* ಆಷಾಢ ಏಕಾದಶಿಯಂದು ಕೇವಲ ಬಕ್ರೀದಿನ ಬಗ್ಗೆ ಮಾಹಿತಿ ನೀಡುವ ಶಾಲೆಯ ಪ್ರಯತ್ನವನ್ನು ಮನಸೆಯು ಧ್ವಂಸಗೊಳಿಸಿತು !
* ಶಾಲೆಯಿಂದ ಕ್ಷಮಾಪತ್ರ ಸಾದರಪಡಿಸಲಾಯಿತು * ಆಷಾಢ ಏಕಾದಶಿಯನ್ನು ಆಚರಿಸುವುದಾಗಿ ಪತ್ರಕವನ್ನೂ ಹೊರಡಿಸಲಾಯಿತು |
ಪನವೇಲ – ಇಲ್ಲಿನ ಖಾಂದಾ ವಸಾಹತ್ತಿನಲ್ಲಿರುವ `ಮಹಾತ್ಮಾ ಸ್ಕೂಲ್ ಆಫ್ ಅಕೆಡೆಮಿಕ್ಸ್ ಅಂಡ್ ಸ್ಪೋರ್ಟ್ಸ್’ ಎಂಬ ಶಾಲೆಯಲ್ಲಿ ಆಷಾಢ ಏಕಾದಶಿ ಹಾಗೂ ಬಕ್ರೀದ್ ಒಂದೇ ದಿನ ಬಂದಿದ್ದರೂ ಕೇವಲ ಬಕ್ರೀದ್ ನ ಬಗ್ಗೆ ಮಾಹಿತಿ ನೀಡಲಾಯಿತು. ಶಾಲೆಯ ಆಡಳಿತಕ್ಕೆ ಆಷಾಢ ಏಕಾದಶಿಯು ಮರೆತುಹೋಗಿತ್ತು. ಈ ಸಮಯದಲ್ಲಿ ಮನಸೆಯ ಕಾರ್ಯಕರ್ತರು ಗದರಿಸಿದಾಗ ಶಾಲಾ ಆಡಳಿತವು ಲಿಖಿತ ಕ್ಷಮಾಯಾಚನೆ ಮಾಡಿತು.
ಶಾಲೆಯಲ್ಲಿನ ಸಿ.ಬಿ.ಎಸ.ಸಿ ಬೋರ್ಡನ ಕೆಲವು ವಿದ್ಯಾರ್ಥಿಗಳನ್ನು ಈದ್ ನ ನಿಮಿತ್ತ ಕರೆಯಿಸಿ ಹಿಜಾಬ್ ಹಾಕುವಂತೆ ಮಾಡಲಾಯಿತು, ಕುರಾನ್ ಕೇಳಿಸುವಂತಹ ಘಟನೆಗಳು ನಡೆದವು. `ಈ ದಿನ ಆಷಾಢ ಏಕಾದಶಿ ಇದ್ದರೂ ನಾಮ ಮೆರವಣಿಗೆ ಅಥವಾ ಹಬ್ಬವನ್ನು ಏಕೆ ಆಚರಿಸಲಿಲ್ಲ ? ಎಂದು ಮಹಾರಾಷ್ಟ್ರ ನವನಿರ್ಮಾಣ ವಿದ್ಯಾರ್ಥಿ ಸೇನೆಯ ಕಾರ್ಯಕರ್ತರು ಕೇಳಿದರು. ಹಾಗೆಯೇ ಧಾರ್ಮಿಕ ಒತ್ತಡ ನಿರ್ಮಾಣ ಮಾಡುವ ಸಂಗತಿಗಳನ್ನು ಕೊಡಲೇ ನಿಲ್ಲಿಸದಿದ್ದರೆ ಹಾಗೂ ಮಹಾರಾಷ್ಟ್ರದಲ್ಲಿ ಹಿಂದೂ ಹಬ್ಬಗಳನ್ನು ಆಚರಿಸದಿದ್ದರೆ ಮುಂಬರುವ ಸಮಸ್ಯೆಗಳನ್ನು ಎದುರಿಸಬೇಕಾಗುವುದು, ಇದಕ್ಕೆ ಶಾಲೆಯ ಆಡಳಿತವು ಜವಾಬ್ದಾರಿಯಾಗಿರುವುದು’ ಎಂಬ ಎಚ್ಚರಿಕೆ ನೀಡಲಾಗಿತ್ತು. ಶಾಲೆಯ ಆಡಳಿತವು ಈ ಸಂಗತಿಯನ್ನು ಗಮನಿಸಿ ಲಿಖಿತ ಕ್ಷಮಾಯಾಚನೆ ಮಾಡಿದ್ದು `ಆಷಾಢ ಏಕಾದಶಿಯನ್ನು ಆಚರಿಸುವುದಾಗಿ’ ಪತ್ರಕವನ್ನು ಹೊರಡಿಸಿದೆ.
ಸಂಪಾದಕರ ನಿಲುವು* ಧರ್ಮರಕ್ಷಣೆಗಾಗಿ ಸತರ್ಕ ಹಾಗೂ ತತ್ಪರತೆಯಿಂದ ಕೃತಿ ಮಾಡುವ ಮನಸೆಗೆ ಅಭಿನಂದನೆಗಳು ! * ನಮ್ಮ ಮಕ್ಕಳನ್ನು ಇಂತಹ ಶಾಲೆಗಳಿಗೆ ಕಳುಹಿಸುವುದೇ ? ಎಂಬುದರ ಬಗ್ಗೆ ಹಿಂದೂ ಪಾಲಕರೂ ವಿಚಾರ ಮಾಡುವುದು ಆವಶ್ಯಕವಾಗಿದೆ. |