ಪಾಕಿಸ್ತಾನದಿಂದ ಭಾರತದ ಗಡಿಯಲ್ಲಿ ಅಣುಬಾಂಬ್ ಸಿಡಿಸುವ ತೋಪು ನೇಮಕ !

ಇಸ್ಲಾಮಬಾದ (ಪಾಕಿಸ್ತಾನ) – ಚೀನಾವು ಪಾಕಿಸ್ತಾನಕ್ಕೆ ಅದರ ಗಡಿಯಲ್ಲಿ ಬಂಕರ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಿದೆ. ಹಾಗೆಯೇ ಚೀನಾವು ಪಾಕಿಸ್ತಾನಕ್ಕೆ ಅಣುಬಾಂಬ್ ಸಿಡಿಸುವ ತೋಪುಗಳನ್ನೂ ನೀಡಿದೆ. ಪಾಕಿಸ್ತಾನವು ಈ ತೋಪುಗಳನ್ನು ಕಾಶ್ಮೀರದ ಗಡಿಯಲ್ಲಿ ನಿಯೋಜಿಸಿದೆ. ‘ಎಸ್ ಎಚ್-15’ ಈ ತೋಪಿನ ಹೆಸರಿದೆ. ಚೀನಾವು ಪಾಕಿಸ್ತಾನಕ್ಕೆ ಇಂತಹ 236 ತೋಪುಗಳನ್ನು ಪೂರೈಸುವ ಒಪ್ಪಂದವನ್ನು ಮಾಡಿಕೋಂಡಿದೆ. ಇವುಗಳಲ್ಲಿ ಕೆಲವು ತೋಪುಗಳು ಪಾಕಿಸ್ತಾನಕ್ಕೆ ಸಿಕ್ಕಿವೆ. ಈ ತೋಪಿನಿಂದ ಒಂದು ನಿಮಿಷದಲ್ಲಿ 4 ರಿಂದ 6 ಫಿರಂಗಿಗಳನ್ನು ಹಾರಿಸಬಲ್ಲವು.

ತಜ್ಞರ ಪ್ರಕಾರ, ಈ ತೋಪಿಗಳಿಂದ ಅಣುಬಾಂಬ್ ಗಳನ್ನು ಸಿಡಿಸಲು ಪಾಕಿಸ್ತಾನಕ್ಕೆ ಚಿಕ್ಕ ಅಣುಬಾಂಬ್ ಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಪಾಕಿಸ್ತಾನವು ಇಂತಹ ಚಿಕ್ಕ ಅಣುಬಾಂಬ್ ಗಳನ್ನು ತಯಾರಿಸುತ್ತಿದೆ.

ಸಂಪಾದಕರ ನಿಲುವು

‘ರಕ್ಷಣೆಗಾಗಿ ದಾಳಿಯೇ ಅತ್ಯುತ್ತಮ ಉಪಾಯವಾಗಿದೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಭಾರತವು ಪಾಕಿಸ್ತಾನ ಶಾಶ್ವತವಾಗಿ ನೆನಪಿಟ್ಟುಕೊಳ್ಳುವಂತಹ ದಾಳಿ ಮಾಡುವುದು ಅವಶ್ಯವಾಗಿದೆ !