ಭಾರತದ ಯಶಸ್ವಿ ವಿದೇಶನೀತಿ !

ಭಾರತವು ಸತತ ಆಕ್ರಮಕ ವಿದೇಶನೀತಿಯನ್ನು ಅಂಗೀಕರಿಸಿದರೆ, ಅದು ಮುಂದೊಂದು ದಿನ ಜಾಗತಿಕ ಸ್ತರದಲ್ಲಿ ಉಜ್ವಲ ಸ್ಥಾನವನ್ನು ನಿರ್ಮಾಣ ಮಾಡುವುದು !

೧. ಜಾಗತಿಕ ಸ್ತರದಲ್ಲಿ ಭಾರತದ ಉಜ್ವಲ ಸ್ಥಾನ ನಿರ್ಮಿಸುವ ಕಾಲ

‘ಕಳೆದ ಒಂದು ದಶಕಗಳಿಗಿಂತಲೂ ಕಡಿಮೆ ಕಾಲಾವಧಿಯಲ್ಲಿ ಭಾರತದ ಜಾಗತಿಕ ನಿಲುವಿನಲ್ಲಿ ಅಮೂಲ್ಯ ಪರಿವರ್ತನೆಯಾಗಿದೆ. ಪ್ರತಿಯೊಂದು ಜಾಗತಿಕ ಸಮಸ್ಯೆಯ ಸಮಯದಲ್ಲಿ ತಥಾಕಥಿತ ಪ್ರಮುಖ ದೇಶಗಳ ಗಮನ ಭಾರತ ಏನು ಮಾಡುತ್ತದೆ ಎಂಬುದರ ಕಡೆಗೆ ಇರುತ್ತದೆ. ರಷ್ಯಾ ಹಾಗೂ ಯುಕ್ರೇನ್ ಯುದ್ಧದ ಸಮಯದಲ್ಲಿ ನಾವು ಇದೆಲ್ಲವನ್ನೂ ನೋಡಿದ್ದೇವೆ. ಈಗ ಭಾರತಕ್ಕೆ ಭದ್ರತಾಪರಿಷತ್ತಿನ ಶಾಶ್ವತ ಸದಸ್ಯತ್ವ ಸಿಗುವ ಸಮಯ ಬಂದಿದೆ. ಅದರಿಂದ ವಿಶ್ವಶಾಂತಿಯ ಮಾರ್ಗ ಸುಲಭವಾಗಬಹುದು. ಭಾರತವು ‘ಜೀ ೨೦’ಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದೆ. (ಜೀ ೨೦ ಅಂದರೆ ಜಗತ್ತಿನ ಸಂಪೂರ್ಣ ಉತ್ಪನ್ನದ ಶೇ. ೮೦ ಕ್ಕಿಂತ ಹೆಚ್ಚು ಉತ್ಪನ್ನವಿರುವ ೧೯ ದೇಶಗಳು ಮತ್ತು ಯುರೋಪಿಯನ್ ಯೂನಿಯನ್‌ನ (ಇದರಲ್ಲಿ ೨೭ ದೇಶಗಳಿವೆ.) ಹಣಕಾಸು ಸಚಿವರು ಹಾಗೂ ಮಧ್ಯವರ್ತಿ ಬ್ಯಾಂಕ್‌ಗಳ ಗವರ್ನರ್ ಇವರ ಸಂಘಟನೆ) ಜಾಗತಿಕ ನೀತಿಯನ್ನು ನಡೆಸಲು ವಿಶ್ವ ಸಂಸ್ಥೆಯ ತುಲನೆಯಲ್ಲಿ ‘ಜೀ ೨೦’ ಇದು ಮಹತ್ವದ ವೇದಿಕೆಯಾಗಿದೆ. ಭಾರತ ಮಹತ್ವಪೂರ್ಣ ವಿಷಯಗಳ ನೇತೃತ್ವವನ್ನು ಮಾಡಲು ಹಾಗೂ ಜಗತ್ತಿನ ಮುಂದೆ ಬರುವ ಸಮಸ್ಯೆಗಳನ್ನು ಯೋಗ್ಯ ರೀತಿಯಲ್ಲಿ ನಿವಾರಿಸಲು ಒಳ್ಳೆಯ ರೀತಿಯಲ್ಲಿ ಸಿದ್ಧವಾಗಿರುವಾಗ, ಈ ಸನ್ಮಾನವು ನಮಗೆ ಪ್ರಾಪ್ತವಾಗಿದೆ.

ಭಾರತದ ‘ಜೀ- ೨೦’ಯ ಅಧ್ಯಕ್ಷಪದದ ಕಾರ್ಯಕಾಲವು ಭಾರತದ ಜಾಗತಿಕ ದೃಷ್ಟಿಕೋನದ ಕಾರ್ಯಕ್ರಮ, ಹಾಗೆಯೇ ಜಾಗತಿಕ ವಿಕಾಸ ಹಾಗೂ ಪ್ರಗತಿಯ ನೇತೃತ್ವ ಮಾಡುವ ಸ್ವರೂಪದಲ್ಲಿ ಮೇಲೆಬರುವ ಕಾರ್ಯಕಾಲವಾಗಿರುವುದು. ಭಾರತವು ರಾಷ್ಟ್ರೀಯ ಹಾಗೂ ಜಾಗತಿಕ ಹಿತವನ್ನು ಸಾಧಿಸಲು ಪ್ರಯತ್ನಿಸುವುದು, ಎಂದು ನಿಶ್ಚಿತವಾಗಿ ಹೇಳಬಹುದು; ಏಕೆಂದರೆ ಮುಂಬರುವ ಜಾಗತಿಕ ನೇತೃತ್ವದೊಂದಿಗೆ ಜಾಗತಿಕ ಸ್ತರದಲ್ಲಿ ಭಾರತದ ಒಂದು ಉಜ್ವಲ ಸ್ಥಾನ ನಿರ್ಮಾಣವಾಗುತ್ತಿದೆ.

೨. ಆಸ್ಟ್ರಿಯಾದಲ್ಲಿ ವಿದೇಶ ಸಚಿವ ಡಾ. ಎಸ್. ಜಯಶಂಕರ ಇವರಿಂದ ಪಾಕಿಸ್ತಾನಪ್ರೇಮಿ ಪತ್ರಕರ್ತನಿಗೆ ಖಂಡತುಂಡ ಉತ್ತರ !

ಒಂದಾನೊಂದು ಕಾಲದಲ್ಲಿ ವಿದೇಶ ನೀತಿಯು ಭಾರತಕ್ಕೆ ಬಹಳ ದೂರದ ವಿಷಯವಾಗಿದೆ ಎಂದು ತಿಳಿದುಕೊಳ್ಳಲಾಗಿತ್ತು, ಅದನ್ನು ‘ಸೌತ್ ಬ್ಲಾಕ್’ನಲ್ಲಿ ಕುಳಿತುಕೊಂಡು ನಿಶ್ಚಯಿಸಲಾಗುತ್ತದೆ ಮತ್ತು ಅದನ್ನು ತಿಳಿದುಕೊಳ್ಳುವುದು ದೇಶದ ಸಾಮಾನ್ಯ ನಾಗರಿಕರ ಕೆಲಸವಾಗಿಲ್ಲ, ಎನ್ನುವ ಅಭಿಪ್ರಾಯವಿತ್ತು. ಈಗ ಈ ವಿಷಯ ಬಹಳ ಹಳೆಯದಾಗಿದೆ. ಇಂದು ದೇಶದಲ್ಲಿನ ಪ್ರತಿಯೊಬ್ಬ ಯುವಕನಿಗೆ ದೇಶದ ವಿದೇಶ ನೀತಿಯ ಬಗ್ಗೆ ಜಿಜ್ಞಾಸೆ ಇದೆ. ಈ ಪರಿವರ್ತನೆಯ ಮಹತ್ವದ ಕಾರಣವೆಂದರೆ, ವಿಶ್ವ ಸ್ತರದಲ್ಲಿನ ಭಾರತದ ಸ್ವಂತದ ಸರಿಯಾದ ನಿಲುವುಗಳು ಹಾಗೂ ಅವುಗಳಿಂದಾಗಿರುವ ಸಕಾರಾತ್ಮಕ ಪರಿಣಾಮ ! ವಿದೇಶ ನೀತಿಯಲ್ಲಿ ಭಾರತದ ಧ್ವಜ ಯಾವುದರಿಂದ ಇಷ್ಟೊಂದು ಹಾರಾಡುತ್ತಿರಬೇಕು ? ಎಂಬ ಪ್ರಶ್ನೆಯ ಉತ್ತರ ಕಳೆದ ೮ ವರ್ಷಗಳಿಂದ ಭಾರತದಿಂದ ನಡೆಸಲ್ಪಡುವ ಅಭಿಮಾನಾಸ್ಪದ ನಿಲುವುಗಳಲ್ಲಿ ನಮಗೆ ಸಿಗಬಹುದು. ಈ ವಿಷಯದ ಸದ್ಯದ ಒಂದು ಉದಾಹರಣೆ, ಎಂದರೆ ಯುರೋಪ್ ಪ್ರವಾಸದ ಸಮಯದಲ್ಲಿ ಆಸ್ಟ್ರಿಯಾ ದೇಶ ಭಾರತದ ವಿದೇಶಸಚಿವ ಡಾ. ಎಸ್. ಜಯಶಂಕರ ಇವರಿಗೆ ಆಮಂತ್ರಣ ನೀಡಿತ್ತು, ಅಲ್ಲಿ ಒಂದು ಪ್ರಸಿದ್ಧ ವಾಹಿನಿಯಲ್ಲಿ ಅವರ ಸಂಭಾಷಣೆ ಪ್ರಸಿದ್ಧವಾಯಿತು. ಅದು ಯುರೋಪ್ ಸಹಿತ ಸಂಪೂರ್ಣ ಜಗತ್ತಿನಲ್ಲಿ ಪ್ರಸಾರವಾಯಿತು. ಅದರಲ್ಲಿ ಒಬ್ಬ ಪತ್ರಕರ್ತನು ಡಾ. ಎಸ್. ಜಯಶಂಕರ ಇವರಿಗೆ ಪಾಕಿಸ್ತಾನ ಅಥವಾ ಯುರೋಪ್‌ನ ಪರವಾಗಿ ಪ್ರಶ್ನೆಗಳನ್ನು ಕೇಳಿದನು, ಎಲ್ಲಕ್ಕಿಂತ ಮೊದಲು ಅವನು, ‘ತಾವು ಯಾವಾಗಲೂ ಪಾಕಿಸ್ತಾನವನ್ನು ‘ಉಗ್ರವಾದದ ಕೇಂದ್ರ ಎಂದು ಏಕೆ ಹೇಳುತ್ತಿರುತ್ತೀರಿ ?’ ಎಂದು ಕೇಳಿದನು. ಅದಕ್ಕೆ ಡಾ. ಎಸ್. ಜಯಶಂಕರ ಇವರು ಮುಂದಿನಂತೆ ಹೇಳಿದರು, “ನಾನು ಡಿಪ್ಲೋಮ್ಯಟ್ (ವಿದೇಶ ನೀತಿಯಲ್ಲಿ ನಿಪುಣ ಅಧಿಕಾರಿ) ಆಗಿರುವುದರಿಂದ ಯೋಗ್ಯ ಉತ್ತರ ಕೊಡಲಾರೆನು ಎಂದು ಅರ್ಥವಾಗುವುದಿಲ್ಲ್ಲ. ನಾನು ಪಾಕಿಸ್ತಾನದ ವಿಷಯದಲ್ಲಿ ಇದಕ್ಕಿಂತಲೂ ಕೆಟ್ಟ ಶಬ್ದಗಳನ್ನು ಉಪಯೋಗಿಸಬಲ್ಲೆ; ಆದರೆ ನಾನು ಹಾಗೆ ಮಾಡುವುದಿಲ್ಲ. ನಾನು ಪುನಃ ಹೇಳುತ್ತೇನೆ, ‘ಪಾಕಿಸ್ತಾನ ಭಯೋತ್ಪಾದನೆಯ ಕೇಂದ್ರವಾಗಿದೆ !’ ಜಗತ್ತಿನ ಭಯೋತ್ಪಾದನೆಯ ಸಮಸ್ಯೆಯನ್ನು ನಿವಾರಿಸಲಿಕ್ಕಿದ್ದರೆ, ಪಾಕಿಸ್ತಾನ ತನ್ನ ವರ್ತನೆಯನ್ನು ಸುಧಾರಿಸಿಕೊಳ್ಳಲೇ ಬೇಕು.”

ಆಗ ಪತ್ರಕರ್ತನು ಮತ್ತೊಮ್ಮೆ ಪಾಕಿಸ್ತಾನವನ್ನು ಉಳಿಸಿಕೊಳ್ಳಲು (ಪಾಕಿಸ್ತಾನದ ಮಾನ ಕಾಪಾಡಲು) ಪ್ರಯತ್ನಿಸಿದನು. ಅವನು, “ಭಯೋತ್ಪಾದಕರು ಪಾಕಿಸ್ತಾನದಿಂದ ಬರುತ್ತಾರೆ ಎಂದು ತಿಳಿದುಕೊಂಡರೂ, ಪಾಕಿಸ್ತಾನ ಒಂದು ದೇಶವೆಂದು ಸ್ವತಃ ಭಯೋತ್ಪಾದಕರನ್ನು ಭಾರತಕ್ಕೆ ಎಲ್ಲಿ ಕಳಿಸುತ್ತದೆ ? ಅವರಿಗೆ ಪಾಕಿಸ್ತಾನದ ಅಧ್ಯಕ್ಷರು ‘ಭಾರತದ ಮೇಲೆ ಆಕ್ರಮಣ ಮಾಡಿರಿ’, ಎಂದು ಎಲ್ಲಿ ಹೇಳುತ್ತಾರೆ ?” ಎಂದು ಕೇಳಿದನು. ಪತ್ರಕರ್ತನ ಈ ಪ್ರಶ್ನೆಗೆ ಉತ್ತರಿಸುವಾಗ ಡಾ. ಜಯಶಂಕರ ಇವರು ಮುಂದಿನಂತೆ ಮಾತನಾಡಿದರು, “ಪಾಕಿಸ್ತಾನ ಜಗತ್ತಿನ ಎಲ್ಲ ಭಯೋತ್ಪಾದಕರಿಗೆ ಆಶ್ರಯ ನೀಡಿದೆ. ಪಾಕಿಸ್ತಾನದಿಂದಲೆ ಅವರು ತರಬೇತಿ ಪಡೆದು ಭಾರತದ ಮುಂಬಯಿ ನಗರ, ಸಂಸತ್‌ಭವನ ಮತ್ತು ಇತರ ಸ್ಥಳಗಳ ಮೇಲೆ ಆಕ್ರಮಣಗಳನ್ನು ಮಾಡಿದರು. ಭಾರತದ ಮೇಲೆ ಆಕ್ರಮಣ ಮಾಡುವ ಭಯೋತ್ಪಾದಕರಿಗೆ ಪಾಕಿಸ್ತಾನದಲ್ಲಿ ಸೈನಿಕ ತರಬೇತಿಯನ್ನು ಕೊಡಲಾಗುತ್ತದೆ. ‘ಯುರೋಪಿನ ಸಮಸ್ಯೆ ಜಗತ್ತಿನ ಸಮಸ್ಯೆಯಾಗಿದೆ; ಆದರೆ ಜಗತ್ತಿನ ಸಮಸ್ಯೆ ಯುರೋಪಿನ ಸಮಸ್ಯೆಯಾಗಿಲ್ಲ’, ಎಂಬುದು ಯುರೋಪ್‌ನ ದೃಷ್ಟಿಕೋನವಾಗಿದೆ. ೨೬.೧೧.೨೦೦೮ ರ ಮುಂಬಯಿಯ ಆಕ್ರಮಣದ ನಂತರ ಭಾರತ ಎಷ್ಟು ತೊಂದರೆಗಳನ್ನು ಸಹಿಸಿಕೊಳ್ಳಬೇಕಾಯಿತು ಎಂಬುದು ನಿಮಗೆ ತಿಳಿದಿರಲಿಕ್ಕಿಲ್ಲ. ಯಾರು ಪಾಕಿಸ್ತಾನದಿಂದ ದೂರವಿರುತ್ತಾರೊ, ಅವರ ಮೇಲೆ ಪಾಕಿಸ್ಥಾನದ ಭಯೋತ್ಪಾದನೆಯ ಯಾವುದೇ ಪರಿಣಾಮವಾಗುವುದಿಲ್ಲ, ಆದುದರಿಂದ ಈ ರೀತಿ ಅವರೇ ಮಾತನಾಡಬಹುದು

ಡಾ. ಎಸ್. ಜಯಶಂಕರ ಇವರು ಯಾವಾಗ, “ರಷ್ಯಾ ಯುರೋಪ್‌ನ ಕಡೆಗೆ ವಕ್ರ ದೃಷ್ಟಿಯಿಂದ ನೋಡುತ್ತದೆಯೋ, ಆಗ ಸಂಪೂರ್ಣ ಜಗತ್ತು ರಷ್ಯಾದ ವಿರುದ್ಧ ಯುರೋಪ್‌ನ ಬೆಂಬಲಕ್ಕೆ ನಿಲ್ಲಬೇಕು, ಎಂಬುದು ಯುರೋಪ್‌ನ ಅಪೇಕ್ಷೆ ಇರುತ್ತದೆ. ಇಂತಹ ಸ್ಥಿತಿ ಭಾರತ ಅಥವಾ ಏಶಿಯಾದ ಸಂದರ್ಭದಲ್ಲಿ ಬಂದಾಗ ಯುರೋಪ್‌ನ ವರ್ತನೆ ಬೇರೆ ಏಕೆ ಆಗಿರುತ್ತದೆ?” ಎಂದು ಕೇಳಿದರು.

ಆಸ್ಟ್ರೀಯಾದ ಪತ್ರಕರ್ತನು ಮುಕ್ತವಾಗಿ ಕೇಳಿದ ಪ್ರಶ್ನೆಗಳಿಗೆ ಡಾ. ಎಸ್. ಜಯಶಂಕರ ಇವರು ಅಷ್ಟೇ ಖಂಡತುಂಡ ಉತ್ತರಗಳನ್ನು ನೀಡಿದರು. ‘ನೀವು ನಿಮ್ಮ ದೃಷ್ಟಿಯಿಂದ ಇತಿಹಾಸವನ್ನು ತಿಳಿದುಕೊಳ್ಳಬೇಡಿರಿ, ಯಾವುದು ಸತ್ಯವಾಗಿದೆಯೊ ಅದನ್ನು ತಿಳಿದುಕೊಂಡು ನಿಮ್ಮ ದೃಷ್ಟಿಯನ್ನು ವ್ಯಾಪಕಗೊಳಿಸಿರಿ’ ಈ ಪತ್ರಕರ್ತನ ಮರೆಯಲ್ಲಿ ಡಾ. ಜಯಶಂಕರ ಇವರು ಪರೋಕ್ಷವಾಗಿ ಯುರೋಪ್‌ಕ್ಕೆ ೪ ಬುದ್ಧಿಯ ಮಾತುಗಳನ್ನು ಹೇಳಿದರು.

೩. ರಷ್ಯಾ-ಯುಕ್ರೇನ್ ಯುದ್ಧದ ಕಾಲದಲ್ಲಿ ಭಾರತದ ಯಶಸ್ವಿ ನಿಲುವು

ರಷ್ಯಾ-ಯುಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಮೇರಿಕಾ ಸಹಿತ ಯುರೋಪ್‌ನ ಎಲ್ಲ ದೇಶಗಳಿಗೆ ರಷ್ಯಾದ ವಿರುದ್ಧ ಇರುವ ಅಪ್ರಸನ್ನತೆಯು ಜಗಜ್ಜಾಹಿರಾಗಿದೆ. ‘ಯುಕ್ರೇನ್ ಯುದ್ಧ ನಡೆಯುತ್ತಿರುವಾಗ ಯಾವುದೇ ದೇಶ ರಷ್ಯಾದೊಂದಿಗೆ ವ್ಯಾಪಾರ ಅಥವಾ ವ್ಯವಹಾರ ಮಾಡುತ್ತಿದ್ದರೆ, ಅಮೇರಿಕಾಗೆ ಅದು ಚಿಂತೆಯ ವಿಷಯವಾಗಿರುವುದು’, ಎಂದು ಅಮೇರಿಕಾ ಇಡೀ ಜಗತ್ತಿಗೆ ಎಚ್ಚರಿಕೆಯನ್ನು ನೀಡಿತ್ತು. ಭಾರತ ಮಾತ್ರ ನಿತ್ಯದಂತೆ ಎಲ್ಲರ ಹಿತವನ್ನು ಗೌರವಿಸುತ್ತಾ ತನ್ನ ರಾಷ್ಟ್ರೀಯ ಹಿತಕ್ಕನುರೂಪ ನಿರ್ಣಯ ತೆಗೆದುಕೊಳ್ಳುವ ನಿಲುವನ್ನು ಅವಲಂಬಿಸಿತು. ರಷ್ಯಾ -ಯುಕ್ರೇನ್ ಯುದ್ಧದ ನಂತರದ ಕಠಿಣ ಪರಿಸ್ಥಿತಿಯಲ್ಲಿಯೂ ಭಾರತವು ತನ್ನ ಸಮತೋಲನವನ್ನು ಕಾಯ್ದುಕೊಂಡಿದೆ. ಪ್ರಧಾನಮಂತ್ರಿ ಮೋದಿಯವರು ರಷ್ಯಾ-ಯುಕ್ರೇನ್ ಯುದ್ಧದ ವಿಷಯದಲ್ಲಿ ಪುತಿನ್ ಇವರಿಗೆ, “ಇದು ಯುದ್ಧ ಮಾಡುವ ಯುಗವಲ್ಲ !” ಎಂದು ಹೇಳಿದರು. ಯಾವ ವಿಷಯವನ್ನು ಅಮೇರಿಕಾ ಮತ್ತು ಇತರ ದೊಡ್ಡ ರಾಷ್ಟ್ರಗಳು ಪುತಿನ್ ಇವರಿಗೆ ಹೇಳಬೇಕಾಗಿತ್ತೋ, ಆ ವಿಷಯವನ್ನು ಕೊನೆಗೆ ಮೋದಿಯವರಿಗೆ ಹೇಳಬೇಕಾಯಿತು, ಇದು ಬುದ್ಧಿವಂತರ ಅಭಿಪ್ರಾಯವಾಗಿದೆ.

ರಷ್ಯಾ ಮತ್ತು ಯುಕ್ರೇನ್ ಇವುಗಳಲ್ಲಿ ಶಾಂತಿಯನ್ನು ಸ್ಥಾಪಿಸುವ ಸಂದರ್ಭದಲ್ಲಿ ತಮ್ಮ ನಿಶ್ಚಯವನ್ನು ಶಾಶ್ವತವಾಗಿಟ್ಟು ಭಾರತ ರಷ್ಯಾದ ಜೊತೆಗಿರುವ ಸಂಬಂಧ ಕೆಡದಂತೆ ನೋಡಿಕೊಂಡಿತು. ಭಾರತ ರಷ್ಯಾದ ಜೊತೆಗೆ ಮಾಡಿಕೊಂಡಿರುವ ಶಸ್ತ್ರಾಸ್ತ್ರಗಳ ವ್ಯವಹಾರವನ್ನು ಪೂರ್ಣಗೊಳಿಸಿತು ಮತ್ತು ರಷ್ಯಾದಿಂದ ತೈಲ ಖರೀದಿಸುವ ಸಂದರ್ಭದಲ್ಲಿ ಯಾರ ಒತ್ತಡಕ್ಕೂ ಮಣಿಯಲಿಲ್ಲ. ಇದರ ಅರ್ಥ ಅದು ತನ್ನ ಪಾಶ್ಚಾತ್ಯ ಮಿತ್ರ ದೇಶಗಳ ಭಾವನೆಗೆ ಬೆಲೆ ಕೊಡಲಿಲ್ಲ ಎಂದಲ್ಲ್ಲ. ಭಾರತ ಹಾಗೂ ರಷ್ಯಾದ ನಡುವಿನ ಘನಿಷ್ಠ ಮೈತ್ರಿಯನ್ನು ಉಳಿಸಿಕೊಳ್ಳುವುದು ಇದು ಎರಡು ದೇಶಗಳಿಗಾಗಿ ಮಾತ್ರವಲ್ಲ, ಇದು ಸಂಪೂರ್ಣ ಜಗತ್ತಿನ ದೀರ್ಘಕಾಲದ ಹಿತಕ್ಕಾಗಿ ಆವಶ್ಯಕವಾಗಿತ್ತು.

೪. ಭಾರತದ ವಿದೇಶ ನಿಲುವಿಲ್ಲಿನ ಆತ್ಮವಿಶ್ವಾಸದ ಹಿಂದೆ ಪ್ರಧಾನಮಂತ್ರಿ ಮೋದಿಯವರ ಮುಖ್ಯ ನಿಲುವು

ವಿದೇಶ ಸಚಿವ ಡಾ. ಎಸ್. ಜಯಶಂಕರ ಇವರು ದೆಹಲಿಯಲ್ಲಿ ನೆರವೇರಿದ ‘ರಾಯಸಿನಾ ಡೈಲಾಗ್’ನ ಸಮಯದಲ್ಲಿ (ರಾಯಸಿನಾ ಪರಿಷತ್ತಿನ ಸಮಯದಲ್ಲಿ) ವಿವಿಧ ದೇಶಗಳ ವಿದೇಶ ಸಚಿವರ ಉಪಸ್ಥಿತಿಯಲ್ಲಿ ಭಾರತದ ಕೇವಲ ದಿಶೆಯನ್ನು ದೃಢನಿಶ್ಚಯದಿಂದ ಮಂಡಿಸಲಿಲ್ಲ, ಅವರು ಯುರೋಪ್ ದೇಶಗಳ ಬದಲಾಗುವ ವೃತ್ತಿಯನ್ನು ಮುಂದಿಡಲು ಮರೆಯಲಿಲ್ಲ. ರಾಯಸಿನಾ ಪರಿಷತ್ತಿನ ಚರ್ಚಾಕೂಟದಲ್ಲಿ ಯೊರೋಪ್‌ನ ಕೆಲವು ದೇಶಗಳ ವಿದೇಶ ಸಚಿವರು ಪ್ರಶ್ನೆಗಳ ಮೂಲಕ ಭಾರತವನ್ನು ಸುತ್ತುವರಿಯಲು ಪ್ರಯತ್ನಿಸಿದರು. ಆಗ ಡಾ. ಎಸ್. ಜಯಶಂಕರ ಇವರು ಅವರಿಗೆ ಅಫ್ಗಾನಿಸ್ತಾನದಲ್ಲಿನ ಘಟನೆಯನ್ನು ಉಲ್ಲೇಖಿಸಿ ‘ಒಂದು ವರ್ಷದ ಹಿಂದೆ ಸಂಪೂರ್ಣ ನಾಗರಿಕ ಸಮಾಜವನ್ನು ತಾಲಿಬಾನಿಯರ ಕೈಯಿಂದ ಸಾಯಲು ಹೇಗೆ ಬಿಡಲಾಯಿತು’, ಎಂಬುದನ್ನು ನೆನಪಿಸಿಕೊಟ್ಟರು. ಯುಕ್ರೇನ್ ಯುದ್ಧದ ನಿಮಿತ್ತದಿಂದ ಭಾರತವನ್ನು ಎಚ್ಚರಿಸಲು ಪ್ರಯತ್ನಿಸುವ ಯುರೋಪ್ ದೇಶಗಳಿಗೆ ಇದನ್ನು ಹೇಳುವುದು ಆವಶ್ಯಕವೇ ಆಗಿತ್ತು. ಕೆಲವು ತಿಂಗಳುಗಳ ಹಿಂದೆ ಅಮೇರಿಕಾ ಹಾಗೂ ಭಾರತದ ನಡುವೆ ಚರ್ಚೆಯಾಯಿತು. ಆಗ ಡಾ. ಎಸ್.ಜಯಶಂಕರ ಇವರಿಗೆ ಅಮೇರಿಕಾದ ಪತ್ರಕರ್ತರು ಕೆಲವು ಪ್ರಶ್ನೆಗಳನ್ನು ಕೇಳಿದರು, ಅದರ ಹಿಂದೆ ಭಾರತವನ್ನು ಟೀಕಿಸುವ ಉದ್ದೇಶವಿತ್ತು. ‘ಭಾರತ ರಷ್ಯಾದಿಂದ ಕಚ್ಚಾ ತೈಲವನ್ನು ಹೇಗೆ ಆಮದು ಮಾಡಿಕೊಳ್ಳುತ್ತದೆ?’, ಎಂಬುದು ಅವರ ಪ್ರಶ್ನೆಯಾಗಿತ್ತು. ಡಾ. ಎಸ್. ಜಯಶಂಕರ, “ಯುರೋಪ್ ದೇಶಗಳು ರಷ್ಯಾದಿಂದ ಒಂದು ದಿನಕ್ಕಾಗಿ ಎಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತವೆಯೋ, ಅಷ್ಟು ತೈಲನ್ನು ಭಾರತ ಒಂದು ತಿಂಗಳಲ್ಲಿ ಆಮದು ಮಾಡುತ್ತದೆ. ಆದ್ದರಿಂದ ಈ ಸಂದರ್ಭದಲ್ಲಿ ಭಾರತಕ್ಕೆ ಸ್ಪಷ್ಟೀಕರಣ ಕೇಳುವ ಮೊದಲು ಯುರೋಪ್ ದೇಶಗಳು ತಮ್ಮನ್ನೆ ಪರಿಶೀಲಿಸಿಕೊಳ್ಳುವುದು ಆವಶ್ಯಕವಾಗಿದೆ” ಎಂದು ಹೇಳಿದರು.

‘ಭಾರತ ರಷ್ಯಾದ ವಿರುದ್ಧ ನಿಲುವನ್ನು ತೆಗೆದುಕೊಳ್ಳಬೇಕು’, ಎಂದು ಪಾಶ್ಚಿಮಾತ್ಯ ಪ್ರಸಾರಮಾಧ್ಯಮಗಳಿಂದ ಸತತ ಬೇಡಿಕೆ ಬರುತ್ತಿತ್ತು; ಆದರೆ ಭಾರತ ದೇಶ ತನ್ನ ಹಿತದ ದೃಷ್ಟಿಯಿಂದ ಯಾವುದು ಯೋಗ್ಯವಾಗಿತ್ತೋ, ಅದನ್ನೆ ಮಾಡಿತು. ಭಾರತದ ವಿದೇಶ ನೀತಿಯಲ್ಲಿ ಈ ಆತ್ಮವಿಶ್ವಾಸ ಒಮ್ಮೆಲೇ ಬಂದಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿದೇಶಗಳ ನೀತಿಯ ವಿಷಯದಲ್ಲಿ ಕಳೆದ ೮ ವರ್ಷಗಳಿಂದ ನಿರಂತರ ಹಾಗೂ ಪರಿಣಾಮಕಾರಿ ಪ್ರಯತ್ನ ಮಾಡಿದರು. ಕಳೆದ ೮ ವರ್ಷ ವಿದೇಶ ನೀತಿಗೆ ಪ್ರಾಧಾನ್ಯತೆ ನೀಡಿದರು. ಅದಕ್ಕಾಗಿ ನರೇಂದ್ರ ಮೋದಿಯವರು ೬೦ ಕ್ಕಿಂತಲೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದರು. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸ್ತರದಲ್ಲಿನ ಅನೇಕ ದೇಶಗಳೊಂದಿಗೆ ಸಭೆಗಳನ್ನು ನಡೆಸಿದರು, ಹಾಗೆಯೇ ವಿವಿಧ ದೇಶಗಳೊಂದಿಗೆ ಪಾಲುದಾರಿಕೆಯನ್ನು ವಿಕಾಸಗೊಳಿಸಲು ಪ್ರಯತ್ನಿಸಿದರು. ಭಾರತದ ಈ ವಿಶೇಷ ನಿಲುವಿಂದ ಬಹುರಾಷ್ಟ್ರೀಯ ಸಂಘಟನೆಗಳು ದೇಶದ ವಿದೇಶ ನೀತಿಯಲ್ಲಿ ಅವರ ಯೋಗದಾನವನ್ನು ನೀಡಿವೆ.

ಒಟ್ಟಿನಲ್ಲಿ ಮೋದಿಯವರ ವಿದೇಶನೀತಿಯ ವಿಕಾಸ ವ್ಯವಸ್ಥಿತವಾಗಿ ಆಗಿರುವುದು ನಮಗೆ ಕಾಣಿಸುತ್ತದೆ. ಈ ಹಿಂದೆ ಭಾರತದ ನೆರೆ ರಾಷ್ಟ್ರಗಳೊಂದಿಗೆ ಘನಿಷ್ಠ ಸಂಬಂಧವಿತ್ತು. ಭಾರತ ಅವುಗಳೊಂದಿಗೆ ಸಂಘರ್ಷವನ್ನು ಕಡಿಮೆ ಮಾಡಲು ಪ್ರಯತ್ನಿಸಿತು ಹಾಗೂ ಸಂಪರ್ಕವನ್ನು ಹೆಚ್ಚಿಸಿತು. ದಕ್ಷಿಣಪೂರ್ವ ಏಶಿಯಾದಲ್ಲಿನ ದೇಶಗಳೊಂದಿಗೆ ಸಂಬಂಧವನ್ನು ಸ್ಥಾಪಿಸಲು ‘ಲುಕ್ ಈಸ್ಟ್ ಪಾಲಿಸಿ’ಯ (ಈಶಾನ್ಯ ಭಾರತದಲ್ಲಿನ ರಾಜ್ಯಗಳನ್ನು ಏಶಿಯಾಖಂಡದಲ್ಲಿನ ದೇಶಗಳಿಗೆ ಜೋಡಿಸುವುದು) ಹೆಸರನ್ನು ಬದಲಾಯಿಸಿ ‘ಎಕ್ಟ್ ಈಸ್ಟ್’ (ಈಶಾನ್ಯ ಭಾರತದಲ್ಲಿ ಸಂಚಾರ ಸಾಧನಗಳ ವಿಕಾಸ) ಎಂದು ಇಟ್ಟರು. ಈಗ ಈ ದೇಶಗಳ ಜೊತೆಗೆ ನೆನೆಗುದಿಯಲ್ಲಿದ್ದ ಪ್ರಕಲ್ಪಗಳನ್ನು ಪೂರ್ಣಗೊಳಿಸುವ ಪ್ರಯತ್ನವಾಗುತ್ತಿದೆ. ಇದೇ ರೀತಿ ಇಸ್ಲಾಮೀ ರಾಷ್ಟ್ರಗಳೊಂದಿಗೂ ಹೂಡಿಕೆಯನ್ನು ಮಾಡಲಾಯಿತು.

೫. ರಷ್ಯಾ ಮತ್ತು ಅಮೇರಿಕಾ ಈ ದೇಶಗಳಲ್ಲಿ ಸಮತೋಲನವನ್ನು ಇಟ್ಟುಕೊಳ್ಳುವ ಜಗತ್ತಿನ ಏಕೈಕ ದೇಶವೆಂದರೆ ಭಾರತ !

ಭಾರತ ಇಸ್ಲಾಮೀ ರಾಷ್ಟ್ರವಾಗಿರುವ ಸಂಯುಕ್ತ ಅರಬ್ ಅಮಿರಾತ್‌ನೊಂದಿಗೆ ಒಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡಿದೆ. ಅದರಿಂದ ರಷ್ಯಾ-ಯುಕ್ರೇನ್ ಸಂಘರ್ಷದ ಸಮಯದಲ್ಲಿ ಭಾರತಕ್ಕೆ ತೈಲದ ಕೊರತೆಯಾಗಲಿಲ್ಲ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ರಷ್ಯಾ ಮತ್ತು ಅಮೇರಿಕಾ ಈ ದೇಶಗಳಲ್ಲಿ ಸಮತೋಲನವನ್ನು ಕಾಪಾಡುವ ಭಾರತವು ಜಗತ್ತಿನಲ್ಲಿನ ಏಕೈಕ ದೇಶವಾಗಿದೆ. ಭಾರತ ಇಸ್ರಾಯಿಲ್-ಪೆಲೆಸ್ಟಾಯಿನ್‌ನ ಇವರ ಜೊತೆಗೆ ಶಿಯಾ ಹಾಗೂ ಸುನ್ನಿ ಪಂಥದ ಜನರಿರುವ ಅನೇಕ ದೇಶಗಳೊಂದಿಗೂ ಸಂಬಂಧವನ್ನು ಸಮತೋಲನಗೊಳಿಸುತ್ತಿದೆ. ಆದ್ದರಿಂದ ಈಗ ‘ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಪರಿಷತ್ತಿನಲ್ಲಿ ಶಾಶ್ವತ ಸದಸ್ಯತ್ವ ಸಿಗಬೇಕು’, ಎನ್ನುವ ಬೇಡಿಕೆ ಜೋರು ಹಿಡಿದಿದೆ. ರಷ್ಯಾ ಮತ್ತು ಯುಕ್ರೇನ್‌ನ ಸಂಘರ್ಷದ ಕಾಲದಲ್ಲಿ ಭಾರತದ ಈ ಪ್ರಗತಿಯಿಂದಾಗಿ ಜಗತ್ತು ಆಶ್ಚರ್ಯಚಕಿತವಾಗಿದೆ. ಭಾರತ ಕೊರೋನಾ ಮಹಾಮಾರಿಯ ಕಾಲದಲ್ಲಿ ಅನೇಕ ದೇಶಗಳಿಂದ ಬಂದಿರುವ ಲಸಿಕೆಯ ಬೇಡಿಕೆಯನ್ನೂ ಪೂರ್ಣಗೊಳಿಸಿತು. ಅದರಿಂದ ಈಗ ಭಾರತ ಆರೋಗ್ಯಕ್ಕೆ ಸಂಬಂಧಿಸಿದ ಸೇವೆಗಳನ್ನು ನೀಡುವ ಸ್ವರೂಪದಲ್ಲಿಯೂ ಮುಂದೆ ಬಂದಿದೆ. ಭಾರತದ ಈ ಆರ್ಥಿಕ ವಿಕಾಸವು ವಿದೇಶ ನೀತಿಗೆ ಬಲವನ್ನು ನೀಡುತ್ತಿದೆ. ಭಾರತ ಶೀಘ್ರದಲ್ಲಿಯೆ ಏಶಿಯಾದಲ್ಲಿನ ಒಂದು ಪ್ರಮುಖ ಶಕ್ತಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

೬. ಭಾರತದ ಯಶಸ್ವೀ ವಿದೇಶ ನೀತಿಯಲ್ಲಿ ‘ವಸುಧೈವ ಕುಟುಂಮ್ಬಕಮ್’ನ ಮಹತ್ವದ ಪಾಲು

೨೦೧೪ ರ ನಂತರ ಭಾರತದ ವಿದೇಶ ನಿಲುವಿನಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿವೆ. ಇದರಿಂದ ದೇಶದ ವಿದೇಶ ನೀತಿಯು ರಕ್ಷಣೆಯದಾಗಿರದೇ ಆಕ್ರಮಕವಾಗಿದೆ. ಭಾರತ ಅದರ ವಿದೇಶ ನೀತಿಯ ಯೋಜನೆಯನ್ನು ಯುದ್ಧದ ಹಿತವನ್ನು ಗಮನದಲ್ಲಿಟ್ಟುಕೊಂಡು ಮಾಡುತ್ತದೆ. ಮಹತ್ವದ ವಿಷಯವೆಂದರೆ ಭಾರತವು ಈಗ ಎಲ್ಲರೊಂದಿಗೆ ಸಮಾನ ಸ್ತರದಲ್ಲಿ ಮಾತುಗಳನ್ನು ಮಾಡುತ್ತದೆ. ಇತ್ತೀಚೆಗಷ್ಟೆ ಪಾಕಿಸ್ತಾನದ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಇವರು ಭಾರತದ ವಿದೇಶ ನೀತಿಯನ್ನು ಶ್ಲಾಘಿಸಿದ್ದರು. ಇಂದು ಚೀನಾ ಭಾರತದ ವಿರುದ್ಧ ಎಷ್ಟೇ ಸಂಕಟಗಳನ್ನು ನಿರ್ಮಾಣ ಮಾಡಲು ಪ್ರಯತ್ನ ಮಾಡುತ್ತಿರಬಹುದು; ಆದರೆ ಭಾರತದ ಮೇಲೆ ಆಕ್ರಮಣವನ್ನು ಮಾಡುವ ದುಸ್ಸಾಹಾಸವನ್ನು ಮಾಡುವುದಿಲ್ಲ. ಈಗ ಭಾರತ ೧೯೬೨ ರ ಭಾರತವಲ್ಲ’, ಎಂಬುದನ್ನು ಚೀನಾಗೆ ತಿಳಿಸಿ ಹೇಳುವಲ್ಲಿ ಭಾರತದ ಕೂಟನೀತಿ ಯಶಸ್ವಿಯಾಗುತ್ತಿದೆ. ಈ ಹಿಂದೆ ಭಾರತ ಜಗತ್ತಿನ ದೊಡ್ಡ ದೊಡ್ಡ ದೇಶಗಳ ದೃಷ್ಟಿಕೋನವನ್ನು ನೋಡಿ ತನ್ನ ವಿದೇಶ ನಿಲುವನ್ನು ನಿರ್ಧರಿಸುತ್ತಿತ್ತು, ಆದರೆ ಇಂದು ಸಂಪೂರ್ಣ ಜಗತ್ತು ಭಾರತದ ಮಾತುಗಳನ್ನು ಕೇಳುತ್ತಿದೆ. ಸದ್ಯದ ಭಾರತ ಜಗತ್ತಿಗೆ ಜಾಗತಿಕ ದೃಷ್ಟಿ ನೀಡುವ ಸ್ತರಕ್ಕೆ ತಲುಪಿದೆ. ಭಾರತ ಅದರ ಸ್ವತಂತ್ರ ನಿಲುವುಗಳನ್ನು ಜಗತ್ತಿನ ಮುಂದೆ ಇಡುತ್ತಿದೆ ಹಾಗೂ ಜಗತ್ತು ಅದನ್ನು ಗಮನಿಟ್ಟು ಕೇಳುತ್ತಿದೆ ಹಾಗೂ ತಿಳಿದುಕೊಳ್ಳುತ್ತದೆ. ಇದರ ಪರಿಣಾಮ ಮುಂಬರುವ ಕಾಲದಲ್ಲಿ ಭಾರತದಲ್ಲಿ, ಹಾಗೂ ಜಗತ್ತಿನಲ್ಲಿ ತೀವ್ರ ಗತಿಯಲ್ಲಿ ಅರಿವಾಗುವುದು. ಸ್ವಾತಂತ್ರ್ಯವನ್ನು ಸಾರ್ಥಕಗೊಳಿಸಲು ಶಕ್ತಿಯ ಆಧಾರ ಬೇಕು ಎಂದು ಹೇಳುತ್ತಾರಲ್ಲ! ಆ ಶಕ್ತಿ ಭಾರತದ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ‘ವಸುಧೈವ ಕುಟುಮ್ಬಕಮ್’ (ಸಂಪೂರ್ಣ ಪೃಥ್ವಿಯೇ ಒಂದು ಕುಟುಂಬ) ಎನ್ನುವ ದೃಷ್ಟಿಕೋನದಲ್ಲಿಯೆ ಇದೆ. – ಲೇಖಕರು : ಅಮೋಲ್ ಪೆಡಣೇಕರ್ (ಸಾಭಾರ : ಸಾಪ್ತಾಹಿಕ ‘ವಿವೇಕ’, ಹಿಂದಿ)