ದೆಹಲಿಯಲ್ಲಿ ಸರಕಾರದಿಂದ ಶನಿ ದೇವಸ್ಥಾನ ಕೆಡಹುವ ಪ್ರಯತ್ನ : ಹಿಂದೂಗಳಿಂದ ವಿರೋಧ !

ನವದೆಹಲಿ – ಪೂರ್ವ ದೆಹಲಿಯ ಮಾಂಡವಲಿಯಲ್ಲಿರುವ ಶನಿ ದೇವಸ್ಥಾನದ ಕಟ್ಟಡವನ್ನು ಕೆಡವಲು ಬಂದ ಅಧಿಕಾರಿಗಳಿಗೆ ಹಿಂದೂಗಳಿಂದ ತೀವ್ರ ವಿರೋಧವಾಗಿದೆ. ಹಿಂದೂ ಸಂಘಟನೆಯ ಕಾರ್ಯಕರ್ತರು ಸರಕಾರದ ಕಾರ್ಯಾಚರಣೆಯ ವಿರುದ್ಧ ಘೋಷಣೆ ನೀಡಿದರು. ಈ ಸಮಯದಲ್ಲಿ ಘಟನಾ ಸ್ಥಳದಲ್ಲಿ ಉಪಸ್ಥಿತರಿದ್ದ ಜನರು ಮತ್ತು ಸುರಕ್ಷಾ ದಳದ ಸೈನಿಕರ ನಡುವೆ ಜಟಾಪಟಿ ಕೂಡ ನಡೆಯಿತು. ಈ ದೇವಸ್ಥಾನವನ್ನು ಒಂದು ವರ್ಷದ ಹಿಂದೆ ಮರದ ಕೆಳಗೆ ಕಟ್ಟಿರುವುದಾಗಿ ಸರಕಾರ ದಾವೆ ಮಾಡಿದೆ . ಹೆಚ್ಚಿನ ಸಂಖ್ಯೆಯಲ್ಲಿ ಜನರು ದೇವಸ್ಥಾನದ ಸ್ಥಳಕ್ಕೆ ತಲುಪಿ ದೇವಸ್ಥಾನ ತೆರವುಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದರು.

ಈ ಹಿಂದೆ ಸರಕಾರ ಶಿವಪುರಿಯಲ್ಲಿನ ಶಿವ ದೇವಸ್ಥಾನದ ಕಟ್ಟಡವನ್ನು ಸಹ ನೆಲಸಮ ಮಾಡಿದ್ದು. ಪೊಲೀಸರ ಉಪಸ್ಥಿತಿಯಲ್ಲಿ ಸರಕಾರದಿಂದ ಈ ಕ್ರಮ ಕೈಗೊಳ್ಳಲಾಗಿತ್ತು. ದೇವಸ್ಥಾನವನ್ನು ಕಾನೂನ ಬಾಹಿರವಾಗಿ ಕಟ್ಟಲಾಗಿದೆ ಎಂದು ಸಾರ್ವಜನಿಕ ಕಟ್ಟಡ ವಿಭಾಗದಿಂದ ದೂರುಗಳು ಬರುತ್ತಿದೆ ಎಂದು ಸರಕಾರ ಹೇಳಿದೆ. ಆದ್ದರಿಂದ ಹಿಂದೂಗಳು ಸಾರ್ವಜನಿಕ ಕಟ್ಟಡ ವಿಭಾಗದ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ವಜಿರಾಬಾದ ರಸ್ತೆಯಲ್ಲಿನ ಭಜನಪುರಾದ ಮಾರ್ಗದಲ್ಲಿ ಕಟ್ಟಿರುವ ಹನುಮಾನ ದೇವಸ್ಥಾನ ಮತ್ತು ಬೀಚ್ ರೋಡ್ ದಲ್ಲಿ ಕಟ್ಟಿರುವ ಚಾಂದ್ ಬಾಬಾನ ಮಜಾರ್ (ಮುಸಲ್ಮಾನರ ಗೋರಿ)ಯನ್ನು ತೆರವುಗೊಳಿಸಲು ಕೆಲವು ದಿನಗಳ ಹಿಂದೆ ಸರಕಾರದಿಂದ ಪ್ರಯತ್ನ ಮಾಡಲಾಗಿತ್ತು ; ಆದರೆ ವಿರೋಧದಿಂದ ಕ್ರಮಕೈಗೊಳ್ಳಲು ಸಾಧ್ಯವಾಗಲಿಲ್ಲ.

ಸಂಪಾದಕೀಯ ನಿಲುವು

ಮಸೀದಿ ಅಥವಾ ಚರ್ಚ್ ಕೆಡಹುವ ಸಂದರ್ಭದಲ್ಲಿ ಸರಕಾರ ಈ ರೀತಿಯ ಧೈರ್ಯ ಎಂದಾದರು ತೋರಿಸುತ್ತಿತ್ತೇನು ?