ಚೀನಾ ಕಾಂಬೋಡಿಯಾದಲ್ಲಿ ನಿರ್ಮಿಸಿರುವ ನೌಕಾನೆಲೆ ಭಾರತಕ್ಕೆ ಅಪಾಯಕಾರಿ !

ಈ ಸೇನಾ ನೆಲೆಯಿಂದ ಬಂಗಾಳಕೊಲ್ಲಿಯಿಂದ ಭಾರತೀಯ ಸೇನಾ ನೆಲೆಯು 1,200 ಕಿ.ಮೀ ದೂರದಲ್ಲಿದೆ

ನಾಮಪೇಹ್ನ – ಚೀನಾವು ಕಾಂಬೋಡಿಯಾದಲ್ಲಿ ನೌಕಾ ನೆಲೆಯನ್ನು ನಿರ್ಮಿಸುತ್ತಿದೆ ಮತ್ತು ಅದರ ನಿರ್ಮಾಣವು ಬಹುತೇಕ ಪೂರ್ಣಗೊಂಡಿದೆ. ಈ ನೌಕಾ ನೆಲೆಯ ಚಿತ್ರಗಳನ್ನು ಉಪಗ್ರಹದಿಂದ ತೆಗೆಯಲಾಗಿದೆ. ಅಲ್ಲಿ ಹೆಚ್ಚಿನ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗುತ್ತಿದೆ, ಇದರಲ್ಲಿ ನೌಕಾಪಡೆಗಳಿಗೆ ವಸತಿ ವ್ಯವಸ್ಥೆ, ನೌಕಾಪಡೆಯ ಭವ್ಯ ಕಾರ್ಯಾಲಯ, ನೌಕಾ ಪಡೆಯ ಯುದ್ಧನೌಕೆಗಳಿಗೆ ಬಂದರು ನಿರ್ಮಾಣ ಇತ್ಯಾದಿಗಳನ್ನು ಒಳಗೊಂಡಿದೆ. ಚೀನಾವು ಕಾಂಬೋಡಿಯಾಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಸಾಲ ನೀಡಿದೆ; ಆದರೆ ಕಾಂಬೋಡಿಯಾ ಈ ಸಾಲವನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ, ಅದು 2017 ರಲ್ಲಿ ಚೀನಾಕ್ಕೆ ನೌಕಾನೆಲೆಯನ್ನು ಹಸ್ತಾಂತರಿಸಿತು. (ಚೀನಾವು ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳಿಗೆ ಹೆಚ್ಚು ಸಾಲವನ್ನು ನೀಡಿತು. ಅವರು ಅದನ್ನು ಮರುಪಾವತಿಸಲು ಸಾಧ್ಯವಾಗದ ಕಾರಣ ಅವರು ಚೀನಾದ ಗುಲಾಮರಾದರು. ಕಾಂಬೋಡಿಯಾದ ಸಂದರ್ಭದಲ್ಲಿಯೂ ಅದೇ ಸಂಭವಿಸಿದೆ ! – ಸಂಪಾದಕರು) ನಂತರ ಚೀನಾ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಮಗಾರಿ ಪ್ರಾರಂಭಿಸಿತು.

1. ಬಂಗಾಳಕೊಲ್ಲಿಯಲ್ಲಿರುವ ಭಾರತೀಯ ಸೇನಾ ನೆಲೆಯಿಂದ ಕೇವಲ 1,200 ಕಿ.ಮೀ ದೂರದಲ್ಲಿ ಈ ನೌಕಾ ನೆಲೆಗಳು ಇದ್ದರಿಂದ ಭಾರತಕ್ಕೆ ತಲೆನೋವು ಹೆಚ್ಚಿಸುವ ಸಾಧ್ಯತೆ ಇದೆ. (ಭಾರತೀಯ ಸೇನಾ ನೆಲೆಯಿಂದ 1,200 ಕಿ.ಮೀ ದೂರದಲ್ಲಿ ಚೀನಾ ನೌಕಾನೆಲೆ ಸ್ಥಾಪಿಸುತ್ತಿದೆ ಎಂಬುದು ಭಾರತದ ಗುಪ್ತಚರ ಇಲಾಖೆಗೆ ಸಿಕ್ಕಿತ್ತೇ ?, ಎನ್ನುವುದನ್ನು ಭಾರತೀಯರಿಗೆ ತಿಳಿಯಬೇಕು ! – ಸಂಪಾದಕರು)

2. ಬ್ರಿಟಿಷ್ ರಕ್ಷಣಾ ತಜ್ಞ ಚೈತಮ್ ಹೌಸ್ ಪ್ರಕಾರ, ಅಮೇರಿಕೆಯ ಗುಪ್ತಚರ ಇಲಾಖೆ ಈ ನೌಕಾ ನೆಲೆಯ ಬಗ್ಗೆ 4 ವರ್ಷಗಳ ಹಿಂದೆ ಮೊದಲಬಾರಿ ಮಾಹಿತಿ ಪಡೆದಿದೆ. ಆ ನಂತರ ಹಲವು ದೇಶಗಳ ಗುಪ್ತಚರ ಸಂಸ್ಥೆಗಳು ಈ ನೌಕಾ ನೆಲೆಯ ಬಗ್ಗೆ ಮಾಹಿತಿ ಪಡೆಯಲು ಆರಂಭಿಸಿದವು.

3. ಈ ನೌಕಾನೆಲೆಯ ಕಾರಣದಿಂದ ಚೀನಾದ ಸೈನಿಕರಿಗೆ ಆಗ್ನೇಯ ಏಷ್ಯಾದ ವಿವಾದಿತ ಸಮುದ್ರ ಕ್ಷೇತ್ರದ ವರೆಗೆ ತಲುಪಲು ಸಹಾಯವಾಗಲಿದೆ.

(ಸೌಜನ್ಯ – TaiwanPlus News)

ಸಂಪಾದಕೀಯ ನಿಲುವು

ಚೀನಾದ ಹೆಚ್ಚುತ್ತಿರುವ ಕಿಡಿಗೇಡಿತನಕ್ಕೆ ಪ್ರತ್ಯುತ್ತರ ನೀಡಲು ಭಾರತ ಯುದ್ಧಕ್ಕೆ ಸಜ್ಜಾಗುವ ಆವಶ್ಯಕತೆಯಿದೆ !