‘ಜ್ಯೋತಿಷ್ಯಶಾಸ್ತ್ರವು ಕಾಲಜ್ಞಾನದ ಶಾಸ್ತ್ರವಾಗಿದೆ. ‘ಕಾಲಗಣನೆ ಮತ್ತು ‘ಕಾಲವರ್ಣನೆ ಇವು ಅದರ ೨ ಅಂಗಗಳಾಗಿವೆ. ಕಾಲಗಣನೆಯ ಅಂತರ್ಗತ ಕಾಲವನ್ನು ಅಳೆಯಲು ಬೇಕಾಗುವ ಆವಶ್ಯಕ ಘಟಕಗಳು ಮತ್ತು ಗಣಿತದ ಮಾಹಿತಿ ಇರುತ್ತದೆ. ಕಾಲವರ್ಣನೆಯ ಅಂತರ್ಗತ ಕಾಲದ ಸ್ವರೂಪವನ್ನು ತಿಳಿದುಕೊಳ್ಳಲು ಆವಶ್ಯಕ ಘಟಕಗಳ ಮಾಹಿತಿ ಇರುತ್ತದೆ. ಕಾಲವರ್ಣದ ದೃಷ್ಟಿಕೋನದಿಂದ ಜ್ಯೋತಿಷ್ಯಶಾಸ್ತ್ರದ ವ್ಯಕ್ತಿಗತ ಮತ್ತು ಸಾಮಾಜಿಕ ಸ್ತರದಲ್ಲಿನ ಉಪಯುಕ್ತತೆಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
೧. ವೈಯಕ್ತಿಕ ಸ್ತರ
೧ ಅ. ವ್ಯಕ್ತಿಗೆ ಜನ್ಮದಿಂದಲೆ ಲಭಿಸಿದ ಅನುಕೂಲ ಮತ್ತು ಪ್ರತಿಕೂಲ ಪರಿಸ್ಥಿತಿಗಳು ತಿಳಿಯುವುದು :
ಪ್ರತಿಯೊಬ್ಬ ವ್ಯಕ್ತಿಯು ತನ್ನ ಪ್ರಾರಬ್ಧವನ್ನು ಜೊತೆಯಲ್ಲಿ ತೆಗೆದುಕೊಂಡೇ ಜನಿಸುತ್ತಾನೆ. ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ಇತರರಿಗಿಂತ ಭಿನ್ನವಾಗಿರುತ್ತಾನೆ, ಇದು ಅವನ ಪ್ರಾರಬ್ಧದಿಂದಾಗಿಯೇ ಆಗಿರುತ್ತದೆ. ಕೆಲವು ವ್ಯಕ್ತಿಗಳ ಜೀವನ ಬಾಲ್ಯದಿಂದಲೆ ಸುಖವಾಗಿರುತ್ತದೆ; ಅವರಿಗೆ ಎಲ್ಲ ಸಾಧನ-ಸೌಕರ್ಯಗಳ ಲಾಭ ಸಿಗುತ್ತದೆ, ಕೆಲವರ ಜೀವನ ಕಷ್ಟಗಳಿಂದ ಮತ್ತು ದುಃಖದಿಂದ ತುಂಬಿರುತ್ತದೆ. ಸುಖಿ ವ್ಯಕ್ತಿಯ ಕಡೆಗೆ ಎಲ್ಲ ರೀತಿಯ ಸುಖಗಳಿರುತ್ತವೆ, ಕೆಲವರಿಗೆ ವಿವಾಹಸುಖ ಲಭಿಸುತ್ತದೆ; ಆದರೆ ಸಂತಾನ ಸುಖ ಇರುವುದಿಲ್ಲ. ಕೆಲವರಿಗೆ ಸಂತಾನ ಸುಖ ಲಭಿಸುತ್ತದೆ; ಆದರೆ ಆರ್ಥಿಕ ಸ್ಥಿತಿ ಚೆನ್ನಾಗಿರುವುದಿಲ್ಲ. ಕೆಲವರ ಆರ್ಥಿಕ ಸ್ಥಿತಿ ಚೆನ್ನಾಗಿರುತ್ತದೆ, ಆದರೆ ಆರೋಗ್ಯ ಚೆನ್ನಾಗಿರುವುದಿಲ್ಲ ಇತ್ಯಾದಿ. ಜನ್ಮಕುಂಡಲಿಯಿಂದ ‘ವ್ಯಕ್ತಿಯ ಜೀವನದಲ್ಲಿ ಯಾವ ವಿಷಯಗಳು ಅನುಕೂಲ ಮತ್ತು ಯಾವ ವಿಷಯಗಳು ಪ್ರತಿಕೂಲ ಆಗಿವೆ ಎಂಬುದು ತಿಳಿಯುತ್ತದೆ. ಇದರಿಂದ ಜೀವನದಲ್ಲಿ ಯಾವ ವಿಷಯಗಳ ಅನುಕೂಲತೆ ಇಲ್ಲವೋ, ಆ ವಿಷಯಗಳ ಬಗ್ಗೆ ಕೆಡುಕೆನಿಸಿಕೊಳ್ಳದೇ, ಯಾವ ವಿಷಯಗಳ ಅನುಕೂಲತೆ ಇದೆಯೋ, ಅವುಗಳ ಕಡೆಗೆ ಗಮನಕೊಟ್ಟು ಅವುಗಳ ಸದುಪಯೋಗ ಮಾಡಿಕೊಳ್ಳುವ ಸಕಾರಾತ್ಮಕ ದೃಷ್ಟಿಕೋನವು ಜ್ಯೋತಿಷ್ಯಶಾಸ್ತ್ರದಿಂದ ಸಿಗುತ್ತದೆ.
೧ ಆ. ವ್ಯಕ್ತಿಯ ಪ್ರಕೃತಿಗೆ ಅನುಕೂಲವಾಗಿರುವ ಕಾರ್ಯಕ್ಷೇತ್ರದ ಸಂದರ್ಭದಲ್ಲಿ ದೃಷ್ಟಿಕೋನ ನೀಡಲು ಸಾಧ್ಯವಾಗುವುದು : ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿ ಬೇರೆಯಾಗಿರುತ್ತದೆ. ಸಾಮಾನ್ಯವಾಗಿ ೩ ವಿಧದ ವ್ಯಕ್ತಿತ್ವವಿರುತ್ತದೆ.
೧ ಆ ೧. ಚರ ಸ್ವಭಾವ : ಕೆಲವು ವ್ಯಕ್ತಿಗಳು ಜನ್ಮದಿಂದಲೆ ಗತಿಶೀಲರು, ಕಾರ್ಯತತ್ಪರ, ಮಹತ್ವಾಕಾಂಕ್ಷಿ, ಧೈರ್ಯಶಾಲಿ, ಮುಂದಾಳತ್ವ ವಹಿಸುವ ಮತ್ತು ಶಾರೀರಿಕ ಬಲ ಇರುವವರಾಗಿರುತ್ತಾರೆ. ಇದಕ್ಕೆ ಜ್ಯೋತಿಷ್ಯಶಾಸ್ತ್ರದಲ್ಲಿ ‘ಚರ ಸ್ವಭಾವ ಎನ್ನುತ್ತಾರೆ.
೧ ಆ ೨. ಸ್ಥಿರ ಸ್ವಭಾವ : ಕೆಲವು ವ್ಯಕ್ತಿಗಳು ಒಂದೇ ಸ್ಥಳದಲ್ಲಿ ಸ್ಥಿರವಾಗಿರುವ, ಉನ್ನತ ಪದವಿಯನ್ನು ಗಳಿಸಲು ಪ್ರಯತ್ನ ಪಡುವ, ಅಧಿಕಾರಿವೃತ್ತಿ ಇರುವ, ವ್ಯವಹಾರಬುದ್ಧಿ ಲಭಿಸಿದ ಮತ್ತು ಸುಖಿಯಾಗಿರುತ್ತಾರೆ. ಇದಕ್ಕೆ ‘ಸ್ಥಿರ ಸ್ವಭಾವ ಎನ್ನುತ್ತಾರೆ.
೧ ಆ ೩. ದ್ವಿಸ್ವಭಾವ : ಕೆಲವು ವ್ಯಕ್ತಿಗಳು ಕೆಲವೊಮ್ಮೆ ಗತಿಮಾನ ಮತ್ತು ಕೆಲವೊಮ್ಮೆ ಸ್ಥಿರ, ತರ್ಕಶಕ್ತಿ ಲಭಿಸಿದ, ವಿಷಯದ ಆಳಕ್ಕೆ ಹೋಗುವ, ಜ್ಞಾನವನ್ನು ಪಡೆಯಲು ಪ್ರಯತ್ನಿಸುವ, ಬೌದ್ಧಿಕ ಬಲವಿರುವ ಮತ್ತು ವಿರಕ್ತರಾಗಿರುತ್ತಾರೆ. ಇದಕ್ಕೆ ‘ದ್ವಿಸ್ವಭಾವ ಎನ್ನುತ್ತಾರೆ. ವ್ಯಕ್ತಿಯ ಜನ್ಮಕುಂಡಲಿಯಿಂದ ಅವನ ಪ್ರಕೃತಿಯ ಬಗ್ಗೆ ಒಳ್ಳೆಯ ರೀತಿಯಲ್ಲಿ ಕಲ್ಪನೆ ಸಿಗುತ್ತದೆ. ವ್ಯಕ್ತಿಯ ಪ್ರಕೃತಿಯು ಅವನ ಶಿಕ್ಷಣಕ್ಷೇತ್ರಕ್ಕೆ ಮತ್ತು ಕಾರ್ಯಕ್ಷೇತ್ರಕ್ಕೆ ಸಂಬಂಧಿಸಿರುತ್ತದೆ. ಚರ ಸ್ವಭಾವದ ವ್ಯಕ್ತಿಯು ವೈದ್ಯಕೀಯ, ಅಭಿಯಂತ (ಇಂಜನಿಯರ್), ಸುರಕ್ಷಾವ್ಯವಸ್ಥೆ, ಉತ್ಪಾದನೆ, ರಾಜಕಾರಣ, ಪ್ರಸಾರಮಾಧ್ಯಮ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ಮುಂಚೂಣಿ ಯಲ್ಲಿರುತ್ತಾನೆ. ಸ್ಥಿರ ಸ್ವಭಾವದ ವ್ಯಕ್ತಿಯು ಆಡಳಿತ, ವ್ಯವಸ್ಥಾಪನೆ, ವ್ಯಾಪಾರ, ಹಣಕಾಸು, ಲೇಖಪಾಲ, ವಾಣಿಜ್ಯ, ಕಲೆ ಇತ್ಯಾದಿ ಕ್ಷೇತ್ರಗಳಲ್ಲಿ ಮಂಚೂಣಿಯಲ್ಲಿರುತ್ತಾನೆ. ದ್ವಿಸ್ವಭಾವದ ವ್ಯಕ್ತಿ ಸಂಶೋಧನೆ, ತತ್ತ್ವಜ್ಞಾನ, ವಿದ್ಯೆ, ಶಿಕ್ಷಣ ಸಂಸ್ಥೆ, ನ್ಯಾಯ ಪ್ರಣಾಲಿ, ಸಮುಪದೇಶ, ಸಮನ್ವಯ ಇತ್ಯಾದಿ ಕ್ಷೇತ್ರಗಳಲ್ಲಿ ಪ್ರವೀಣ ನಾಗಿರುತ್ತಾನೆ. ಜನ್ಮಕುಂಡಲಿಯ ಮಾಧ್ಯಮದಿಂದ ವ್ಯಕ್ತಿಗೆ ಅವನ ಪ್ರಕೃತಿಗೆ ಅನುಕೂಲವಾಗಿರುವ ಶಿಕ್ಷಣ ಮತ್ತು ಕಾರ್ಯ ಕ್ಷೇತ್ರಗಳ ವಿಷಯದಲ್ಲಿ ದೃಷ್ಟಿಕೋನ ನೀಡಲು ಸಾಧ್ಯವಾಗುತ್ತದೆ.
೧ ಇ. ವ್ಯಕ್ತಿಯ ಜೀವನದಲ್ಲಿನ ಅನುಕೂಲ ಮತ್ತು ಪ್ರತಿಕೂಲ ಕಾಲ ತಿಳಿಯುವುದು :
ಕಾಲವು ಪರಿವರ್ತನಶೀಲವಾಗಿದೆ. ಆದುದರಿಂದ ಪರಿಸ್ಥಿತಿಯೂ ಪರಿವರ್ತನಶೀಲವಾಗಿದೆ. ಯಾವುದೇ ಒಳ್ಳೆಯ ಅಥವಾ ಕೆಟ್ಟ ಪರಿಸ್ಥಿತಿಯು ಶಾಶ್ವತ ಉಳಿಯುವುದಿಲ್ಲ. ಅದೇ ರೀತಿ ಜನ್ಮಕುಂಡಲಿಯಲ್ಲಿರುವ ಶುಭ ಅಥವಾ ಅಶುಭ ಗ್ರಹಯೋಗಗಳ ಫಲವೂ ಸಂಪೂರ್ಣ ಜೀವನದಲ್ಲಿ ಸಮಾನವಾಗಿ ಸಿಗುವುದಿಲ್ಲ. ಆ ಫಲಗಳು ವಿಶಿಷ್ಟ ಕಾಲಾವಧಿಯಲ್ಲಿ ಹೇರಳವಾಗಿ ಸಿಗುತ್ತವೆ. ಜ್ಯೋತಿಷ್ಯಶಾಸ್ತ್ರದಲ್ಲಿ ಕಾಲನಿರ್ಣಯದ ವಿವಿಧ ಪದ್ಧತಿಗಳಿವೆ. ಈ ಪದ್ಧತಿಗಳ ಮೂಲಕ ನಮ್ಮ ಜೀವನದ ವಿಶಿಷ್ಟ ಕಾಲ ಯಾವ ವಿಷಯಕ್ಕಾಗಿ ಅನುಕೂಲ ಅಥವಾ ಪ್ರತಿಕೂಲವಾಗಿದೆ, ಎಂಬುದು ತಿಳಿಯುತ್ತದೆ.
೧ ಈ. ಜನ್ಮಕುಂಡಲಿಯಿಂದ ವ್ಯಕ್ತಿಯ ಸಮಸ್ಯೆಗಳ ಹಿಂದಿನ ಆಧ್ಯಾತ್ಮಿಕ ಕಾರಣಗಳು ತಿಳಿಯುವುದು :
ಜೀವನದಲ್ಲಿನ ಪ್ರತಿ ಯೊಂದು ಸಮಸ್ಯೆಯ ಹಿಂದೆ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಸಮಸ್ಯೆಗಳ ಹಿಂದಿನ ಶಾರೀರಿಕ ಮತ್ತು ಮಾನಸಿಕ ಕಾರಣಗಳು ಬುದ್ಧಿಗೆ ತಿಳಿಯುತ್ತವೆ ಮತ್ತು ಅವುಗಳಿಗೆ ವ್ಯವಹಾರದಲ್ಲಿ ಪರಿಹಾರ ಸಿಗುತ್ತವೆ. ಸಮಸ್ಯೆಗಳ ಹಿಂದಿನ ಆಧ್ಯಾತ್ಮಿಕ ಕಾರಣಗಳು ಮಾತ್ರ ಬುದ್ಧಿಗೆ ತಿಳಿಯುವುದಿಲ್ಲ, ಉದಾ. ಅತೃಪ್ತ ಪೂರ್ವಜರ ತೊಂದರೆ, ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ತೊಂದರೆ, ಪ್ರಾರಬ್ಧ ಇತ್ಯಾದಿಗಳಿಂದ ಉದ್ಭವಿಸಿದ ವಿವಿಧ ಸಮಸ್ಯೆಗಳು. ಇಂತಹ ಸಮಸ್ಯೆಗಳಿಗೆ ಶಾರೀರಿಕ ಮತ್ತು ಮಾನಸಿಕ ಸ್ತರದಲ್ಲಿನ ಉಪಾಯಗಳಿಗೆ ಮಿತಿಯಿರುತ್ತದೆ. ಇಂತಹ ಸಮಸ್ಯೆಗಳಿಗೆ ದೇವತೆಗಳ ನಾಮಜಪ ಮಾಡುವುದು, ಧಾರ್ಮಿಕ ವಿಧಿ ಮಾಡುವುದು, ತೀರ್ಥಕ್ಷೇತ್ರಗಳಿಗೆ ಹೋಗು ವುದು, ಸಂತಸೇವೆ ಮಾಡುವುದು, ಪ್ರಾಯಶ್ಚಿತ್ತ ತೆಗೆದು ಕೊಳ್ಳುವುದು ಇತ್ಯಾದಿ ಆಧ್ಯಾತ್ಮಿಕ ಸ್ತರದ ಉಪಾಯಗಳು ಅನ್ವಯವಾಗುತ್ತವೆ. ಜನ್ಮಕುಂಡಲಿಯಿಂದ ವ್ಯಕ್ತಿಯ ಸಮಸ್ಯೆಗಳ ಹಿಂದಿನ ಆಧ್ಯಾತ್ಮಿಕ ಕಾರಣಗಳು ತಿಳಿದು ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ದಿಶೆಯನ್ನು ನೀಡಬಹುದು.
೧ ಉ. ಸಮಸ್ಯೆಗಳ ನಿವಾರಣೆಗಾಗಿ ನವಗ್ರಹಗಳ ಉಪಾಸನೆ ಯನ್ನು ಹೇಳುವುದು :
‘ದೈವೀ ಉಪಾಸನೆ ಇದು ಹಿಂದೂ ಧರ್ಮದ ವೈಶಿಷ್ಟ್ಯವಾಗಿದೆ. ಉಪಾಸನೆಯ ಮೂಲಕ ವ್ಯಕ್ತಿಗೆ ಆವಶ್ಯಕವಿರುವ ಸೂಕ್ಷ್ಮ-ಊರ್ಜೆ ಪ್ರಾಪ್ತವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹದೇವತೆಗಳ ಉಪಾಸನೆ ಮಹತ್ವದ್ದಾಗಿದೆ. ಯಾವ ಗ್ರಹಕ್ಕೆ ಸಂಬಂಧಿಸಿದ ಸೂಕ್ಷ್ಮ-ಊರ್ಜೆ ವ್ಯಕ್ತಿಯಲ್ಲಿ ಕಡಿಮೆಯಿದೆ, ಆ ಗ್ರಹಕ್ಕೆ ಸಂಬಂಧಿಸಿದ ಉಪಾಸನೆಯನ್ನು ಮಾಡಲು ಅವನಿಗೆ ಹೇಳಲಾಗುತ್ತದೆ. ಗ್ರಹಗಳಿಗೆ ಸಂಬಂಧಿಸಿದ ರತ್ನವನ್ನು ಧರಿಸುವುದು, ಮಂತ್ರಜಪ ಮಾಡುವುದು, ಯಜ್ಞ ಮಾಡುವುದು, ನಾಮಜಪ ಮಾಡುವುದು ಇತ್ಯಾದಿ ಗ್ರಹ-ಉಪಾಸನೆಯ ವಿಧ ಗಳಿವೆ. ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳ ಹಿಂದೆ ಆಧ್ಯಾತ್ಮಿಕ ಕಾರಣ ಗಳಿರುತ್ತವೆ; ಆದುದರಿಂದ ವ್ಯಾವಹಾರಿಕ ಪ್ರಯತ್ನಗಳಿಗೆ ದೈವೀ ಉಪಾಸನೆಯ ಜೊತೆಯನ್ನು ನೀಡುವುದು ಆವಶ್ಯಕವಾಗಿದೆ.
೨. ಸಾಮಾಜಿಕ ಸ್ತರ
೨ ಅ. ಶುಭಾಶುಭ ದಿನಗಳ ಜ್ಞಾನವಾಗುವುದು : ‘ಕಾಲದ ಪ್ರಭಾವ ವನ್ನು ಗುರುತಿಸಲು ಜ್ಯೋತಿಷ್ಯಶಾಸ್ತ್ರವು ಉಗಮವಾಯಿತು. ಜ್ಯೋತಿಷ್ಯ ಶಾಸ್ತ್ರದಿಂದ ಶುಭಾಶುಭ ದಿನಗಳ ಜ್ಞಾನವಾಗುತ್ತದೆ. ಭಾರತ ದಲ್ಲಿ ವೈದಿಕ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಮತ್ತು ಧಾರ್ಮಿಕ ಸಂಸ್ಕಾರಗಳನ್ನು ಶುಭ ಮುಹೂರ್ತದಲ್ಲಿ ಮಾಡುವ ಪರಂಪರೆಯಿದೆ. ‘ಕಾಲಕ್ಕನುಸಾರ ಮಾಡಿದ ಕಾರ್ಯಕ್ಕೆ ಯಶಸ್ಸು ಲಭಿಸುತ್ತದೆ, ಎಂಬುದು ಅದರ ಹಿಂದಿನ ದೃಷ್ಟಿಕೋನವಾಗಿದೆ.
೨ ಆ. ಕಾಲದ ಸ್ವರೂಪದ ಜ್ಞಾನ ಆಗುವುದು : ಸೃಷ್ಟಿಯಲ್ಲಿನ ಎಲ್ಲ ಕ್ರಿಯೆಗಳು ಕಾಲದ ಆಶ್ರಯದಿಂದ ಘಟಿಸುತ್ತವೆ. ಕಾಲ ತಾನು ಸ್ವತಃ ಕರ್ಮಗಳನ್ನು ಮಾಡುವುದಿಲ್ಲ; ಆದರೆ ಅದು ಸೃಷ್ಟಿಯ ಆಶ್ರಯವಾಗಿರುವುದರಿಂದ ಅದಕ್ಕೆ ಸತ್ತ್ವ, ರಜ ಮತ್ತು ತಮ ಈ ಗುಣಗಳ ಉಪಾಧಿಯನ್ನು ನೀಡಲಾಗುತ್ತದೆ. ಕಾಲ ಸಾತ್ತ್ವಿಕವಾಗಿರುವಾಗ ಉತ್ಪತ್ತಿ, ನವನಿರ್ಮಿತಿ, ರಚನಾತ್ಮಕ ಕಾರ್ಯ, ಜ್ಞಾನವೃದ್ಧಿ ಮತ್ತು ಧರ್ಮಸಂಸ್ಥಾಪನೆಯಾಗಿ ಸಮಾಜದ ಲೌಕಿಕ ಮತ್ತು ಆಧ್ಯಾತ್ಮಿಕ ಉತ್ಕರ್ಷವಾಗುತ್ತದೆ. ಕಾಲವು ತಾಮಸಿಕ ಇರುವಾಗ ವಿನಾಶ, ಅಜ್ಞಾನ, ಷಡ್ರಿಪು, ಭೋಗವಾದ ಮತ್ತು ಅಸುರೀವೃತ್ತಿ ಪ್ರಬಲವಾಗುತ್ತದೆ. ಭಾರತೀಯ ಜ್ಯೋತಿಷ್ಯಶಾಸ್ತ್ರದಲ್ಲಿನ ಯುಗಪದ್ಧತಿಯಿಂದ ಕಾಲದ ಜ್ಞಾನವು ಒಳ್ಳೆಯ ರೀತಿಯಿಂದ ಆಗುತ್ತದೆ.
೨ ಇ. ಸಮಾಜದ ಪ್ರಾರಬ್ಧ ತಿಳಿಯುವುದು : ಒಂದು ಶರೀರದಲ್ಲಿ ಒಂದು ಆತ್ಮ ವಾಸ ಮಾಡುತ್ತದೆ ಮತ್ತು ಒಂದು ರಾಷ್ಟ್ರದಲ್ಲಿ ಅನೇಕ ವ್ಯಕ್ತಿಗಳು, ಅಂದರೆ ಅನೇಕ ಆತ್ಮಗಳು ವಾಸಿಸುತ್ತವೆ. ಒಬ್ಬ ವ್ಯಕ್ತಿಯು ಮಾಡಿದ ಒಳ್ಳೆಯ ಅಥವಾ ಕುಕರ್ಮಗಳ ಫಲವನ್ನು ಆ ವ್ಯಕ್ತಿಯೇ ಅನುಭವಿಸಬೇಕಾಗುತ್ತದೆ; ಇದಕ್ಕೆ ನಾವು ‘ವ್ಯಷ್ಟಿ ಪ್ರಾರಬ್ಧ ಎಂದೂ ಒಂದು ರಾಷ್ಟ್ರದ ಜನರ ಒಟ್ಟು ಕರ್ಮಗಳ ಫಲವನ್ನು ಆ ರಾಷ್ಟ್ರವು ಅನುಭವಿಸಬೇಕಾಗುತ್ತದೆ. ಇದಕ್ಕೆ ‘ಸಮಷ್ಟಿ ಪ್ರಾರಬ್ಧ ಎನ್ನುತ್ತಾರೆ. ವ್ಯಕ್ತಿಯ ಹಾಗೆಯೆ ರಾಷ್ಟ್ರದ ಕುಂಡಲಿಯೂ ಇರುತ್ತದೆ. ಜ್ಯೋತಿಷ್ಯಶಾಸ್ತ್ರದ ‘ಮೆದನೀಯ (‘ಪೃಥ್ವಿಯ) ಶಾಖೆಯಲ್ಲಿ ಗ್ರಹಗಳ ಸ್ಥಿತಿಯಿಂದ ರಾಷ್ಟ್ರದ ಮೇಲಾಗುವ ಪರಿಣಾಮವನ್ನು ಅಧ್ಯಯನ ಮಾಡಲಾಗುತ್ತದೆ. ಗುರು, ಶನಿ, ಹರ್ಷಲ (ಯುರೆನಸ್) ಇತ್ಯಾದಿ ದೊಡ್ಡ ಗ್ರಹಗಳಲ್ಲಿ ಮಹತ್ವದ ಯೋಗವಾದಾಗ ದೊಡ್ಡ ಸ್ಥಿತ್ಯಂತರಗಳಾಗುತ್ತವೆ. ಮೇದಿನೀಯ ಜ್ಯೋತಿಷ್ಯಶಾಸ್ತ್ರದ ಮೂಲಕ ರಾಷ್ಟ್ರ ಮತ್ತು ವಿಶ್ವದ ವಿಷಯದಲ್ಲಿ ಮುಂಬರುವ ಕಾಲದ ಸ್ವರೂಪ ಹೇಗಿದೆ ಎಂದು ತಿಳಿಯಬಹುದು.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೩.೨.೨೦೨೩)