‘ಆಂಗ್ಲಭಾಷೆಯಲ್ಲಿ ಒಂದು ಸುವಚನವಿದೆ, ‘When nails grow long, we cut nails, not fingers. Similarly when misunderstandings grow, cut your ego, not your relationship.’. ಇಲ್ಲಿ ಉಗುರುಗಳಿಗೆ ಅಹಂಕಾರದ ಉಪಮೆ ಯನ್ನು ನೀಡಲಾಗಿದೆ. ಅಹಂಕಾರ ಹೆಚ್ಚಾದರೆ ಸದ್ವಿವೇಕ ಬುದ್ಧಿ ಲೋಪವಾಗುತ್ತದೆ. ಸದ್ಯದ ಸ್ಪರ್ಧಾತ್ಮಕ ಜೀವನದಲ್ಲಿ ಸಾತ್ತ್ವಿಕತೆಯನ್ನು ಉಳಿಸಿಕೊಳ್ಳಲು ಅತಿ ಚಿಕ್ಕಪುಟ್ಟ ಕೃತಿಯನ್ನೂ ಸಹ ಶಾಸ್ತ್ರಕ್ಕನುಸಾರ ಮಾಡಿದರೆ ಖಂಡಿತವಾಗಿ ಲಾಭವಾಗುತ್ತದೆ.
ಆಯುರ್ವೇದಕ್ಕನುಸಾರ ಕೈ-ಕಾಲುಗಳ ಉಗುರುಗಳನ್ನು ನಿಯಮಿತವಾಗಿ ಕತ್ತರಿಸುವುದರಿಂದ ಜೀರ್ಣಾಂಗವ್ಯೂಹದ ಆರೋಗ್ಯ ಸುಧಾರಿಸುತ್ತದೆ. ಉಗುರುಗಳ ಬಣ್ಣಗಳಿಗನುಸಾರ ವಿವಿಧ ರೋಗಗಳನ್ನು ಗುರುತಿಸಬಹುದು. ಸದ್ಯದ ಗಡಿಬಿಡಿಯ (ಓಡಾಟದ) ಕಾಲದಲ್ಲಿ ಉಗುರುಗಳನ್ನು ಕತ್ತರಿಸಲು ಯಾವುದಾದರೊಂದು ನಿರ್ಧರಿಸಿದ ದಿನ ಸಮಯ ಸಿಗುತ್ತದೆ ಎಂದೇನಿಲ್ಲ. ಬಹಳಷ್ಟು ಜನರಿಗೆ ಭಾನುವಾರ ರಜೆ ಇರುವುದರಿಂದ ಭಾನುವಾರವೇ ಉಗುರುಗಳನ್ನು ಕತ್ತರಿಸುತ್ತಾರೆ. ಕೆಲವರಿಗೆ ‘ಉಗುರುಗಳನ್ನು ಯಾವ ವಾರ ಕತ್ತರಿಸುವುದು ಯೋಗ್ಯವಾಗಿದೆ ?, ಎಂಬ ಜಿಜ್ಞಾಸೆ ಇರುತ್ತದೆ.
ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಲ್ಲಿ ಸೂರ್ಯೋದಯದ ಸಮಯದಲ್ಲಿ ಯಾವ ಗ್ರಹದ ಹೋರಾ ಇರುತ್ತದೆಯೋ, (ಒಂದು ದಿನದಲ್ಲಿ ೨೪ ಗಂಟೆಗಳಿರುತ್ತವೆ ಮತ್ತು ೨೪ ಗಂಟೆಗಳಲ್ಲಿ ಒಂದು ಗಂಟೆಗೆ ೧ ಹೋರಾದಂತೆ ೨೪ ಹೋರಾ ಗಳಿರುತ್ತವೆ. (ಹೋರಾ ಇದು ೧ ಗಂಟೆಯ ಕಾಲಾವಧಿ) ಸುರ್ಯೋದಯದ ಸಮಯದಲ್ಲಿ ಮೊದಲನೆಯ ಗಂಟೆಗೆ ಯಾವ ಗ್ರಹದ ಹೋರಾ ಇರುತ್ತದೆಯೋ, ಆ ಹೋರಾದ ಮೇಲಿನಿಂದ ಆ ದಿನದ ಹೆಸರನ್ನು ಕೊಡಲಾಗುತ್ತದೆ) ಆ ಗ್ರಹದ ಹೆಸರನ್ನು ಆ ವಾರಕ್ಕೆ ಕೊಡಲಾಗುತ್ತದೆ, ಉದಾ. ರವಿವಾರ ಸೂರ್ಯೋದಯದ ಸಮಯದಲ್ಲಿ ಮೊದಲನೆಯ ಗಂಟೆಯಲ್ಲಿ ರವಿ ಹೋರಾ ಇರುವುದರಿಂದ ಅದಕ್ಕೆ ‘ರವಿವಾರ ಎಂಬ ಹೆಸರಿದೆ. ಉಗುರುಗಳನ್ನು ಬೆಳೆಸುವುದರಿಂದ ದೇಹದಲ್ಲಿ ತಮೋಗುಣ ಹೆಚ್ಚಾಗುತ್ತದೆ. ವಾರಗಳು ಹೋರಾಗಳಿಗನುಸಾರ ನಿಶ್ಚಯವಾಗುವುದರಿಂದ ಹೋರಾಕ್ಕನುಸಾರ ಮಾಡಬೇಕಾದ ಕೃತಿಗಳು ಮೊದಲೇ ಗಮನಕ್ಕೆ ಬರುವುದರಿಂದ, ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಗಾಗಿ ಉಗುರುಗಳನ್ನು ಕತ್ತರಿಸಲು ಶನಿವಾರ ಮತ್ತು ರವಿವಾರ ಬಿಟ್ಟು ಇತರ ಎಲ್ಲ ವಾರಗಳು ಯೋಗ್ಯವಾಗಿವೆ. ಇಲ್ಲಿ ‘ಯಾವ ದಿನ ಉಗುರುಗಳನ್ನು ಕತ್ತರಿಸಿದರೆ ನಿಶ್ಚಿತವಾಗಿ ಏನು ಲಾಭವಾಗುತ್ತದೆ ?, ಎಂಬುದರ ಅಂದಾಜನ್ನು ಮಂಡಿಸಲಾಗಿದೆ.
ವಾರಗಳಿಗನುಸಾರ ಉಗುರುಗಳನ್ನು ಕತ್ತರಿಸುವುದರಿಂದ ಸಿಗುವ ಫಲಪ್ರಾಪ್ತಿ
ಕತ್ತರಿಸಿದ ಉಗುರುಗಳು ಮನೆಯಲ್ಲಿ ಬೀಳಬಾರದು, ಇದರ ಕಾಳಜಿಯನ್ನು ಅವಶ್ಯ ತೆಗೆದುಕೊಳ್ಳಬೇಕು. ಉಗುರುಗಳನ್ನು ಒಂದು ಕಾಗದದಲ್ಲಿ ಸುತ್ತಿ ಕಾಳಜಿಯಿಂದ ಯಾರ ಕೈಗೆ ಸಿಗದಂತೆ ಎಸೆಯಬೇಕು. – ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದ), ಸನಾತನ ಆಶ್ರಮ, ರಾಮನಾಥಿ, ಗೋವಾ.