ಭಾರತೀಯ ದಂಪತಿಗೆ ತಮ್ಮ ಎರಡು ವರ್ಷ ಮೂರು ತಿಂಗಳ ಹೆಣ್ಣು ಮಗುವನ್ನು ಮರಳಿಸಲು ಜರ್ಮನಿಯ ನ್ಯಾಯಾಲಯದಿಂದ ನಿರಾಕರಣೆ

ಬಾಲಕಿಯ ಲೈಂಗಿಕ ಶೋಷಣೆ ಆಗಿದೆ ಎಂಬ ಆರೋಪದಿಂದ ಬಾಲಕಿ ಸರಕಾರದ ಅಧೀನದಲ್ಲಿ !

ಬರ್ಲಿನ(ಜರ್ಮನಿ)- ಬರ್ಲಿನ್ ನಗರದ ನ್ಯಾಯಾಲಯ ಭಾರತೀಯ ದಂಪತಿಯ ಎರಡು ವರ್ಷ ಮೂರು ತಿಂಗಳ ಬಾಲಕಿಯನ್ನು ಅವಳ ಪೋಷಕರಿಗೆ ಒಪ್ಪಿಸಲು ನಿರಾಕರಿಸಿದೆ. ನ್ಯಾಯಾಲಯವು ಈ ಬಾಲಕಿಯ ಪೋಷಣೆಯ ಜವಾಬ್ದಾರಿಯನ್ನು `ಜರ್ಮನಿ ಯೂತ್ ವೆಲ್ ಫೇರ್ ಕಾರ್ಯಾಲಯ’ ಕ್ಕೆ ಒಪ್ಪಿಸಿದೆ. 2021 ರಿಂದ ಬಾಲಕಿ ಸರಕಾರದ ಅಧೀನದಲ್ಲಿದ್ದಾಳೆ.

1.ಈ ಪ್ರಕರಣದಲ್ಲಿ ಭಾರತ ಸರಕಾರ ಬಾಲಕಿಯ ಪೋಷಕರಿಗೆ ಸಹಾಯ ಮಾಡುತ್ತಿದೆ. ಜೂನ 2 ರಂದು ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗಚಿ ಇವರು ಮಾತನಾಡಿ, ಚಿಕ್ಕ ಬಾಲಕಿಯನ್ನು ಸರಕಾರದ ಅಧೀನದಲ್ಲಿಡುವುದು ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಾ ಅಧಿಕಾರದ ಉಲ್ಲಂಘನೆಯಾಗಿದೆ ಎಂದು ಹೇಳಿದರು.

2.ಭಾರತದಲ್ಲಿರುವ 19 ರಾಜಕೀಯ ಪಕ್ಷಗಳು ಮತ್ತು 59 ಸಂಸದರು ಭಾರತದಲ್ಲಿರುವ ಜರ್ಮನಿಯ ರಾಯಭಾರಿ ಡಾ. ಫಿಲಿಪ್ ಎಕರಮನ್ ಇವರಿಗೆ ಪತ್ರ ಬರೆದು ಬಾಲಕಿಯನ್ನು ಅವಳ ಪೋಷಕರಿಗೆ ಹಸ್ತಾಂತರಿಸುವಂತೆ ವಿನಂತಿಸಿದ್ದಾರೆ.

ಏನಿದು ಪ್ರಕರಣ?

ಸದರಿ ಬಾಲಕಿಯ ತಂದೆ `ಸಾಫ್ಟವೇರ ಇಂಜನಿಯರ’ ಆಗಿದ್ದಾರೆ. ಅವರು ತಮ್ಮಪತ್ನಿಯೊಂದಿಗೆ ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ಅವರ ಮಗಳು 7 ತಿಂಗಳಿನವಳಾಗಿದ್ದಾಗ ಆಟವಾಡುವಾಗ ಅವಳಿಗೆ ಪೆಟ್ಟು ತಗಲಿದೆ. ಪೋಷಕರು ಅವಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಡಾಕ್ಟರರು ` ಅವಳ ಮೇಲೆ ಲೈಂಗಿಕ ಶೋಷಣೆಯಾಗಿದೆ’ ಎಂದು ಹೇಳಿದರು. ಇದರಿಂದ ಜರ್ಮನಿಯ ಆಡಳಿತಾಧಿಕಾರಿಗಳು ಬಾಲಕಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಆಗಿನಿಂದ ಅವಳ ಪೋಷಕರು ಆಕೆಯನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ