ಹಿಂದೂಗಳಲ್ಲಿ ಭೇದಭಾವವನ್ನು ಮಾಡುವುದೇ ಮಣಿಪುರ ರಾಜ್ಯದ ಹಿಂಸಾಚಾರಕ್ಕೆ ಮೂಲ ಕಾರಣ ! – ಮೇಜರ ಸರಸ ತ್ರಿಪಾಠಿ

ಮೇಜರ ಸರಸ ತ್ರಿಪಾಠಿ

ಭಾರತದ ಪೂರ್ವೋತ್ತರ ರಾಜ್ಯಗಳಲ್ಲಿ ಅಶಾಂತಿ ಮತ್ತು ಕೋಮುಸಂಘರ್ಷ, ಇದೊಂದು ಸತತವಾಗಿ ನಡೆಯುತ್ತಿರುವ ವಿಷಯವಾಗಿದೆ. ಮಣಿಪುರ ರಾಜ್ಯದ ಮೇಲೆ ಮತ್ತೊಮ್ಮೆ ಕೋಮುಸಂಘರ್ಷದ ಕರಿನೆರಳು ಬಿದ್ದಿದೆ. ಕೆಲವು ಕಾರಣಗಳಿಂದ ಈ ವರ್ಷದ ಪ್ರಾರಂಭದಿಂದ ರಾಜ್ಯದಲ್ಲಿ ಅಶಾಂತಿ ಹರಡುತ್ತಿದೆ. ಇದರ ಕಾರಣಗಳನ್ನು ಮುಂದೆ ನಾವು ಸವಿಸ್ತಾರವಾಗಿ ವಿಶ್ಲೇಷಣೆ ಮಾಡುವವರಿದ್ದೇವೆ. ಎಲ್ಲಕ್ಕಿಂತ ಮೊದಲು ಸದ್ಯದ ಸ್ಥಿತಿಯಲ್ಲಿ ಈ ಸಂಘರ್ಷದ ಕಿಡಿ ಎಲ್ಲಿಂದ ಬಿದ್ದಿತು ? ಇದನ್ನು ಅರಿತುಕೊಳ್ಳಬೇಕು. ೩ ಮೇ ೨೦೨೩ ರಂದು ‘ಆಲ್ ಟ್ರೈಬಲ್ ಸ್ಟುಡೆಂಟ್ಸ ಯೂನಿಯನ್ ಆಫ್ ಮಣಿಪುರ ಇವರು ಆಯೋಜಿಸಿದ್ದ ‘ಆದಿವಾಸಿ ಒಗ್ಗಟ್ಟು ಫೇರಿಯ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಹಿಂಸಾಚಾರದ ಘಟನೆಗಳಾದವು. ಸೇನಾಪಡೆ ಮತ್ತು ಆಸ್ಸಾಂ ರೈಫಲ್ಸ ಇವರು ಈ ಹಿಂಸಾಚಾರವನ್ನು ನಿಯಂತ್ರಿಸಲು ‘ಫ್ಲ್ಯಾಗ್ ಮಾರ್ಚ್ (ಧ್ವಜ ಸಂಚಲನ) ಮಾಡಿದರು. ಹಾಗೆಯೇ ಸರಕಾರ ೫ ದಿನಗಳ ವರೆಗೆ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿತ್ತು.

ಮಣಿಪುರ ಹಿಂಸಾಚಾರದ ಒಂದು ಛಾಯಾಚಿತ್ರ

೧. ಹಿಂಸೆ ಮತ್ತು ಸಂಘರ್ಷದ ಕಾರಣ

ಈ ಸಂಘರ್ಷದ ೫ ಪ್ರಮುಖ ಕಾರಣಗಳಿವೆ.

೧ ಅ. ಪರಿಶಿಷ್ಟ ಜಾತಿಪಂಗಡದ ಸೂಚಿಯಲ್ಲಿ ‘ಮೈತೆಯೀ ಜನರನ್ನು ಸೇರಿಸಲು ಮಣಿಪುರ ಉಚ್ಚ ನ್ಯಾಯಾಲಯದ ಆದೇಶ :

ಮೊದಲ ಕಾರಣವೆಂದರೆ ಮಣಿಪುರ ಉಚ್ಚ ನ್ಯಾಯಾಲಯದ ಆದೇಶ ! ಉಚ್ಚ ನ್ಯಾಯಾಲಯದ ಆದೇಶದಂತೆ ೪ ವಾರ ಗಳೊಳಗೆ ರಾಜ್ಯದ ಪರಿಶಿಷ್ಟ ಜಾತಿಪಂಗಡಗಳ ಪಟ್ಟಿಯಲ್ಲಿ ‘ಮೈತೆಯೀ (ಪ್ರಮುಖವಾಗಿ ವೈಷ್ಣವ ಹಿಂದೂ ಜನರು) ವಂಶದ ಜನರನ್ನು ಸಮಾವೇಶಗೊಳಿಸುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ೧೪ ಎಪ್ರಿಲ್ ೨೦೨೩ ರಂದು ನ್ಯಾಯಾಲಯದ ಆದೇಶದಿಂದಾಗಿ ಕಣಿವೆಗಳಲ್ಲಿರುವ (ಕಣಿವೆ ಎಂದರೆ ಎರಡು ಗುಡ್ಡಗಳ ನಡುವಿನ ವಸತಿಯ ಪ್ರದೇಶ) ನಿವಾಸಿಗಳಾಗಿರುವ ಮೈತೆಯೀ ಸಮುದಾಯದ ಜನರು ಮತ್ತು ರಾಜ್ಯದಲ್ಲಿನ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಪ್ರಮುಖವಾಗಿ ನಾಗಾ ಮತ್ತು ಕುಕಿ (ಇವರು ಹೊಸ ಕ್ರೈಸ್ತರು) ಜನರು ಇವರ ನಡುವೆ ಮೊದಲಿನಿಂದಲೂ ನಡೆಯುತ್ತಿದ್ದ ಸಂಘರ್ಷ ಪುನಃ ಪ್ರಾರಂಭವಾಯಿತು.

೧ ಅ ೧. ಮೈತೆಯೀ (ಹಿಂದೂ) ಈ ಜನರಿಗೆ ಮಣಿಪುರದ ಶೇ. ೧೧ ರಷ್ಟು ಭೂಮಿಯ ಹೊರಗೆ ವಾಸಿಸಲು ಅಧಿಕಾರವಿಲ್ಲದಿರುವುದು :

ಎರಡನೇಯ ಕಾರಣವನ್ನು ತಿಳಿದುಕೊಳ್ಳ್ಳುವ ಮೊದಲು ಮಣಿಪುರದ ಭೌಗೋಲಿಕ ಸ್ಥಿತಿ, ಜನಸಂಖ್ಯೆ ಮತ್ತು ಜಾತೀಯ ಅಥವಾ ಪಂಥೀಯ ಸಂರಚನೆಯನ್ನು ತಿಳಿದುಕೊಳ್ಳುವುದು ಆವಶ್ಯಕವಾಗಿದೆ. ಭೌಗೋಲಿಕ ದೃಷ್ಟಿಯಿಂದ ಮಣಿಪುರದಲ್ಲಿ ಇಂಫಾಲದ ಕಣಿವೆಗಳು ಮತ್ತು ಗುಡ್ಡಗಾಡು ಪ್ರದೇಶ ಹೀಗೆ ಎರಡು ಭಾಗಗಳು ಆಗುತ್ತವೆ. ಮಣಿಪುರದ ವಿಧಾನಸಭೆಯ ೬೦ ಸ್ಥಳಗಳಲ್ಲಿ ೪೦ ಸ್ಥಳಗಳು ಇಂಫಾಲ ಕಣಿವೆಯಲ್ಲಿವೆ. ಇದರಲ್ಲಿ ಇಂಫಾಲ ಪೂರ್ವ ಮತ್ತು ಇಂಫಾಲ ಪಶ್ಚಿಮ, ಥೌಬಲ, ವಿಷ್ಣುಪುರ, ಕಾಕಚಿಂಗ ಮತ್ತು ಕಾಂಗಪೊಕಪಿ ಈ ೬ ಜಿಲ್ಲೆಗಳ ಸಮಾವೇಶವಿದೆ. ಇನ್ನುಳಿದ ೨೦ ಸ್ಥಳಗಳು ಉಳಿದ ೧೦ ಜಿಲ್ಲೆಗಳಲ್ಲಿವೆ. ಈ ಕಣಿವೆಯಲ್ಲಿನ ಮೈತೆಯೀ ಸಮಾಜದ ವರ್ಚಸ್ಸಿರುವ (ಇದರಲ್ಲಿ ಹೆಚ್ಚಾಗಿ ಹಿಂದೂಗಳಿದ್ದಾರೆ) ಈ ಜಿಲ್ಲೆಗಳು ಭೌಗೋಲಿಕ ಕ್ಷೇತ್ರದ ಶೇ. ೧೧ ರಷ್ಟು ಇವೆ; ಆದರೆ ಒಟ್ಟು ಜನಸಂಖ್ಯೆಯ ಶೇ. ೫೭ ರಷ್ಟು ಜನರು ಈ ಪ್ರದೇಶದಲ್ಲಿಯೇ ವಾಸಿಸುತ್ತಾರೆ. ನಾಗಾ ಮತ್ತು ಕುಕಿ ಇವರ ವರ್ಚಸ್ಸು ಇರುವ ಗುಡ್ಡಗಾಡು ಪ್ರದೇಶದಲ್ಲಿ ಕ್ರೈಸ್ತರು ಅಧಿಕ ಪ್ರಮಾಣದಲ್ಲಿದ್ದು, ಅಲ್ಲಿನ ಜನಸಂಖ್ಯೆ ಶೇ. ೪೩ ರಷ್ಟು ಇದೆ. ಇದಕ್ಕನುಸಾರ ಮೈತೆಯೀ ಸಮಾಜದ ಬಳಿ ಶೇ. ೧೧ ರಷ್ಟು ಮತ್ತು ಗುಡ್ಡಗಾಡು ಪ್ರದೇಶದಲ್ಲಿನ ಆದಿವಾಸಿ (ನಾಗಾ ಮತ್ತು ಕುಕಿ) ಜನರ ಬಳಿ ಶೇ. ೮೯ ರಷ್ಟು ಭೂಮಿಯಿದೆ. ಸದ್ಯದ ಕಾನೂನಿಗನುಸಾರ ಮೈತೆಯೀ(ಹಿಂದೂ)ಗಳಿಗೆ ಗುಡ್ಡಗಾಡು ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಲು ಬರುವುದಿಲ್ಲ್ಲ. ಇದರರ್ಥ, ಅವರಿಗೆ ಶೇ. ೧೧ ರಷ್ಟು ಭೂಮಿಯ ಹೊರಗೆ ವಾಸಿಸುವ ಅಧಿಕಾರವಿಲ್ಲ. ಇದರ ಬದಲು ಶೇ. ೮೯ ರಷ್ಟು ಭೂಮಿಯಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಜನರು ಎಲ್ಲಿ ಬೇಕಾದರೂ ಭೂಮಿಯನ್ನು ಖರೀದಿಸಬಹುದು ಮತ್ತು ವಸತಿಯನ್ನು ನಿರ್ಮಾಣ ಮಾಡಬಹುದು.

೧ ಅ ೨. ನಾಗಾ ಮತ್ತು ಕುಕಿ ಜನರು ಮೈತೆಯೀ ಜನರನ್ನು ಭೂಮಿರಹಿತರನ್ನಾಗಿ ಮಾಡುವುದು :

ಈ ೩ ಸಮಾಜದ ಕೋಮು ಜಗಳಗಳು ಮೊದಲಿನಿಂದಲೂ ನಡೆದು ಬಂದಿರುವುದು ಇತಿಹಾಸವಾಗಿದೆ. ಗುಡ್ಡಗಾಡು ಪ್ರದೇಶದಲ್ಲಿನ ‘ಕಣಿವೆಯಲ್ಲಿನ ಜನರಿಗೆ ರಾಜಕೀಯ ಬೆಂಬಲ ಇರುವುದರಿಂದ ರಾಜ್ಯದ ಎಲ್ಲ ವಿಕಾಸದ ಕೆಲಸಗಳನ್ನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಮೈತೆಯೀ ಸಮಾಜದ ಜನರ ಹೇಳುವುದೆಂದರೆ, ತಮ್ಮ ಹಕ್ಕಿನ ಭೂಮಿಯಿಂದ ಅವರನ್ನು ದುರ್ಲಕ್ಷ ಮಾಡಲಾಗುತ್ತದೆ. ೧೯೫೧ ರಲ್ಲಿ ಅವರ ಜನಸಂಖ್ಯೆ ಶೇ. ೫೯ ರಷ್ಟು ಇತ್ತು, ಅದು ೨೦೧೧ ರ ಜನಗಣತಿಗನುಸಾರ ಕಡಿಮೆಯಾಗಿ ಶೇ. ೪೪ ರಷ್ಟು ಆಗಿದೆ. ನಾಗಾ ಮತ್ತು ಕುಕಿ ಜನರು ಇಂಫಾಲ ಕಣಿವೆಯಲ್ಲಿ ವಾಸ್ತವ್ಯ ಮಾಡಿ ಮೈತೆಯಿ ಜನರನ್ನು ಭೂಮಿರಹಿತರನ್ನಾಗಿ ಮಾಡುತ್ತಿದ್ದಾರೆ ಎಂದು ಮೈತೆಯಿ ಜನರ ಆರೋಪವಿದೆ.

೧ ಅ ೩. ಮೈತೆಯೀ ಸಮಾಜವು ‘ಒಂದು ಪಂಗಡ ಎಂಬ ಗುರುತನ್ನು ಕಾಯ್ದುಕೊಳ್ಳಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸುವುದು :

ಇದೇ ಕಾರಣದಿಂದ ಮೈತೆಯೀ ಜನರ ಕೆಲವು ಸಂಘಟನೆಗಳು ತಮ್ಮ ಸಮಾಜಕ್ಕೆ ಆದಿವಾಸಿಗಳ ದರ್ಜೆಯನ್ನು ನೀಡಬೇಕೆಂದು ಕೇಳುತ್ತಿವೆ. ಮೈತೆಯೀ ಜನಪಂಗಡದ ಸಂಘದಿಂದ ಮಣಿಪುರ ಉಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಮನವಿಯಲ್ಲಿ ೧೯೪೯ ರಲ್ಲಿ ಮಣಿಪುರ ರಾಜ್ಯವನ್ನು ಭಾರತದಲ್ಲಿ ವಿಲೀನಗೊಳಿಸುವ ಮೊದಲು ಮೈತೆಯಿ ಸಮಾಜದ ಜನರಿಗೆ ‘ಒಂದು ಪಂಗಡ ಎಂದು ಮಾನ್ಯತೆಯನ್ನು ನೀಡಲಾಗಿತ್ತು. ಆದರೆ ವಿಲೀನೀ ಕರಣದ ಬಳಿಕ ‘ಒಂದು ಪಂಗಡ ಎನ್ನುವ ಅವರ ಗುರುತನ್ನು ಮರೆಯಲಾಯಿತು. ‘ಮೈತೆಯೀ ಸಮಾಜವನ್ನು ರಕ್ಷಿಸಲು ನಮ್ಮ ಜನರ ಪೂರ್ವಜರ ಭೂಮಿ, ಪರಂಪರೆ, ಸಂಸ್ಕೃತಿ ಮತ್ತು ಭಾಷೆಯನ್ನು ರಕ್ಷಿಸಲು ಅವರನ್ನು ‘ಒಂದು ಪಂಗಡ ಎಂದು ಗುರುತು ಇರಬೇಕು ಎಂಬುದು ಅವರ ಇಚ್ಛೆಯಾಗಿದೆ. ಇದರಿಂದ ಅವರೂ ನಾಗಾ ಮತ್ತು ಕುಕಿ ಜನರ ಕ್ಷೇತ್ರದಲ್ಲಿರುವ ಭೂಮಿಯನ್ನು ಖರೀದಿಸಬಲ್ಲರು.

೧ ಆ. ಎರಡನೇಯ ಕಾರಣ, ಮಾದಕ ದ್ರವ್ಯಗಳು ಮತ್ತು ಅಫೀಮಿನ ಕೃಷಿಯ ವಿರುದ್ಧ ಸರಕಾರ ನಡೆಸಿರುವ ಚಳುವಳಿಯ ಸಂಘರ್ಷ :

ಎರಡನೇಯ ಕಾರಣವೆಂದರೆ ಮಣಿಪುರದ ಎನ್. ಬೀರೆನ ಸಿಂಹ ಇವರ ಭಾಜಪ ಸರಕಾರವು ಮಾದಕ ದ್ರವ್ಯ ಮತ್ತು ಅಫೀಮಿನ ಕೃಷಿಯ ವಿರುದ್ಧ ಪ್ರಾರಂಭಿಸಿರುವ ಚಳುವಳಿ. ಮಣಿಪುರದ ಹೆಚ್ಚಿನ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಬಹುತೇಕ ಕ್ರೈಸ್ತ ನಾಗಾ ಮತ್ತು ಕುಕಿ ಜನರು ಹೆಚ್ಚುವರಿ ಉತ್ಪನ್ನಕ್ಕಾಗಿ ಅನಧಿಕೃತವಾಗಿ ಅಫೀಮಿನ ಕೃಷಿ ಮಾಡುತ್ತಾರೆ. ಕಳೆದ ವರ್ಷ ಬಿರೇನ ಸಿಂಹ ಇವರ ಸರಕಾರವು ಅಫೀಮಿನ ಬೆಳೆಯನ್ನು ನಾಶ ಮಾಡಿ ಅಮಲು ಪದಾರ್ಥಗಳ ದುರುಪಯೋಗದಿಂದ ರಾಜ್ಯವನ್ನು ರಕ್ಷಿಸಲು ದೊಡ್ಡ ಪ್ರಮಾಣದಲ್ಲಿ ಚಳುವಳಿಯನ್ನು ಹಮ್ಮಿಕೊಂಡಿತ್ತು. ಈ ಚಳುವಳಿಯ ಪರಿಣಾಮವಾಗಿರುವ ಬಹಳಷ್ಟು ಊರುಗಳಲ್ಲಿ ಕುಕಿ ಜಾತಿಯ ಜನರು ವಾಸಿಸುತ್ತಾರೆ. ‘ಮಣಿಪುರ ಅಗೇನಸ್ಟ ಪಾಪಿ ಕಲ್ಟಿವೇಶನ್ ಇದೊಂದು ಸಾಮಾಜಿಕ ಮತ್ತು ರಾಜಕೀಯ ವಿಚಾರವಾದಿ, ಪರಿವರ್ತನೆಯನ್ನು ಇಚ್ಛಿಸುವ ಜನರು, ಯುವಕರು ಮತ್ತು ಕಾನೂನುತಜ್ಞರು ಅಫೀಮಿನ ಬೆಳೆಯ ವಿರುದ್ಧ ನಡೆಸಿದ ಚಳುವಳಿಯಾಗಿದೆ. ಈ ಚಳುವಳಿಯನ್ನು ಬೀರೆನ ಸಿಂಹ ಇವರು ಬೆಂಬಲಿಸಿದ್ದಾರೆ. ಆದರೆ ಅವರ ಈ ನಿರ್ಣಯವನ್ನು ಜಾತೀಯ ಮತ್ತು ಧಾರ್ಮಿಕ ಕನ್ನಡಕದಿಂದ ನೋಡಿ ನಾಗಾ ಮತ್ತು ಕುಕಿ ಜನರು ಈ ಕುರಿತು ಪ್ರಶ್ನೆಗಳನ್ನು ಮುಂದಿಡುತ್ತಿದ್ದಾರೆ; ಏಕೆಂದರೆ ಬೀರೆನ್ ಸಿಂಹ ಇವರು ಮೈತೆಯೀ ಜಾತಿಯವರಾಗಿದ್ದಾರೆ. ಜನವರಿ ತಿಂಗಳಿನಲ್ಲಿ ‘ಮಣಿಪುರ ಅಗೇನಸ್ಟ ಪಾಪಿ ಕಲ್ಟಿವೇಶನ ಸಂಘಟನೆಯು ‘ಒಂದು ವೇಳೆ ಅಫೀಮಿನ ಬೆಳೆಯ ವಿಷಯವನ್ನು ಸರಿಯಾಗಿ ನಿಭಾಯಿಸದಿದ್ದರೆ ಅದು ಕೈಮೀರಿ ಹೋಗಬಹುದು. ಅದರಿಂದ ಗುಡ್ಡಗಾಡು ಪ್ರದೇಶ ಮತ್ತು ಕಣಿವೆಗಳ ನಡುವೆ ಒಡಕು ನಿರ್ಮಾಣವಾಗಬಹುದು ಎಂಬ ಎಚ್ಚರಿಕೆಯನ್ನು ನೀಡಿತ್ತು.

೧ ಇ. ಮ್ಯಾನ್ಮಾರದಿಂದ ನಾಗಾ ಮತ್ತು ಕುಕಿ ಜಾತಿಯ ಜನರ ಅನಧಿಕೃತ ಪ್ರವೇಶ :

ಈ ಸಂಘರ್ಷದ ಮೂರನೆ ಕಾರಣವೆಂದರೆ ಮ್ಯಾನ್ಮಾರದಿಂದ ನಾಗಾ ಮತ್ತು ಕುಕಿ ಜಾತಿಯ ಜನರಿಂದ ಮಣಿಪುರದಲ್ಲಾಗುತ್ತಿರುವ ಅನಧಿಕೃತ ಪ್ರವೇಶ. ಮಾರ್ಚ ತಿಂಗಳಿನಲ್ಲಿ ಮೈತೆಯಿ ಸಮಾಜವನ್ನು ಪ್ರತಿನಿಧಿಸುವ ಕೆಲವು ವಿದ್ಯಾರ್ಥಿ ಸಂಘಟನೆಗಳ ನಾಯಕರು ಮ್ಯಾನ್ಮಾರ, ನೇಪಾಳ ಮತ್ತು ಬಾಂಗ್ಲಾದೇಶ ಈ ಪಕ್ಕದ ದೇಶಗಳಿಂದ ಮಣಿಪುರದಲ್ಲಿ ಅನಧಿಕೃತವಾಗಿ ಬಂದಿರುವ ಜನರಿಂದಾಗಿ ರಾಜ್ಯದ ಜನರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಆರೋಪಿಸುತ್ತಾ ಬೀರೆನ ಸಿಂಹರ ಮನೆಯ ಮುಂದೆ ಪ್ರತಿಭಟನೆ ನಡೆಸಿದರು. ಅವರು ನಾಗರಿಕರ ‘ರಾಷ್ಟ್ರೀಯ ನಾಗರಿಕತೆ ನೊಂದಣಿ ಪ್ರಕ್ರಿಯೆ (ಎನ್.ಆರ್.ಸಿ) ಜಾರಿಗೊಳಿಸುವಂತೆ ಮತ್ತು ಜನಸಂಖ್ಯಾ ಆಯೋಗವನ್ನು ಸ್ಥಾಪಿಸಲು ಮನವಿಯನ್ನು ಮಾಡಿದ್ದಾರೆ.

ವಿದ್ಯಾರ್ಥಿ ಸಂಘಟನೆಯ ಮತ್ತೊಂದು ಆರೋಪವೆಂದರೆ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ. – ಮೇಜರ್ ಸರಸ ತ್ರಿಪಾಠಿ

ಈ ಸಂಘಟನೆಯು ೨೦೧೧ ರ ಜನಗಣತಿ ಮತ್ತು ಇಂಫಾಲದ ಕಣಿವೆಗಳು ಮತ್ತು ಗುಡ್ಡಗಾಡು ಪ್ರದೇಶದ ಜನಸಂಖ್ಯೆಯು ೧೦ ವರ್ಷಗಳಲ್ಲಾದ ಹೆಚ್ಚಳದಲ್ಲಿನ ಅಂತರವನ್ನು ನೋಡುತ್ತಿದೆ. ಕಣಿವೆಯಲ್ಲಿ ಈ ಪ್ರಮಾಣ ಶೇ. ೧೬ ರಷ್ಟು ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಶೇ. ೪೦ ರಷ್ಟು ಇದೆ. ಕುಕಿ ಜನರ ಮೇಲೆ ಅನೇಕ ಸಲ ‘ಅವರು ಪ್ರವಾಸಿಗರು ಅಥವಾ ವಿದೇಶಿಯರಾಗಿದ್ದಾರೆ ಎಂದು ಆರೋಪಿಸಲಾಗುತ್ತದೆ. ಮೈತೇಯಿ ಸಮಾಜದ ಆರೋಪವೇನೆಂದರೆ, ಮಣಿಪುರದ ಕುಕಿ ಮತ್ತು ನಾಗಾ ಜನರು ಮ್ಯಾನಮಾರದ ಕುಕಿ ಮತ್ತು ನಾಗಾ ಜನರನ್ನು ಅನಧಿಕೃತವಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸಲು ಅವಕಾಶ ಒದಗಿಸಿಕೊಟ್ಟು ಜನಸಂಖ್ಯೆಯಲ್ಲಿ ಅಪಾಯಕಾರಿ ಹೆಚ್ಚಳ ಮಾಡುತ್ತಿದ್ದಾರೆ.

ಕುಕಿ ಚೀನಾ-ಝೊಮಿ-ಮಿಝೊ ಪಂಗಡಕ್ಕೆ ಸಂಬಂಧಿತ ಮ್ಯಾನ್ಮಾರದಲ್ಲಿನ ಅನೇಕ ನಿರಾಶ್ರಿತರು ಮಣಿಪುರ, ಮಿಝೊರಾಮ್, ನಾಗಾಲ್ಯಾಂಡನ ಬೆಟ್ಟದ ಮೇಲೆ ವಾಸಿಸುವ ತಮ್ಮ ಪಂಗಡದವರೊಂದಿಗೆ ಮೂಲ ವಂಶದೊಂದಿಗೆ ಸಾಮರಸ್ಯವಾಗುತ್ತಿದ್ದಂತೆ ಮ್ಯಾನ್ಮಾರ ಸೈನ್ಯವು ಭಯೋತ್ಪಾದನಾ ವಿರೋಧಿ ಚಳುವಳಿಯನ್ನು ನಡೆಸಿತು. ಇದರಿಂದ ಅವರು ಪಲಾಯನ ಮಾಡಿ ಮಣಿಪುರಕ್ಕೆ ಬಂದು ವಾಸಿಸತೊಡಗಿ ದರು. ಇದರಿಂದ ಕುಕಿ ಜನರ ವಿರೋಧಿ ಭಾವನೆಗಳು ತೀವ್ರ ವಾದವು. ಇದರಿಂದ ಮೈತೆಯಿ ವಿದ್ಯಾರ್ಥಿ ಸಂಘಟನೆಗಳ ಅಭಿಪ್ರಾಯವೇನೆಂದರೆ ಮೀಸಲು ಅರಣ್ಯ ಕ್ಷೇತ್ರದಲ್ಲಿ ಹೊಸ ಊರುಗಳು ನಿರ್ಮಾಣವಾಗುತ್ತಿವೆ ಮತ್ತು ಜನಸಂಖ್ಯೆಯ ಹೆಚ್ಚಳದಿಂದ ಹೊಸ ಕ್ಷೇತ್ರಗಳಲ್ಲಿ ಅಫೀಮಿನ ಕೃಷಿ ಹರಡುತ್ತಿದೆ. ‘ಮ್ಯಾನ್ಮಾರದಿಂದ ಅನಧಿಕೃತವಾಗಿ ಬಂದಿರುವ ಈ ಜನರು ರಾಜ್ಯದಲ್ಲಿನ ಅರಣ್ಯದ ವನಗಳನ್ನು ಹಾಳು ಮಾಡುವುದು, ಅಫೀಮಿನ ಕೃಷಿ ಮತ್ತು ಅಮಲು ಪದಾರ್ಥಗಳ ಅಪಾಯಗಳಿಗೆ ಜವಾಬ್ದಾರರಾಗಿದ್ದಾರೆ ಎಂದು ಮುಖ್ಯಮಂತ್ರಿಯವರು ಹೇಳಿ ದ್ದಾರೆ. ಈ ಅನಧಿಕೃತವಾಗಿ ನುಸುಳಿರುವ ಪ್ರವಾಸಿಗರನ್ನು ಗುರುತಿಸಲು ಮತ್ತು ಮರಳಿ ಅವರ ದೇಶಕ್ಕೆ ಕಳುಹಿಸಲು ಅವರು ಮಂತ್ರಿಮಂಡಳದಲ್ಲಿ ಒಂದು ಉಪಸಮಿತಿಯನ್ನು ಸ್ಥಾಪಿಸಿದ್ದಾರೆ. (ಮುಂದುವರಿಯುವುದು)

– ಮೇಜರ ಸರಸ ತ್ರಿಪಾಠಿ, ನವ ದೆಹಲಿ (೧೯.೬.೨೦೨೩)