ಶ್ರೀ. ವಿನಾಯಕ ಶಾನಭಾಗ ಇವರು ಸನಾತನ ಸಂಸ್ಥೆಗೆ ಲಭಿಸಿದ ಅಮೂಲ್ಯ ರತ್ನವಾಗಿದ್ದಾರೆ. ಅವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು ಈ ಮುಂದಿನಂತಿವೆ. ಸಂಚಿಕೆ ಸಂಖ್ಯೆ ೩೪/೩೭ ನೇ ಸಂಚಿಕೆಯಲ್ಲಿ ಈ ಗುಣವೈಶಿಷ್ಟ್ಯಗಳ ಕೆಲವು ಭಾಗವನ್ನು ನೋಡಿದೆವು. ಈ ವಾರದ ಉಳಿದ ಭಾಗವನ್ನು ಇಲ್ಲಿ ಕೊಡುತ್ತಿದ್ದೇವೆ.
ಇಂದಿನ ಭಾಗದ ಸಂಚಿಕೆ ಓದಲು ಇಲ್ಲಿ ಕ್ಲಿಕ್ ಮಾಡಿ : https://sanatanprabhat.org/kannada/89562.html |
೩.ಸ್ಥೂಲದ ೧೦ ಭಾಷೆಗಳ ಹಾಗೂ ಸೂಕ್ಷ್ಮದ ದೇವಭಾಷೆಯ ಜ್ಞಾನವಿರುವ ಶ್ರೀ. ವಿನಾಯಕ ಶಾನಭಾಗ !
ಶ್ರೀ. ವಿನಾಯಕ ಇವರಲ್ಲಿ ಜನ್ಮಜಾತ ಗಣೇಶತತ್ತ್ವ ಇದೆ. ಆದ್ದರಿಂದ ಅವರಿಗೆ ಮರಾಠಿ, ಕೊಂಕಣಿ, ಕನ್ನಡ, ತೆಲುಗು, ತುಳು, ಮಲ್ಯಾಳಮ್, ತಮಿಳು, ಒಡಿಯಾ, ಹಿಂದಿ, ಮತ್ತು ಆಂಗ್ಲ ಈ ೧೦ ಭಾಷೆಗಳ ಜ್ಞಾನವಿದೆ. ಅವರಲ್ಲಿ ಶ್ರೀ ಗಣೇಶನ ಕೃಪೆಯಿಂದ ದೇವಭಾಷೆಯನ್ನು ಮನುಷ್ಯ ಭಾಷೆಯಲ್ಲಿ ಅನುವಾದಿಸುವ ಕ್ಷಮತೆಯಿದೆ. ಅವರ ಮನಸ್ಸಿನಲ್ಲಿ ದೇವರ ವಿಚಾರಗಳು ಬರುತ್ತಿರುವಾಗ ಪ್ರಕಾಶ ಭಾಷೆಯ ಆಕಲನವಾಗಿ ಅದು ಶಬ್ದಜನ್ಯ ನಾದಭಾಷೆಯಲ್ಲಿ ರೂಪಾಂತರವಾಗುತ್ತದೆ ಹಾಗೂ ಅವರು ಅದರ ನಿವೇದನೆ ಮಾಡುತ್ತಾರೆ. ಜೀವನಾಡಿಪಟ್ಟಿಯಲ್ಲಿ ತಮಿಳು ಭಾಷೆಯಲ್ಲಿರುವ ಸಪ್ತರ್ಷಿಗಳ ಮಾರ್ಗದರ್ಶನವನ್ನು ಅಣ್ಣ ಮರಾಠಿ ಭಾಷೆಗೆ ಅನುವಾದಿಸಿ ಪಾರ್ವತಿ ಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರಿಗೆ ಹೇಳುತ್ತಾರೆ. ಅವರ ಬುದ್ಧಿಯಲ್ಲಿ ಶ್ರೀ ಗಣೇಶ ಹಾಗೂ ಅವರ ವಾಣಿಯಲ್ಲಿ ಸರಸ್ವತಿಮಾತೆ ಸೂಕ್ಷ್ಮದಿಂದ ವಿರಾಜಮಾನರಾಗಿರುವುದರಿಂದ ಅವರ ಬುದ್ಧಿ ಪ್ರಬುದ್ಧ ಹಾಗೂ ಮೇಧಾವಿ ಆಗಿದ್ದು ವಾಣಿ ಸುಮಧುರ ಹಾಗೂ ಚೈತನ್ಯಮಯವಾಗಿದೆ.
೩. ಬುದ್ಧಿಯ ಮೂರು ವಿಧದ ಲಕ್ಷಣಗಳಾದ ‘ಪ್ರತಿಭೆ ಪ್ರಜ್ಞೆ ಹಾಗೂ ಮೇಧಾದ ಗುಣವೈಶಿಷ್ಟ್ಯಗಳು ಮತ್ತು ಅವುಗಳಲ್ಲಿನ ವ್ಯತ್ಯಾಸ
೪. ಜ್ಞಾನ-ಭಕ್ತಿಯೋಗಗಳ ಸಂಗಮ ವಿನಾಯಕಣ್ಣ ಅವರು ಹಿಂದಿನ ಜನ್ಮಗಳಲ್ಲಿ ಮಾಡಿದ ಸಾಧನೆಯಿಂದಾಗಿ ಜ್ಞಾನಯೋಗ ಹಾಗೂ ಭಕ್ತಿಯೋಗವು ಅವರ ಸಾಧನಾಮಾರ್ಗವಾಗಿದೆ. ಅವರು ಸನಾತನ ಸಂಸ್ಥೆಯ ಮಾರ್ಗದರ್ಶನದಲ್ಲಿ ಸಾಧನೆಯನ್ನು ಆರಂಭಿಸಿದುದರಿಂದ ಅವರ ಮೇಲೆ ಗುರುಕೃಪೆಯಾಗಿ ಈ ಜನ್ಮದಲ್ಲಿ ಗುರುಕೃಪಾಯೋಗದ ಅಂತರ್ಗತ ಜ್ಞಾನಯೋಗ ಹಾಗೂ ಭಕ್ತಿಯೋಗಕ್ಕನುಸಾರ ಅವರ ಸಾಧನೆ ನಡೆದಿದೆ. ಅವರಲ್ಲಿನ ಜ್ಞಾನಯೋಗದಿಂದಾಗಿ ಅವರಿಗೆ ದೈವೀ ವಿಚಾರಗಳು ಸಹಜವಾಗಿ ಆಕಲನವಾಗುತ್ತವೆ ಹಾಗೂ ಭಕ್ತಿಯೋಗದಿಂದ ಅವರು ಎಲ್ಲ ವಿಷಯಗಳನ್ನು ಭಾವಪೂರ್ಣವಾಗಿ ಹೇಳುತ್ತಾರೆ. ಆದ್ದರಿಂದ ಅವರ ನಿವೇದನೆಯಿಂದ ಜ್ಞಾನಪ್ರಾಪ್ತಿಯಾಗಿ ಭಾವಜಾಗೃತಿಯಾಗುತ್ತದೆ.
೫. ಶ್ರೀ. ವಿನಾಯಕಣ್ಣರಲ್ಲಿ ನಾರದರ ತತ್ತ್ವವೂ ಇದೆ ಶ್ರೀ. ವಿನಾಯಕಣ್ಣನಲ್ಲಿ ದೇವರ್ಷಿ ನಾರದರ ತತ್ತ್ವವೂ ಕಾರ್ಯನಿರತವಾಗಿರುತ್ತದೆ. ಹೇಗೆ ದೇವರ್ಷಿ ನಾರದರು ಸಪ್ತ ಲೋಕಗಳಲ್ಲಿ ಮತ್ತು ಪಾತಾಳಗಳಲ್ಲಿ ಸಂಚರಿಸಿ ಅಲ್ಲಿ ವಾಸಿಸುವ ಭಗವದ್ಭಕ್ತರಿಗೆ ಭಗವಂತನ ಸಂದೇಶವನ್ನು ನೀಡಿ ಶ್ರೀವಿಷ್ಣುವಿನ ಭಕ್ತಿಯ ಪ್ರಸಾರ ಮಾಡುವಂತೆ ಶ್ರೀ. ವಿನಾಯಕಣ್ಣ ಕೂಡ ಮಾಡುತ್ತಾರೆ. ಶ್ರೀ. ವಿನಾಯಕಣ್ಣನವರ ಮನಸ್ಸಿನಲ್ಲಿ ಯಾವಾಗಲೂ ಶಿಷ್ಯಭಾವ ಜಾಗೃತವಾಗಿರುವುದರಿಂದ ಅವರು ಸತತ ಕಲಿಯುವ ಸ್ಥಿತಿಯಲ್ಲಿರುತ್ತಾರೆ. ಆದ್ದರಿಂದ ಅವರು ಶ್ರೀಚಿತ್‌ಶಕ್ತಿ ಅಂಜಲಿ ಗಾಡಗೀಳರ ಜೊತೆಗೆ ದೈವೀ ಪ್ರವಾಸದಲ್ಲಿ ಬಂದ ಅನುಭೂತಿ, ಕಲಿಯಲು ಸಿಕ್ಕಿದ ವಿಷಯಗಳನ್ನು ಮತ್ತು ಮಾಡಿದ ಮಾರ್ಗದರ್ಶನದ ಲೇಖನಗಳನ್ನು ಸಿದ್ಧಪಡಿಸುತ್ತಾರೆ. ಅದೇ ರೀತಿ ಅವರು ಪ್ರವಾಸಕ್ಕೆ ಹೋದಲ್ಲಿ ವಿಷ್ಣುಸ್ವರೂಪಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಮಹಾಲಕ್ಷ್ಮಿ ಸ್ವರೂಪಿ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳರ ಮಹಿಮೆ ಹೇಳಿ ಭಕ್ತಿಯ ಪ್ರಸಾರ ಮಾಡುತ್ತಾರೆ.
೬. ಶ್ರೀ. ವಿನಾಯಕ ಶಾನಭಾಗ ಇವರ ಸಾಧನೆಯ ಯೋಗಮಾರ್ಗ, ಅದಕ್ಕನುಸಾರ ಅವರಿಗೆ ಬರುವ ಅನುಭೂತಿಗಳು ಹಾಗೂ ಅವರಿಂದಾಗುವ ಸಾಧನೆಯ ಪ್ರಮಾಣ
ಕು. ಮಧುರಾ ಭೋಸಲೆ( ಸೂಕ್ಷ್ಮದ ಜ್ಞಾನ) ( ಆಧ್ಯಾತ್ಮಿಕ ಮಟ್ಟ ಶೇ. ೬೪), ರಾಮನಾಥಿ ಗೋವಾ.(೧೬.೧.೨೦೨೨) (ಮುಕ್ತಾಯ)
* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ. |