2025 ರಲ್ಲಿ ಬರಲಿರುವ ಸೌರ ಬಿರುಗಾಳಿಯಿಂದ ಜಗತ್ತಿನಾದ್ಯಂತ ಇಂಟರ್ನೆಟ್ ವ್ಯವಸ್ಥೆ ಸಂಪೂರ್ಣ ನಾಶವಾಗುವ ಸಾಧ್ಯತೆ !

ನ್ಯೂಯಾರ್ಕ (ಅಮೇರಿಕಾ) – ಪ್ರಸ್ತುತ ಜಗತ್ತಿನಲ್ಲಿ ಇಂಟರ್ನೆಟ್ ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಭಾರತದ ವಿಚಾರವನ್ನು ಮಾಡಿದರೆ, ಕನಿಷ್ಟ 80 ಕೋಟಿ ಭಾರತೀಯರು ಇಂಟರ್ನೆಟ್ ಬಳಸುತ್ತಾರೆ. ಹೀಗಿದ್ದರೂ. 2025 ರಲ್ಲಿ ಇಂಟರ್ನೆಟ್ ವ್ಯವಸ್ಥೆಯೇ ಸಂಪೂರ್ಣ ನಾಶವಾಗಬಹುದು ಅಂತಹ ಸಾಧ್ಯತೆಯ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಥವಾ ಆ ಸಮಯದಲ್ಲಿ ಭೂಮಿಗೆ ಒಂದು ವಿನಾಶಕಾರಿ ಸೌರ ಬಿರುಗಾಳಿ ಅಪ್ಪಳಿಸಬಹುದು, ಇದರಿಂದ ಜಗತ್ತಿನಾದ್ಯಂತ ಇಂಟರ್ನೆಟ್ ನಿರುಪಯುಕ್ತವಾಗುವ ಸಾಧ್ಯತೆಯಿದೆ. ಇದನ್ನು `ಇಂಟರ್ನೆಟ್ ಅಪೊಕಾಲಿಪ್ಸ್’ ಸಂಜ್ಞೆಯಿಂದ ಹೇಳಲಾಗಿದೆ.

1. ಸೌರ ಬಿರುಗಾಳಿಯಲ್ಲಿ `ಇಲೆಕ್ಟ್ರೊಮ್ಯಾಗ್ನೆಟಿಕ್ ಪಲ್ಸ್’ ಅಂದರೆ ವಿದ್ಯುತ್ ಕಾಂತೀಯ ಕಂಪನಗಳನ್ನು ಹೊಂದಿರುತ್ತವೆ. ಅವುಗಳ ತೀವ್ರತೆಯು ಅಧಿಕವಾಗಿದ್ದರೆ, ಅವು ಭೂಮಿಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರಬಹುದು.

2. ಅಮೇರಿಕಾದ `ನ್ಯಾಶನಲ್ ಓಶಿನಿಕ್ ಅಂಡ್ ಅಟ್ಮಾಸ್ಫಿಅರಿಕ್’ ಅಡ್ಮಿನಿಸ್ಟ್ರೇಶನ್’ನ ವಕ್ತಾರರು, ಆಕಾಶಗಂಗೆಯ ಮಳೆಯ ಬಿರುಗಾಳಿಗಳ ತರಂಗಗಳ ಆವರ್ತನವನ್ನು ಅಧ್ಯಯನ ನಡೆಸಲು ಸೂರ್ಯನ ಸೌರ ಬಿರುಗಾಳಿಗಳನ್ನು ಗುರಿ ಮಾಡಲಾಗಿದೆ. ಇದರಿಂದ ಬಿರುಗಾಳಿಗಳ ತರಂಗಗಳ ಆವರ್ತನೆಯ ಒಂದು ಕಲ್ಪನೆಯನ್ನು ನೀಡುತ್ತದೆ. ಸೌರ ಬಿರುಗಾಳಿಯಿಂದ `ರೇಡಿಯೋ ಬ್ಲಾಕ್ ಔಟ್’ ಆಗಿ ಇಂಟರ್ನೆಟ್ ಸ್ಥಗಿತಗೊಳ್ಳಬಹುದು ಎಂದು ಹೇಳಿದ್ದಾರೆ.

3. ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ `ನಾಸಾ’ವು, 1755 ರಿಂದ ಸೌರ ಬಿರುಗಾಳಿಗಳ ತರಂಗಗಳ ಆವರ್ತನೆಗಳ ತಪಾಸಣೆಯನ್ನು ದಾಖಲಿಸಿಕೊಳ್ಳಲು ಪ್ರಾರಂಭವಾಯಿತು. ಆಗಿನಿಂದ ಇಲ್ಲಿಯವರೆಗೆ 25 ಸಲ ಸೌರ ಬಿರುಗಾಳಿಯಾಗಿದೆ. ನಾಸಾ `2025 ರ ಸೌರ ಬಿರುಗಾಳಿಯಿಂದ ಇಂಟರ್ನೆಟ್ ಗೆ ಅಪಾಯ ಎದುರಾಗಬಹುದು’ ಈ ಬಗ್ಗೆ ನಾಸಾ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

4. ಕ್ಯಾಲಿಫೋರ್ನಿಯಾ `ಯೂನಿವರ್ಸಿಟಿ ಆಫ್ ಕಂಪ್ಯೂಟರ ಸಾಯನ್ಸ’ ಪ್ರಾಧ್ಯಾಪಕಿ ಸಂಗಿತಾ ಅಬ್ದು ಜ್ಯೋತಿಯವರ ಹೇಳಿಕೆಯಂತೆ, ಈ ಬಾರಿಯ ಸೌರ ಬಿರುಗಾಳಿಯು ವೇಗವಾಗಿರಲಿದೆ. ಅದರಿಂದಾಗಿಯೇ ಸಂಪೂರ್ಣ ಜಗತ್ತು ಇಂಟರ್ನೆಟ್ ಅವಲಂಬಿಸಿದೆ. ಈ ಬಿರುಗಾಳಿ ಇಂಟರ್ನೆಟ್ ಮೇಲೆ ಎಷ್ಟು ಮಟ್ಟಿಗೆ ಪರಿಣಾಮ ಬೀರುತ್ತದೆಯೆನ್ನುವುದು ಹೇಳುವುದು ಕಠಿಣವಾಗಿದೆ ಎಂದು ಹೇಳಿದ್ದಾರೆ.