ಅಧ್ಯಾತ್ಮದ ಬರಹಗಳಿರುವ ಅಥವಾ ಲೇಖನವಿರುವ ದಿನಪತ್ರಿಕೆಗಳು ಇದ್ದಲ್ಲಿ ಅವುಗಳನ್ನು ದಯವಿಟ್ಟು ಸನಾತನಕ್ಕೆ ಕಳುಹಿಸಿರಿ !

ಸಾಧಕರಿಗೆ ಸೂಚನೆ ಮತ್ತು ವಾಚಕರಲ್ಲಿ ಮನವಿ !

ಸನಾತನವು ಇದುವರೆಗೆ ಗುರುಕೃಪಾಯೋಗದ ಅಂತರ್ಗತ ವಿವಿಧ ಸಾಧನಾಮಾರ್ಗಗಳ ಪರಿಚಯ ಮಾಡಿಕೊಡುವ ಗ್ರಂಥಗಳನ್ನು ಪ್ರಕಾಶಿಸಿದೆ. ಹಾಗೆಯೇ ಸನಾತನ ಪ್ರಭಾತದಿಂದಲೂ ವಾಚಕರಿಗೆ ಅವುಗಳ ಪರಿಚಯ ಮಾಡಿಕೊಡಲಾಗಿದೆ. ಮುಂಬರುವ ಕಾಲದಲ್ಲಿ ಅಧ್ಯಾತ್ಮ ಮತ್ತು ವಿವಿಧ ಸಾಧನಾಮಾರ್ಗಗಳ ಹೆಚ್ಚಿನ ವಿವರವಾದ ಮಾಹಿತಿಯು ಜಿಜ್ಞಾಸುಗಳಿಗೆ ಲಭಿಸಬೇಕು ಎಂಬುದಕ್ಕಾಗಿ ಆ ಸಂದರ್ಭದಲ್ಲಿ ಇರುವ ಲೇಖನಗಳ ಸಂಕಲನ ಮಾಡಲು ಆರಂಭಿಸಲಾಗಿದೆ. ಈ ನಿಟ್ಟಿನಲ್ಲಿ ಲೇಖನಗಳು ಇರುವ ದಿನಪತ್ರಿಕೆ, ಪಾಕ್ಷಿಕ, ಮಾಸಿಕಗಳಂತಹ ವರ್ತಮಾನಪತ್ರಿಕೆಗಳು ಯಾರಲ್ಲಿಯಾದರೂ ಲಭ್ಯವಿದ್ದರೆ ಅವರು ಅದನ್ನು ಮುಂದಿನ ವಿಳಾಸಕ್ಕೆ ಕಳುಹಿಸಬೇಕು. ವರ್ತಮಾನಪತ್ರಿಕೆಗಳನ್ನು ಕಳುಹಿಸುವಾಗ ಮುಂದಿನ ಅಂಶಗಳನ್ನು ಗಮನದಲ್ಲಿಡಬೇಕು

೧. ವರ್ತಮಾನಪತ್ರಿಕೆಗಳನ್ನು ಬೇಕೆಂದಲೇ ಖರೀದಿ ಮಾಡಿ ಕಳುಹಿಸಬಾರದು.

೨. ವರ್ತಮಾನಪತ್ರಿಕೆಗಳನ್ನು ಕಳುಹಿಸುವ ಮೊದಲು ಅವು ಸನಾತನದಲ್ಲಿ ಇವೆಯೇ ಎಂಬುದನ್ನು ಖಚಿತಪಡಿಸಿ ಕೊಳ್ಳಲು ಇಲ್ಲಿ ಕೆಳಗೆ ಉಲ್ಲೇಖಿಸಿದ ಈ-ಮೇಲ್ ವಿಳಾಸಕ್ಕೆ ವರ್ತಮಾನಪತ್ರಿಕೆಗಳ ಪಟ್ಟಿ ಮಾಡಿ ಕಳುಹಿಸಬೇಕು. ಪಟ್ಟಿಯನ್ನು ಕಳುಹಿಸುವಾಗ ವರ್ತಮಾನಪತ್ರಿಕೆಯ ಹೆಸರು, ಪ್ರಕಾಶನದ ದಿನಾಂಕ, ಕಳುಹಿಸುವವರ ಹೆಸರು ಮತ್ತು ಸಂಪರ್ಕ ಸಂಖ್ಯೆ ಇವುಗಳನ್ನು ಉಲ್ಲೇಖಿಸಬೇಕು. ಸಂಬಂಧಪಟ್ಟ ಸಾಧಕರು ಆ ಸಂದರ್ಭದಲ್ಲಿ ಮರು ಸಂದೇಶ ಕಳುಹಿಸಿದ ನಂತರವೇ ಆ ವರ್ತಮಾನಪತ್ರಿಕೆಗಳನ್ನು ಗೋವಾದ ಮುಖ್ಯ ಕಾರ್ಯಾಲಯಕ್ಕ್ಕೆ ಕಳುಹಿಸಬೇಕು.

೩. ಈ ವರ್ತಮಾನಪತ್ರಿಕೆಗಳು ಸಾಧ್ಯವಾದ ಮಟ್ಟಿಗೆ ಮರಾಠಿ ಅಥವಾ ಹಿಂದಿ ಭಾಷೆಯಲ್ಲಿ ಇರಬೇಕು.

೪. ಸಾಧಕರಿಗೆ ವರ್ತಮಾನಪತ್ರಿಕೆಗಳ ಸಂಗ್ರಹ ಸ್ವಂತ ಸಂದರ್ಭಕ್ಕಾಗಿ ಇಡಬೇಕಾದಲ್ಲಿ ಸಂಬಂಧಿತ ಲೇಖನಗಳ ಎರಡು ಬದಿಯ ಫೋಟೋ ಕಾಪಿ (ಜೆರಾಕ್ಸ್) ತೆಗೆದು ಕಳುಹಿಸಬೇಕು. ಲೇಖನದೊಂದಿಗೆ ಆ ವರ್ತಮಾನಪತ್ರಿಕೆಗಳ ಪ್ರಕಾಶಕರು, ಮುದ್ರಕರು ಇವರ ಉಲ್ಲೇಖ ಇರುವ ಪುಟಗಳ ಸಹಿತ ಛಾಯಾಂಕಿತ ಪ್ರತಿ ಲಗತ್ತಿಸಬೇಕು.

೫. ಈ ವರ್ತಮಾನಪತ್ರಿಕೆಗಳನ್ನು ಖರ್ಚು ಮಾಡಿ ಅಂಚೆಯ ಮೂಲಕ ಕಳುಹಿಸಬಾರದು. ತಮ್ಮ ಪ್ರದೇಶದಿಂದ ಯಾರಾದರೂ ಸಾಧಕರು ಗೋವಾಕ್ಕೆ ಬರುವವರಿದ್ದರೆ ಅವರ ಮೂಲಕ ಅಥವಾ ಸನಾತನದ ಸಮೀಪದ ಸೇವಾ ಕೇಂದ್ರದಲ್ಲಿ ಜಮಾ ಮಾಡಬೇಕು.

ಸಾಧಕರ ಹೆಸರು ಮತ್ತು ಇ-ಮೇಲ್ – ಶ್ರೀ. ಅಮೋಲ ಬಧಾಲೆ, [email protected]