ದೇಶದ ಉತ್ತಮ ಆಡಳಿತಕ್ಕಾಗಿ ಸಮಾನ ನಾಗರಿಕ ಕಾನೂನು ಆವಶ್ಯಕ !

೧. ಭಾರತೀಯ ಸಂವಿಧಾನದಲ್ಲಿ ಸಮಾನ ನಾಗರಿಕ ಕಾನೂನು ಅನ್ವಯಿಸುವ ವಿಷಯದ ನಿಬಂಧನೆಗಳು

ಮೇಜರ್ ಸರಸ ತ್ರಿಪಾಠಿ

‘ಭಾರತೀಯ ಸಂವಿಧಾನದ ಪರಿಚ್ಛೇದ ೪೪ ರ (ರಾಜ್ಯ ಧೋರಣೆಗಳ ಮಾರ್ಗದರ್ಶಕ ತತ್ತ್ವಗಳು) ಅಂತರ್ಗತ ಸಮಾನ ನಾಗರಿಕ ಕಾನೂನಿನ ಕಡೆಗೆ ಅಥವಾ ‘ಯು.ಸಿ.ಸಿಯ ಕಡೆಗೆ (ಈಗ ಕೆಲವರು ಅದನ್ನು ‘ಸಾರ್ವತ್ರಿಕ ನಾಗರಿಕ ಸಂಹಿತೆಯೆಂದು ಹೇಳುತ್ತಿದ್ದಾರೆ.) ಹೋಗಬಹುದೆಂಬ ನಿರ್ದೇಶನ ಇದೆ, ಅಲ್ಲಿ ಧರ್ಮ ಅಥವಾ ಶ್ರದ್ಧೆ ಯಾವುದೇ ಇದ್ದರೂ ಎಲ್ಲರಿಗೂ ಒಂದು ಸಮಾನ ನಾಗರಿಕ ಕಾನೂನು ಅನ್ವಯವಾಗುವುದು. ಅದರಲ್ಲಿ ನಮೂದಿಸಿದ ಪ್ರಕಾರ, ‘ಪೂರ್ಣ ಭಾರತದಲ್ಲಿ ರಾಜ್ಯಗಳೇ ನಾಗರಿಕರಿಗಾಗಿ ಸಮಾನ ನಾಗರಿಕ ಕಾನೂನನ್ನು ನಿರ್ಧರಿಸಲು ಹಾಗೂ ಮಾಡಲು ಪ್ರಯತ್ನಿಸುವವು. ಹಾಗಾಗಿ ‘ಯಾವುದೇ ನ್ಯಾಯಾಲಯದಿಂದ ಮಾರ್ಗದರ್ಶಕ ತತ್ತ್ವಗಳನ್ನು ಅನ್ವಯಗೊಳಿಸಲಾಗುವುದಿಲ್ಲ, ಎಂದು ಕಲಮ್ ೪೪ ರ ಮೊದಲಿನ ಸಂವಿಧಾನದ ಕಲಮ್ ೩೭ ಸ್ಪಷ್ಟಪಡಿಸುತ್ತದೆ ಎಂದಿದೆ. ಇದರಿಂದ ಅರಿವಾಗುವುದೇನೆಂದರೆ, ಸಮಾನ ನಾಗರಿಕ ಕಾನೂನನ್ನು ಒಂದಲ್ಲ ಒಂದು ಸ್ವರೂಪದಲ್ಲಿ ಅನ್ವಯಗೊಳಿಸಬೇಕು, ಎಂಬುದನ್ನು ನಮ್ಮ ಸಂವಿಧಾನವೇ ಒಪ್ಪಿಕೊಂಡಿದೆ. ಹೀಗಿದ್ದರೂ ಸಂವಿಧಾನವು ಅದರ ಅನುಷ್ಠಾನ ವನ್ನು ಕಡ್ಡಾಯಗೊಳಿಸುವುದಿಲ್ಲ. ಆದ್ದರಿಂದಲೇ ಯಾವುದೇ ದೃಢ ನಿರ್ಣಯ ಅಥವಾ ಕಾರ್ಯಾಚರಣೆಯಾಗದೆ ಕೇವಲ ದೀರ್ಘಕಾಲ ಚರ್ಚೆ ಮಾತ್ರ ನಡೆಯುತ್ತದೆ. ಇಲ್ಲಿ ತಿಳಿದು ಕೊಳ್ಳಬೇಕಾದ ವಿಷಯವೆಂದರೆ, ಮಾರ್ಗದರ್ಶಕ ತತ್ತ್ವಗಳು ಸಂವಿಧಾನದಲ್ಲಿನ ಅಲಂಕಾರದ ವಸ್ತುಗಳಲ್ಲ, ಅವುಗಳು ಸಂವಿಧಾನದಲ್ಲಿರಲು ಕಾರಣವೇನೆಂದರೆ ಸಂವಿಧಾನವನ್ನು ರಚಿಸುವಾಗ ಅದರ ಅನುಷ್ಠಾನಕ್ಕಾಗಿ ಪರಿಸ್ಥಿತಿಯು ಅನುಕೂಲ ವಿರಲಿಲ್ಲ. ಆದ್ದರಿಂದ ಮಾರ್ಗದರ್ಶಕ ತತ್ತ್ವಗಳನ್ನು ಯೋಗ್ಯ
ಸಮಯದಲ್ಲಿ ಅನ್ವಯಗೊಳಿಸಲಾಗುವುದು ಎಂಬ ಅಪೇಕ್ಷೆಯಿತ್ತು.

೨. ಐತಿಹಾಸಿಕ ದೃಷ್ಟಿಕೋನ ಹಾಗೂ ಹಿನ್ನೆಲೆ

ವಿವಿಧ ಪರಕೀಯ ಶಕ್ತಿಗಳು ಭಾರತೀಯ ಉಪಖಂಡದ ಮೇಲೆ ಆಕ್ರಮಣ ಮಾಡಿದವು. ಅದರಿಂದ ನಾಗರಿಕ ಕಾನೂನಿನ ಪಾರಂಪರಿಕ ರಚನೆ ನಾಶವಾಯಿತು. ಬ್ರಿಟಿಷರ ಆಡಳಿತ ಬಂದ ನಂತರ ಅವರ ಕಾನೂನಿನ ಮೂಲಕ ವಿವಿಧ ಸಮಾಜಗಳ ರೂಢಿಪರಂಪರೆಯಲ್ಲಿ ಸುಧಾರಣೆ ಮಾಡಲಾಯಿತು. ವಸಾಹತು ಕಾಲದಿಂದಲೂ ಭಾರತದಲ್ಲಿ ಸಮಾನ ನಾಗರಿಕ ಕಾನೂನಿನ ಚರ್ಚೆ ನಡೆಯುತ್ತಾ ಬಂದಿದೆ. ಸ್ವಾತಂತ್ರ್ಯಪೂರ್ವ ಕಾಲದಲ್ಲಿ ಅಕ್ಟೋಬರ್ ೧೮೪೦ ರ ‘ಲೆಕ್ಸ್ ಲೋಕೀ ವರದಿಯು ಅಪರಾಧ, ಸಾಕ್ಷಿ ಹಾಗೂ ಒಪ್ಪಂದಗಳಿಗೆ ಸಂಬಂಧಿಸಿದ ಭಾರತೀಯ ಕಾನೂನಿನ ಸಂಹಿತೆಯ ರಚನೆಯಲ್ಲಿ ಸಮಾನತೆಯ ಮಹತ್ವ ಮತ್ತು ಆವಶ್ಯಕತೆಗಳಿಗೆ ಒತ್ತುಕೊಡಲಾಯಿತು; ಆದರೆ ‘ಹಿಂದೂ ಹಾಗೂ ಮುಸಲ್ಮಾನರ ವೈಯಕ್ತಿಕ ಕಾನೂನನ್ನು ಇಂತಹ ಸಂಹಿತೆಯಿಂದ ದೂರವಿಡಬೇಕು, ಎಂದು ಸಹ ಅದರಲ್ಲಿ ಶಿಫಾರಸ್ಸು ಮಾಡಲಾಯಿತು. ಅದರ ಪರಿಣಾಮದಿಂದ ಕ್ರಿಮಿನಲ್ ಕಾನೂನನ್ನು ಸಂಹಿತೆಬದ್ಧಗೊಳಿಸಲಾಯಿತು ಹಾಗೂ ಅದು ಪೂರ್ಣ ದೇಶಕ್ಕೆ ಸಮಾನವಾಗಿ ಅನ್ವಯವಾಯಿತು. ಹಾಗೆ ಆದನಂತರವೂ ವಿವಿಧ ಸಮುದಾಯಗಳಿಗೆ ವಿವಿಧ ಸಂಹಿತೆಗಳ ಮೂಲಕ ನಾಗರಿಕ ಕಾನೂನು ಅನ್ವಯವಾಗುತ್ತಾ ಹೋಯಿತು; ಏಕೆಂದರೆ ಆಂಗ್ಲರಿಗೆ ಸಮಾಜವನ್ನು ಸುಧಾರಣೆ ಮಾಡುವುದರಲ್ಲಿ, ಸಮುದಾಯಗಳನ್ನು ಒಟ್ಟುಗೂಡಿಸುವುದರಲ್ಲಿ ಹಾಗೂ ಭಾರತದ ಐಕ್ಯವನ್ನು ಬಲಪಡಿಸುವುದರಲ್ಲಿ ಸ್ವಾರಸ್ಯವಿರಲಿಲ್ಲ; ಅವರಿಗೆ ಸಾಮಾಜಿಕ ಸಂಬಂಧವನ್ನು ಮಲಿನಗೊಳಿಸುವುದರಲ್ಲಿ, ಅವರನ್ನು ಸಂಕುಚಿತ ಇಕ್ಕಟ್ಟಿನಲ್ಲಿ ಸಿಲುಕಿಸುವುದರಲ್ಲಿ ಮತ್ತು ಐಕ್ಯವನ್ನು ದುರ್ಬಲಗೊಳಿಸುವುದರಲ್ಲಿ ಮಾತ್ರ ಆಸಕ್ತಿಯಿತ್ತು. ಸಂವಿಧಾನದ ಮಸೂದೆ ಸಿದ್ಧಪಡಿಸುವಾಗ ಓಲೈಕೆಯ ದೌರ್ಬಲ್ಯದಿಂದ ಪ್ರಮುಖ ನೇತಾರರು ಸಮಾನ ನಾಗರಿಕ ಕಾನೂನಿಗಾಗಿ ಒತ್ತಡ ಹೇರಲಿಲ್ಲ. ಅದರ ಪರಿಣಾಮವೆಂದು ಸಮಾನ ನಾಗರಿಕ ಕಾನೂನನ್ನು ಸಂವಿಧಾನದ ಕಲಮ್ ೪೪ ರ ಅಂತರ್ಗತ ರಾಜ್ಯಗಳ ಧೋರಣೆಯ ಮಾರ್ಗದರ್ಶಕ ತತ್ತ್ವಗಳ ಅಂತರ್ಗತ ಇಡಲಾಯಿತು. ಇದು ಮುಖ್ಯವಾಗಿ ವಿಧಾನಸಭೆಯಲ್ಲಿ ಕುಳಿತಿದ್ದ ಮತಾಂಧ ಮೂಲಭೂತವಾದಿಗಳ ಪ್ರತಿಕಾರದಿಂದಾಯಿತು. ಇದು ಸ್ವಾತಂತ್ರ್ಯೋತ್ತರ ಕಾಲದ ತರ್ಕರಹಿತ ಓಲೈಕೆಯ ಆರಂಭಿಕ ಹಂತವಾಗಿತ್ತು. ಅವರ ‘ವೈಯಕ್ತಿಕ ಕಾನೂನಿನಲ್ಲಿ (‘ಪರ್ಸನಲ್ ಲಾದಲ್ಲಿ) ಬದಲಾವಣೆಯನ್ನು ವಿರೋಧಿಸುವವರಲ್ಲಿ ಹೆಚ್ಚಿನವರೆಲ್ಲರೂ ಮುಸಲ್ಮಾನ ರಾಗಿದ್ದರು ಹಾಗೂ ಯಾರ ಕಾನೂನಿನಲ್ಲಿ ಸುಧಾರಣೆ ಮಾಡ ಲಾಯಿತೋ, ಅವರೆಲ್ಲರೂ ಹಿಂದೂಗಳಾಗಿದ್ದರು. ಹೇಗೆ ‘ಹಿಂದೂ ಕೋಡ್ ಬಿಲ್ನಲ್ಲಿ ವಿಚ್ಛೇದನಕ್ಕೆ ಕಾನೂನು ಮನ್ನಣೆ ನೀಡ ಲಾಯಿತು ಹಾಗೂ ಬಹುಪತ್ನಿತ್ವವನ್ನು ನಿಲ್ಲಿಸಲಾಯಿತು ಹಾಗೂ ಹುಡುಗಿಯರಿಗೆ ಪಾಲುದಾರಿಕೆಯ ಹಕ್ಕು ನೀಡಲಾಯಿತು. ಇದಲ್ಲದೆ ಇತರ ಸುಧಾರಣೆಯ ಕಾನೂನು, ಉದಾ. ‘ಹಿಂದೂ ಉತ್ತರಾಧಿಕಾರ ಕಾನೂನು ೧೯೫೬, ‘ಹಿಂದೂ ವಿವಾಹ ಕಾನೂನು, ‘ಅಲ್ಪಸಂಖ್ಯಾತ ಹಾಗೂ ಪಾಲಕತ್ವ ಕಾನೂನು, ‘ದತ್ತು ಹಾಗೂ ಪಾಲನೆಪೋಷಣೆ ಕಾನೂನು, ‘ವಿಶೇಷ ವಿವಾಹ ಕಾನೂನು ಇತ್ಯಾದಿ.

೩. ಸಮಾನ ನಾಗರಿಕ ಕಾನೂನು ಏಕೆ ಆವಶ್ಯಕವಾಗಿದೆ ?

ಭಾರತೀಯ ಸಂವಿಧಾನದಲ್ಲಿ ಕಲಮ್ ೪೪ ರ ಅಂತರ್ಗತ ವೈಯಕ್ತಿಕ ಕಾನೂನಿನಿಂದ ಸಮಾನ ನಾಗರಿಕ ಕಾನೂನಿನ ಕಡೆಗೆ ಹೋಗುವ ವ್ಯವಸ್ಥೆಯಿದೆ. ಅದು ಸಂವಿಧಾನದ ಮಾರ್ಗದರ್ಶಕ ತತ್ತ್ವಗಳ ಭಾಗವಾಗಿದೆ. ನ್ಯಾಯಾಂಗವು ಶಹಾಬಾನೋ ಪ್ರಕರಣ, ಡೆನಿಯಲ್ ಲತಿಫೀ ಪ್ರಕರಣ, ಸರಲಾ ಮುದ್ಗಲ್ ಪ್ರಕರಣ ಇತ್ಯಾದಿಗಳಂತಹ ಅನೇಕ ನಿರ್ಣಯಗಳಲ್ಲಿ ಸಮಾನ ನಾಗರಿಕ ಕಾನೂನಿನ ಕಡೆಗೆ ಸ್ಪಷ್ಟ ಒಲವು ತೋರಿಸಿದೆ. ಆದರೆ ಕಾರ್ಯಾಂಗವೇ ಆ ಕಾನೂನನ್ನು ತರಲು ವಿಳಂಬ ಮಾಡುತ್ತಿದೆ. ಕಾರ್ಯಾಂಗದ ಹಿಂದೇಟಿಗೆ ಕಾರಣ ತಿಳಿಯಲು ಕಷ್ಟವೇನಿಲ್ಲ, ಕಾರ್ಯಾಂಗದಲ್ಲಿ ಹೆಚ್ಚಿನ ಬಾರಿ ಕಾಂಗ್ರೆಸ್ಸಿನದ್ದೇ ಸರಕಾರವಿತ್ತು. ಹಾಗಾಗಿ ಓಲೈಕೆ ಮುಂದುವರಿಯುತ್ತಲೇ ಇತ್ತು.

೩ ಅ. ದೇಶದ ಪ್ರಗತಿಗೆ ಸಹಾಯಕ : ಸಮಾನ ನಾಗರಿಕ ಕಾನೂನು ಆಧುನಿಕ ಹಾಗೂ ಪ್ರಗತಿಶೀಲ ರಾಷ್ಟ್ರದ ಪ್ರತೀಕ ವಾಗಿದೆ. ಅದು ‘ಕಾನೂನಿನ ದೃಷ್ಟಿಯಲ್ಲಿ ಎಲ್ಲ ನಾಗರಿಕರಿಗೆ ಸಮಾನ ವರ್ತನೆ ನೀಡಬೇಕು ಎಂಬುದನ್ನೇ ತೋರಿಸುತ್ತದೆ. ಅದು ಅನ್ವಯವಾದರೆ ಈ ದೇಶವು ಜಾತಿ ಮತ್ತು ಧಾರ್ಮಿಕ ರಾಜಕಾರಣದಿಂದ ದೂರ ಸರಿದಿದೆ, ಎಂದೂ ತಿಳಿಯುತ್ತದೆ. ಸಮಾನ ನಾಗರಿಕ ಕಾನೂನು ದೇಶವನ್ನು ಮುಂದೆ ಕರೆದೊಯ್ಯಲು
ಹಾಗೂ ವಿಕಸಿತಗೊಳಿಸಲು ಸಹಾಯ ಮಾಡುವುದು.

೩ ಆ. ರಾಷ್ಟ್ರೀಯ ಐಕ್ಯತೆಗಾಗಿ ಆವಶ್ಯಕ ! : ಸಮಾನ ನಾಗರಿಕ ಕಾನೂನು ಧರ್ಮದ ವಿವಿಧ ವರ್ಗ, ರೂಢಿ ಹಾಗೂ ಪರಂಪರೆಯಲ್ಲಿ ಐಕ್ಯವನ್ನು ತರುವುದು. ಸಮಾನ ನಾಗರಿಕ ಸಂಹಿತೆಯು ಭಾರತವನ್ನು ಸ್ವಾತಂತ್ರ್ಯ ನಂತರದ ಸಮಯದಲ್ಲಿ ಸಹ ಇಲ್ಲದಷ್ಟು ಐಕ್ಯವನ್ನು ಮೂಡಿಸಲು ಸಹಾಯ ಮಾಡುವುದು.
ಭಾರತೀಯರಲ್ಲಿ ತಮ್ಮ ಜಾತಿ, ಧರ್ಮ, ಪ್ರದೇಶ ಅಥವಾ ಜನಾಂಗದ ವಿಚಾರ ಮಾಡದೆ ಅವರಲ್ಲಿ ಸಮನ್ವಯ ತರಲು ಸಹಾಯ ಮಾಡುವುದು.

೩ ಇ. ಮತಪೆಟ್ಟಿಗೆಯ ರಾಜಕಾರಣದ ಅಂತ್ಯ : ಸಮಾನ ನಾಗರಿಕ ಕಾನೂನಿಂದ ಮತಪೆಟ್ಟಿಗೆ ಮತ್ತು ಓಲೈಕೆಯ ರಾಜಕಾರಣ ಕಡಿಮೆಯಾಗಲು ಸಹಾಯವಾಗುವುದು. ಸಮಾನ ನಾಗರಿಕ ಕಾನೂನು ತರಲು ಹಾಗೂ ಅದನ್ನು ಅನ್ವಯಗೊಳಿಸುವಲ್ಲಿ ಪಟ್ಟಭದ್ರ ಹಿತಾಸಕ್ತಿಗಳಿರುವ ಮತಾಂಧ ಮೂಲಭೂತವಾದಿಗಳ ಬಹುದೊಡ್ಡ ಅಡಚಣೆಯಿದೆ. ಈ ಗುಂಪು ತಮ್ಮ ‘ಪರ್ಸನಲ್ ಲಾದ ಬದಲಿಗೆ ಮತದಾನ ಮಾಡುವುದಾಗಿ ಭರವಸೆ ನೀಡುತ್ತವೆ. ವೈಯಕ್ತಿಕ ಕಾನೂನುಗಳು ಸಾರ್ವಭೌಮ ಸರಕಾರದಲ್ಲಿನ ಸಮಾನಾಂತರ ವ್ಯವಸ್ಥೆಯ ಹಾಗಿರುತ್ತವೆ. ಅವುಗಳೇ ನ್ಯಾಯ
ವನ್ನು ನೀಡುತ್ತವೆ, ವರ್ತನೆಯನ್ನು ನಿಯಂತ್ರಿಸುತ್ತವೆ ಹಾಗೂ ಸಾರ್ವಭೌಮ ಕಾನೂನಿನೊಂದಿಗೆ ಸಂಘರ್ಷವಾದಾಗ ಸಂವಿಧಾನಾತ್ಮಕ ವ್ಯವಸ್ಥೆಗೆ ಸವಾಲೊಡ್ಡುತ್ತವೆ.

೩ ಈ. ಮಹಿಳೆಯರ ಸ್ಥಿತಿ ಸುಧಾರಿಸಲು ಸಹಾಯಕ : ಸಮಾನ ನಾಗರಿಕ ಕಾನೂನು ಸಂವಿಧಾನದ ‘ಸಾರ್ವಭೌಮ ಕಾನೂನಿನ ಜೊತೆಗೆ ವೈಯಕ್ತಿಕ ಕಾನೂನಿನ ಸಂಘರ್ಷವನ್ನು ನಿವಾರಿಸಲಿದೆ. ಸಮಾನ ನಾಗರಿಕ ಕಾನೂನನ್ನು ಜ್ಯಾರಿಗೊಳಿಸಲು ಮುಸಲ್ಮಾನ ಮೌಲ್ವಿಗಳಿಂದ (ಇಸ್ಲಾಮ್‌ನ ಧಾರ್ಮಿಕ ಮುಖಂಡರಿಂದ) ಮುಖ್ಯ ವಿರೋಧ ಇದೆ. ಅವರು ಮುಸಲ್ಮಾನ ಮಹಿಳೆಯ ಮೇಲೆ ಹಳೆಯ ಕಾನೂನನ್ನು ಹೇರುವುದನ್ನು ಸಮರ್ಥಿಸುತ್ತಾರೆ. ಸಮಾನ ನಾಗರಿಕ ಕಾನೂನು ಮಹಿಳೆಯರಿಗೆ ಹೆಚ್ಚು ಅಧಿಕಾರ ವನ್ನು ನೀಡುವುದು ಹಾಗೂ ಭೇದಭಾವ ಮಾಡುವ ಸ್ತ್ರೀದ್ವೇಷಿ ವೈಯಕ್ತಿಕ ಕಾನೂನುಗಳಿಂದ ಅವರನ್ನು ಮುಕ್ತಗೊಳಿಸುವುದು. ಆದ್ದರಿಂದ ಒಂದು ಸಮಾನ ನಾಗರಿಕ ಕಾನೂನು ಭಾರತದಲ್ಲಿ ಮಹಿಳೆ, ವಿಶೇಷವಾಗಿ ಅಲ್ಪಸಂಖ್ಯಾತ ಸಮಾಜದ ಮಹಿಳೆಯರ ಸ್ಥಿತಿ ಸುಧಾರಿಸಲು ಸಹಾಯ ಮಾಡಲಿದೆ.

೩ ಉ. ಜಾತ್ಯತೀತವಾದಕ್ಕೆ ಪ್ರೋತ್ಸಾಹ : ಎಲ್ಲ ಭಾರತೀಯರಿಗೆ ಕಾನೂನಿನೆದುರು ಸಮಾನತೆ ಸಿಗಬೇಕಾದರೆ ಸಮಾನ ನಾಗರಿಕ ಕಾನೂನು ಇದು ಏಕೈಕ ಮಾರ್ಗವಾಗಿದೆ. ದೇಶದಲ್ಲಿ ಎಲ್ಲ ನಾಗರಿಕರೊಂದಿಗೆ ಸಮಾನ ಕಾನೂನಿನನ್ವಯ ವರ್ತಿಸಬೇಕು. ವಿವಾಹ, ವಿಚ್ಚೇದನೆ, ಪಾಲುದಾರಿಕೆ, ಕುಟುಂಬ, ಭೂಮಿಹಕ್ಕು ಇತ್ಯಾದಿಗಳ ಕಾನೂನು ಎಲ್ಲ ಭಾರತೀಯರಿಗೆ ಸಮಾನ ಹಾಗೂ ಒಂದೇ ರೀತಿಯದ್ದಾಗಿರಬೇಕು. ಜಾತ್ಯತೀತ ರಾಷ್ಟ್ರದಲ್ಲಿ ಕಾನೂನುಗಳು ಧರ್ಮ-ವಿಶಿಷ್ಟವಾಗಿರದೆ ದೇಶ-ವಿಶಿಷ್ಟವಾಗಿರಬೇಕು, ಎಂಬುದು ಮಹತ್ವದ್ದಾಗಿದೆ. ಸಮಾನ ನಾಗರಿಕ ಕಾನೂನು ಜಾತ್ಯತೀತವಾದವನ್ನು ಪ್ರೋತ್ಸಾಹಿಸಿದರೂ ಜನರಿಗೆ ಧರ್ಮಾಚರಣೆಗೆ ಅಡ್ಡಿ ಪಡಿಸುವುದಿಲ್ಲ. ಪ್ರತಿಯೊಬ್ಬರನ್ನೂ ಸಮಾನ ಕಾನೂನಿನ ಅಂತರ್ಗತ ನಡೆಸಿಕೊಳ್ಳಲಾಗುವುದು. ಹಾಗೂ ಭಾರತದ ಎಲ್ಲ ನಾಗರಿಕರು ಧರ್ಮವನ್ನು ಲೆಕ್ಕಿಸದೆ ಸಮಾನ ಕಾನೂನಿನ ಪಾಲನೆ ಮಾಡಬೇಕಾಗುವುದು. ‘ಬಹುಸಂಖ್ಯಾತವಾದದ ಹಾಗೆ ‘ಅಲ್ಪಸಂಖ್ಯಾತವಾದವೂ ಅಪಾಯಕಾರಿ ‘ಟ್ರೆಂಡ್ ಆಗಿದೆ. ಅಲ್ಪಸಂಖ್ಯಾತರಿಗೆ ಯಾವ ಕಾನೂನುಪ್ರಕಾರ ಆಡಳಿತ ನಡೆಸಲಿಕ್ಕಿದೆಯೋ, ಅದನ್ನು ಆರಿಸುವ ಅನುಮತಿ ನೀಡಬಾರದು. ನಿರ್ದಿಷ್ಠ ವೈಯಕ್ತಿಕ ಕಾನೂನುಗಳ ಅನೇಕ ನಿಬಂಧನೆಗಳು ಸಾರ್ವತ್ರಿಕವಾಗಿ ಗುರುತಿಸಲ್ಪಟ್ಟ ಮಾನವಹಕ್ಕನ್ನು ಉಲ್ಲಂಘಿಸುತ್ತವೆ. ಸಮಾನ ನಾಗರಿಕ ಕಾನೂನು ಜಾತ್ಯತೀತತೆಯನ್ನು ವಿರೋಧಿಸುವುದಿಲ್ಲ; ಏಕೆಂದರೆ ಪರಿಚ್ಛೇದ ೨೫ ಮತ್ತು ೨೬ ಇವುಗಳು ಧಾರ್ಮಿಕ ಸ್ವಾತಂತ್ರ್ಯದ ಭರವಸೆ ನೀಡುತ್ತವೆ ಹಾಗೂ ಪರಿಚ್ಛೇದ ೨೯ ಮತ್ತು ೩೦ ಅಲ್ಪಸಂಖ್ಯಾತರಿಗೆ ವಿಶೇಷ ವಿಶೇಷಾಧಿಕಾರಗಳನ್ನು ನೀಡುತ್ತದೆ.

೩ ಊ. ಮುಸಲ್ಮಾನ ಮಹಿಳೆಯರ ರಕ್ಷಣೆ : ‘ಮುಸ್ಲಿಮ್ ವೈಯಕ್ತಿಕ ಕಾನೂನು ಹಾಗೂ ಅದರಲ್ಲಿನ ನಿಬಂಧನೆಗಳಿಂದಾಗಿ ಮುಸಲ್ಮಾನ ಮಹಿಳೆಯರ ಜೀವನ ಬಹಳ ಹದಗೆಟ್ಟಿದೆ. ಅವರ ವೈವಾಹಿಕ ಜೀವನವು ವ್ಯಾವಹಾರಿಕ ದೃಷ್ಟಿಯಲ್ಲಿ ಕೇವಲ ಅವರ ಪತಿಯ ದಯೆಯ ಮೇಲಾಧರಿಸಿದೆ. ಸಮಾನ ನಾಗರಿಕ ಕಾನೂನು ಇಲ್ಲದ ಕಾರಣ ಶಾಹಬಾನೊಳಂತಹ ಸ್ತ್ರೀಯರು ತಮ್ಮ ಖಟ್ಲೆಗಳೊಂದಿಗೆ ಪ್ರತಿಷ್ಠೆಯನ್ನು ಗೆದ್ದುಕೊಂಡರೂ ಪುನಃ ಕಳೆದುಕೊಳ್ಳುತ್ತಾರೆ. ನ್ಯಾಯಕ್ಕಾಗಿ ಹೋರಾಡುವಾಗ ಬಡ ಮಹಿಳೆಯರು ಜೀವಮಾನವಿಡೀ ಕಷ್ಟವನ್ನು ಸಹಿಸದಂತೆ ಸಮಾನ ನಾಗರಿಕ ಕಾನೂನು ಕಾಳಜಿ ವಹಿಸುತ್ತದೆ.

೩ ಎ. ಪುನಃ ವಿಭಜನೆಯಾಗದಂತೆ ದೇಶವು ರಕ್ಷಿಸಲ್ಪಡುವುದು : ಶಾಲೆ, ಮಹಾವಿದ್ಯಾಲಯಗಳು ಹಾಗೂ ಕೆಲಸದ ಸ್ಥಳದಲ್ಲಿ ಬುರ್ಖಾ ಧರಿಸುವ ‘ಹಕ್ಕಿನ ಹೋರಾಟವನ್ನು ನಾವು ನೋಡುತ್ತೇವೆ. ಅದರಿಂದ ಅಧ್ಯಯನದ ಸಂಪೂರ್ಣ ವಾತಾವರಣ ಕೆಡುತ್ತದೆ. ಶಾಲೆಗಳಲ್ಲಿ ಸಮಾನತೆ ಹಾಗೂ ಸಮಾನತೆಯ ಭಾವನೆಗಾಗಿ ಸಮವಸ್ತ್ರ ಹಾಗೂ ‘ಏಕರೂಪತೆಯ ಅವಶ್ಯಕತೆಯಿರುವಾಗ, ಅಲ್ಲಿ ಮೂಲಭೂತವಾದಿಗಳು ತಮ್ಮ ಧಾರ್ಮಿಕ ಕುರುಹನ್ನು ಸಂಪೂರ್ಣ ಮೈಮೇಲೆ ಹಾಕಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಪ್ರವೃತ್ತಿ ಅತ್ಯಂತ ಅಪಾಯಕಾರಿಯಾಗಿದೆ; ಏಕೆಂದರೆ, ಇಂತಹ ಎಲ್ಲ ಬೇಡಿಕೆಗಳಿಗೆ ಅಂತ್ಯವಿಲ್ಲ. ಕಲಮ್ ೧೫ ಮತ್ತು ೨೫ ರಿಂದ ೩೦ ರ ಅಂತರ್ಗತ ಧರ್ಮ ಪಾಲನೆಯ ಸ್ವಾತಂತ್ರ್ಯದ ಹೆಸರಿನಲ್ಲಿ ಕರ್ನಾಟಕದಲ್ಲಿನ ಮುಸಲ್ಮಾನ ಹುಡುಗಿಯರು ತರಗತಿಯಲ್ಲಿ ಬುರ್ಖಾ ಧರಿಸುವ ‘ಸ್ವಾತಂತ್ರ್ಯ ಕೇಳುತ್ತಿದ್ದಾರೆ. ‘ವೈಯಕ್ತಿಕ ಕಾನೂನಿನ ಇಂತಹ ಬೇಡಿಕೆಗಳು ಕೊನೆಯಿಲ್ಲದ ಬೇಡಿಕೆಗಳಿಗೆ ಜನ್ಮ ನೀಡುತ್ತವೆ. ಆದ್ದರಿಂದ ಕೊನೆಗೆ ದೇಶ ವಿಭಜನೆಯಾಗುತ್ತದೆ.

೪. ಮೊದಲಿನಿಂದಲೇ ಸಮಾನ ನಾಗರಿಕ ಕಾನೂನು ಇರುವ ಬಹುಧಾರ್ಮಿಕ ಗೋವಾ

ಏಕಸಮಾನ ಸಂಹಿತೆ ಹಾಗೂ ವಿವಿಧ ವೈಯಕ್ತಿಕ ಕಾನೂನು ಗಳ ಏಕತ್ರೀಕರಣವು ಹೆಚ್ಚು ಸುಸಂಬದ್ಧವಾದ ಕಾನೂನು ವ್ಯವಸ್ಥೆಯನ್ನು ರಚಿಸುತ್ತದೆ. ಅದರಿಂದ ಇಂದಿನ ಗೊಂದಲಗಳು ಕಡಿಮೆಯಾಗಿ ನ್ಯಾಯಾಲಯಗಳಿಂದ ಕಾನೂನುಗಳ ಸುಲಭ ಹಾಗೂ ಹೆಚ್ಚು ಪರಿಣಾಮಕಾರಿ ಆಡಳಿತವಿರಲಿದೆ. ಗೋವಾದಲ್ಲಿ ಪ್ರಾರಂಭದಿಂದಲೇ ಸಮಾನ ನಾಗರಿಕ ಕಾನೂನು ಇದೆ ಹಾಗೂ ಅದು ಗೋವಾದ ಬಹುಧಾರ್ಮಿಕ ಸಮಾಜದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.

೫. ದೇಶದ ಪ್ರಗತಿಗಾಗಿ ಕಾಲಾನುಸಾರ ಕಾನೂನು ರೂಪಿಸುವುದು ಆವಶ್ಯಕ !

ಪರಿವರ್ತನೆಯು ನಿಸರ್ಗದ ಬದಲಾಯಿಸಲಾಗದ ನಿಯಮವಾಗಿದೆ ಎಂಬುದೇ ಇದರ ನಿಷ್ಕರ್ಷವಾಗಿದೆ. ಈ ಸಿದ್ಧಾಂತ ವಿಕಸನಶೀಲ ಮಾನವ ಸಂಸ್ಕೃತಿಗೂ ಅನ್ವಯ ವಾಗುತ್ತದೆ. ಯಾವುದೇ ಕಾನೂನು ಯಾವುದೇ ಸಮಾಜ ಅಥವಾ ಸಮೂಹಕ್ಕೆ ದೀರ್ಘಕಾಲ ಆದರ್ಶವಾಗಿರಲು ಸಾಧ್ಯವಿಲ್ಲ. ಸಮಯ ಮತ್ತು ಸ್ಥಳದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಅದರಲ್ಲಿ ಪರಿವರ್ತನೆ ಮಾಡುವುದು ಆವಶ್ಯಕವಾಗಿದೆ. ಆದ್ದರಿಂದ ಅನೇಕ ಶತಮಾನಗಳ ಹಿಂದೆ ಮಾಡಿದ ವೈಯಕ್ತಿಕ ಕಾನೂನನ್ನು ಮುಂದುವರಿಸುವಂತಹ ಎಲ್ಲ ಆಗ್ರಹಗಳು ಮತಾಂಧತೆಯೇ ಹೊರತು ಬೇರೇನಲ್ಲ. ಅದರಿಂದ ಅನುಯಾಯಿಗಳ ಜೀವನ ದಯನೀಯವಾಗಿದೆ. ಮುಂದುವರಿದ ಸಮಾಜವು ಕಾನೂನನ್ನು ರೂಪಿಸುತ್ತದೆ ಹಾಗೂ ಮುರಿಯುತ್ತದೆ. ಜಗತ್ತಿನ ಅನೇಕ ದೇಶಗಳು ತಮ್ಮ ಸಂವಿಧಾನವನ್ನು ಅನೇಕ ವೇಳೆ ಬದಲಾಯಿಸಿವೆ. ನಾಗರಿಕ ಕಾನೂನಿನ ವಿಷಯ ಬಿಡಿ. ಕಡಿಮೆಪಕ್ಷ ಎರಡು ವರ್ಗಗಳಿಗೆ ಎರಡು ರೀತಿಯ ನಿಯಮವಿರಬಾರದು. ಇಂತಹ ವ್ಯವಸ್ಥೆ ಯಿಂದ ಸಮಾಜದಲ್ಲಿ ಅನೇಕ ಗೊಂದಲಗಳು ಸೃಷ್ಟಿಯಾಗುತ್ತದೆ. ಬಹಳಷ್ಟು ಜನರು ಕೇವಲ ಒಂದೇ ಕಾರಣಕ್ಕಾಗಿ ಇಸ್ಲಾಮ್ ಸ್ವೀಕರಿಸಿದ್ದಾರೆ. ಅವರ ಕಾನೂನು ಪ್ರಕಾರ ವಿವಾಹಿತ ಮೊದಲ ಪತ್ನಿಯನ್ನು ಬಿಟ್ಟು ಇನ್ನೊಂದು ವಿವಾಹವಾಗುವುದೇ ಇದರ ಹಿಂದಿನ ಕಾರಣವಾಗಿದೆ. ಕಾನೂನು ಪ್ರಕಾರ ಮೂರು ಪತ್ನಿಯರನ್ನಿಟ್ಟುಕೊಳ್ಳಲು ಅನೇಕರು ಇಸ್ಲಾಮ್ ಧರ್ಮ ಸ್ವೀಕರಿಸಿದ್ದಾರೆ. ಬಹಳಷ್ಟು ಪ್ರಗತಿ ಹೊಂದಿದ ಹಾಗೂ ಪ್ರಗತಿಶೀಲ ಸಮಾಜದಲ್ಲಿ ಸಮಾನ ನಾಗರಿಕ ಕಾನೂನು ಇದೆ ಹಾಗೂ ಭಾರತದಲ್ಲಿಯೂ ಅದು ಇರಬೇಕು.

– ಮೇಜರ್ ಸರಸ ತ್ರಿಪಾಠಿ (ನಿವೃತ್ತ), ಗಾಝಿಯಾಬಾದ್ ಉತ್ತರಪ್ರದೇಶ. (೨೮.೬.೨೦೨೩)