ಪ್ರಯಾಗರಾಜ ಕುಂಭಮೇಳ 2025

ಪ್ರಯಾಗರಾಜ (ಉತ್ತರ ಪ್ರದೇಶ), ಫೆಬ್ರವರಿ 9 (ಸುದ್ದಿ) – ಪ್ರಯಾಗರಾಜನಲ್ಲಿರುವ ಭೂಮಿಯು ಋಷಿ ಭಾರದ್ವಾಜರ ಭೂಮಿಯಾಗಿದೆ. ಗಂಗಾ ಮಾತೆಯೇ ಇಲ್ಲಿ ಹರಿಯುತ್ತಾಳೆ. ಈ ಭೂಮಿಯಲ್ಲಿ ಮಹಾ ಕುಂಭಮೇಳ ನಡೆಯುತ್ತಿರುವಾಗ “ಈ ಭೂಮಿ ವಕ್ಫ್ ಮಂಡಳಿಗೆ ಸೇರಿದ್ದು”, ಎಂದು ಹೇಳುವವರನ್ನು ನಿಜಕ್ಕೂ ಈ ದೇಶದಿಂದಲೇ ಹೊರಗೆ ಹಾಕಬೇಕು. ಮಹಾಕುಂಭದಲ್ಲಿ ಭಾಗವಹಿಸುವ ಎಲ್ಲಾ ಭಕ್ತರು ಅಂತಹವರನ್ನು ಎಂದಿಗೂ ಕ್ಷಮಿಸುವುದಿಲ್ಲ. “ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು’, ಮತ್ತು ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು” ಎಂದು ಖಂಡತುಂಡಾದ ನಿಲುವನ್ನು ಶ್ರೀ ಪಂಚ ನಿರ್ವಾಣಿ ಅಖಾಡಾದ ವ್ಯವಸ್ಥಾಪಕ ಶ್ರೀ ಮಹಂತ ಡಾ. ಮಹೇಶ ದಾಸ ಮಂಡಿಸಿದರು.

ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಮತ್ತು ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕ ಶ್ರೀ. ಸುನಿಲ ಘನವಟ ಇವರು ಅವರನ್ನು ಭೇಟಿಯಾದರು. ಪಂಜಾಬ್‌ನ ಶ್ರೀ ಶಂಭು ಅಗ್ನಿ ಅಖಾಡಾದ ಕಾರ್ಯದರ್ಶಿ, ಮಹಾಮಂಡಲೇಶ್ವರ ಸಂಪೂರ್ಣಾನಂದ ಮಹಾರಾಜ ಮತ್ತು ಶ್ರೀ ಪಂಚಾಯತಿ ನಿರ್ಮಲ ಅಖಾಡಾದ ಪೀಠಾಧೀಶ್ವರ, ಪೂ. ಜ್ಞಾನದೇವ ಸಿಂಗ ಮಹಾರಾಜ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.

ಶ್ರೀ ಮಹಂತ ಡಾ. ಮಹೇಶ ದಾಸ ಮಾತು ಮುಂದುವರಿಸಿ, ಹಿಂದೂ ರಾಷ್ಟ್ರಕ್ಕಾಗಿ ಎಲ್ಲಾ ಅಖಾಡಾಗಳು ಸಕ್ರಿಯವಾಗಿವೆ. ಹಿಂದೂ ರಾಷ್ಟ್ರ ಆಗಲೇಬೇಕು. ಸನಾತನ ಧರ್ಮಕ್ಕಾಗಿ ಈ ಬೇಡಿಕೆ ಬೇಡಿಕೆ ಮಂಡಿಸುವುದು ಆವಶ್ಯಕವಾಗಿದೆ. ಇಂದು ದೇವಸ್ಥಾನಗಳನ್ನು ಸರಕಾರೀಕರಣಗೊಳಿಸಲಾಗಿದೆ.

ಮಸೀದಿಗಳು ಮತ್ತು ಚರ್ಚ್‌ಗಳನ್ನು ಏಕೆ ಸರಕಾರೀಕರಣಗೊಳಿಸಲಿಲ್ಲ? ಸರಕಾರಕ್ಕೆ ನಾವು ದೇವಸ್ಥಾನಗಳನ್ನು ಅವುಗಳ ವ್ಯವಸ್ಥಾಪಕರು ಮತ್ತು ಟ್ರಸ್ಟಿಗಳಿಗೆ ಹಸ್ತಾಂತರಿಸಬೇಕೆಂದು ನಾವು ಒತ್ತಾಯಿಸುತ್ತೇವೆ. ಇದರಲ್ಲಿ ಯಾರಾದರೂ ಹಸ್ತಕ್ಷೇಪ ಮಾಡಿದರೆ, ನಾವು ಖಂಡಿತವಾಗಿಯೂ ಅದರ ವಿರುದ್ಧ ಹೋರಾಡುತ್ತೇವೆ’, ಎಂದು ಹೇಳಿದರು.