ಕಠುವಾ ಅತ್ಯಾಚಾರ ಪ್ರಕರಣ : ಹಿಂದೂಗಳನ್ನು ಜಮ್ಮುವಿನಿಂದ ಹೊರದಬ್ಬುವ ಸಂಚು ! – ಪ್ರಾ. ಮಧು ಕಿಶ್ವರ್, ಲೇಖಕಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನ !

ಪ್ರಾ. ಮಧು ಕಿಶ್ವರ್, ಲೇಖಕಿ

2018 ರಲ್ಲಿ, ಜಮ್ಮುವಿನ ರಸಾನಾ ಎಂಬ ಸಣ್ಣ ಹಳ್ಳಿಯಲ್ಲಿ ನಡೆದ ನಕಲಿ ಅತ್ಯಾಚಾರ ಪ್ರಕರಣವನ್ನು ವಿಶ್ವಾದ್ಯಂತ ‘ಕಠುವಾ ಅತ್ಯಾಚಾರ’ ಪ್ರಕರಣ ಎಂದು ಪ್ರಚಾರ ಮಾಡಲಾಯಿತು ಮತ್ತು ಪಿತೂರಿಯಿಂದ ಹಿಂದೂಗಳನ್ನು ಸಿಲುಕಿಸಿ ಅಪಕೀರ್ತಿಗೊಳಿಸಲಾಯಿತು. ದೇಶಾದ್ಯಂತ ಜಾತ್ಯತೀತರು, ಬಾಲಿವುಡ್ ನಟರು ಮತ್ತು ಹಿಂದೂ-ವಿರೋಧಿಗಳು ಈ ಪ್ರಕರಣವನ್ನು ವಿಶ್ವಾದ್ಯಂತದ ಹಿಂದೂಗಳನ್ನು ನಿಂದಿಸಲು ಬಳಸಿಕೊಂಡರು. ಹಿಂದೂಗಳು ಸಂತ್ರಸ್ತೆಯನ್ನು ಅಪಹರಿಸಿ, ಆಕೆಯ ಮೇಲೆ ಅತ್ಯಾಚಾರ ಎಸಗಿ ಅವಳನ್ನು ಕೊಂದು ಹಾಕಿದರು ಎಂದು ಸುಳ್ಳು ಪುರಾವೆಗಳ ಆಧಾರದ ಮೇಲೆ ಕಥೆಯನ್ನು ಕಟ್ಟಿದರು ಮತ್ತು ಜಗತ್ತಿನಾದ್ಯಂತ ಅದನ್ನು ಪ್ರಚಾರ ಮಾಡಿದರು. ಇದರ ಹಿಂದೆ ಹಿಂದೂಗಳ ಮಾನಹಾನಿ ಮಾಡಿ ಅವರನ್ನು ಕಾಶ್ಮೀರದ ನಂತರ ಜಮ್ಮು ಪ್ರದೇಶದಿಂದ ಹೊರದಬ್ಬುವ ಯೋಜಿತ ಪಿತೂರಿಯಾಗಿತ್ತು, ಎಂದು ದೆಹಲಿಯ ‘ದಿ ಗರ್ಲ್ ಫ್ರಮ್ ಕಠುವಾ’ ಪುಸ್ತಕದ ಲೇಖಕಿ ಮತ್ತು ‘ಮಾನುಷಿ’ಯ ಸಂಪಾದಕಿ ಪ್ರಾ. ಮಧು ಕಿಶ್ವರ್ ಇವರು ಆರೋಪಿಸಿದ್ದಾರೆ. ಅವರು ಗೋವಾದ ಫೋಂಡಾದ ಶ್ರೀ ರಾಮನಾಥ ದೇವಸ್ಥಾನದಲ್ಲಿ ನಡೆದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಕಠುವಾದಲ್ಲಿನ ಸತ್ಯ’ ಕುರಿತು ಮಾತನಾಡುತ್ತಿದ್ದರು.

(ಸೌಜನ್ಯ – Hindu Janajagruti Samiti)

ಅವರು ತಮ್ಮ ಮಾತನ್ನು ಮುಂದುವರೆಸುತ್ತಾ, ಹಿಂದೂಗಳ ಮೇಲೆ ‘ಗ್ಯಾಂಗ್-ರೇಪ್’ ಆರೋಪ ಮಾಡಲಾಗಿದೆ; ಆದರೆ ಶವಪರೀಕ್ಷೆ ವರದಿಯಲ್ಲಿ ಅತ್ಯಾಚಾರ ಆಗಿರುವುದನ್ನು ಒಪ್ಪಿಲ್ಲ. ಪೊಲೀಸ್ ತನಿಖೆಯಲ್ಲಿ ಬಾಲಕಿಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಹೇಳಿದರೆ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಲೆಬುರುಡೆಗೆ ಯಾವುದೇ ಆಘಾತ ಕಂಡುಬಂದಿಲ್ಲ. ಆ ವರದಿಯಲ್ಲಿ ಇಂತಹ ಹಲವು ಅಸಂಬದ್ಧತೆಗಳು ಕಂಡು ಬಂದಿವೆ. ಯಾವುದೇ ಅಪ್ರಾಪ್ತ ಬಾಲಕಿಯ ಅತ್ಯಾಚಾರದ ಪ್ರಕರಣದಲ್ಲಿ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸುವುದು ಕಾಯಿದೆಯಡಿಯಲ್ಲಿ ಅಪರಾಧವಾಗಿದೆ; ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯ ಛಾಯಾಚಿತ್ರ ಮತ್ತು ಹೆಸರನ್ನು ಮಾಧ್ಯಮಗಳಲ್ಲಿ ಉದ್ದೇಶಪೂರ್ವಕವಾಗಿ ಬಹಿರಂಗಪಡಿಸಲಾಗಿದೆ. ಈ ಪ್ರಕರಣದಲ್ಲಿ ತನಿಖೆಯ ಹೆಸರಿನಲ್ಲಿ ಹಿಂದೂ ಯುವಕರಿಗೆ ಚಿತ್ರಹಿಂಸೆ ನೀಡಲಾಯಿತು. ಪರಿಣಾಮವಾಗಿ ಅನೇಕ ಹಿಂದೂ ಕುಟುಂಬಗಳು ಕಠುವಾದಿಂದ ವಲಸೆ ಹೋಗಬೇಕಾಯಿತು.