ರಾಮನಾಥ ದೇವಸ್ಥಾನ (ಗೋವಾ) – ಈಗ ಶ್ರೀರಾಮ ದೇವಸ್ಥಾನದ ನಿರ್ಮಾಣವಾಗುತ್ತಿದೆ; ಆದರೆ ಮತಾಂಧ ಆಕ್ರಮಣಕಾರರು ಅತಿಕ್ರಮಣ ಮಾಡಿರುವ ಎಲ್ಲ ದೇವಸ್ಥಾನಗಳನ್ನು ಪಡೆಯುವುದು ನಮ್ಮ ಪಣವಾಗಿದೆ. ಅವರ ಹತೋಟಿಯಿಂದ ಮಥುರಾ, ಕಾಶಿ, ಧಾರ (ಮಧ್ಯಪ್ರದೇಶ) ಹಾಗೂ ತಾಜಮಹಲಿನಲ್ಲಿರುವ ಹಿಂದೂಗಳ ಧಾರ್ಮಿಕ ಸ್ಥಳಗಳನ್ನು ಮುಕ್ತಗೊಳಿಸಲು ನಮ್ಮ ಸಂಘರ್ಷವು ಮುಂದುವರಿದಿದೆ ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಗಳು ಹಾಗೂ ಹಿಂದೂ ಫ್ರಂಟ್ ಫಾರ್ ಜಸ್ಟಿಸ್’ನ ಸಂರಕ್ಷಕರಾದ ನ್ಯಾಯವಾದಿ (ಪೂ.) ರವರು ಪ್ರತಿಪಾದಿಸಿದ್ದಾರೆ. ಅವರು ಇಲ್ಲಿ ನಡೆಯುತ್ತಿರುವ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ತೃತೀಯ ದಿನದಂದು (18.6.2023 ರಂದು) ಮಾತನಾಡುತ್ತಿದ್ದರು.
ನ್ಯಾಯವಾದಿ (ಪೂ.) ಹರಿಶಂಕರ ಜೈನ ರವರು ಮುಂದುವರಿದು ‘ಒಂದು ಕಾಲದಲ್ಲಿ `ಸೋನೆ ಕಿ ಚಿಡಿಯಾ’ ಆಗಿದ್ದ ಹಿಂದೂಗಳ ಭಾರತವು ಈಗ ಇತಿಹಾಸವಾಗುತ್ತಿದೆ ಮತ್ತು ಹಿಂದೂಗಳು ತಮ್ಮ ಆಸ್ತಿತ್ವಕ್ಕಾಗಿ ನ್ಯಾಯಾಲಯದಲ್ಲಿ ಮತ್ತು ನ್ಯಾಯಾಲಯದ ಹೊರಗೂ ಹೊರಡಬೇಕಾಗುತ್ತಿದೆ. ಹಿಂದೂ ರಾಷ್ಟ್ರಕ್ಕಾಗಿ ಸಂಘರ್ಷ ಮಾಡುತ್ತಿರುವಾಗ ನಾವು ಇತಿಹಾಸದಲ್ಲಿ ಧರ್ಮಕ್ಕಾಗಿ ಬಲಿದಾನ ನೀಡಿರುವ ಧರ್ಮ ಯೋಧರನ್ನು ಮರೆಯುತ್ತಿದ್ದೇವೆ. ಇಂತಹ ಸಾವಿರ ಧರ್ಮಯೋಧರ ಹೆಸರುಗಳನ್ನು ಹೇಳದ ಹೊರತು ನಾವು ಮುಂದುವರಿಯಲು ಸಾಧ್ಯವಿಲ್ಲ. ಮಹಾರಾಣಾ ಪ್ರತಾಪ, ಸಿಖ್ಖ ಧರ್ಮಗುರುಗಳು ಹಿಂದೂ ಧರ್ಮದ ರಕ್ಷಣೆಗಾಗಿ ಬಲಿದಾನ ನೀಡಿದ್ದಾರೆಯೇ ಹೊರತು ಸೋಲು ಒಪ್ಪಲಿಲ್ಲ. ನಮಗೆ ಅವರಿಗಿಂತಲೂ ಹೆಚ್ಚಿನ ಸಂಘರ್ಷವನ್ನು ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಬೇಕಿದೆ. ಆಗಲೇ ಆ ಧರ್ಮಯೋಧರಿಗೆ ಶಾಂತಿ ಸಿಗುತ್ತದೆ. ಭಾರತದ ಸಂವಿಧಾನದಿಂದ ನಿರ್ಮಾಣವಾಗಿರುವ ವರ್ತಮಾನದ ವ್ಯವಸ್ಥೆಯಲ್ಲಿ ಯಾವುದೇ ಸರಕಾರ ಬಂದರೂ ಅದು ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲಾರದು. ಹೀಗೆ ಆದರೂ ಅದನ್ನು ಪ್ರಶ್ನಿಸಲಾಗುವುದು. ಆದುದರಿಂದಲೇ ಹಿಂದೂಗಳೇ ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ನಿರ್ಮಿಸುವುದು ಆವಶ್ಯಕವಾಗಿದೆ, ಎಂದು ಹೇಳಿದರು.