ಇತ್ತೀಚೆಗೆ ತನ್ನ ಕುಟುಂಬದ ವ್ಯಾಪಾರಿ ಮಿತ್ರನೊಬ್ಬನಿಗೆ ೫೮ ಕೋಟಿ ರೂಪಾಯಿಗಳಷ್ಟು ಮೋಸ ಮಾಡಿ ಈಗ ಅವನು ಪಲಾಯನಗೈದಿದ್ದಾನೆ. ಈ ಆರೋಪಿಯು ನಕಲಿ ‘ಆಪ್’ ಸಿದ್ಧಪಡಿಸಿ ಅದರಿಂದ ‘ಲಿಂಕ್ ಕಳುಹಿಸುತ್ತಿದ್ದನು. ‘ಆನ್‌ಲೈನ್ ಗೇಮ್’ನಲ್ಲಿ ಮೋಸ ಮಾಡುವವರು ಪ್ರಾರಂಭದಲ್ಲಿ ಎದುರಿನ ವ್ಯಕ್ತಿಯನ್ನು ಗೆಲ್ಲಿಸುತ್ತಾರೆ, ಅದೇ ರೀತಿ ಇಲ್ಲಿಯೂ ಆಯಿತು.

‘ಆನ್‌ಲೈನ್ ಗೇಮ್’ನ ಬಗ್ಗೆಯೇ ಮಾತನಾಡುತ್ತಾ ನಿಮ್ಮನ್ನು ಉತ್ತೇಜಿಸುತ್ತಾರೆ. ಇದರಿಂದ ಮನಸ್ಸು, ಬುದ್ಧಿ, ಶರೀರದ ಮೇಲೆ ಗಂಭೀರ ಪರಿಣಾಮವಾಗಿ ಮಕ್ಕಳು ಮಾನಸಿಕ ಹಾಗೂ ಶಾರೀರಿಕ ಕಾಯಿಲೆಗೊಳಗಾಗಿದ್ದಾರೆ. ಕೆಲವರು ನಿರಾಶೆಗೊಳಗಾಗಿದ್ದಾರೆ, ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಕೇವಲ ಹುಡುಗರು ಮಾತ್ರ ಈ ‘ಆಟ ಆಡುತ್ತಾರೆ’, ಎಂಬುದು ನಮಗೆ ತಿಳಿದಿತ್ತು. ಈಗ ಸಂಚಾರಿವಾಣಿಯಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ವರೆಗೆ ಎಲ್ಲ ವಯಸ್ಸಿನ ಸ್ತ್ರೀ-ಪುರುಷರು ಈ ಆಟದಲ್ಲಿ ತಮ್ಮ ಅಮೂಲ್ಯವಾದ ಸಮಯವನ್ನು ವ್ಯರ್ಥಗೊಳಿಸುತ್ತಿದ್ದಾರೆ. ಒಂದು ರೀತಿಯಲ್ಲಿ ಇದು ದೊಡ್ಡ ಸಾಮಾಜಿಕ, ಆರ್ಥಿಕ ಹಾಗೂ ರಾಷ್ಟ್ರೀಯ ಹಾನಿಯಾಗಿದೆ. ಇಂದು ದೇಶ ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿರುವಾಗ ಅನೇಕ ಜನರು ಮಾತ್ರ ತಮ್ಮ ಸಂಚಾರಿವಾಣಿಯ ಆಟಗಳಲ್ಲಿ ಮಗ್ನರಾಗಿದ್ದು ಜಗತ್ತಿನೊಂದಿಗೆ ಏನೂ ಸಂಬಂಧವಿಲ್ಲದವರಂತೆ ಮೈಮರೆತಿದ್ದಾರೆ. ಇದು ಯಾವುದರ ಲಕ್ಷಣವಾಗಿದೆ ?

‘ಪಬ್‌ಜೀ’ ಆಟದಿಂದಾಗುವ ಹಾನಿಯನ್ನು ಗಮನಿಸಿ ಅದಕ್ಕೆ ನಿರ್ಬಂಧ ಹೇರಲಾಯಿತು. ಕ್ರಿಕೆಟ್ ಜೂಜನ್ನು ನಾವು ಅಧಿಕೃತವೆಂದು ನಂಬುತ್ತೇವೆ ಹಾಗೂ ಅದರಲ್ಲಿನ ಅಪರಾಧಿ ಗಳನ್ನು ಜೂಜಾಟಗಾರರೆಂದು ಬಂಧಿಸಲಾಗುತ್ತದೆ; ಆದರೆ ಹಣ ಗಳಿಸಿಕೊಡುವ ‘ಡ್ರೀಮ್ ೧೧’ ಹಾಗೂ ಇದರಂತಹ ಕ್ರಿಕೆಟ್‌ಗೆ ಸಂಬಂಧಿಸಿದ ಅನೇಕ ‘ಆನ್‌ಲೈನ್ ಗೇಮ್’ಗಳು ಕೂಡ ಒಂದು ವಿಧದ ಅಧಿಕೃತಗೊಳಿಸಿಕೊಂಡಿರುವ ಜೂಜಾಟಗಳೇ ಅಲ್ಲವೆ ?

ಕೆಲವು ‘ಆನ್‌ಲೈನ್ ಗೇಮ್’ನಲ್ಲಿ ‘ಚಾಟ್ ಮಾಡುವುದು’, ವಿಡಿಯೋ ಕಳುಹಿಸುವುದು’ ಇತ್ಯಾದಿ ವಿಷಯಗಳಿರುತ್ತವೆ. ಅದರಿಂದ ಅಯೋಗ್ಯ ಪರಿಣಾಮಕ್ಕೆ ಆಸ್ಪದವಿರುತ್ತದೆ. ಆ ವಿಡಿಯೋ ನೋಡುವ ಸಲುವಾಗಿಯೇ ಆಟ ಆಡಲಾಗುತ್ತದೆ. ಆಟದ ಮೂಲಕ ಹುಡುಗಿಯರನ್ನು ಮೋಸಗೊಳಿಸಲಾಗುತ್ತದೆ, ಅವರ ಜೀವನ ಧ್ವಂಸವಾಗುತ್ತದೆ. ಹಿಂದೂ ಹುಡುಗರನ್ನು ಮತಾಂತರಿಸುವ ಪ್ರಕರಣಗಳೂ ‘ಆನ್‌ಲೈನ್ ಗೇಮ್’ನ ಮೂಲಕ ನಡೆಯುತ್ತಿದೆ. ‘ಆನ್‌ಲೈನ್ ಗೇಮ್’ನಲ್ಲಿನ ವಸ್ತು ಹಾಗೂ ಸೇವಾ ತೆರಿಗೆ ಶೇ. ೧೮ ರಿಂದ ಶೇ. ೨೮ ರಷ್ಟು ಮಾಡಿದ್ದರಿಂದ ಕಂದಾಯದಲ್ಲಿ ೨೦ ಸಾವಿರ ಕೋಟಿ ರೂಪಾಯಿಗಳಷ್ಟು ಹೆಚ್ಚಾಗಲಿಕ್ಕಿದೆ. ಇಲ್ಲಿ ಒಬ್ಬ ಸೋಲುವಾಗ ಇನ್ನೊಬ್ಬ ಗೆಲ್ಲುತ್ತಾನೆ.

ಇದರಲ್ಲಿ ಸೋಲುವವರು ಪ್ರಸಂಗಾನುಸಾರ ಇಹಲೋಕವನ್ನೂ ತ್ಯಜಿಸುತ್ತಾರೆ. ಆದರೆ ಜೂಜಾಟದ ಕಂಪನಿಗಳು ಹಾಗೂ ಸರಕಾರಕ್ಕೆ ಕೇವಲ ಲಾಭವೇ ಆಗುತ್ತಿದೆ. ‘ಇದು ಎಲ್ಲಿಯ ವರೆಗೆ ನೈತಿಕವಾಗಿದೆ ?’ ಎಂಬುದನ್ನು ಗಂಭೀರವಾಗಿ ವಿಚಾರ ಮಾಡುವ ಆವಶ್ಯಕತೆಯಿದೆ.