ಭಾರತೀಯ ರೂಪಾಯಿಗೆ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನಮಾನ ನೀಡಿದ ಶ್ರೀಲಂಕಾ !

ಶ್ರೀಲಂಕಾದಲ್ಲಿ ರೂಪಾಯಿಗಳ ಬಳಕೆ !

ನವದೆಹಲಿ – ಶ್ರೀಲಂಕಾದ ಅಧ್ಯಕ್ಷ ರಾನಿಲ ವಿಕ್ರಮಸಿಂಘೆ ಅವರು ೨ ದಿನಗಳ ಕಾಲ ಭಾರತದ ಪ್ರವಾಸದಲ್ಲಿದ್ದಾರೆ. ಅವರು ಭಾರತೀಯ ರೂಪಾಯಿಗೆ ಅಂತರಾಷ್ಟ್ರೀಯ ಕರೆನ್ಸಿಯ ಸ್ಥಾನಮಾನವನ್ನು ನೀಡಿರುವ ಬಗ್ಗೆ ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರಾದ ಅರಿಂದಮ ಬಾಗಚಿ ಅವರು ಮಾಹಿತಿ ನೀಡಿದ್ದಾರೆ. ಬಾಗಚಿ ಇವರು, ಭಾರತೀಯ ಕರೆನ್ಸಿಯಲ್ಲಿ ವ್ಯವಹರಿಸಲು ಶ್ರೀಲಂಕಾ ತನ್ನ ವ್ಯವಸ್ಥೆಯಲ್ಲಿ ಭಾರತೀಯ ರೂಪಾಯಿಗಳ ‘ನಿಯೋಜಿತ ವಿದೇಶಿ ಕರೆನ್ಸಿ’ (ವಿಶೇಷ ವಿದೇಶಿ ಕರೆನ್ಸಿ) ಎಂದು ಸೇರಿಸಿದೆ ಎಂದು ಹೇಳಿದರು. ಇದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಾಯಿ ಮೌಲ್ಯ ಹೆಚ್ಚಾಗಲಿದೆ.