ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. – ಶ್ರೀ. ಸುನೀಲ ಘನವಟ

ಶ್ರೀ. ಸುನೀಲ ಘನವಟ

ಹಿಂದೂ ರಾಷ್ಟ್ರ ಅಧಿವೇಶನವು ಯಾವಾಗಲೂ ‘ದೇವಾಲಯ ಮುಕ್ತಿ ಮತ್ತು ದೇವಾಲಯ ರಕ್ಷಣೆಯ ನಿಲುವಿಗೆ ಬದ್ಧವಾಗಿದೆ. ಈ ಅಧಿವೇಶನದಿಂದ ಅನೇಕ ದೇವಾಲಯ ಚಳುವಳಿಗಳು ಆರಂಭಗೊಂಡಿತು. ಉದಾ. ಮಧ್ಯಪ್ರದೇಶದಲ್ಲಿ ಭೋಜಶಾಲಾ ಮುಕ್ತಿ ಆಂದೋಲನ, ತಿರುಪತಿ ಬಾಲಾಜಿಯಲ್ಲಿ ಅಕ್ರಮ ಇಸ್ಲಾಮಿಕ್ ಅತಿಕ್ರಮಣ ತೆರವು; ಪಂಢರಾಪುರ, ಶಿರ್ಡಿ, ಕೊಲ್ಲಾಪುರ, ತುಳಜಾಪುರಗಳಲ್ಲಿನ ಸರಕಾರ ಸ್ವಾಧೀನ ಪಡಿಸಿರುವ ದೇವಾಲಯಗಳಲ್ಲಿನ ಭ್ರಷ್ಟಾಚಾರದ ವಿರುದ್ಧದ ಹೋರಾಟ ಇವು ಪ್ರಮುಖ ಚಳುವಳಿಗಳಾಗಿವೆ. ‘ಗೋಮಾಂತಕ ಮಂದಿರ ಮಹಾಸಂಘವು ಗೋವಾದಲ್ಲಿ ದೇವಾಲಯ ಸಂಸ್ಕೃತಿಯನ್ನು ಉಳಿಸಲು ಮತ್ತು ಉತ್ತೇಜಿಸಲು ಕಾರ್ಯ ಮಾಡುತ್ತಿದ್ದರೆ, ಮಹಾರಾಷ್ಟ್ರದಲ್ಲಿ ‘ಮಹಾರಾಷ್ಟ್ರ ಮಂದಿರ ಮಹಾಸಂಘ ಕಾರ್ಯನಿರ್ವಹಿಸುತ್ತಿದೆ. ಮಹಾರಾಷ್ಟ್ರದಲ್ಲಿ ನಾವು ೧೩೧ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸಿದ್ದೇವೆ. ಮಹಾರಾಷ್ಟ್ರದಂತೆ ಕರ್ನಾಟಕ, ದೆಹಲಿಗಳಲ್ಲಿ ದೇವಸ್ಥಾನಗಳ ಟ್ರಸ್ಟಿಗಳ ಸಭೆಯನ್ನು ಶೀಘ್ರದಲ್ಲೇ ಆಯೋಜಿಸುವುದಾಗಿ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಶ್ರೀ. ಘನವಟರು ತಿಳಿಸಿದ್ದಾರೆ.