ಕೆನಡಾದ ೭೦೦ ಭಾರತೀಯ ವಿದ್ಯಾರ್ಥಿಗಳ ಬಳಿ ನಕಲಿ ದಾಖಲೆ, ದೇಶ ಬಿಡಲು ನೋಟಿಸ್ !

ಅಲ್ಲಿನ ವಿದ್ಯಾರ್ಥಿಗಳಿಂದ ಪ್ರತಿಭಟನೆ !

ಓಟಾವಾ (ಕೆನಡಾ) – ಕೆನಡಾದಲ್ಲಿ ೭೦೦ ಭಾರತೀಯ ವಿದ್ಯಾರ್ಥಿಗಳಿಗೆ ದೇಶ ಬಿಡಲು ನೋಟಿಸ್ ಜಾರಿ ಮಾಡಿದೆ. ಕೆನಡಾದ ಸಿ.ಬಿ.ಎಸ್.ಎ. ಸಂಸ್ಥೆಯು ನೋಟಿಸ್ ಜಾರಿ ಮಾಡಿದೆ. ಅದರ ಪ್ರಕಾರ, ಈ ವಿದ್ಯಾರ್ಥಿಗಳು ನಕಲಿ ದಾಖಲೆಗಳನ್ನು ತಯಾರಿಸಿ ಅವರು ವಿವಿಧ ವಿದ್ಯಾಪೀಠಗಳಲ್ಲಿ ಪ್ರವೇಶ ಪಡೆದಿದ್ದಾರೆ. ನೋಟಿಸ್ ಜಾರಿ ಮಾಡಿದ ನಂತರ ವಿದ್ಯಾರ್ಥಿಗಳು ಅಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಂಜಾಬ್ ನವರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಂಜಾಬದ ಅನಿವಾಸಿ ಭಾರತೀಯ ವ್ಯವಹಾರಗಳ ಸಚಿವರಾದ ಕುಲದೀಪ ಸಿಂಹ ದಾಲಿವಾಲ ಇವರು ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ ಬಳಿ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಒತ್ತಾಯಿಸಿದ್ದಾರೆ.

೧. ಈ ವಿದ್ಯಾರ್ಥಿಗಳು, ಯಾವ ಏಜೆಂಟ್ ಮೂಲಕ ಅವರು ಕೆನಡಾಗೆ ಬಂದಿದ್ದರೋ, ಅವರು ಮೋಸ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಈ ಏಜೆಂಟ್ ಗಳು ಮೊದಲು ಹಣ ಪಡೆಯುತ್ತಾರೆ ಮತ್ತು ನಂತರ ವಿದ್ಯಾರ್ಥಿಗಳಿಗೆ ನಕಲಿ ದಾಖಲೆಗಳನ್ನು ನೀಡುತ್ತಾರೆ. ನಂತರ ವಿದ್ಯಾಪೀಠದಲ್ಲಿ ಸಿಟ್ ಇಲ್ಲದಿರುವ ನೆಪ ಒಡ್ಡಿ ಬೇರೆ ವಿದ್ಯಾಪೀಠದಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ಕೊಡಿಸುತ್ತಾರೆ. ಪದವಿ ಪೂರ್ಣವಾದ ನಂತರ ಅನೇಕ ವಿದ್ಯಾರ್ಥಿಗಳು ಅಲ್ಲಿಯ ಪೌರತ್ವಕ್ಕಾಗಿ ಅರ್ಜಿ ನೀಡುತ್ತಾರೆಯೋ, ಆಗ ಅವರ ದಾಖಲೆಗಳು ನಕಲಿಯಾಗಿವೆ ಎಂದು ಗಮನಕ್ಕೆ ಬರುತ್ತದೆ.

೨. ಕೆನಡಾದ ಸಂಸತ್ತಿನಲ್ಲಿ ನ್ಯೂ ಡೆಮೋಕ್ರೊಟಿಕ್ ಪಕ್ಷದ ನಾಯಕ ಜಗಮಿತ ಸಿಂಗ ಇವರು ಈ ಕುರಿತು ಪ್ರಧಾನಮಂತ್ರಿ ಜಸ್ಟಿಸ್ ಟ್ರುಡೋ ಇವರ ಬಳಿ ಸ್ಪಷ್ಟನೇ ಕೇಳಿದ್ದಾರೆ. ಪ್ರಧಾನಮಂತ್ರಿ ಟ್ರುಡೋ ಸಂಸತ್ತಿನಲ್ಲಿ, ನಾವು ತಪ್ಪಿತಸ್ಥರನ್ನು ಗುರುತಿಸಿ ಅವರಿಗೆ ಶಿಕ್ಷೆ ನೀಡಬೇಕಿದೆ. ಯಾವುದೇ ಸಂತ್ರಸ್ತರ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ. ನಾವು ಅವರ ಪರವಾಗಿ ಮತ್ತು ಅದಕ್ಕೆ ಸಂಬಂಧಿತ ಸಾಕ್ಷಿಗಳು ಪ್ರಸ್ತುತಪಡಿಸಲು ಸಂಪೂರ್ಣ ಅವಕಾಶ ನೀಡುವೆವು.

ಕೆನಡಾದಲ್ಲಿನ ವಿದೇಶಿ ವಿದ್ಯಾರ್ಥಿಗಳಲ್ಲಿ ಶೇಕಡ ೪೦ ಭಾರತೀಯ ವಿದ್ಯಾರ್ಥಿ

‘ಕೆನೆಡಿಯನ್ ಬ್ಯೂರೋ ಫಾರ್ ಇಂಟರ್ನ್ಯಾಷನಲ್ ಎಜುಕೇಶನ್’ ನ ಮಾಹಿತಿಯ ಪ್ರಕಾರ ಕಳೆದ ವರ್ಷ ಕೆನಡಾದಲ್ಲಿ ೮ ಲಕ್ಷ ೭ ಸಾವಿರ ೭೫೦ ವಿದೇಶಿ ವಿದ್ಯಾರ್ಥಿಗಳಿದ್ದರು. ಇದು ೫ ವರ್ಷಗಳ ಹಿಂದಿನ ತುಲನೆಯಲ್ಲಿ ಶೇಕಡ ೪೩ ರಷ್ಟು ಹೆಚ್ಚಳವಾಗಿಗಿದೆ. ಇದರಲ್ಲಿ ಶೇಕಡ ೪೦ ಭಾರತೀಯರಿದ್ದಾರೆ, ಅದರಲ್ಲಿ ಶೇಕಡ ೧೨ ರಷ್ಟು ಚೀನಾ ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿನ ಅರ್ಧಕ್ಕಿಂತಲೂ ಹೆಚ್ಚಿನ ವಿದೇಶಿ ವಿದ್ಯಾರ್ಥಿಗಳು ಒಂಟಾರಿಯೋದಲ್ಲಿ ಕಲಿಯುತ್ತಿದ್ದಾರೆ.