ಕಳೆದ 30 ವರ್ಷಗಳಲ್ಲಿ ಸ್ಪೇನ್ ನಲ್ಲಿ ಮುಸಲ್ಮಾನರ ಜನಸಂಖ್ಯೆಯಲ್ಲಿ 10 ಪಟ್ಟು ಹೆಚ್ಚಳ !

ದೇಶದಲ್ಲಿ 2 ಸಾವಿರ ಮಸೀದಿ, 53 ಮುಸ್ಲಿಂ ಸಂಘಟನೆಗಳು !

ಮ್ಯಾದ್ರಿದ (ಸ್ಪೇನ್) – ಕಳೆದ 30 ವರ್ಷಗಳಲ್ಲಿ ಯುರೋಪಿಯನ್ ದೇಶವಾಗಿರುವ ಸ್ಪೇನ್ ನಲ್ಲಿ ಮುಸಲ್ಮಾನರ ಸಂಖ್ಯೆ 10 ಪಟ್ಟುಗಳಷ್ಟು ಹೆಚ್ಚಾಗಿದೆ. ಈ ಮಾಹಿತಿಯನ್ನು ಸ್ಪೇನ್ `ಸೆಕ್ರೆಟರಿ ಆಫ್ ದಿ ಇಸ್ಲಾಮಿಕ್ ಕಮಿಶನ್’ ಒಂದು ವರದಿಯಲ್ಲಿ ತಿಳಿಸಿದೆ. ಸ್ಪೇನ್ ನಲ್ಲಿರುವ ಮುಸಲ್ಮಾನರ ಜನಸಂಖ್ಯೆ 25 ಲಕ್ಷಕ್ಕಿಂತ ಅಧಿಕವಾಗಿದೆಯೆಂದು ಹೇಳಲಾಗುತ್ತಿದ್ದರೂ, ಈ ಸಂಖ್ಯೆ 30 ಲಕ್ಷಕ್ಕಿಂತ ಅಧಿಕವಿದೆಯೆಂದು ಈ ಆಯೋಗದ ಮಹಮ್ಮದ ಅಜಾನಾ ಇವರು ಹೇಳಿದ್ದಾರೆ.

1. ಮಹಮ್ಮದ ಅಜಾನಾ ಇವರು, ಮೊದಲು ಇಲ್ಲಿಯ ಮುಸಲ್ಮಾನರ ಜನಸಂಖ್ಯೆಯಲ್ಲಿ ಅನಿವಾಸಿಗಳು ಹೆಚ್ಚಿದ್ದರು; ಆದರೆ ಈಗ ಮುಸಲ್ಮಾನ ನಾಗರಿಕರೆಂದು ಅವರ ಸಂಖ್ಯೆ ಹೆಚ್ಚಾಗಿದೆ. 10 ಲಕ್ಷಕ್ಕಿಂತ ಹೆಚ್ಚು ಮುಸಲ್ಮಾನರು ಸ್ಪೇನ ನಾಗರಿಕರಾಗಿದ್ದಾರೆ. ಇತರೆ ಮುಸಲ್ಮಾನರಲ್ಲಿ ಅನಿವಾಸಿಗಳಿದ್ದಾರೆ. ಅದರಲ್ಲಿ ಮೊರಕ್ಕೊ, ಪಾಕಿಸ್ತಾನ, ಬಾಂಗ್ಲಾದೇಶ, ಅಲ್ಜೀರಿಯಾ, ಸೆನೆಗಲ್ ಈ ದೇಶಗಳಿಂದ ಬಂದಿರುವ ಮುಸಲ್ಮಾನರಿದ್ದಾರೆ. ಹೆಚ್ಚಿನ ಮುಸಲ್ಮಾನರು ಸ್ಪೇನನ ಕೈಗಾರಿಕಾ ಕ್ಷೇತ್ರದಲ್ಲಿ ವಾಸಿಸುತ್ತಿದ್ದಾರೆ.

2. ಸಧ್ಯಕ್ಕೆ ಸ್ಪೇನನಲ್ಲಿ 53 ಮುಸಲ್ಮಾನ ಸಂಘಟನೆಗಳಿವೆ, 2 ಸಾವಿರಕ್ಕಿಂತ ಅಧಿಕ ಮಸೀದಿಗಳಿವೆ. ಹಾಗೆಯೇ 40 ಕಬ್ರಸ್ತಾನಗಳಿವೆ. `ಮಸೀದಿ ನಿರ್ಮಾಣ ಮಾಡಲು ಸರಕಾರದಿಂದ ಪರವಾನಿಗೆ ಪಡೆಯಬೇಕಾಗುತ್ತದೆ. ಅದನ್ನು ಪಡೆಯುವಾಗ ಅಡಚಣೆ’ ಬರುತ್ತದೆಯೆಂದು ಮಹಮ್ಮದ ಅಜಾನಾ ಹೇಳಿದರು.

3. ಸ್ಪೇನನಲ್ಲಿರುವ ಆಂದಾಲುಸಿಯಾ ನಗರದಲ್ಲಿ ಪ್ರತಿ ಶುಕ್ರವಾರ ಅನೇಕ ಜನರು ಇಸ್ಲಾಂ ಧರ್ಮ ಸ್ವೀಕರಿಸುತ್ತಾರೆ. ಈ ಪ್ರಕ್ರಿಯೆಗೆ ಇಲ್ಲಿ `ಶಹಾದಾ’ ಎಂದು ಹೇಳಲಾಗುತ್ತದೆ. ಇಲ್ಲಿಯ ಗ್ರ್ಯಾಂಡ ಮಸೀದಿಯಲ್ಲಿ ಮತಾಂತರ ನಡೆಯುತ್ತದೆ. ಈ ಮಸೀದಿಯಲ್ಲಿ ಓರ್ವ ಪಾದ್ರಿಯೂ ಇಸ್ಲಾಂ ಸ್ವೀಕರಿಸಿದ್ದನು ಎಂದು ಹೇಳಿದರು.

4. `ಸ್ಪಾನಿಷ್ ಇಸ್ಲಾಮಿಕ ಸೊಸಾಯಟಿ ಅಸೋಸಿಯೇಶನ’ ಮತ್ತು `ಗ್ರಾನಾಡಾ ಗ್ರ್ಯಾಂಡ ಮಾಸ್ಕ ಫೌಂಡೇಶನ’ನ ಅಧ್ಯಕ್ಷ ಉಮರ ದೆಲ್ ಪೋಜೊ ಇವರು, ಕೊರೊನಾ ಮಹಾಮಾರಿಯ ಕಾಲದಲ್ಲಿ ಮತಾಂತರದಲ್ಲಿ ಹೆಚ್ಚಳವಾಗಿದೆ. ಗ್ರಾನಾಡಾದಲ್ಲಿ 36 ಸಾವಿರ ಮುಸಲ್ಮಾನರಿದ್ದು, ಅವರಲ್ಲಿ 3 ಸಾವಿರ 700 ಜನರು ಮತಾಂತರಗೊಂಡ ಮುಸಲ್ಮಾನರಿದ್ದಾರೆ. ಮತಾಂತರದ ಛಾಯಾಚಿತ್ರಗಳು ಮತ್ತು ವಿಡಿಯೋ ಪ್ರಸಾರವಾಗುತ್ತಿರುತ್ತವೆ ಎಂದು ಹೇಳಿದರು.

 

ಸಂಪಾದಕರ ನಿಲುವು

ಬಹುಸಂಖ್ಯಾತ ಕ್ರೈಸ್ತರು ಇರುವ ಯುರೋಪ ಭವಿಷ್ಯದಲ್ಲಿ ಮುಸಲ್ಮಾನ ಬಹುಸಂಖ್ಯಾತವಾದರೆ ಆಶ್ಚರ್ಯ ಪಡಬಾರದು !