ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟದ ಶ್ರೀ. ವಿನಾಯಕ ಶಾನಭಾಗರ ಆಧ್ಯಾತ್ಮಿಕ ವೈಶಿಷ್ಟ್ಯಗಳು

ಶ್ರೀ. ವಿನಾಯಕ ಶಾನಭಾಗ

ಶ್ರೀ. ವಿನಾಯಕ ಶಾನಭಾಗ ಅವರು ಸನಾತನ ಸಂಸ್ಥೆಗೆ ದೊರಕಿದ ಅಮೂಲ್ಯ ರತ್ನವಾಗಿದ್ದಾರೆ. ಅವರ ಆಧ್ಯಾತ್ಮಿಕ ಗುಣಗಳು ಈ ಕೆಳಗಿನಂತಿವೆ.

೧. ಶ್ರೀ. ವಿನಾಯಕ ಶಾನಭಾಗ ಇವರು ಹಿಂದಿನ ಜನ್ಮದಲ್ಲಿ ಗಣೇಶ ಮತ್ತು ವಿಷ್ಣುವಿನ ಉಪಾಸನೆ ಮಾಡಿರುವುದು

೧ ಅ. ವಿನಾಯಕಅಣ್ಣನವರು ಕಳೆದ ೫ ಜನ್ಮಗಳಿಂದ ಶ್ರೀ ಗಣಪತಿಯ ಆರಾಧನೆ ಮಾಡುತ್ತಿದ್ದಾರೆ : ವಿನಾಯಕಅಣ್ಣನವರು ಮಹಾಲೋಕದ ನಿವಾಸಿಯಾಗಿದ್ದು, ಕಳೆದ ೫ ಜನ್ಮಗಳಿಂದ ಶ್ರೀ ಗಣೇಶನನ್ನು ಪೂಜಿಸುತ್ತಿದ್ದಾರೆ. ಆದ್ದರಿಂದ, ಅವರಲ್ಲಿ ಶೇ. ೭ ರಷ್ಟು ಗಣೇಶತತ್ತ್ವ ಕಾರ್ಯನಿರತವಾಗಿದೆ. ಶ್ರೀ ಗಣಪತಿಯ ಉಪಾಸನೆಯಿಂದಾಗಿ ಅವರ ಬುದ್ಧಿಯು ಹೆಚ್ಚು ಸಾತ್ತ್ವಿಕವಾಗಿದೆ. ಆದ್ದರಿಂದ ಅವರಿಗೆ ಧರ್ಮ ಮತ್ತು ಅಧ್ಯಾತ್ಮದ ಸೂಕ್ಷ್ಮ ಮಜಲುಗಳ ಆಂತರಿಕ ಜ್ಞಾನವಿದೆ. ಶ್ರೀ ಗಣೇಶನ ಕೃಪೆಯಿಂದ ಅವರ ಬುದ್ಧಿಶಕ್ತಿಯು ದೈವಿ ಅಂಶಗಳನ್ನು ತ್ವರಿತವಾಗಿ ಗ್ರಹಿಸುತ್ತದೆ ಮತ್ತು ಅವರ ಸ್ಮರಣಶಕ್ತಿಯು ಉತ್ತಮವಾಗಿದೆ. ಆದ್ದರಿಂದ, ದೈವಿ ಶಕ್ತಿಗಳು ಹೇಳಿದ ಅಂಶಗಳು ಅವರಿಗೆ ಚೆನ್ನಾಗಿ ನೆನಪಿನಲ್ಲಿರುತ್ತವೆ.

೧ ಆ. ಶ್ರೀ. ವಿನಾಯಕ ಅಣ್ಣನವರು ಕಳೆದ ೩ ಜನ್ಮಗಳಿಂದ ಶ್ರೀವಿಷ್ಣುವಿನ ಉಪಾಸನೆ ಮಾಡಿರುವುದು : ವಿನಾಯಕಅಣ್ಣನವರು ಕಳೆದ ೩ ಜನ್ಮಗಳಿಂದ ಶ್ರೀ ಗಣೇಶ ಮತ್ತು ಶ್ರೀವಿಷ್ಣುವನ್ನು ಭಾವಪೂರ್ಣವಾಗಿ ಆರಾಧಿಸಿದ್ದರಿಂದ, ಅವರಿಗೆ ಈಗ ಶ್ರೀ ವಿಷ್ಣುಸ್ವರೂಪರಾಗಿರುವ ಪರಾತ್ಪರ ಗುರು ಡಾ. ಆಠವಲೆಯವರ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳುವ ಸುವರ್ಣಾವಕಾಶ ದೊರಕಿದೆ. ಆದ್ದರಿಂದ, ಮಹರ್ಷಿಗಳು ಹೇಳಿದಂತೆ, ವಿನಾಯಕಅಣ್ಣನವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಕಾಕು ಅವರ ದೈವೀ ಪ್ರವಾಸಗಳಲ್ಲಿ ಭಾರತ ಮತ್ತು ವಿದೇಶಗಳಿಗೆ ಹೋಗುವ  ಮತ್ತು ನಾಡಿಪಟ್ಟಿಯಲ್ಲಿರುವ ಅಂಶಗಳನ್ನು ಅನುವಾದಿಸುವ ಸೇವೆಯು ಸಿಕ್ಕಿದೆ.

೧ ಇ. ಶ್ರೀ. ವಿನಾಯಕಅಣ್ಣನ ಮೇಲೆ ಶ್ರೀ ಗಣೇಶ ಮತ್ತು ಶ್ರೀ ವಿಷ್ಣು ಈ ದೇವತೆಗಳ ಕೃಪೆಯಿರುವುದರಿಂದ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆ ಉತ್ತಮ ರೀತಿಯಲ್ಲಿ ಆಗುವುದು : ಶ್ರೀ ಗಣೇಶನ ಉಪಾಸನೆಯಿಂದ ವಿನಾಯಕಅಣ್ಣನವರ ಪಿಂಡ ಸಾತ್ತ್ವಿಕ ಮತ್ತು ಚೈತನ್ಯಮಯವಾಗಿದೆ. ಶ್ರೀವಿಷ್ಣುವಿನ ಕೃಪೆಯಿಂದ ವಿನಾಯಕ ಅಣ್ಣನ ಸಮಷ್ಟಿ ಸಾಧನೆಯಾಗಿ ಅವರ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯು ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು ಅವರ ಆಧ್ಯಾತ್ಮಿಕ ಉನ್ನತಿಯು ಆಗುತ್ತಿದೆ.

೨. ಶ್ರೀ. ವಿನಾಯಕಅಣ್ಣನವರ ಮೇಲೆ ಪಾರ್ವತಿ ಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರವರ ಕೃಪಾದೃಷ್ಟಿ ಇರುವುದರಿಂದ ಅವರಲ್ಲಿನ ಸುಪ್ತ ಆಧ್ಯಾತ್ಮಿಕ ಕ್ಷಮತೆ ಜಾಗೃತವಾಗಿರುವುದು

ವಿನಾಯಕಅಣ್ಣನವರಿಗೆ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳರ ದೈವಿ ಪ್ರವಾಸದಲ್ಲಿ ಅವರ ಜೊತೆ ಹೋಗುವ ಯೋಗವು ದೊರೆತಿದೆ. ಅವರ ಮೇಲೆ ಪಾರ್ವತಿಯ ಸ್ವರೂಪ ಶ್ರೀಚಿತ್‌ಶಕ್ತಿ (ಸೌ.) ಗಾಡಗೀಳ ಅವರ ಕೃಪೆಯಿಂದಾಗಿ, ಅವರಲ್ಲಿರುವ ಸುಪ್ತ ಆಧ್ಯಾತ್ಮಿಕ ಸಾಮರ್ಥ್ಯವು ಜಾಗೃತಗೊಂಡಿದೆ. ಆದ್ದರಿಂದ, ಶ್ರೀ ಗಣೇಶ ಮತ್ತು ಶ್ರೀವಿಷ್ಣುವಿನ ಸಮ್ಮಿಶ್ರ ತತ್ತ್ವವು ಅವರ ಸೂಕ್ಷ್ಮ ದೇಹದಲ್ಲಿ ‘ಪೂರ್ಣಾನಂದ ಎಂಬ ಹೆಸರಿನಿಂದ ಕಾರ್ಯನಿರತವಾಗಿದೆ. ಆದುದರಿಂದ ಅವರು ಜಾಗೃತಿ, ಸ್ವಪ್ನ ಮತ್ತು ಸುಷುಪ್ತಿಗಳೆಂಬ ಮೂರು ಅವಸ್ಥೆಗಳಲ್ಲಿರುವಾಗಲೂ ನಕ್ಷತ್ರಲೋಕಗಳಲ್ಲಿ ನೆಲೆಸಿರುವ ಸಪ್ತರ್ಷಿಗಳು ಮತ್ತು ಮಹರ್ಷಿಗಳು, ದೇವರ್ಷಿಗಳು ಮತ್ತು

ಮಹಲೋಕ, ಜನಲೋಕ, ತಪೋಲೋಕ ಮತ್ತು ಸತ್ಯಲೋಕಗಳಲ್ಲಿನ ಮಹರ್ಷಿ, ದೇವರ್ಷಿ ಮತ್ತು ಬ್ರಹ್ಮರ್ಷಿಗಳೊಂದಿಗೆ ಸೂಕ್ಷ್ಮಸಂವಾದವು ನಡೆಯುತ್ತಿರುತ್ತದೆ. ಈ ಸಂವಾದವು ಪ್ರಕಾಶ ಭಾಷೆಯಲ್ಲಿರುವುದರಿಂದ, ವಿನಾಯಕಅಣ್ಣನಿಗೆ ಶಬ್ದಗಳ ಸ್ತರದಲ್ಲಿರುವ ವಿಚಾರಗಳ ರೂಪದಲ್ಲಿ ಕಡಿಮೆ ಪ್ರಮಾಣದಲ್ಲಿ; ಆದರೆ ಶಬ್ದಾತೀತವಾದ ಆನಂದದ ಅನುಭೂತಿಗಳ ಸ್ವರೂಪದಲ್ಲಿ ಅಧಿಕ ಪ್ರಮಾಣದಲ್ಲಿ ದೈವಿ ಜ್ಞಾನವು ಸಿಗುತ್ತದೆ. ಈ ಜ್ಞಾನವು ಎಲ್ಲರಿಗೂ ತುಂಬಾ ಉಪಯುಕ್ತವಾಗಿದೆ. ಅವರಿಗೆ ಸೂಕ್ಷ್ಮದಲ್ಲಿ ಶ್ರೀ ಗಣೇಶ, ಶಿವ, ಪಾರ್ವತಿ, ಶೇಷನಾಗ, ಗರುಡ ಮತ್ತು ಹನುಮಂತನ ದರ್ಶನವು ಆಗಿದೆ.

ವಿವಿಧ ಲೋಕಗಳಲ್ಲಿ ನೆಲೆಸಿರುವ ಋಷಿಗಳು ಮತ್ತು ಅವರ ಆಧ್ಯಾತ್ಮಿಕ ಗುಣವೈಶಿಷ್ಟ್ಯಗಳು

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ಸಿಕ್ಕಿದ ಜ್ಞಾನ), (ಆಧ್ಯಾತ್ಮಿಕ ಮಟ್ಟ ಶೇ. ೬೪) ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೧.೨೦೨೨)  

(ಮುಂದುವರಿಯುವುದು)

* ಸೂಕ್ಷ್ಮ : ಪ್ರತ್ಯಕ್ಷ ಕಾಣುವ ಅವಯವಗಳಾದ ಮೂಗು, ಕಿವಿ, ಕಣ್ಣುಗಳು, ನಾಲಿಗೆ ಮತ್ತು ಚರ್ಮ ಇವು ಪಂಚಜ್ಞಾನೇಂದ್ರಿಯಗಳಾಗಿವೆ. ಈ ಪಂಚಜ್ಞಾನೇಂದ್ರಿಯಗಳು, ಮನಸ್ಸು ಮತ್ತು ಬುದ್ಧಿ ಇವುಗಳ ಆಚೆಗಿನ ಎಂದರೆ ಸೂಕ್ಷ್ಮ. ಸಾಧನೆಯಲ್ಲಿ ಪ್ರಗತಿ ಮಾಡಿಕೊಂಡ ಕೆಲವು ವ್ಯಕ್ತಿಗಳಿಗೆ ಈ ಸೂಕ್ಷ್ಮ ಸಂವೇದನೆಯ ಅರಿವಾಗುತ್ತದೆ. ಈ ಸೂಕ್ಷ್ಮ ಜ್ಞಾನದ ಬಗ್ಗೆ ವಿವಿಧ ಧರ್ಮಗ್ರಂಥಗಳಲ್ಲಿ ಉಲ್ಲೇಖವಿದೆ.