ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಕುರಿಗಳ ಹತ್ಯೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಿರಿ ! – ಮುಂಬಯಿ ಉಚ್ಚ ನ್ಯಾಯಾಲಯದ ಆದೇಶ

  • ಮಿರಾ ರೋಡಲ್ಲಿನ ಅಪಾರ್ಟ್ಮೆಂಟ್ ನಲ್ಲಿ ‘ಕುರ್ಬಾನಿ’ಗಾಗಿ ಮುಸಲ್ಮಾನರು ತಂದಿರುವ ಕುರಿ ಪ್ರಕರಣ

  • ಮುಂಬಯಿ ಉಚ್ಚ ನ್ಯಾಯಾಲಯದ ಆದೇಶ

  • ಪೊಲೀಸರಿಂದ ಹಿಂದೂ ಮತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್

ಮುಂಬಯಿ – ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ಪರಿಸರದಲ್ಲಿ ಕುರಿಗಳ ಹತ್ಯೆ ಮಾಡುವುದು ತಪ್ಪು, ಎಂದು ಮುಂಬಯಿ ಉಚ್ಚ ನ್ಯಾಯಾಲಯ ಸ್ಪಷ್ಟವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂಬಯಿಯ ಮಿರಾ ರೋಡದಲ್ಲಿನ ಒಂದು ಅಪಾರ್ಟ್ಮೆಂಟ್ನಲ್ಲಿ ಬಕ್ರಿದ ಪ್ರಯುಕ್ತ ಕುರಿಗಳನ್ನು ತಂದಿದ್ದರು. ಅದರಿಂದ ಹಿಂದೂ ಮತ್ತು ಜೈನ ಕುಟುಂಬದವರು ವಿರೋಧಿಸಿದರು. ಈ ಪ್ರಕರಣದಲ್ಲಿ ಜೈನ ಸಮುದಾಯದ ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿತ್ತು. ಜೂನ್ ೨೮ ರಂದು ಸಂಜೆ ಮುಂಬಯಿ ಉಚ್ಚ ನ್ಯಾಯಾಲಯದಲ್ಲಿ ಇದರ ಕುರಿತು ವಿಚಾರಣೆ ನಡೆಯಿತು. ಆ ಸಮಯದಲ್ಲಿ ನ್ಯಾಯಾಲಯವು ಅನುಮತಿ ಇಲ್ಲದೆ ಅಪಾರ್ಟ್ಮೆಂಟ್ ನಲ್ಲಿ ಕುರಿಗಳ ಹತ್ಯೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು, ಎಂದು ರಾಜ್ಯ ಸರಕಾರಕ್ಕೆ ಮತ್ತು ಮುಂಬಯಿ ಮಹಾನಗರ ಪಾಲಿಕೆಗೆ ಆದೇಶ ನೀಡಿತು.

‘ಮುಂಬಯಿ ಪೊಲೀಸರು ಅಪಾರ್ಟ್ಮೆಂಟ್ ಪರಿಸರದಲ್ಲಿ ಪರಿಶೀಲನೆ ನಡೆಸಬೇಕು, ಅವಶ್ಯಕತೆ ಅನಿಸಿದರೆ ಅಪಾರ್ಟ್ಮೆಂಟಿಗೆ ರಕ್ಷಣೆ ಕೂಡ ನೀಡಬೇಕು’, ಎಂದು ನ್ಯಾಯಾಲಯವು ಸೂಚನೆ ಕೂಡ ನೀಡಿದೆ. ಪ್ರತ್ಯಕ್ಷದಲ್ಲಿ ಈ ಅಪಾರ್ಟ್ಮೆಂಟ್ ನಲ್ಲಿ ೬೦ ಕುರಿಗಳನ್ನು ತಂದಿರುವ ಆರೋಪ ಜೈನ ಧರ್ಮದವರಿಂದ ಮಾಡಲಾಗಿತ್ತು. ಕುರಿ ತಂದಿರುವ ಮುಸಲ್ಮಾನರ ವಿರೋಧಿಸುವ ಹಿಂದೂ ಮತ್ತು ಬಜರಂಗದಳದ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಬೀಸಿದರು. (ಇಂತಹ ಪೊಲೀಸರ ಮೇಲೆ ಸರಕಾರದಿಂದ ಕ್ರಮ ಕೈಗೊಳ್ಳಬೇಕೆಂದು ಹಿಂದುಗಳ ಅಪೇಕ್ಷೆಯಾಗಿದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಪೊಲೀಸರ ದಬ್ಬಾಳಿಕೆ ! ಹಿಂದುಗಳ ಮೇಲೆ ಲಾಠಿ ಬೀಸುವ ಪೊಲೀಸರು ಇತರ ಧರ್ಮೀಯರ ಮೇಲೆ ಈ ರೀತಿ ಎಂದಾದರೂ ಲಾಠಿ ಬೀಸುವ ಧೈರ್ಯ ಮಾಡುವರೆ ?