‘ಸಾಧನೆಯನ್ನು ಪ್ರಾರಂಭಿಸಿದ ನಂತರ, ಯಾರಿಗಾದರೂ ಈಶ್ವರನನ್ನು ನೋಡುವ, ಅವನನ್ನು ಅರಿತುಕೊಳ್ಳುವ ಸೆಳೆತ ಉತ್ಪನ್ನವಾಗುತ್ತದೆ; ಆದರೆ ನಾವು ಸ್ವತಃ ಸ್ವಭಾವದೋಷ ಮತ್ತು ಅಹಂಕಾರದಿಂದ ಹೊಲಸಾಗಿರುವಾಗ ನಮಗೆ ಶುದ್ಧ ಮತ್ತು ಪವಿತ್ರ ಈಶ್ವರನು ಹೇಗೆ ಭೇಟಿಯಾಗುವನು ? ಈಶ್ವರನನ್ನು ಅರಿತುಕೊಳ್ಳುವುದಿದ್ದರೆ, ಮೊದಲು ಅಂತರ್ಮುಖವಾಗಿ ತಮ್ಮನ್ನು ಅರಿತುಕೊಳ್ಳಬೇಕು. ‘ನಮ್ಮಲ್ಲಿ ಯಾವ ಸ್ವಭಾವದೋಷಗಳು ಮತ್ತು ಅಹಂನ ಯಾವ ಲಕ್ಷಣಗಳಿವೆ ? ಹಾಗೆಯೇ ನಮ್ಮಲ್ಲಿ ಯಾವ ಗುಣಗಳನ್ನು ಹೆಚ್ಚಿಸಬೇಕು ಮತ್ತು ಯಾವ ಗುಣಗಳನ್ನು ಉತ್ಪನ್ನ ಮಾಡುವುದು ಆವಶ್ಯಕವಾಗಿದೆ ?, ಎಂಬುದನ್ನು ತಿಳಿದುಕೊಳ್ಳಬೇಕು. ಇದಕ್ಕಾಗಿಯೇ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಸ್ವಭಾವದೋಷ-ನಿರ್ಮೂಲನ ಮತ್ತು ಅಹಂ-ನಿರ್ಮೂಲನ, ಹಾಗೆಯೇ ಗುಣಸಂವರ್ಧನ ಪ್ರಕ್ರಿಯೆ ಎಂಬ ಹೊಸ ಪ್ರಕ್ರಿಯೆಗಳನ್ನು ನಿರ್ಮಿಸಿದ್ದಾರೆ. ಅವರು ಈ ಪ್ರಕ್ರಿಯೆಗಳನ್ನು ಸಾಧಕರಿಗೆ ಸಾಧನೆಯ ಪ್ರಾರಂಭದಲ್ಲಿ ಮೊದಲ ಪ್ರಾಧಾನ್ಯತೆಯಿಂದ ಮಾಡಲು ಹೇಳುತ್ತಾರೆ. ಅವುಗಳನ್ನು ಮಾಡಿದನಂತರ ‘ಅಷ್ಟಾಂಗಸಾಧನೆಯಲ್ಲಿನ ಸಾಧನೆಯ ಇತರ ೬ ಅಂಗಗಳನ್ನು (ನಾಮಜಪ, ಭಾವಜಾಗೃತಿ, ಸತ್ಸಂಗ, ಸತ್ಸೇವೆ, ತ್ಯಾಗ ಮತ್ತು ಪ್ರೀತಿ) ಸಹಜವಾಗಿ ಮಾಡಬಹುದು, ಇದರಿಂದ ಆಧ್ಯಾತ್ಮಿಕ ಉನ್ನತಿಯೂ ಬೇಗನೇ ಆಗುತ್ತದೆ, ಎಂದು ಸಾಧಕರ ಅನುಭವವಾಗಿದೆ !
– (ಸದ್ಗುರು) ಡಾ. ಮುಕುಲ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೬.೨೦೨೩)