ಪಾಕಿಸ್ತಾನದಲ್ಲಿ ಅಪ್ರಾಪ್ತ ಹಿಂದೂ ಹುಡುಗಿ ಮತ್ತು ಯುವಕನ ಹತ್ಯೆ

ಪಾಕಿಸ್ತಾನದಲ್ಲಿನ ಅಸುರಕ್ಷಿತ ಹಿಂದೂಗಳು !

ಕರಾಚಿ (ಪಾಕಿಸ್ತಾನ) – ಪಾಕಿಸ್ತಾನದ ಸಿಂಧ ಪ್ರಾಂತ್ಯದ ರಾಜೋಖಾನೈ ಪ್ರದೇಶದ ಹಿಂದೂ ದೇವಾಲಯದಲ್ಲಿ ೭ ವರ್ಷದ ಹಿಂದೂ ಬಾಲಕಿಯ ಶವ ಪತ್ತೆಯಾಗಿದೆ. ಜುಲೈ ೨೩ ರ ಸಂಜೆಯಿಂದ ಆಕೆ ಕಾಣೆಯಾಗಿದ್ದಳು, ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಕೊಲೆಗೂ ಮುನ್ನ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಆಕೆಯ ತಂದೆ ಆರೋಪಿಸಿದ್ದಾರೆ. ಈ ಕುರಿತು ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ.

ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನದ ಪಂಜಾಬ ಪ್ರಾಂತ್ಯದ ರಹೀಮ ಯಾರ ಖಾನ ತಾಲೂಕಿನ ಸಹಾರ ಗ್ರಾಮದಲ್ಲಿ ಆಕಾಶ ಕುಮಾರ ಭಿಲ ಎಂಬ ೨೦ ವರ್ಷದ ಹಿಂದೂ ಯುವಕನ ಶವವು ಹೊಲವೊಂದರಲ್ಲಿ ಪತ್ತೆಯಾಗಿದೆ. ಆತ ಜುಲೈ ೧೬ ರಿಂದ ಕಾಣೆಯಾಗಿದ್ದ. ಪೊಲೀಸರು ಆಕಾಶನ ಸ್ನೇಹಿತ ಅಕ್ಮಲ ಭಟ್ಟಿಯನ್ನು ಅನುಮಾನದ ಮೇಲೆ ವಶಕ್ಕೆ ಪಡೆದು ತನಿಖೆಗೆ ಒಳಪಡಿಸಿದ್ದರು; ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಆಕಾಶನ ಪೋಷಕರಿಗೆ ಅಕ್ಮಲ್ ಮೇಲೆ ಅನುಮಾನವಿದೆ. ಪೊಲೀಸರು ಹಣ ಪಡೆದು ಅಕ್ಮಲ ನನ್ನು ಬಿಡುಗಡೆ ಮಾಡಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.