ಸರ್ವ ಸಮಾನ ವಿಚಾರಧಾರೆಯ ಸಂಘಟನೆಗಳು ಒಂದೆಡೆಸೇರಿ ಕಾರ್ಯ ಮಾಡಬೇಕು ! – ಪೇಜಾವರ ಶ್ರೀ ವಿಶ್ವೇಶ್ವರಪ್ರಸನ್ನ ತೀರ್ಥ ಸ್ವಾಮೀಜಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವಕ್ಕಾಗಿ ಕರ್ನಾಟಕದ `ಪೇಜಾವರ ಮಠ’ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ಶುಭಸಂದೇಶ

ಪೇಜಾವರ ಶ್ರೀ ವಿಶ್ವೇಶ್ವರಪ್ರಸನ್ನ ತೀರ್ಥ ಸ್ವಾಮೀಜಿ

`ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನದ (ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವದ) ಆಯೋಜನೆಯು ಅತ್ಯಂತ ಆವಶ್ಯಕತೆಯ ವಿಷಯವಾಗಿದೆ. ವಿಶ್ವದಲ್ಲಿ ಹಿಂದೂಗಳಿಗಾಗಿ ಕೇವಲ ಭಾರತವೊಂದೇ ದೇಶ ಇದೆ. ಈ ವಿಶ್ವದಲ್ಲಿ ಮತ್ತು ಸಮಾಜದಲ್ಲಿ ಹಿಂದೂಗಳಿಗೆ ಗೌರವದಿಂದ ಬದುಕಬೇಕಾಗಿದ್ದರೆ, ಈ ಜಾಗೃತಿಯು ಅತ್ಯಂತ ಆವಶ್ಯಕವಾಗಿದೆ. ಆದ್ದರಿಂದ ಎಲ್ಲ ಸಮಾನ ವಿಚಾರಧಾರೆಯ ಸಂಸ್ಥೆಗಳು ಅಥವಾ ಸಂಘಟನೆಗಳು ಒಂದೆಡೆ ಸೇರಿ ಚಿಂತನ, ಮಂಥನವನ್ನು ಮಾಡಬೇಕು. ಹಿಂದೂಜಾಗೃತಿಯ ಕಾರ್ಯವನ್ನು ಮುಂದಕ್ಕೆ ಕೊಂಡೊಯ್ಯಲು ಯಾವ ಯಾವ ಕ್ರಮಗಳನ್ನು ಕೈಕೊಳ್ಳಬಹುದು ಎಂದು ನಿರ್ಣಯಿಸುವುದು ಅತ್ಯಂತ ಆವಶ್ಯಕವಾಗಿದೆ. ಆದ್ದರಿಂದ ಈ ಅಧಿವೇಶನ ಅತ್ಯಂತ ಯೋಗ್ಯವಾಗಿದೆ. ಈ ಅಧಿವೇಶನವು ನಿಃಸಂಶಯವಾಗಿ ಉತ್ತರೋತ್ತರ ಅಭಿವೃದ್ಧಿ ಹೊಂದಬೇಕು ಎಂದು ನಾವು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥಿಸೋಣ.

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ|
ತತ್ರ ಶ್ರೀರ್ವಿಜಯೋ ಭೂತಿರ್ಧುವಾ ನೀತಿರ್ಮತಿರ್ಮಮ||

ಶ್ರೀ ಕೃಷ್ಣಾರ್ಪಣಮಸ್ತು

– ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪೇಜಾವರ ಮಠ, ಕರ್ನಾಟಕ (ಜೂನ 2023)