ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ‘ಬ್ರಹ್ಮೋತ್ಸವರೂಪಿ ೮೧ ನೇ ಜನ್ಮೋತ್ಸವದ ಸೂಕ್ಷ್ಮ ಪರೀಕ್ಷಣೆ !

‘ವೈಶಾಖ ಕೃಷ್ಣ ಷಷ್ಠಿಯ ಶುಭತಿಥಿಯಂದು ಗೋವಾದ ಫರ್ಮಾಗುಡಿ, ಇಂಜನಿಯರಿಂಗ್ ಕಾಲೇಜಿನ ಮೈದಾನದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ೮೧ ನೇ ಜನ್ಮೋತ್ಸವವು ‘ಬ್ರಹ್ಮೋತ್ಸವದ ರೂಪದಲ್ಲಿ ಅತ್ಯಂತ ಹರ್ಷೋಲ್ಲಾಸದಿಂದ ನೆರೆವೇರಿತು. ಈ ಸಮಾರಂಭವು ಭವ್ಯ ಮತ್ತು ದಿವ್ಯವಾಗಿತ್ತು. ದೇವರ ಕೃಪೆಯಿಂದ ಬುದ್ಧಿಗೆಮೀರಿದ ಈ ಅಲೌಕಿಕ, ದಿವ್ಯ ಮತ್ತು ಭವ್ಯ ಬ್ರಹ್ಮೋತ್ಸವದ ಸೂಕ್ಷ್ಮ ಪರೀಕ್ಷಣೆಯನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಾಗಿದೆ. ಆದ್ದರಿಂದ ಬ್ರಹ್ಮೋತ್ಸವದ ಅನುಭೂತಿಯನ್ನು ಪಡೆಯುವುದೇ ಒಳ್ಳೆಯದು, ಆದರೂ ಶ್ರೀ ಗುರುಗಳ ಆಜ್ಞಾಪಾಲನೆ ಮಾಡಲು ನನ್ನ ಅಲ್ಪ ತಿಳುವಳಿಕೆಗೆ ಏನು ಅರಿವಾಯಿತೋ ಅದನ್ನು ಇಲ್ಲಿ ಲೇಖನದ ರೂಪದಲ್ಲಿ ಬರೆದು ಈ ಲೇಖನರೂಪಿ ಭಾವಸುಮನಾಂಜಲಿಯನ್ನು ಶ್ರೀ ಗುರುಗಳ ಪರಮ ಪಾವನ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.

ಕು. ಮಧುರಾ ಭೋಸಲೆ

೧. ವಿವಿಧ ಬಣ್ಣಗಳ ಪ್ರಕಾಶಜ್ಯೋತಿಗಳು ಬಂದು ಪೃಥ್ವಿಯ ಸ್ಥಳ ಮತ್ತು ವಾಯುಮಂಡಲದ ಶುದ್ಧೀಕರಣ

೧೧.೫.೨೦೨೩ ರಂದು ಬೆಳಗ್ಗಿನಿಂದ ಸಾಯಂಕಾಲದ ವರೆಗೆ ಆಕಾಶದಿಂದ ಪೃಥ್ವಿಯ ಮೇಲೆ ತಿಳಿಹಳದಿ, ತಿಳಿನೀಲಿ, ಗುಲಾಬಿ, ನಸುಗೆಂಪು ಮತ್ತು ಬಿಳಿ ಈ ರೀತಿಯ ವಿವಿಧ ಬಣ್ಣಗಳ ದೈವೀ ಪ್ರಕಾಶಗಳ ಜ್ಯೋತಿಗಳು ಬರುತ್ತಿದ್ದವು. ಇದರಿಂದ ‘ಸ್ವರ್ಗಲೋಕ, ಮಹರ್ಲೋಕ, ಜನಲೋಕ, ತಪೋಲೋಕ ಮತ್ತು ಸತ್ಯಲೋಕ ಈ ಉಚ್ಚ ಲೋಕಗಳಲ್ಲಿ, ವಾಸಿಸುವ ವಿವಿಧ ದೈವೀ ಶಕ್ತಿಗಳ ಪ್ರವಾಹಗಳು ಪ್ರಕಾಶಜ್ಯೋತಿಗಳ ಮಾಧ್ಯಮದಿಂದ ಪೃಥ್ವಿಗೆ ಶುಭಾಗಮನವಾಗಿದ್ದು ಅವರೆಲ್ಲರೂ ಶ್ರೀವಿಷ್ಣುವಿನ ಆಗಮನಕ್ಕಾಗಿ ಮೊದಲೇ ಸಿದ್ಧರಾಗಿದ್ದಾರೆ ಎಂದು ಅರಿವಾಯಿತು, ಹಾಗೆಯೇ ಈ ಪ್ರಕಾಶಜ್ಯೋತಿಗಳಿಂದ ಉಚ್ಚ ಲೋಕಗಳ ಚೈತನ್ಯದ ಪ್ರವಾಹ ಪೃಥ್ವಿಗೆ ಬಂದು ಪೃಥ್ವಿಯ ಸ್ಥಳ ಮತ್ತು ವಾಯುಮಂಡಲ ಶುದ್ಧವಾಗಿರುವುದು ಅರಿವಾಯಿತು.

೨. ಬ್ರಹ್ಮೋತ್ಸವ

೨ ಅ. ಬ್ರಹ್ಮೋತ್ಸವ ಅಥವಾ ಆನಂದೋತ್ಸವ ಇವುಗಳ ಅರ್ಥ : ಆಧ್ಯಾತ್ಮಿಕ ಉನ್ನತರಲ್ಲಿರುವ ಪರಮೇಶ್ವರೀತತ್ತ್ವವು ಪ್ರಕಟವಾಗಿ ಜಾಗೃತವಾದಾಗ ಅವರಿಂದ ಸಂಪೂರ್ಣ ವಿಶ್ವದಲ್ಲಿ ಚೈತನ್ಯ, ಆನಂದ ಮತ್ತು ಶಾಂತಿಯ ಲಹರಿಗಳು ಪ್ರಕ್ಷೇಪಿಸಿ ಅನಂತ ಕೋಟಿ ಜೀವಗಳಿಗೆ ಅದರ ಅನುಭೂತಿ ಬರುತ್ತದೆ ಮತ್ತು ಬ್ರಹ್ಮಾನಂದವನ್ನು ಅನುಭವಿಸುವ ಜೀವಗಳು ಪರಮೇಶ್ವರನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಆಚರಿಸುವ ಉತ್ಸವಕ್ಕೆ ‘ಬ್ರಹ್ಮೋತ್ಸವ ಅಥವಾ ‘ಆನಂದೋತ್ಸವ ಎಂದು ಕರೆಯುತ್ತಾರೆ.

೨ ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಜನ್ಮೋತ್ಸವದಂದು ಅವರಲ್ಲಿನ ಪರಮೇಶ್ವರೀ ತತ್ತ್ವ, ಅಂದರೆ ಬ್ರಹ್ಮತತ್ತ್ವವು ಪ್ರಕಟವಾದುದರಿಂದ ಅವರು ಪರಬ್ರಹ್ಮ ಸ್ವರೂಪರಾದರು. ಆದ್ದರಿಂದ ಅವರ ಜನ್ಮೋತ್ಸವವನ್ನು ಸಪ್ತರ್ಷಿಗಳು ನಾಡಿಪಟ್ಟಿಯ ಮಾಧ್ಯಮದಿಂದ ಮಾಡಿದ ಮಾರ್ಗದರ್ಶನಕ್ಕನುಸಾರ ‘ಬ್ರಹ್ಮೋತ್ಸವದ ಸ್ವರೂಪದಲ್ಲಿ ಆಚರಿಸಲಾಯಿತು.

೩. ರಥೋತ್ಸವ ಮತ್ತು ಅದರ ಸ್ವರೂಪ !

೩ ಅ. ರಥೋತ್ಸವ : ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂದೇವಿಯ ಅವತಾರವಾಗಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರೊಂದಿಗೆ ಚಿನ್ನದ ಬಣ್ಣದ ರಥದಲ್ಲಿ ಆರೂಢರಾಗಿ ಸಮಾರಂಭದ ಸ್ಥಳಕ್ಕೆ ಬಂದರು. ಈ ರಥದ ಆಧ್ಯಾತ್ಮಿಕ ವೈಶಿಷ್ಟ್ಯಗಳು ಮುಂದಿನಂತಿವೆ.

೩ ಅ ೧. ಸಾಕ್ಷಾತ್ ದೇವಶಿಲ್ಪಿ ವಿಶ್ವಕರ್ಮ ಇವರು ಶಿವಮೊಗ್ಗ ಜಿಲ್ಲೆಯ ಸಂತರಾದ ಪೂ. ಕಾಶಿನಾಥ ಕವಟೆಕರ ಇವರ ಮಾಧ್ಯಮದಿಂದ ಸನಾತನದ ಸಾಧಕರಿಗೆ ಮಾರ್ಗದರ್ಶನ ಮಾಡಿ ಅವರಿಂದ ಈ ರಥವನ್ನು ತಯಾರಿಸಿಕೊಂಡಿದ್ದಾರೆ. ಆದ್ದರಿಂದ ಈ ರಥದಲ್ಲಿ ವೈಕುಂಠದಲ್ಲಿನ ಶ್ರೀವಿಷ್ಣುವಿನ ದಿವ್ಯ ರಥದ ಶೇ. ೩೦ ರಷ್ಟು ತತ್ತ್ವ ಆಕರ್ಷಿತವಾಗಿ ಅದು ಬಹಳಷ್ಟು ಪ್ರಮಾಣದಲ್ಲಿ ಕಾರ್ಯನಿರತವಾಗಿದೆ. ಆದ್ದರಿಂದ ಸ್ಥೂಲ ಕಣ್ಣುಗಳಿಗೆ ಕಾಣುವ ಈ ಭೂಲೋಕದ ರಥವೆಂದರೆ, ಸಾಕ್ಷಾತ್ ಶ್ರೀವಿಷ್ಣುವಿನ ವೈಕುಂಠದಲ್ಲಿನ ದಿವ್ಯ ಸುವರ್ಣ ರಥವೇ ಆಗಿದೆ.

೩ ಅ ೨. ಶ್ರೀವಿಷ್ಣುರಥದ ಮೇಲೆ ಹಾರಿಸಿದ ಚಿನ್ನದ ಬಣ್ಣದ ಧ್ವಜದ ಮೇಲೆ ಒಂದು ಬದಿಗೆ ‘ಸೂರ್ಯನಾರಾಯಣ ಮತ್ತು ಇನ್ನೊಂದು ಬದಿಗೆ ‘ಓಂ ಈ ಚಿಹ್ನೆಗಳನ್ನು ಹಾಕಲಾಗಿತ್ತು. ಸೂರ್ಯನಾರಾಯಣನ ಚಿಹ್ನೆಯಿಂದ ಸಗುಣ-ನಿರ್ಗುಣ ಮತ್ತು ‘ಓಂ ಚಿಹ್ನೆಯಿಂದ ನಿರ್ಗುಣ-ಸಗುಣ ಸ್ತರದ ದೈವೀ ಶಕ್ತಿ ಮತ್ತು ಚೈತನ್ಯವು ವಾತಾವರಣದಲ್ಲಿ ಕಾರ್ಯನಿರತವಾಗಿತ್ತು. ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಜ್ಞಾನ, ಮೋಕ್ಷ, ಅವತಾರಿ, ಸಮಷ್ಟಿ, ವಿಶ್ವ ಮತ್ತು ಜಗದ್ಗುರುಗಳಾಗಿರುವುದರಿಂದ ಅವರು ಸಗುಣ ಸ್ತರ ದಲ್ಲಿ ಸೂರ್ಯನಾರಾಯಣನಂತೆ ಮತ್ತು ನಿರ್ಗುಣ ಸ್ತರದಲ್ಲಿ ‘ಓಂಕಾರದಂತೆ ಸಂಪೂರ್ಣ ಸೃಷ್ಟಿಯ ಕಲ್ಯಾಣಕ್ಕಾಗಿ ದೈವೀ ಕಾರ್ಯವನ್ನು ನಿರಂತರವಾಗಿ ಮಾಡುತ್ತಾರೆ. ಆದ್ದರಿಂದ ಅವರು ಅಖಿಲ ಬ್ರಹ್ಮಾಂಡದ ‘ಬ್ರಹ್ಮಾಂಡಗುರುಗಳಾಗಿದ್ದಾರೆ.

೩ ಅ ೩. ಈ ದಿವ್ಯ ರಥವು ಮೈದಾನದಲ್ಲಿ ನಿಗದಿಪಡಿಸಲಾದ ಮಾರ್ಗದಲ್ಲಿ ಸಾಗುವಾಗ ‘ಓಡಿಶಾ ರಾಜ್ಯದ ಶ್ರೀ ಜಗನ್ನಾಥ ಪುರಿಯ ಶ್ರೀ ಜಗನ್ನಾಥ ದೇವರ ರಥವನ್ನು ಭಕ್ತರು ಎಳೆಯು ವಂತೆ ‘ಬ್ರಹ್ಮಾಂಡದಲ್ಲಿನ ಪುಣ್ಯಾತ್ಮರು, ಧರ್ಮಾತ್ಮರು ಮತ್ತು ಋಷಿ ಮುನಿಗಳು ಸಾಧಕರ ರೂಪದಲ್ಲಿ ಶ್ರೀವಿಷ್ಣುವಿನ ಅವತಾರ ವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರೂಢವಾಗಿರುವ ದಿವ್ಯ ರಥವನ್ನು ಎಳೆಯುತ್ತಿದ್ದಾರೆ, ಎಂದು ನನಗೆ ಅರಿವಾಯಿತು. ಹಾಗೆಯೇ ತಿರುಪತಿ ಬಾಲಾಜಿಯ ಬ್ರಹ್ಮೋತ್ಸವವನ್ನು ಹೇಗೆ ಆಚರಿಸಲಾಗುತ್ತದೆಯೋ, ಅದೇ ರೀತಿ ಶ್ರೀವಿಷ್ಣುವಿನ ಅಂಶಾವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಈ ಬ್ರಹ್ಮೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಆದ್ದರಿಂದ ಶ್ರೀವಿಷ್ಣುವಿನ ಶ್ರೀ ಜಗನ್ನಾಥ ಮತ್ತು ಶ್ರೀ ತಿರುಪತಿ ಬಾಲಾಜಿ ಈ ಇಬ್ಬರ ರೂಪಗಳ ಭವ್ಯ ಮತ್ತು ದಿವ್ಯ ಸ್ವರೂಪವು ಒಗ್ಗೂಡಿದಂತಹ ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮೋತ್ಸವರೂಪಿ ಈ ದಿವ್ಯ ಸಮಾರಂಭವನ್ನು ನೋಡಲು ‘ಸೂರ್ಯ, ಚಂದ್ರ, ಅಗ್ನಿ, ವಾಯು, ಪರ್ಜನ್ಯ, ಇಂದ್ರ, ಯಮ ಮತ್ತು ಕುಬೇರ, ಈ ಅಷ್ಟಲೋಕಪಾಲಕರು (ಎಂಟು ಲೋಕಗಳ ಸ್ವಾಮಿಗಳು) ಹಾಗೆಯೇ ‘ಇಂದ್ರ, ಯಮ, ವರುಣ, ಕುಬೇರ, ಅಗ್ನಿ, ನೈರುತ್ಯ, ವಾಯು ಮತ್ತು ಈಶಾನ ಈ ಅಷ್ಟದಿಕ್ಪಾಲಕರು (ಎಂಟು ದಿಕ್ಕುಗಳ ಸ್ವಾಮಿಗಳು), ಆಪ, ಧ್ರುವ, ಸೋಮ, ಧರ್ಮ, ಅನಿಲ, ಅನಲ, ಪ್ರತ್ಯುಷ ಮತ್ತು ಪ್ರಭಾಸ ಈ ಅಷ್ಟವಸು (ಗಣ ದೇವತೆಗಳು) ಹಾಗೆಯೇ ಯಕ್ಷ, ಗಂಧರ್ವ, ದೇವತೆಗಳು ಮೊದಲಾದ ದೈವೀ ಶಕ್ತಿಗಳು ಆಕಾಶಮಂಡಲದಲ್ಲಿ ಸೇರಿದ್ದರು.

೩ ಅ ೪. ಈ ರಥವು ಸಮಾರಂಭದ ಸ್ಥಳದಲ್ಲಿ ಸಂಚರಿಸುವಾಗ ‘ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರೊಂದಿಗೆ ಪೂರ್ಣ ಬ್ರಹ್ಮಾಂಡದಲ್ಲಿ ವಿಹರಿಸಿ ಪ್ರತಿಯೊಂದು ಲೋಕದ ಜೀವಗಳನ್ನು ಪ್ರೀತಿಭರಿತ ದೃಷ್ಟಿಯಿಂದ ಅವಲೋಕಿಸುತ್ತಿದ್ದು ಸಮಾರಂಭದ ಸ್ಥಳವು ‘ಭೂವೈಕುಂಠವಾಗಿದೆ ಎಂದರಿವಾಯಿತು.

೩ ಅ ೫. ರಥೋತ್ಸವದಲ್ಲಿ ಬ್ರಹ್ಮಾಂಡದ ಎಲ್ಲ ದೇವತೆಗಳು ವೈಕುಂಠದಿಂದ ಭೂಲೋಕದವರೆಗೆ ಶ್ರೀಮನ್ನಾರಾಯಣನ ದಿವ್ಯ ಶೋಭಾಯಾತ್ರೆ ತೆಗೆದಿರುವುದು ಅರಿವಾಯಿತು. ಅವತಾರವು ಭೂಲೋಕದಲ್ಲಿ ಅವತರಿಸುವಾಗ ಅವನಿಗೆ ಸಹಾಯ ಮಾಡುವ ದೈವೀ ಶಕ್ತಿಗಳೂ ವಿವಿಧ ರೂಪಗಳಲ್ಲಿ ಭೂಲೋಕದಲ್ಲಿ ಅವತರಿಸುತ್ತವೆ. ಇದಕ್ಕೇ ‘ಭಗವಂತನ ವ್ಯೂಹ ಧರಣಿಯಲ್ಲಿ ಅವತರಿಸುವುದು, ಎನ್ನುತ್ತಾರೆ.

೩ ಅ ೬. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಆರೂಢವಾಗಿರುವ ದಿವ್ಯ ರಥವು ವೇದಿಕೆಯ ಮುಂದೆ ನಿಂತಾಗ ರಥದ ಮೇಲ್ಭಾಗದಲ್ಲಿ ಕೈಯಲ್ಲಿ ಗದೆ ಹಿಡಿದು ರಥದ ರಕ್ಷಣೆಗಾಗಿ ವೀರ ಹನುಮಾನ, ರಥದ ಕೆಳಗಿನ ಭಾಗದಲ್ಲಿ ಕೈ ಜೋಡಿಸಿದ ಭಾವಮುದ್ರೆಯಲ್ಲಿನ ಶ್ರೀವಿಷ್ಣುವಾಹನ ಗರುಡ ಮತ್ತು ರಥದ ಎಡಬದಿಗೆ ಮಂಜುಳ ಸ್ವರದಲ್ಲಿ ಗಾಯನದ ಸ್ವರೂಪದಲ್ಲಿ ಶ್ರೀವಿಷ್ಣುವಿನ ಸ್ತುತಿ ಮಾಡುವ ಮಹಾಮುನಿಗಳಾದ ತುಂಬರು ಮತ್ತು ಬಲಬದಿಗೆ ನಿರಂತರ ಶ್ರೀವಿಷ್ಣು ನಾಮದ ಗುಣಗಾನ ಮಾಡುವ ಮತ್ತು ವೀಣಾವಾದನ ಮಾಡುವ ಪರಮ ಶ್ರೀವಿಷ್ಣುಭಕ್ತ ಮಹರ್ಷಿ ನಾರದರು ಸಾಕ್ಷಾತ್ ಉಪಸ್ಥಿತರಿದ್ದು ಬ್ರಹ್ಮೋತ್ಸವದ ನಿವೇದನೆಯನ್ನು ಮಾಡುತ್ತಿರುವುದು ಅರಿವಾಯಿತು.

೩ ಅ ೭. ಬ್ರಹ್ಮೋತ್ಸವದ ಸಮಯದಲ್ಲಿ ೭ ನೇ ಪಾತಾಳದ ಮಾಯಾವಿ ಅಸುರೀ ಶಕ್ತಿಗಳು ಸಮಾರಂಭದ ಸ್ಥಳದ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡಿದಾಗ ರಥದ ಸುತ್ತಲೂ ಬ್ರಹ್ಮಚೈತನ್ಯದ ಚಿನ್ನದ ಬಣ್ಣದ ತಾರಕ ಮತ್ತು ದಿವ್ಯ ಶಕ್ತಿಯ ಕೆಂಪು ಬಣ್ಣದ ಮಾರಕ ಈ ಎರಡೂ ತತ್ತ್ವಗಳ ರಕ್ಷಣಾಕವಚಗಳು ಕಾರ್ಯನಿರತವಾಗಿದ್ದವು. ಆದ್ದರಿಂದ ರಥದ ಸುತ್ತಲೂ ಕಾರ್ಯನಿರತವಾಗಿರುವ ಚಿನ್ನದ ಬಣ್ಣದ ಬ್ರಹ್ಮಚೈತನ್ಯದ ರಕ್ಷಣಾ ಕವಚವು ಮಾಯಾವಿ ಶಕ್ತಿಗಳ ಮಾಯಾವಿ ಸಿದ್ಧಿಯನ್ನು ಆಕರ್ಷಣ ಶಕ್ತಿಯ ಸಹಾಯದಿಂದ ಎಳೆದುಕೊಂಡು ಕೆಟ್ಟ ಶಕ್ತಿಗಳ ಮಾಯಾವಿ ಸ್ವರೂಪದ ಆಕ್ರಮಣವನ್ನು ನಿಷ್ಫಲಗೊಳಿಸಿತು. ರಥದ ಸುತ್ತಲೂ ಕಾರ್ಯನಿರತವಾಗಿರುವ ಕೆಂಪು ಬಣ್ಣದ ದಿವ್ಯ ಶಕ್ತಿಯ ಸಂರಕ್ಷಕಕವಚದಿಂದ ದೇವತೆಗಳ ಗದೆ, ಬಾಣ, ಖಡ್ಗ, ತ್ರಿಶೂಲ, ಪಾಶ, ಅಂಕುಶ, ಪರಶು, ದಂಡ ಇತ್ಯಾದಿ ದಿವ್ಯ ಶಸ್ತ್ರಾಸ್ತ್ರಗಳು ಕೆಟ್ಟ ಶಕ್ತಿಗಳ ದಿಶೆಯಲ್ಲಿ ಹೋಗಿ ಕೆಟ್ಟ ಶಕ್ತಿಗಳ ಸೈನ್ಯದ ಮೇಲೆ ಅವುಗಳ ಹೊಡೆತ ಬಿದ್ದು ಅವು ಹೆದರಿ ಯುದ್ಧಭೂಮಿಯಿಂದ ಓಡಿಹೋದವು. ದಿವ್ಯ ರಥದ ಮೇಲೆ ಶ್ರೀಮನ್ನಾರಾಯಣನ ಭವ್ಯ ಸುದರ್ಶನಚಕ್ರವು ನಿರ್ಗುಣ ಸ್ತರದ ಮತ್ತು ಶ್ರೀಸೂರ್ಯ ನಾರಾಯಣನ ಕೈಯಲ್ಲಿನ ಸುದರ್ಶನಚಕ್ರವು ಸಗುಣ ಸ್ತರದಿಂದ ದಿವ್ಯ ರಥದ ಮೇಲೆ ಸೂಕ್ಷ್ಮದಿಂದಾಗುವ ಕೆಟ್ಟ ಶಕ್ತಿಗಳ ಆಕ್ರಮಣಗಳನ್ನು ಹಿಮ್ಮೆಟ್ಟಿಸುತ್ತಿದ್ದವು. ಯಾವಾಗ ದಿವ್ಯ ರಥದ ಮೇಲೆ ‘ಡ್ರೋನ್ ಈ ಆಕಾಶದಲ್ಲಿ ಹಾರುವ ಉಪಕರಣದ ಮೂಲಕ ಪುಷ್ಪವೃಷ್ಟಿಯನ್ನು ಮಾಡಲಾಯಿತೋ, ಆಗ ಆಕಾಶ ದಲ್ಲಿ ಹಾರುವ ಡ್ರೋನ್ ನಿಯಂತ್ರಣತಪ್ಪಿ ಅದು ರಥದ ಮೇಲೆ ಬೀಳದೇ ರಥದ ಮುಂಭಾಗದ ಎಡಬದಿಗೆ ಹೋಗಿ ಬಿದ್ದಿತು. ಈ ರೀತಿ ಕೆಟ್ಟ ಶಕ್ತಿಗಳು ಮಾಡಿದ ಸೂಕ್ಷ್ಮದಲ್ಲಿನ ಆಕ್ರಮಣಗಳನ್ನು ‘ಡ್ರೋನ್ ಈ ಉಪಕರಣವು ತನ್ನ ಮೇಲೆ ಎಳೆದುಕೊಂಡು ಅದು ಮೂವರು ಮೋಕ್ಷಗುರುಗಳ ಮೇಲೆ ಸ್ಥೂಲದಿಂದಾಗುವ ಅಪಘಾತದಿಂದ ರಕ್ಷಣೆ ಮಾಡಿರುವುದರ ಅರಿವಾಯಿತು.

೩ ಅ ೮. ಈ ದಿವ್ಯ ರಥವು ಕೆಲವೊಮ್ಮೆ ಭೂಮಿಯ ಮೇಲೆ, ಕೆಲವೊಮ್ಮೆ ಆಕಾಶದಲ್ಲಿ ಮೋಡಗಳ ಮೇಲೆ ಸಂಚರಿಸಿ ಅಸುರಿ ಸೈನ್ಯದೊಂದಿಗೆ ಹೋರಾಡುತ್ತಿತ್ತು ಮತ್ತು ಕೆಲವೊಮ್ಮೆ ವಿವಿಧ ಲೋಕಗಳಲ್ಲಿ ಸಂಚರಿಸಿ ಆಕಾಶಮಂಡಲದಲ್ಲಿ ಸೇರಿರುವ ವಿವಿಧ ಭಕ್ತರ ಮೇಲೆ ಕೃಪೆ ಮಾಡುತ್ತಿತ್ತು.

೩ ಆ. ದೀಪೋತ್ಸವ

ಸಾತ್ತ್ವಿಕ ದೀಪಗಳ ಜ್ಯೋತಿ ಬೆಳಗಿಸಿ ಆಚರಿಸಲಾಗುವ ಉತ್ಸವಕ್ಕೆ ‘ದೀಪೋತ್ಸವ ಎನ್ನುತ್ತಾರೆ. ಸಾಯಂಕಾಲ ಆಶ್ರಮ ದಲ್ಲಿ ಎಲ್ಲೆಡೆ ಸ್ಥೂಲದಲ್ಲಿ ಕಲಶ ಮತ್ತು ಇತರ ವಿನ್ಯಾಸದ ರಂಗೋಲಿಗಳ ಸುತ್ತಲೂ ಹಣತೆಗಳನ್ನು ಹಚ್ಚಿದ್ದರು. ಆದ್ದರಿಂದ ೨೧ ಸ್ವರ್ಗಲೋಕಗಳ ಉಪಸ್ವರ್ಗಲೋಕದಲ್ಲಿನ ‘ಜೋತ್ಸನಾ ರೂಪ, ಅಂದರೆ ‘ಜ್ಯೋತಿಸ್ವರೂಪವಾಗಿರುವ ದೇವತೆಗಳ ಒಂದು ಸಮೂಹವು ಈ ದೀಪಗಳ ಜ್ಯೋತಿಗಳಲ್ಲಿ ಸೂಕ್ಷ್ಮ ರೂಪದಿಂದ ಕಾರ್ಯನಿರತವಾಗಿತ್ತು. ಆದ್ದರಿಂದ ಸಂಪೂರ್ಣ ಆಶ್ರಮವು ಆನಂದಸ್ವರೂಪ ದಿವ್ಯ ತೇಜದಿಂದ ಪ್ರಕಾಶಮಾನವಾಗಿತ್ತು.

೩ ಇ. ದಿವ್ಯೋತ್ಸವ

ಬ್ರಹ್ಮಾಂಡದಲ್ಲಿನ ಸಮಸ್ತ (ಎಲ್ಲ) ದೈವೀ ಶಕ್ತಿಗಳು ಉಪಸ್ಥಿತ ಇರುವ ಉತ್ಸವಕ್ಕೆ ‘ದಿವ್ಯೋತ್ಸವ ಎನ್ನುತ್ತಾರೆ. ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ (ಡಾ.) ಆಠವಲೆಯವರ ಬ್ರಹ್ಮೋತ್ಸವದಲ್ಲಿ ನೈಮಿಷಾರಣ್ಯ, ಹಿಮಾಲಯ ಸಹಿತ ಸಂಪೂರ್ಣ ಬ್ರಹ್ಮಾಂಡದ ೮೮ ಸಾವಿರ ಋಷಿಮುನಿಗಳು, ಸ್ವರ್ಗಲೋಕದ ಎಲ್ಲ ದೇವದೇವತೆಗಳು ಮತ್ತು ಪೂರ್ಣ ವಿಶ್ವದ ದಿವ್ಯಾತ್ಮರು, ಪುಣ್ಯಾತ್ಮರು ಹಾಗೂ ಧರ್ಮಾತ್ಮರು, ಹಾಗೆಯೇ ವಿವಿಧ ಸಿದ್ಧಪುರುಷರು, ಯೋಗಿಗಳು, ತಪಸ್ವಿಗಳು ಮತ್ತು ಉನ್ನತರು ಪಾಲ್ಗೊಂಡಿದ್ದರು. ಆದ್ದರಿಂದ ಉತ್ಸವದಲ್ಲಿ ಬ್ರಹ್ಮಾಂಡದ ಸಮಸ್ತ ದೈವೀ ಶಕ್ತಿಗಳು ಕಾರ್ಯನಿರತವಾಗಿ ಈ ಉತ್ಸವಕ್ಕೆ ದೈವೀ ಸ್ವರೂಪವು ಪ್ರಾಪ್ತವಾಗಿ ಅದು ‘ದಿವ್ಯೋತ್ಸವವಾಗಿತ್ತು.

೪. ಬ್ರಹ್ಮೋತ್ಸವದ ಮುಖ್ಯ ಘಟನೆಗಳ ಸೂಕ್ಷ್ಮ ಪರೀಕ್ಷಣೆ

೪ ಅ. ಪುಷ್ಪವೃಷ್ಟಿ : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಮೇಲೆ ‘ಡ್ರೋನ್ ಉಪಕರಣದಿಂದ ಎರಡು ಬಾರಿ ಪುಷ್ಪವೃಷ್ಟಿಯಾಯಿತು. ಆಗ ಆಕಾಶದಲ್ಲಿರುವ ದೇವಗುರು ಬೃಹಸ್ಪತಿ, ಅರುಂಧತಿಸಹಿತ ಸಪ್ತರ್ಷಿ, ಬ್ರಹ್ಮರ್ಷಿ, ದೇವರ್ಷಿ, ರಾಜರ್ಷಿ, ಮಹರ್ಷಿ, ಶಿವ-ಪಾರ್ವತಿ, ಬಹ್ಮ-ವಿಷ್ಣು, ಶ್ರೀಗಣೇಶ ಮತ್ತು ರಿದ್ಧಿ-ಸಿದ್ಧಿ, ಕಾರ್ತಿಕೇಯ ಮತ್ತು ಕಾರ್ತಿಕೇಯನ ಪತ್ನಿಯರಾದ ದೇವಸೇನಾ ಮತ್ತು ವಲ್ಲಿ ಇವರು ಸ್ವರ್ಗದಲ್ಲಿನ ನಂದನವನದಲ್ಲಿ ಅರಳುವ ಅತ್ಯಂತ ವಿರಳ ಮತ್ತು ಪರಿಮಳದ ಚಿನ್ನ ಮತ್ತು ಬೆಳ್ಳಿಯ ಬಣ್ಣದ ಕಮಲ, ಗುಲಾಬಿ ಇತ್ಯಾದಿ ಹೂವುಗಳನ್ನು ಅತ್ಯಂತ ಭಕ್ತಿಭಾವದಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮೇಲೆ ಪುಷ್ಪವೃಷ್ಟಿಗೈದರು. ಆಗ ವಾಯು ದೇವನು ತಂಪು ಗಾಳಿಯನ್ನು ಬೀಸಿ ವಾತಾವರಣವನ್ನು ತಂಪಾಗಿಸಿ ಈ ದೈವೀ ಹೂವುಗಳ ಪರಿಮಳವನ್ನು ಎಲ್ಲೆಡೆ ಪಸರಿಸಿದನು. ಶ್ರೀವಿಷ್ಣುಸ್ವರೂಪ ಗುರುದೇವರ ಮೇಲಾದ ದೈವೀ ಪುಷ್ಪವೃಷ್ಟಿಯಿಂದ ಸಂಪೂರ್ಣ ಧರಣಿಯು (ಪೃಥ್ವಿ) ಪುಳಕಿತ ಗೊಂಡು ಭಾವಪರವಶವಾಯಿತು. ಪಂಚಮಹಾಭೂತಗಳು (ಪೃಥ್ವಿತತ್ತ್ವ, ಆಪತತ್ತ್ವ, ತೇಜತತ್ತ್ವ, ವಾಯುತತ್ತ್ವ ಮತ್ತು ಆಕಾಶತತ್ತ್ವ) ತಮ್ಮ ದಿವ್ಯಸ್ವರೂಪದಲ್ಲಿ ಈ ಉತ್ಸವದಲ್ಲಿ ಸೂಕ್ಷ್ಮ ರೂಪದಲ್ಲಿ ಉಪಸ್ಥಿತರಿದ್ದು ಆನಂದದ ಸ್ವಾದವನ್ನು ಪಡೆಯುತ್ತಿದ್ದವು. ಆದ್ದರಿಂದ ಪೂರ್ಣ ಬ್ರಹ್ಮಾಂಡವೇ ಆನಂದದಿಂದ ತೇಲಾಡುತ್ತಿತ್ತು.

೪ ಆ. ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂರ್ಯನಾಡಿಯ ಪ್ರತೀಕವಾಗಿರುವ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಪಾವನ ಬಲಚರಣದ ಮೇಲೆ ಐದು ಪ್ರಕಾರದ ಹೂವುಗಳನ್ನು ಅತ್ಯಂತ ಸಮರ್ಪಿತ ಮತ್ತು ಶರಣಾಗತಭಾವದಿಂದ ಅರ್ಪಿಸಿದರು. ಆದ್ದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂರ್ಯನಾಡಿ ಕಾರ್ಯನಿರತವಾಗಿ ಬಹಳಷ್ಟು ಪ್ರಮಾಣದಲ್ಲಿ ಮಾರಕಶಕ್ತಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು, ಇದರಿಂದ ಬ್ರಹ್ಮಾಂಡದಲ್ಲಿ ಹೆಚ್ಚಾದ ತಮೋಗುಣಿ ಶಕ್ತಿಯ ಲಹರಿಗಳ ವಿಘಟನೆಯಾಗಿ ವಾತಾವರಣದ ಒತ್ತಡವು ಕಡಿಮೆಯಾಯಿತು.

ಶ್ರೀವಿಷ್ಣುವಿನ ಅವತಾರ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚಂದ್ರನಾಡಿಯ ಪ್ರತೀಕವಾಗಿರುವ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಪರಮ ಪಾವನ ಎಡ ಚರಣದ ಮೇಲೆ ಐದು ಪ್ರಕಾರದ ಹೂವುಗಳನ್ನು ಅತ್ಯಂತ ಕೃತಜ್ಞತೆ ಮತ್ತು ಶರಣಾಗತಭಾವದಿಂದ ಅರ್ಪಿಸಿದರು. ಇದರಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚಂದ್ರನಾಡಿ ಕಾರ್ಯನಿರತವಾಗಿ ಅದರಿಂದ ಬಹಳಷ್ಟು ಪ್ರಮಾಣದಲ್ಲಿ ತಾರಕ ಶಕ್ತಿ ಸಂಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು. ಅದರಿಂದ ಬ್ರಹ್ಮಾಂಡದಲ್ಲಿ ಹೆಚ್ಚಾದ ರಜೋಗುಣಿ ಶಕ್ತಿಯ ಲಹರಿಗಳ ವಿಘಟನೆಯಾಗಿ ವಾತಾವರಣದಲ್ಲಿನ ಉಷ್ಣತೆ ಕಡಿಮೆ ಆಯಿತು ಮತ್ತು ವಾತಾವರಣವು ಶೀತಲವಾಯಿತು.

ಸದ್ಗುರುದ್ವಯರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ವಂದನಭಕ್ತಿಯಿಂದ ನಮಸ್ಕರಿಸಿದಾಗ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬ್ರಹ್ಮನಾಡಿಯು ಕಾರ್ಯನಿರತವಾಗಿ ಅವರ ಸಹಸ್ರಾರದಲ್ಲಿನ ಬ್ರಹ್ಮಜ್ಞಾನದ ಪ್ರತೀಕವಾಗಿರುವ ಬ್ರಹ್ಮಕಮಲದಂತೆ ಕಾಣುವ ಸಹಸ್ರದಳಕಮಲ ಅರಳಿ ಅದರಿಂದ ನಿರ್ಗುಣ-ಸಗುಣ ಸ್ತರದಲ್ಲಿನ ಈಶ್ವರೀ ಚೈತನ್ಯದ ಜ್ಯೋತಿಯು ಹತ್ತುದಿಕ್ಕುಗಳಲ್ಲಿ ಪೂರ್ಣ ಬ್ರಹ್ಮಾಂಡದಲ್ಲಿ ಪ್ರಕ್ಷೇಪಿತವಾಯಿತು. ಇದರಿಂದ ಪೂರ್ಣ ಬ್ರಹ್ಮಾಂಡದಲ್ಲಿ ಸಾತ್ತ್ವಿಕತೆ, ಚೈತನ್ಯದ ಲಹರಿಗಳು ಕಾರ್ಯನಿರತವಾಗಿ ಅನೇಕ ಜೀವಗಳ ಉದ್ಧಾರವಾಯಿತು.

೪ ಇ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದಿವ್ಯ ಸಮಾರಂಭದ ಸ್ಥಳದಿಂದ ಸನಾತನದ ರಾಮನಾಥಿ ಆಶ್ರಮಕ್ಕೆ
ಹೊರಡುವುದು : ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ದಿವ್ಯ ಸಮಾರಂಭದ ಸ್ಥಳದಿಂದ ಹೊರಟಾಗ ಶ್ರೀದೇವಿ ಮತ್ತು ಭೂದೇವಿ ಇವರೊಂದಿಗಿರುವ ಶ್ರೀವಿಷ್ಣುವಿನ ಗರುಡನ ಮೇಲೆ ವಿರಾಜಮಾನವಾಗಿರುವ ದಿವ್ಯ ರೂಪದಿಂದ ಭೂಲೋಕದಿಂದ ವೈಕುಂಠದ ಕಡೆಗೆ ಸೂಕ್ಷ್ಮದಿಂದ ಹೊರಟರು. ಬ್ರಹ್ಮೋತ್ಸವದ ವೇಳೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಲ್ಲಿ ಜಾಗೃತವಾಗಿರುವ ಮಹಾವಿಷ್ಣುವಿನ ತತ್ತ್ವವು ಕ್ರಮೇಣವಾಗಿ ಅಪ್ರಕಟ ಅವಸ್ಥೆಗೆ ಹೋಯಿತು ಮತ್ತು ಅವರ ಶೇಷಶಯನ ಎಂಬ ನಿರ್ಗುಣಾವಸ್ಥೆಯ ತತ್ತ್ವವು ಕಾರ್ಯನಿರತವಾಯಿತು. ಅದೇ ರೀತಿ ಭೂದೇವಿಯ ಅವತಾರ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀದೇವಿಯ ಅವತಾರ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ ಜಾಗೃತವಾಗಿರುವ ದೇವಿತತ್ತ್ವ ಗಳು ಕ್ರಮೇಣ ಅಜಾಗೃತ, ಅಂದರೆ ಅಪ್ರಕಟ ಅವಸ್ಥೆಯಲ್ಲಿ ಹೋದವು. ಹಾಗೆಯೇ ಬ್ರಹ್ಮೋತ್ಸವಕ್ಕೆ ಬಂದ ದೈವೀ ಶಕ್ತಿಗಳು ಶ್ರೀವಿಷ್ಣುಸ್ವರೂಪ ಗುರುದೇವರಿಗೆ ಭಾವಪೂರ್ಣವಾಗಿ ವಂದಿಸಿ ಸ್ವಲೋಕಕ್ಕೆ ಮರಳಿದರು.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರೆತ ಜ್ಞಾನ)

(ಸವಿಸ್ತಾರ ಲೇಖನ ಓದಿ – bit.ly/3MQHVSw)

ಸಾಧಕ ಮತ್ತು ಸಾಧಕಿಯರ ರೂಪದಲ್ಲಿ ‘ಗಂಧರ್ವ, ಯಕ್ಷ, ಕಿನ್ನರ ಮತ್ತು ಅಪ್ಸರೆಯರು ಈ ಬ್ರಹ್ಮೋತ್ಸವದಲ್ಲಿ ಪಾಲ್ಗೊಂಡಿದ್ದಾರೆ ಎಂದು ಅರಿವಾಗುವುದು

ದಿವ್ಯ ರಥದ ಮುಂದೆ ಮತ್ತು ಹಿಂದೆ ನಡೆಯುವ ತಾಳ ಮತ್ತು ಧ್ವಜದ ಮೇಳದಲ್ಲಿನ ಸಾಧಕ ಮತ್ತು ಸಾಧಕಿಯರ ‘ಶ್ರೀಮನ್ನಾರಾಯಣ ನಾರಾಯಣ ಹರಿ ಹರಿ ಮತ್ತು ‘ಶ್ರೀಕೃಷ್ಣ ಗೋವಿಂದ ಹರೆ ಮುರಾರಿ ಈ ಹಾಡಿನ ನಾದದಲ್ಲಿ ಭಾವಪೂರ್ಣ ಮತ್ತು ಲಯಬದ್ಧ ಚಲನವಲನದಿಂದ ಅವರ ಹೃದಯದಿಂದ ತಾಳಬದ್ಧ ವಾಯುಮಯ ಹಾಗೂ ನಾದಮಯ ಸಾತ್ತ್ವಿಕ ಲಹರಿಗಳು ಸುತ್ತಲೂ ಹರಡಿದವು. ಆದ್ದರಿಂದ ಸಂಪೂರ್ಣ ವಾತಾವರಣ ಭಾವಲಹರಿಗಳಿಂದ ತುಂಬಿ ಅವರನ್ನು ನೋಡುವ ಸಾಧಕರ ಮನಸ್ಸು ಭಾವಲಹರಿಗಳಿಂದ ಪುಳಕಿತಗೊಂಡಿತು. ಆಗ ಸಾಧಕ ಮತ್ತು ಸಾಧಕಿಯರ ಜಾಗದಲ್ಲಿ ‘ಗಂಧರ್ವ, ಯಕ್ಷ, ಕಿನ್ನರ ಹಾಗೂ ಅಪ್ಸರೆಯರು ಶ್ರೀಮನ್ನಾರಾಯಣ, ಶ್ರೀದೇವಿ ಮತ್ತು ಭೂದೇವಿ ಇವರ ಬ್ರಹ್ಮೋತ್ಸವದಲ್ಲಿ ಸಹಭಾಗಿಗಳಾಗಿ ಅವರ ಮುಂದೆ ಕೃತಜ್ಞತಾಭಾವದಿಂದ ಸೇವೆಯನ್ನು ಪ್ರಸ್ತುತ ಪಡಿಸುತ್ತಿದ್ದಾರೆ, ಎಂದು ಅರಿವಾಯಿತು.

ಮೂವರು ಮೋಕ್ಷಗುರುಗಳು ಸಾಧಕರ ಮೇಲೆ ಬೀರಿದ ಕೃಪಾದೃಷ್ಟಿಯ ಸಾಮರ್ಥ್ಯದಿಂದ ಸಾಧಕರ ಎಲ್ಲ ತಾಪ, ಸಂತಾಪ, ಪಾಪ, ವಿಘ್ನ, ಪೀಡೆ, ಕಷ್ಟ ಮತ್ತು ದುಃಖ ದೂರವಾದವು !

ಯಾವಾಗ ರಥವು ಮೈದಾನದಲ್ಲಿ ತಿರುಗುತ್ತಿತ್ತೋ, ಆಗ ಅದರಲ್ಲಿ ಆರೂಢರಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಮತ್ತು ಶ್ರೀದೇವಿ ಹಾಗೂ ಭೂದೇವಿ ಸ್ವರೂಪ ಸದ್ಗುರುದ್ವಯಿಗಳ ಕೃಪಾಳು ದೃಷ್ಟಿಯು ಸಾಧಕರ ಮೇಲೆ ಬೀಳುತ್ತಿತ್ತು. ಆಗ ಸಾಧಕರಲ್ಲಿ ಮೂವರು ಮೋಕ್ಷಗುರುಗಳ ಬಗ್ಗೆ ಅನನ್ಯ (ಅದ್ವಿತೀಯ) ಕೃತಜ್ಞತಾಭಾವವು ಜಾಗೃತವಾಗಿ ಅವರ ಮೈ ರೋಮಾಂಚನವಾಗುತ್ತಿತ್ತು ಮತ್ತು ಕೆಲವರ ಕಂಠವು ತುಂಬಿ ಬರುತ್ತಿತ್ತು. ಈ ರೀತಿ ಮೂವರು ಮೋಕ್ಷಗುರುಗಳ ಪ್ರತ್ಯಕ್ಷ ದರ್ಶನವಾಗಿರುವುದರಿಂದ ಅನೇಕ ಸಾಧಕರ ಅಷ್ಟಸಾತ್ತ್ವಿಕಭಾವ (ಸ್ವೇದ (ಬೆವರು)), ಸ್ತಂಭ (ಕುಂಠಿತವಾಗುವುದು, ನಿಲ್ಲುವುದು, ಬೆರಗಾಗುವುದು), ರೋಮಾಂಚ, ಸ್ವರಭಂಗ (ಸ್ವರ ಥರಥರಿಸುವುದು), ಕಂಪ, ವೈವರ್ಣ (ವರ್ಣ, ಬಣ್ಣ ಬದಲಾಗುವುದು), ಕಣ್ಣೀರು ಮತ್ತು ಮೂರ್ಛೆ ಜಾಗೃತವಾಗಿದ್ದವು. ಮೂವರು ಮೋಕ್ಷಗುರುಗಳು ಸಾಧಕರ ಮೇಲೆ ಬೀರಿದ ಕೃಪಾಳು ದೃಷ್ಟಿಯ ಸಾಮರ್ಥ್ಯದಿಂದ ಸಾಧಕರ ಎಲ್ಲ ತಾಪ, ಸಂತಾಪ, ಪಾಪ, ವಿಘ್ನ, ಪೀಡೆ, ಕಷ್ಟ ಮತ್ತು ದುಃಖಗಳು ದೂರವಾದವು.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೪), ಸನಾತನ ಆಶ್ರಮ, ರಾಮನಾಥಿ, ಗೋವಾ. (೧೩.೫.೨೦೨೩)

 

ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.

ಸೂಕ್ಷ್ಮ ಪರೀಕ್ಷಣೆ : ಯಾವುದಾದರೊಂದು ಘಟನೆಯ ಬಗ್ಗೆ ಅಥವಾ ಪ್ರಕ್ರಿಯೆಯ ಬಗ್ಗೆ ಚಿತ್ತಕ್ಕೆ (ಅಂತರ್ಮನಸ್ಸಿಗೆ) ಏನು ಅರಿವಾಗುತ್ತದೆಯೋ, ಅದಕ್ಕೆ ‘ಸೂಕ್ಷ್ಮ ಪರೀಕ್ಷಣೆ’ ಎನ್ನುತ್ತಾರೆ.

ಸೂಕ್ಷ್ಮಜ್ಞಾನದ ಚಿತ್ರ : ಕೆಲವು ಸಾಧಕರಿಗೆ ಯಾವುದಾದರೊಂದು ವಿಷಯದ ಬಗ್ಗೆ ಯಾವುದು ಅರಿವಾಗುತ್ತದೆಯೋ ಮತ್ತು ಅಂತರ್ದೃಷ್ಟಿಗೆ ಕಾಣಿಸುತ್ತದೆಯೋ, ಅದರ ಬಗ್ಗೆ ಅವರು ಕಾಗದದ ಮೇಲೆ ಬಿಡಿಸಿದ ಚಿತ್ರಕ್ಕೆ ‘ಸೂಕ್ಷ್ಮಜ್ಞಾನದ ಚಿತ್ರ’ ಎಂದು ಹೇಳುತ್ತಾರೆ.

ಕೆಟ್ಟ ಶಕ್ತಿ : ವಾತಾವರಣದಲ್ಲಿ ಉತ್ತಮ ಹಾಗೂ ಕೆಟ್ಟ ಎರಡೂ ಶಕ್ತಿಗಳು ಕಾರ್ಯನಿರತವಾಗಿರುತ್ತವೆ. ಒಳ್ಳೆಯ ಶಕ್ತಿ ಒಳ್ಳೆಯ ಕಾರ್ಯಕ್ಕಾಗಿ ಮಾನವನಿಗೆ ಸಹಾಯ ಮಾಡುತ್ತವೆ ಹಾಗೂ ಕೆಟ್ಟ ಶಕ್ತಿಗಳು ಅವನಿಗೆ ತೊಂದರೆ ಕೊಡುತ್ತವೆ. ಹಿಂದಿನ ಕಾಲದಲ್ಲಿ ಋಷಿಮುನಿಗಳ ಯಜ್ಞಗಳಲ್ಲಿ ರಾಕ್ಷಸರು ವಿಘ್ನಗಳನ್ನು ತಂದಿರುವ ಅನೇಕ ಕಥೆಗಳು ವೇದ -ಪುರಾಣಗಳಲ್ಲಿ ಇರುತ್ತವೆ. ‘ಅಥರ್ವವೇದದಲ್ಲಿ ಅನೇಕ ಕಡೆಗಳಲ್ಲಿ ಕೆಟ್ಟ ಶಕ್ತಿ. ಉದಾ. ಅಸುರರು, ರಾಕ್ಷಸರು, ಪಿಶಾಚಿ ಇವರ ಪ್ರತಿಬಂಧದ ಮಂತ್ರಗಳನ್ನು ಹೇಳಲಾಗಿದೆ. ಕೆಟ್ಟ ಶಕ್ತಿಗಳ ತೊಂದರೆಯ ನಿವಾರಣೆಗಾಗಿ ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ವೇದ ಮತ್ತು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.

ಈ ವಾರದ ಸಂಚಿಕೆಯಲ್ಲಿ ನೀಡಿದ ಸಾಧಕರ ಅನುಭೂತಿಗಳು ‘ಭಾವವಿದ್ದಲ್ಲಿ ದೇವ’ ಎಂಬಂತೆ ಆಯಾ ಸಾಧಕರಿಗೆ ಬಂದ ವೈಯಕ್ತಿಕ  ಅನುಭೂತಿಯಾಗಿದ್ದು ಅದು ಎಲ್ಲರಿಗೂ ಬರುತ್ತದೆ ಎಂದೇನಿಲ್ಲ. – ಸಂಪಾದಕರು