ಹಿಂದೂಗಳಲ್ಲಿ ಭೇದಭಾವವನ್ನು ಮಾಡುವುದೇ ಮಣಿಪುರ ರಾಜ್ಯದ ಹಿಂಸಾಚಾರಕ್ಕೆ ಮೂಲ ಕಾರಣ !

ಮಣಿಪುರ ಹಿಂಸಾಚಾರದ ಒಂದು ಛಾಯಾಚಿತ್ರ

ಭಾರತದ ಈಶಾನ್ಯ ಭಾಗದ ರಾಜ್ಯಗಳಲ್ಲಿ ಅಶಾಂತಿ ಮತ್ತು ಮತೀಯ ಸಂಘರ್ಷ ನಿರಂತರವಾಗಿ ನಡೆಯುವ ಒಂದು ವಿಷಯವಾಗಿದೆ. ಮಣಿಪುರ ರಾಜ್ಯದ ಮೇಲೆ ಮತ್ತೊಮ್ಮೆ ಮತೀಯ ಸಂಘರ್ಷದ ಕರಿನೆರಳು ಆವರಿಸಿದೆ. ಪ್ರಥಮವಾಗಿ ಸದ್ಯದ ಸ್ಥಿತಿಯಲ್ಲಿ ಈ ಸಂಘರ್ಷದ ಕಿಡಿ ಎಲ್ಲಿಂದ ಹೊತ್ತಿತು ? ಎನ್ನುವುದನ್ನು ತಿಳಿದುಕೊಳ್ಳಬೇಕು.

೨೪/೪೪ ನೇ ಸಂಚಿಕೆಯಲ್ಲಿ ಮುದ್ರಣವಾದ ಲೇಖನದಲ್ಲಿ ‘ಹಿಂಸೆ ಮತ್ತು ಸಂಘರ್ಷದ ಕಾರಣ ಇದರಲ್ಲಿ ‘ಅನುಸೂಚಿತ ಜಾತಿಪಂಗಡದ ಸೂಚಿಯಲ್ಲಿ ‘ಮೈತೇಯಿ ಜನರನ್ನು ಸೇರಿಸುವ ವಿಷಯದಲ್ಲಿ ಮಣಿಪುರ ಉಚ್ಚನ್ಯಾಯಾಲಯದ ಆದೇಶ, ಅಮಲಿನ ಪದಾರ್ಥ ಮತ್ತು ಅಫೀಮಿನ ಕೃಷಿಯ ವಿರುದ್ಧ ಸರಕಾರವು ಪ್ರಾರಂಭಿಸಿರುವ ಚಳುವಳಿ ಸಂಘರ್ಷದ ಎರಡನೇ ಕಾರಣ ಈ ಭಾಗವನ್ನು ಓದಿದ್ದೀರಿ.

೨೪/೪೪ ನೇ ಸಂಚಿಕೆಯಲ್ಲಿ ಮುದ್ರಣವಾದ ಲೇಖನವನ್ನು ಓದಲು ಕ್ಲಿಕ್ ಮಾಡಿ :

https://sanatanprabhat.org/kannada/93619.html

ಇಂದು ಈ ಲೇಖನದ ಅಂತಿಮ ಭಾಗವನ್ನು ಇಲ್ಲಿ ನೀಡುತ್ತಿದ್ದೇವೆ.

ಮೇಜರ ಸರಸ ತ್ರಿಪಾಠಿ

೧. ಹಿಂಸೆ ಮತ್ತು ಸಂಘರ್ಷದ ಕಾರಣ

೧. ಇ. ಪ್ರತ್ಯೇಕತಾವಾದಿ ಸಂಘಟನೆಯ ಮುಖಂಡ ಮಾರ್ಕ ಟಿ ಹಾಓಕಿಪ್‌ನ ಬಂಧನ : ನಾಲ್ಕನೇಯ ಕಾರಣವೆಂದರೆ ೨೪ ಮೇ ೨೦೨೩ ರಂದು ಮೈತೆಯಿ ಮತ್ತು ಕುಕಿ ಸಮುದಾಯದ ನಡುವಿನ ಸಂಘರ್ಷವನ್ನು ಬೆಂಬಲಿಸುವ ಮಾರ್ಕ ಟಿ. ಹಾಒಕಿಪ್‌ನನ್ನು ಬಂಧಿಸಲಾಯಿತು. ಮಾರ್ಕ ಟಿ. ಹಾಒಕಿಪ್ ಮೇಲೆ ಕುಕಿ ಸಮುದಾಯಕ್ಕಾಗಿ ಮಾತೃಭೂಮಿ ಸ್ಥಾಪಿಸಲು ರಾಜ್ಯದ ವಿರುದ್ಧ ಯುದ್ಧ ಮಾಡಿದ ಆರೋಪವಿತ್ತು. ೩೭ ವರ್ಷದ ಮಾರ್ಕ ‘ಕುಕಿಲ್ಯಾಂಡ ಪೀಪಲ್ಸ ಡೆಮಾಕ್ರೆಟಿಕ್ ರಿಪಬ್ಲಿಕ್ ಈ ಪ್ರತ್ಯೇಕತಾವಾದಿ ಸಂಘಟನೆಯ ಮುಖಂಡನಾಗಿದ್ದಾನೆ, ಹಾಗೆಯೇ ಮಣಿಪುರ ಮತ್ತು ಮ್ಯಾನಮಾರನಲ್ಲಿರುವ ‘ಅಂತರ ರಾಷ್ಟ್ರೀಯ ಮಾನವಾಧಿಕಾರ ಸಂಘದ ರಾಜ್ಯಾಧ್ಯಕ್ಷನಾಗಿದ್ದಾನೆ. ಬಹುತೇಕ ಮೈತೇಯಿ ಜನರು ಈ ಸಂಘಟನೆಯನ್ನು ರಾಷ್ಟ್ರ ವಿರೋಧಿ ಸಂಘಟನೆಯೆಂದು ತಿಳಿಯುತ್ತಾರೆ.

೧. ಉ. ಚುರಾಚಂದಪುರ ಖೌಪುಮ ಎಂಬ ಮೀಸಲು ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ವಸತಿಗಳನ್ನು ತೆರವುಗೊಳಿಸುವುದು, ಇದು ಐದನೇ ಕಾರಣ : ಅಗಸ್ಟ ೨೦೨೨ ರಲ್ಲಿ ಸರಕಾರ ಜಾರಿ ಗೊಳಿಸಿದ ಅಧಿಸೂಚನೆಯ ಕಾರಣದಿಂದ ಕುಕಿ ಸಮುದಾಯ ಅಸಮಾಧಾನ ಗೊಂಡಿತು. ಈ ಅಧಿಸೂಚನೆಯಲ್ಲಿ ಚುರಾಚಂದ ಪುರ ಖೌಪುಮ ಎಂಬ ಮೀಸಲು ಅರಣ್ಯಪ್ರದೇಶದಲ್ಲಿ ೩೮ ಗ್ರಾಮ ಗಳನ್ನು ಅನಧಿಕೃತವೆಂದು ಹೇಳಲಾಗಿದೆ. ೧೯೭೦ ರ ದಶಕದಲ್ಲಿ ಅರಣ್ಯಕ್ಷೇತ್ರ ಸಂರಕ್ಷಕ ಅಧಿಕಾರಿಗಳು ಈ ೩೮ ಗ್ರಾಮಗಳ ಜನರನ್ನು ಮೀಸಲು ಅರಣ್ಯಪ್ರದೇಶದಿಂದ ಹೊರಗೆ ಕಳಿಸಿದರು. ಹಿಂದಿನ ನವೆಂಬರ ತಿಂಗಳಿನಲ್ಲಿ ಮುಖ್ಯಮಂತ್ರಿಗಳು ಈ ಆದೇಶವನ್ನು ರದ್ದುಗೊಳಿಸಿದರು. ಆಗ ಅವರು ‘ಮಣಿ ಪುರದ ಸುಮಾರು ಶೇ. ೧೯ ರಷ್ಟು ಪ್ರದೇಶ ಮೀಸಲು ಅರಣ್ಯಪ್ರದೇಶವಾಗಿದೆ ಮತ್ತು ಈ ಮೀಸಲು ಅರಣ್ಯಪ್ರದೇಶದಲ್ಲಿ ಅನಧಿಕೃತ ವಸತಿಗಳಿವೆ. ಈ ಅನಧಿಕೃತ ಅತಿಕ್ರಮಣಕಾರಿಗಳನ್ನು ನಾವು ತೆರವುಗೊಳಿಸುತ್ತಿದ್ದೇವೆ ಎಂದು ಹೇಳಿದರು.

೨. ಮಣಿಪುರದಲ್ಲಿ ಅಶಾಂತಿಯನ್ನು ಹರಡುವಲ್ಲಿ ಚೀನಾದ ಕೈವಾಡವಿರುವ ಸಾಧ್ಯತೆ ಹೊರಗಿನ ಶಕ್ತಿಗಳ ಹಸ್ತಕ್ಷೇಪ ಈ ಪ್ರದೇಶದ ಸಂಪೂರ್ಣ ಅಶಾಂತಿಯ ಒಂದು ಮಹತ್ವದ ಕಾರಣವಾಗಿದೆ. ಮಣಿಪುರದಲ್ಲಿ ಅಶಾಂತಿಯನ್ನು ಹರಡುವಲ್ಲಿ ವಿದೇಶಿಗಳ ಕೈವಾಡವಿದೆಯೇ ? ಎಂದರೆ, ಗುಪ್ತಚರ ಇಲಾಖೆಯ ಹೇಳಿಕೆಯಂತೆ ಇದರ ಉತ್ತರ‘ ಹೌದು ಎಂದಾಗಿದೆ. ಸೇನೆ ಮತ್ತು ಭಾರತೀಯ ಗುಪ್ತಚರ ಇಲಾಖೆಗಳು ಇದರಲ್ಲಿ ವಿದೇಶಿ ಶಕ್ತಿಗಳ ಸಂಬಂಧವಿದೆಯೆಂದು ದೃಢವಾಗಿ ಹೇಳಿದೆ ಮತ್ತು ಈಶಾನ್ಯ ರಾಜ್ಯಗಳಲ್ಲಿ ಈ ಸಂಕಟವನ್ನು ಹೆಚ್ಚಿಸುವುದರಲ್ಲಿ ಚೀನಾದ ಹೆಚ್ಚುತ್ತಿರುವ ಸಹಭಾಗದ ವಿಷಯ ದಲ್ಲಿ ಎಚ್ಚರಿಕೆಯನ್ನು ನೀಡಿದೆ. ಸೂತ್ರಗಳನುಸಾರ ‘ಆಪರೇಶನ ಸನರೈಸ್ ಯಶಸ್ವಿಯಾದ ಬಳಿಕ ಚೀನಾವು ಭಾರತ-ಮ್ಯಾನಮಾರ ನಡುವಿನ ಸಂಬಂಧವನ್ನು ಕೆಡಿಸಲು ಮತ್ತು ಈ ಕ್ಷೇತ್ರದಲ್ಲಿ ದಂಗೆಕೋರ ಜನರ ಜಾಲವನ್ನು ಹರಡಲು ಚಡ ಪಡಿಸುತ್ತಿದೆ. ೨೦೧೯ ರಲ್ಲಿ ಭಾರತ ಮತ್ತು ಮ್ಯಾನಮಾರ ಸೈನ್ಯಗಳು ಈಶಾನ್ಯ ಭಾಗದಲ್ಲಿ ಸಕ್ರಿಯವಾಗಿರುವ ಬಂಡುಕೋರ ಗುಂಪುಗಳ ನೆಲೆಗಳನ್ನು ಗುರಿ ಮಾಡಿ ಮ್ಯಾನಮಾರ ಗಡಿಯಲ್ಲಿ ಸಂಯುಕ್ತವಾಗಿ ಚಳುವಳಿ ಪ್ರಾರಂಭಿಸಿದ್ದವು. ಭಾರತ ಮತ್ತು ಮ್ಯಾನಮಾರ ಇವೆರಡೂ ದೇಶಗಳಿಗೆ ತೊಂದರೆ ನೀಡುವ ಈ ಭಯೋತ್ಪಾದಕ ಗುಂಪುಗಳನ್ನು ನಾಶಗೊಳಿಸುವುದು, ಈ ರಣನೀತಿಯ ಉದ್ದೇಶವಾಗಿತ್ತು. ಈಶಾನ್ಯ ರಾಜ್ಯಗಳಲ್ಲಿ ಅಸ್ಥಿರತೆ ಯನ್ನುಂಟು ಮಾಡಲು ಚೀನಾವು ಎಂತಹ ರಣನೀತಿಯನ್ನು ರಚಿಸಿದೆಯೆಂದರೆ, ಈಗ ಲಡಾಖನ ಗಡಿರೇಖೆಯಲ್ಲಿ ಚೀನಾದ ಸವಾಲನ್ನು ಎದುರಿಸುತ್ತಿರುವ ಭಾರತೀಯ ಸೇನೆಯನ್ನು ಅಲ್ಲಿಂದ ಈಶಾನ್ಯ ರಾಜ್ಯಗಳಲ್ಲಿ ತೊಡಗಿಸುವುದು. ಭಾರತವನ್ನು ಬದಿಗೊತ್ತಿ ಮ್ಯಾನಮಾರ ಮತ್ತು ಬಾಂಗ್ಲಾದೇಶ ಈ ಮಾರ್ಗ ದಿಂದ ಬಂಗಾಳದ ಸಮುದ್ರ ದಡದ ವರೆಗೆ ವ್ಯಾಪಾರಿ ಮಾರ್ಗ ವನ್ನು ಅಭಿವೃದ್ಧಿಪಡಿಸುವುದು ಚೀನಾದ ಇಚ್ಛೆಯಾಗಿದೆ.

ಕುಪ್ರಸಿದ್ಧ ‘ಗೋಲ್ಡನ್ ಟ್ರಯಾಂಗಲ್ ನಿಂದ (ಥೈಲ್ಯಾಂಡ, ಲಾವೋಸ ಮತ್ತು ಮ್ಯಾನಮಾರ ದೇಶಗಳ ಗಡಿಯಲ್ಲಿ ರೂಆಕ ಮತ್ತು ಮೆಕಾಂಗ ನದಿಯ ಸಂಗಮದ ಸ್ಥಳ) ಈಶಾನ್ಯ ರಾಜ್ಯಗಳಲ್ಲಿ ಅಮಲು ಪದಾರ್ಥ ಮತ್ತು ಮದ್ಯ ಸರಬರಾಜು ಮಾಡುವುದರಲ್ಲಿ ಚೀನಾದ ಕೈವಾಡವಿದೆಯೆಂದು ಹೇಳಲಾಗುತ್ತಿದೆ ಮತ್ತು ಚೀನಾವು ಮ್ಯಾನಮಾರ ಸೇನೆಗೆ ಅದನ್ನು ಪೂರೈಸುತ್ತಿದೆ. ಇದಲ್ಲದೇ ಬಂಡುಕೋರ ಪ್ರದೇಶವನ್ನು ಅಸ್ಥಿರವಾಗಿರಿಸಲು ಚೀನಾ ಸಕ್ರಿಯವಾಗಿದೆ. ಮ್ಯಾನಮಾರನ ಕಾಚಿನ ರಾಜ್ಯದಲ್ಲಿ ಮ್ಯಾನಮಾರ ಸೇನೆ ‘ಕಾಚಿನ ಇಂಟಿಗ್ರೇಟೆಡ್ ಫೋರ್ಸ ವಿರುದ್ಧ ಹೋರಾಡುತ್ತಿದೆ. ಈ ಎರಡೂ ಗುಂಪು ಗಳಿಗೆ ಚೀನಾ ಆರ್ಥಿಕ ಸಹಾಯ ನೀಡುತ್ತಿದೆ. ಈಶಾನ್ಯ ಭಾರತದಲ್ಲಿ ಕಾಚಿನ ಆದಿವಾಸಿಗಳ ನುಸುಳುವಿಕೆಯಲ್ಲಿ ಚೀನಾ ಸಹಾಯ ಮಾಡಿದೆ. ಅದರಲ್ಲಿ ಬಹುತೇಕ ಜನರು ಅಮಲು ಪದಾರ್ಥ ಮತ್ತು ಇನ್ನಿತರ ‘ಕಂಟ್ರಾಬ್ಯಾನಡ್” (ನಿಷೇಧಿತ ಶಸ್ತ್ರ) ಶಸ್ತ್ರಾಸ್ತ್ರಗಳೊಂದಿಗೆ ಭಾರತದಲ್ಲಿ ನುಸುಳಿದ್ದಾರೆ. ಭಾರತೀಯ ಸೇನೆಯ ಸೂತ್ರಗಳನುಸಾರ ‘ಭಾರತದಲ್ಲಿ ಗಲಭೆಯನ್ನು ಹರಡಲು ಚೀನಾ ದಕ್ಷಿಣ ಮ್ಯಾನಮಾರದಲ್ಲಿ ‘ಪಿ.ಡಿ.ಎಫ್. ಸಂಘಟನೆಗೆ ಆರ್ಥಿಕ ಸಹಾಯ ಮಾಡುತ್ತಿದೆ. ಚುರಾಚಂದಪುರದಲ್ಲಿ ಸಾವುನೋವು ಆಗಿರುವ ಸ್ಥಳದಲ್ಲಿ ಚೀನಿ ತಯಾರಿಕೆಯ ಶಸ್ತ್ರಾಸ್ತ್ರಗಳನ್ನು ವಶ ಪಡಿಸಿಕೊಳ್ಳಲಾಗಿತ್ತು. ಅಮೇರಿಕೆಯ ಒಂದು ಪ್ರಸಿದ್ಧ ದಿನಪತ್ರಿಕೆಯ ವರದಿಗನುಸಾರ ಚೀನಾ ಮ್ಯಾನಮಾರನ್ನು ಅಸ್ಥಿರಗೊಳಿಸಿ, ಭಾರತವಿರೋಧಿ ಕೃತ್ಯ ಗಳ ಕೇಂದ್ರವಾಗಿ ಬದಲಾಯಿಸಲು ಇಚ್ಛಿಸುತ್ತಿದೆ. ಪಾಕಿಸ್ತಾನದ ವಿಷಯದಲ್ಲಿ ಚೀನಾ ಇದನ್ನು ಮಾಡಿದೆ. ಮ್ಯಾನಮಾರದಲ್ಲಿ ಅಧಿಕಾರ ಬದಲಾವಣೆ ಮಾಡುವಲ್ಲಿ ಚೀನಾದ ಕೈವಾಡವಿರುವುದು ಸ್ಪಷ್ಟವಾಗಿದೆ. ಈ ವಿಷಯದಲ್ಲಿ ಮ್ಯಾನಮಾರ ನಲ್ಲಿ ಪ್ರಜಾಪ್ರಭುತ್ವ ಸರಕಾರ ಉರುಳಿದ ಬಳಿಕ ಚೀನಾ ಮಾಡುತ್ತಿರುವುದನ್ನು ನೋಡಿದರೆ ಈ ಸಾಧ್ಯತೆ ಅಧಿಕ ಪ್ರಮಾಣದಲ್ಲಿದೆ. ಇದರಿಂದ ‘ಭಾರತದಲ್ಲಿ ಆಗುವ ಸಶಸ್ತ್ರ ಬಂಡಾಯವನ್ನು ದೇಶದ ಗಡಿಯ ಹೊರಗಿನಿಂದ ಉದ್ರೇಕಗೊಳಿಸಲಾಗುತ್ತಿದೆ ಎನ್ನಬಹುದು.

೩. ಮೈತೇಯಿ ಜಾತಿಯ ಜನರಲ್ಲಿ ಅಸುರಕ್ಷತೆಯ ಭಾವನೆ ೨೦೨೧ ರಲ್ಲಿ ಪಕ್ಕದ ಮ್ಯಾನಮಾರನಲ್ಲಿ ಸೇನೆಯು ಅಧಿಕಾರದ ಚುಕ್ಕಾಣಿ ಹಿಡಿದ ಬಳಿಕ ಸಾಗೈಂಗ ಪ್ರದೇಶದಲ್ಲಿ ಆಶ್ರಯ ಬಯಸಿ ಬಂದಿರುವ ನಿರಾಶ್ರಿತರಿಗೆ ಕುಕಿ ಜನರೊಂದಿಗೆ ಇರುವ ಸಂಬಂಧದ ಕಾರಣದಿಂದ ಭಾರತದ ಮೈತೇಯಿ ಜಾತಿಯ ಜನರಲ್ಲಿ ಅಸುರಕ್ಷತೆಯ ಭಾವನೆ ಉಂಟಾಗಿದೆ. ಈ ಸಂಘರ್ಷದಲ್ಲಿ ಯಾರು ಬಂದೂಕು, ಅಮಲು ಪದಾರ್ಥಗಳು ಮತ್ತು ರಾಜಕಾರಣವನ್ನು ನಿಯಂತ್ರಿಸುವರೋ, ಆ ಜನರೇ ನಿರ್ಣಯವನ್ನು ತೆಗೆದುಕೊಳ್ಳಬಹುದು; ಆದರೆ ಇವೆರಡೂ ಜಾತಿಗಳ ಸಂಘರ್ಷವು ಎರಡೂ ಪಂಗಡಗಳ ಮಕ್ಕಳು ಮತ್ತು ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಸದದ ಸಂಘರ್ಷಮಯ ಸ್ಥಿತಿಯಲ್ಲಿ ಕೆಲವು ಜನರ ಉದ್ದೇಶದಂತೆ ವಿವಿಧ ಜಾತಿಯ ಸಮುದಾಯಗಳಿಗೆ ತಮ್ಮ ಸ್ವಂತ ಗುರುತನ್ನು ನಿರ್ಮಾಣ ಮಾಡಿಕೊಳ್ಳುವುದನ್ನೇ ಅಸ್ತ್ರ ಮಾಡಲಾಗಿದೆ.

೪. ಮಣಿಪುರ ಹಿಂಸಾಚಾರದ ಸದ್ಯದ ಸ್ಥಿತಿ ಮತ್ತು ಆಗಿರುವ ಹಾನಿ ಮೇ ೩, ೨೦೨೩ ರಿಂದ ಮಣಿಪುರದಲ್ಲಿ ಎರಡು ಸ್ಥಳೀಯ ಜಾತಿಗಳಾದ ‘ಮೈತೆಯಿ ಮತ್ತು ‘ಕುಕಿಗಳ ನಡುವೆ ಪದೇಪದೇ ಜಾತೀಯ ಸಂಘರ್ಷ ನಡೆಯುತ್ತಿದೆ. ರಾಜ್ಯದ ‘ನಾಗಾ ಎಂಬ ಪ್ರಮುಖ ಸಮುದಾಯ ಈ ಸಮಯದಲ್ಲಿ ತಟಸ್ಥವಾಗಿದೆ. ಈ ಹಿಂಸಾಚಾರದಲ್ಲಿ ೮೦ ಕ್ಕಿಂತ ಅಧಿಕ ಜನರು ಮರಣ ಹೊಂದಿದ್ದು, ಮನೆ ಮತ್ತು ಧಾರ್ಮಿಕ ಸ್ಥಳಗಳ ಸಹಿತ ಸುಮಾರು ೧ ಸಾವಿರ ೭೦೦ ಕಟ್ಟಡಗಳನ್ನು ಸುಡಲಾಗಿದೆ. ಸದ್ಯದ ಸ್ಥಿತಿಯಲ್ಲಿ ೩೫ ಸಾವಿರಕ್ಕಿಂತ ಅಧಿಕ ಜನರು ನಿರಾಶ್ರಿತ ರಾಗಿದ್ದಾರೆ. ರಾಜ್ಯದ ೩೧೫ ಸ್ಥಳಗಳಲ್ಲಿ ನಿರ್ಮಿಸಿದ ಶಿಬಿರ ಗಳಲ್ಲಿ ವಾಸಿಸುತ್ತಿದ್ದಾರೆ. ಈ ಸಂಘರ್ಷ ಹೆಚ್ಚಾದಂತೆಲ್ಲ ಈ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಈ ಬಗ್ಗೆ ರಾಜ್ಯ ಸರಕಾರದಿಂದ ಸಂಚಾರ ನಿರ್ಬಂಧದ ಆದೇಶ ನೀಡುವುದು, ಇಂಟರನೆಟ ಸೇವೆಯನ್ನು ಸ್ಥಗಿತಗೊಳಿಸುವುದು ಮುಂತಾದ ಪಾರಂಪಾರಿಕ ಉಪಾಯ ಯೋಜನೆಗಳನ್ನು ಮಾಡಲಾಗು ತ್ತಿದೆ. ಇದಲ್ಲದೇ ಸುಮಾರು ೧೭ ಸಾವಿರ ಸೈನಿಕರಿಗೆ ಮತ್ತು ಅರೆಸೇನಾ ಪಡೆಗಳಿಗೆ ಅತ್ಯಂತ ಕಠಿಣ ಪ್ರಸಂಗಗಳಲ್ಲಿ ‘ಕಂಡಲ್ಲಿ ಗುಂಡಿಕ್ಕುವ ಆದೇಶವನ್ನು ನೀಡಲಾಗಿದೆ.

೫. ಮಣಿಪುರ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಮೈತೆಯಿ ಸಮಾಜಕ್ಕೆ ಸಿಗುವ ಲಾಭ ಮಣಿಪುರ ಉಚ್ಚ ನ್ಯಾಯಾಲಯದ ಆದೇಶದ ಬಳಿಕ ಮೈತೆಯಿ ಸಮಾಜದವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದಲ್ಲಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬಳಿಕ ಈ ಹಿಂಸಾಚಾರ ಪ್ರಾರಂಭವಾಗಿದೆ. ಈ ನಿರ್ಣಯದಿಂದ ಮೈತೆಯಿ ಸಮಾಜದ ಜನರಿಗೆ ಪರಿಶಿಷ್ಟ ಜಾತಿ ಪಂಗಡಗಳ (ನಾಗಾ ಮತ್ತು ಕುಕಿ ಸಮಾಜದ ಜನರನ್ನು ಇದರಲ್ಲಿ ಈ ಮೊದಲೇ ಸೇರಿಸಲಾಗಿದೆ) ಸಿಗುವ ಪ್ರಯೋಜನಗಳನ್ನು ನೀಡಲು ಅನುಮತಿಸಲಾಗಿದೆ. ಇದರಿಂದ ಮೈತೆಯಿ ಪಂಗಡದ ಜನರಿಗೆ ಸರಕಾರದಲ್ಲಿ ಮೀಸಲಾತಿ ಮತ್ತು ಎಲ್ಲಕ್ಕಿಂತ ಮಹತ್ವದ್ದು ರಾಜ್ಯದಲ್ಲೆಡೆ ಭೂಮಿಯನ್ನು ಖರೀದಿಸಲು ಮತ್ತು ವಾಸಿಸಲು ಸಾಧ್ಯವಾಗಲಿದೆ. ರಾಜ್ಯದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿರುವ ಮೈತೆಯಿ ಜನರು ಇಲ್ಲಿಯವರೆಗೆ ರಾಜ್ಯದ ಒಟ್ಟು ಪ್ರದೇಶದಲ್ಲಿ ಶೇ. ೯೦ ರಷ್ಟು ಇರುವ ಆದಿವಾಸಿ ಪ್ರದೇಶದ ಭೂಮಿಯನ್ನು ಖರೀದಿಸಲು ಸಾಧ್ಯವಿರಲಿಲ್ಲ. ಬಹಳ ಕಾಲದಿಂದಲೂ ಮೈತೆಯಿ ಸಮಾಜದ ಜನರು ಇದಕ್ಕಾಗಿ ಮನವಿ ಮಾಡುತ್ತಿದ್ದರು.

೬. ಮಣಿಪುರ ಉಚ್ಚ ನ್ಯಾಯಾಲಯದ ಆದೇಶದಿಂದ ಹಿಂಸಾಚಾರ ಭುಗಿಲೆದ್ದಿರುವುದರ ಹಿಂದಿನ ಕಾರಣ ೩ ಮೇ ೨೦೨೩ ರಂದು ನ್ಯಾಯಾಲಯವು ತೀರ್ಪು ನೀಡಿದ ತಕ್ಷಣವೇ ಹಿಂಸಾಚಾರ ಪ್ರಾರಂಭವಾಯಿತು. ಕುಕಿ ಜನರು ಮೈತೆಯಿ ಸಮುದಾಯದವರ ಆಸ್ತಿಪಾಸ್ತಿಗಳನ್ನು ಸುಡು ವುದು, ಗಲಭೆ ಮತ್ತು ಧ್ವಂಸಗೊಳಿಸಲು ಪ್ರಾರಂಭಿಸಿದರು. ಉಚ್ಚ ನ್ಯಾಯಾಲಯದ ಆದೇಶ ಮತ್ತು ಕುಕಿಗಳು ನಡೆಸುತ್ತಿರುವ ಗಲಭೆಯೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೇಳಲು ಕಾರಣವೆಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಈ ಜಾತಿಗಳ ನಡುವಿನ ಬಿಗುವಿನ ವಾತಾವರಣ ಎಷ್ಟೋ ವರ್ಷಗಳಿಂದ ಹೆಚ್ಚುತ್ತಲೇ ಇದೆ. ಉದಾಹರಣೆಗೆ ಸದ್ಯದ ರಾಜ್ಯ ಸರಕಾರದಿಂದ ಸ್ಥಳೀಯ ಭೂಮಿ ಅಧಿಕಾರದ ವಿಷಯದ ಅಂಶಗಳನ್ನು ನಿರ್ವಹಿಸಲು ಪ್ರಮುಖವಾಗಿ ರಾಜಧಾನಿ ಇಂಫಾಲ ಕಣಿವೆಯ ಅಕ್ಕಪಕ್ಕದಲ್ಲಿರುವ ಗುಡ್ಡಗಾಡು ಪ್ರದೇಶದ ಕುಕೀ ಜನರನ್ನು ಗುರಿ ಮಾಡಲಾಗುತ್ತಿದೆಯೆಂದು ಹೇಳಲಾಗುತ್ತಿದೆ. ಗುಡ್ಡಗಾಡು ಪ್ರದೇಶದ ಅರಣ್ಯಕ್ಷೇತ್ರಗಳ ಸಮೀಕ್ಷೆ ಮಾಡುವ ನಿಮಿತ್ತದಿಂದ ಅಫೀಮು ಬೆಳೆಯ ಹೊಲಗಳನ್ನು ನಾಶಗೊಳಿಸಲು ಪ್ರಯತ್ನಿಸ ಲಾಯಿತು; ಆದರೆ ಇದರ ಪರಿಣಾಮವೆಂದರೆ ಕುಕಿ ಗ್ರಾಮದ ಜನರ ಅಧಿಕಾರವನ್ನು ಕಿತ್ತುಕೊಳ್ಳಲಾಗಿದೆ. ಈ ವಾದದ ಇನ್ನೊಂದು ಅಂಶವೆಂದರೆ ಭೂಮಿಯ ವಿಷಯದಲ್ಲಿ ಸಮತೋಲನವಿಲ್ಲದ ಅಧಿಕಾರ. ಮೈತೆಯಿ ಸಮುದಾಯದ ಜನರು ಗುಡ್ಡಗಾಡು ಪ್ರದೇಶದ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ; ಆದರೆ ಕುಕಿ ಮತ್ತು ಇತರೆ ಆದಿವಾಸಿಗಳು ಇಂಫಾಲ ಕಣಿವೆಯಲ್ಲಿ ಭೂಮಿಯನ್ನು ಖರೀದಿಸಬಹುದು.

೭. ‘೪೬ ಆಸ್ಸಾಂ ರೈಫಲ್ಸ್ ಕಮಾಂಡಿಂಗ ಆಫೀಸರ ಕರ್ನಲ ವಿಪ್ಲವ ತ್ರಿಪಾಠಿಯವರ ಹತ್ಯೆಯ ಹಿಂದಿನ ಕಾರಣ ಸೈನ್ಯದ ಒಂದು ವರದಿಯನುಸಾರ ‘೪೬ ಆಸ್ಸಾಂ ರೈಫಲ್ಸ ಕಮಾಂಡಿಂಗ ಆಫೀಸರ ಕರ್ನಲ ವಿಪ್ಲವ ತ್ರಿಪಾಠಿಯವರನ್ನು ಮಿಝೋರಾಂನಲ್ಲಿ ಅಮಲಿನ ಪದಾರ್ಥಗಳನ್ನು ನಿರ್ಬಂಧಿಸಿ ದುದರೆಂದು ಹತ್ಯೆ ಮಾಡಲಾಗಿತ್ತು. ೨೦೧೯-೨೦೨೦ ರಲ್ಲಿ ಅವರನ್ನು ಮಿಝೋರಾಂಗೆ ನಿಯುಕ್ತಿಗೊಳಿಸಲಾಗಿತ್ತು. ಮಿಝೋರಾಂನ ಎಝಾಲ್‌ನಲ್ಲಿ ಅವರ ಬೆಟಾಲಿಯನ್ ಒಂದು ತಿಂಗಳಿನಲ್ಲಿ ೩೦ ಕೋಟಿ ರೂಪಾಯಿ ಬೆಲೆಬಾಳುವ ಚೀನಿ ಅಮಲು ಪದಾರ್ಥಗಳನ್ನು ವಶಪಡಿಸಿಕೊಂಡಿತ್ತು. ಮಣಿಪುರದ ಚುರಾಚಂದಪುರದಲ್ಲಿ ಅವರ ನಿಯುಕ್ತಿಗೊಳಿಸಲಾಯಿತು ಮತ್ತು ಅವರು ‘ಅಮಲು ಪದಾರ್ಥಗಳ ವ್ಯಾಪಾರ ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಕೊಳ್ಳಲಾಗುವುದು ಎಂದು ಸ್ಥಳೀಯರಿಗೆ ತಿಳಿಸಿದರು. ಅದರ ಪ್ರತಿಫಲವನ್ನು ಅವರು ಅನುಭವಿಸಬೇಕಾಯಿತು. ‘ಪೀಪಲ್ಸ ಲಿಬರೇಶನ ಆರ್ಮಿಯ (ಪಿ.ಎಲ್.ಎ) ಸ್ಲೀಪರ್ ಸೆಲ್‌ಗೆ ಸಂಚು ರಚಿಸಿ ಅವರನ್ನು ಹತ್ಯೆ ಮಾಡಲು ಆವಶ್ಯಕವಿರುವ ಎಲ್ಲ ಮಾಹಿತಿಗಳನ್ನು ಈ ರಾಕೆಟ (ಷಡ್ಯಂತ್ರ)ನಲ್ಲಿದ್ದ ಗ್ರಾಮೀಣ ಜನರು ಕೊಟ್ಟಿದ್ದರು.

೮. ಚೀನಾವು ಮ್ಯಾನ್ಮಾರದಲ್ಲಿ ಅಧಿಕಾರ ಬದಲಾವಣೆಯನ್ನು ದುರುಪಯೋಗಿಸಿಕೊಂಡು ಭಾರತವಿರೋಧಿ ಕೃತ್ಯಗಳನ್ನು ನಡೆಸುವುದು ಮ್ಯಾನ್ಮಾರನಲ್ಲಿ ಅಧಿಕಾರ ಬದಲಾವಣೆಯಾದ ಬಳಿಕ ಚೀನಾಕ್ಕೆ ಈಗ ಭಾರತದಲ್ಲಿ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡು ಗಳನ್ನು ಮತ್ತು ಪ್ರಶಿಕ್ಷಿತ ಭಯೋತ್ಪಾದಕರನ್ನು ನುಸುಳಿಸಲು ಸುಲಭವಾಗಿದೆ. ಮೊರೆಹ ಗಡಿಯಲ್ಲಿ ವಾಸಿಸುವ ಜನರಿಗೆ ಅಜ್ಞಾನದ ಕಾರಣದಿಂದ ಚೀನಾದ ದುರುದ್ದೇಶ ಗಮನಕ್ಕೆ ಬಂದಿಲ್ಲ. ಅವರಿಗೆ ‘ಚೀನಾದಿಂದ ಅಪಾಯವಿದೆ ಎಂದು ಅನಿಸುವುದಿಲ್ಲ. ಸ್ಥಳೀಯ ಜನರ ಬೆಂಬಲದಿಂದ ಮ್ಯಾನ್ಮಾರ ಜನರಿಗೆ ಮಣಿಪುರ ಮತ್ತು ಮಿಝೊರಾಂಗೆ ಬಂದು ವ್ಯಾಪಾರ ಮಾಡಲು ಪ್ರೋತ್ಸಾಹಿಸಲಾಗುತ್ತಿದೆ. ಮ್ಯಾನ್ಮಾರ ಸೈನ್ಯದ ಕಿರುಕುಳದಿಂದ ದೂರ ಹೋಗಿ ಆಶ್ರಯ ಪಡೆಯುವ ಉದ್ದೇಶದಿಂದ ಮತ್ತು ಮ್ಯಾನ್ಮಾರದ ‘ಫ್ರಿ ಮೂವಮೆಂಟ ರಿಜಿಮ್ ಲಾಭವನ್ನು ಪಡೆದುಕೊಳ್ಳುವ ಉದ್ದೇಶದಿಂದ (ಫ್ರೀ ರಿಜಿಮ ಎಂದರೆ ಗಡಿಯಲ್ಲಿರುವ ಗ್ರಾಮದ ಜನರು ಸ್ವತಂತ್ರವಾಗಿ ಗಡಿಯನ್ನು ದಾಟಿ ಹೋಗಬಹುದು. ಎರಡೂ ಬದಿಯಿಂದ ಜನರು ಗಡಿಯಾಚೆಗೆ ವೀಸಾ ಇಲ್ಲದೇ ೧೬ ಕಿಲೋಮೀಟರ ಅಂತರದ ವರೆಗೆ ಹೋಗಿ ಬರಬಹುದು) ಅಮಲು ಪದಾರ್ಥಗಳ ವ್ಯಾಪಾರ ಮಾಡಲು ಮತ್ತು ಚೀನಾ ದಿಂದ ಪ್ರಶಿಕ್ಷಣ ಪಡೆದ ಭಯೋತ್ಪಾದಕರು ಮ್ಯಾನ್ಮಾರ ಮಾರ್ಗದಿಂದ ಭಾರತದೊಳಗೆ ಪ್ರವೇಶಿಸುತ್ತಿದ್ದಾರೆ.

೯. ಚೀನಾದ ಕೂಟನೀತಿಯನ್ನು ಭಾರತವು ರಣನೀತಿ ಎಂದು ಗುರುತಿಸಿ ತಕ್ಕ ಪ್ರತ್ಯುತ್ತರ ನೀಡುವುದು ಆವಶ್ಯಕ !

ಅನೇಕ ಸ್ಥಳಗಳಲ್ಲಿರುವ ಸಮಸ್ಯೆಗಳ ಪರಿಹಾರವು ಇವುಗಳ ಮೇಲಿನ ಉಪಾಯಯೋಜನೆಗಳನ್ನು ಅವಲಂಬಿಸಿವೆ. ಇದಕ್ಕಾಗಿ ನಾಗರಿಕರೊಂದಿಗೆ ಸಂವಾದ ಸಾಧಿಸಿ ದಶಕಗಳಿಂದ ಅಧಿಕ ಕಾಲದಿಂದ ಮೂಡಿರುವ ಅವಿಶ್ವಾಸ ಮತ್ತು ಇತಿಹಾಸದಲ್ಲಿ ಆಗಿರುವ ಗಾಯ ಮಾಸುವುದು ಮಹತ್ವದ್ದಾಗಿದೆ. ಇತಿಹಾಸದಲ್ಲಿ ಸ್ಥಳೀಯ ಸಮುದಾಯಗಳ ಧ್ರುವೀಕರಣವಾಗಿದೆ. ಮಾತುಕತೆ ಮತ್ತು ಚರ್ಚೆ ಮಾಡಿ ಮೈತೆಯಿ ಮತ್ತು ಕುಕಿಯವರ ಚಿಂತೆಯನ್ನು ದೂರಗೊಳಿಸುವುದು ಮೊದಲ ಹೆಜ್ಜೆಯಾಗಿದೆ; ಏಕೆಂದರೆ ಚೀನಾದ ಕೂಟನೀತಿ, ಸೈನ್ಯ ಮತ್ತು ಆಡಳಿತದ ದೃಷ್ಟಿಯಿಂದ ಉತ್ತರ ನೀಡಲು ದೇಶದಲ್ಲಿ ಮತ್ತು ಭಾರತದ ಹೊರಗಿನ ರಣನೀತಿಯನ್ನು ಎದುರಿಸುವುದು ಆವಶ್ಯಕವಾಗಿದೆ. ಮಣಿಪುರದಲ್ಲಿ ಅಧಿಕಾರ ಪರಿವರ್ತನೆಯಾದರೆ ಹಿಂಸಾಚಾರ ನಿಲ್ಲಬಹುದು; ಏಕೆಂದರೆ ಬೀರೆನ ಸಿಂಹ ಇವರನ್ನು ಅಹಂ ಕಾರಿ ವ್ಯಕ್ತಿಯೆಂದು ಪರಿಗಣಿಸಲಾಗುತ್ತಿದೆ. ರಾಜ್ಯದಲ್ಲಿ ‘ಅಫ್ಸಫಾ (ಆರ್ಮ್ಡ ಫೋರ್ಸಸ ಸ್ಪೆಶಲ್ ಪಾವರ ಆಕ್ಟ) ಹಿಂಪಡೆ ದಾಗಿನಿಂದ ರಾಜ್ಯ ಸರಕಾರದ ಕ್ರಮಗಳ ವಿಷಯದಲ್ಲಿ ಸೈನ್ಯವೂ ಅಸಮಾಧಾನದಿಂದಿದೆ.

ಈ ಸಮಸ್ಯೆಯನ್ನು ಬಿಡಿಸಲು ಮೈತೆಯಿ ಸಮಾಜದ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಹೊರಗಿನಿಂದ ಅನಧಿಕೃತವಾಗಿ ಬಂದಿರುವ ಜನರಿಂದ ಮಣಿಪುರ ಎರಡನೇಯ ಆಸ್ಸಾಂ ಆಗಬಾರದು. ಆಸ್ಸಾಂನಲ್ಲಿ ಸದ್ಯಕ್ಕೆ ಮೂಲ ಭಾರತೀಯ ಜನರಿಗಿಂತ ಅನಧಿಕೃತವಾಗಿ ಬಂದಿರುವ ನಿರಾಶ್ರಿತರು ಅಧಿಕ ಸಂಖ್ಯೆಯಲ್ಲಿದ್ದಾರೆ.

– ಮೇಜರ ಸರಸ ತ್ರಿಪಾಠಿ, ನವ ದೆಹಲಿ (೧೯.೬.೨೦೨೩)