ಬ್ರಹ್ಮಪುತ್ರ ನದಿಗೆ ವಿಶ್ವದ ಅತಿ ದೊಡ್ಡ ಅಣೆಕಟ್ಟು ನಿರ್ಮಿಸಿ ಭಾರತದ ನೀರು ತನ್ನ ಕಡೆ ಹರಿಸಲು ಚೀನಾದ ಕುತಂತ್ರ !

ಬೀಚಿಂಗ್ (ಚೀನಾ) – ಚೀನಾದಿಂದ ಟಿಬೇಟದಲ್ಲಿ ಭಾರತ-ಚೀನಾ ಗಡಿಯ ಹತ್ತಿರ ಯಾರಲುಂಗ-ಸ್ತಂಗಪೋ ನದಿಯ ಮೇಲೆ ವಿಶ್ವದ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟು ಕಟ್ಟುವ ಯೋಜನೆ ರೂಪಿಸಿದೆ. ಬ್ರಹ್ಮಪುತ್ರ ನದಿಗೆ ಚೀನಾದಲ್ಲಿ ಯಾರಲುಂಗ-ಸ್ತಂಗಪೋ ಈ ಹೆಸರಿನಿಂದ ಗುರುತಿಸುತ್ತಾರೆ. ಬ್ರಹ್ಮಪುತ್ರ ನದಿಯ ಮೇಲೆ ಆಣೆಕಟ್ಟು ಕಟ್ಟಿ ಚೀನಾ ವಿದ್ಯುತ್ ನಿರ್ಮಿತಿಯ ಪ್ರಕಲ್ಪ ನಿರ್ಮಾಣದ ಪ್ರಯತ್ನ ಮಾಡುತ್ತಿದೆ. ಅದಕ್ಕಾಗಿ ಚೀನಾ ಭಾರತದಲ್ಲಿನ ಕೆಲವು ಪ್ರದೇಶದಲ್ಲಿನ ನೀರಿನ ಪ್ರಮಾಣ ಕಡಿಮೆಗೊಳಿಸಿ, ನದಿಯ ಪ್ರವಾಹ ಉತ್ತರ ದಿಕ್ಕಿಗೆ ತಿರುಗಿಸಬಹುದು. ಹೀಗೆನಾದರು ಆದರೆ ಭಾರತಕ್ಕಾಗಿ ಈ ಪರಿಸ್ಥಿತಿ ಅಪಾಯಕಾರಿಯಾಗಬಹುದು. ಭಾರತ ಚೀನಾ ಸಂಬಂಧದ ಅಂತರರಾಷ್ಟ್ರೀಯ ಅಭ್ಯಾಸಕ ಬ್ರಹ್ಮ ಚೆಲಾನಿ ಈ ವಿಷಯದ ಬಗ್ಗೆ ಪುಷ್ಟಿ ನೀಡಿದ್ದಾರೆ.

೧. ‘ನಿಕ್ಕೆಯಿ ಏಷ್ಯಾದಲ್ಲಿ ಈ ಕುರಿತು ಒಂದು ಲೇಖನ ಪ್ರಕಾಶಿತವಾಗಿದೆ. ಅದರ ಪ್ರಕಾರ ಈ ಆಣೆಕಟ್ಟಿನ ಕ್ಷಮತೆ ೬೦ ಗೀಗಾ ವ್ಯಾಟ್ ಅಷ್ಟು ಆಗಿದೆ. ಭಾರತದ ಗಡಿಯ ಬಳಿ ಚೀನಾದ ಈ ಆಣೆಕಟ್ಟಿನ ಆಕಾರ ಮತ್ತು ಕ್ಷಮತೆಯ ಮಟ್ಟದಲ್ಲಿ ಚೀನಾದಲ್ಲಿನ ‘ಥ್ರಿ ಗಾರ್ಜೆಸ್’ ಈ ಎಲ್ಲಕ್ಕಿಂತ ದೊಡ್ಡ ಆಣೆಕಟ್ಟಿನ ಕ್ಕಿಂತಲೂ ಎಷ್ಟೋ ಪಟ್ಟು ದೊಡ್ಡದಾಗಿ ಇರುವ ಬಗ್ಗೆ ಹೇಳಲಾಗುತ್ತಿದೆ.

೨. ನವಂಬರ್ ೨೦೨೦ ರಲ್ಲಿ ಚೀನಾದ ಸರಕಾರಿ ವಾರ್ತಾಪತ್ರಿಕೆ ಗ್ಲೋಬಲ್ ಟೈಮ್ಸ್ ನಲ್ಲಿ ಆಣೆಕಟ್ಟಿನ ಕಾಮಗಾರಿಯ ಬಗ್ಗೆ ಪ್ರಕಾಶಿಸಿತ್ತು.

೩. ‘ಪಾವರ್ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಆಫ್ ಚೈನಾ’ ಈ ವಿದ್ಯುತ್ ಜಲಪ್ರಕಲ್ಪ ನಿರ್ಮಿಸುವುದು ಎಂದರೆ ಐತಿಹಾಸಿಕ ಅವಕಾಶ ಎಂದು ಹೇಳಿದೆ.

೪. ಕೈಲಾಸ ಪರ್ವತದಲ್ಲಿನ ‘ಎಂಗಸಿ ಹಿಮನದಿ’ಯಿಂದ ಉಗಮವಾಗಿರುವ ಮತ್ತು ಪೂರ್ವ ಹಿಮಾಲಯಕ್ಕೆ ಸುತ್ತುವರೆದಿರುವ ಬ್ರಹ್ಮಪುತ್ರ ನದಿ ೩ ಸಾವಿರ ೬೯೬ ಕಿಲೋಮೀಟರ್ ಉದ್ದವಾಗಿದೆ. ಟಿಬೆಟಿನಿಂದ ಅದು ಭಾರತಕ್ಕೆ ಬರುತ್ತದೆ ಮತ್ತು ಬಾಂಗ್ಲಾ ದೇಶಕ್ಕೆ ತಲುಪಿ ಸಮುದ್ರಕ್ಕೆ ಸೇರುತ್ತದೆ. ಇದು ಜಗತ್ತಿನಲ್ಲಿನ ೯ ನೆಯ ಎಲ್ಲಕ್ಕಿಂತ ದೊಡ್ಡ ನದಿಯಾಗಿದೆ.

ಸಂಪಾದಕೀಯ ನಿಲುವು

ಚೀನಾದ ಇಂತಹ ಕುತಂತ್ರಕ್ಕೆ ಲಗಾಮು ಹಾಕುವುದಕ್ಕಾಗಿ ಭಾರತ ಖಂಡತುಂಡವಾಗಿ ಉತ್ತರ ನೀಡುವುದಕ್ಕೆ ವ್ಯೂಹ ರಚನೆ ಮಾಡಬೇಕು, ಎಂದು ರಾಷ್ಟ್ರಪ್ರೇಮಿಗಳಿಗೆ ಅನಿಸುತ್ತದೆ ! ಇದರಲ್ಲಿ ಟಿಬೆಟ್ ಮೇಲೆ ಚೀನಾದಿಂದ ನಡೆದಿರುವ ದೌರ್ಜನ್ಯ ಜಗತ್ತಿನ ಎದುರು ಮಂಡಿಸುವುದರ ಜೊತೆಗೆ ಚೀನ ವಸ್ತುಗಳ ಮೇಲೆ ಭಾರತದಲ್ಲಿ ನಿಷೇದ ಹೇರುವ ಪ್ರಯತ್ನ ಪ್ರಾಮುಖ್ಯತೆಯಿಂದ ಮಾಡುವುದು ಅವಶ್ಯಕ !