‘ಸಾಮಾನ್ಯವಾಗಿ ಆಡುಭಾಷೆಯಲ್ಲಿ ನಾವು ‘ಸೂರ್ಯನು ಬೆಳಗ್ಗೆ ಉದಯಿಸುತ್ತಾನೆ ಮತ್ತು ಚಂದ್ರನು ರಾತ್ರಿ ಉದಯಿಸುತ್ತಾನೆ, ಎನ್ನುತ್ತೇವೆ. ಸೂರ್ಯನ ಸಂದರ್ಭದಲ್ಲಿ ಇದು ಯೋಗ್ಯವಾಗಿದ್ದರೂ, ಚಂದ್ರನ ಸಂದರ್ಭದಲ್ಲಿ ಹೀಗಿಲ್ಲ. ಚಂದ್ರೋದಯವು ಪ್ರತಿದಿನ ಬೇರೆಬೇರೆ ಸಮಯದಲ್ಲಿ ಆಗುತ್ತದೆ. ಆ ಕುರಿತು ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ಚಂದ್ರನು ಪ್ರತಿದಿನ ಸುಮಾರು ೫೨ ನಿಮಿಷ ತಡವಾಗಿ ಉದಯಿಸುವುದು
ಆಕಾಶದಲ್ಲಿ ಚಂದ್ರನು ಸುಮಾರು ೨೭.೩ ದಿನಗಳಲ್ಲಿ ೩೬೦ ಡಿಗ್ರಿಗಳಷ್ಟು ಸಂಚರಿಸುತ್ತಾನೆ (ಪೃಥ್ವಿಗೆ ಒಂದು ಪ್ರದಕ್ಷಿಣೆಯನ್ನು ಹಾಕುತ್ತಾನೆ); ಎಂದರೆ ೨೪ ಗಂಟೆಗಳಲ್ಲಿ ಆಕಾಶದಲ್ಲಿ ಸರಾಸರಿ ೧೩ ಡಿಗ್ರಿಗಳಷ್ಟು ಸಂಚರಿಸುತ್ತಾನೆ. ಆದ್ದರಿಂದ ಪೃಥ್ವಿಯು ತನ್ನ ಸುತ್ತಲೂ ೨೪ ಗಂಟೆಗಳಲ್ಲಿ ಸಂಪೂರ್ಣ ಸುತ್ತಿ ಹೆಚ್ಚುವರಿ ೧೩ ಡಿಗ್ರಿ ಸುತ್ತಿದ ನಂತರವೇ ಚಂದ್ರೋದಯವಾಗುತ್ತದೆ. ಪೃಥ್ವಿಗೆ ತನ್ನ ಸುತ್ತಲು ೧೩ ಡಿಗ್ರಿಗಳಷ್ಟು ಸುತ್ತಲು ಸರಾಸರಿ ೫೨ ನಿಮಿಷಗಳು ತಗಲುತ್ತವೆ. ಆದ್ದರಿಂದ ಚಂದ್ರನು ಪ್ರತಿದಿನ ಸರಾಸರಿ ೫೨ ನಿಮಿಷ ತಡವಾಗಿ ಉದಯಿಸುತ್ತಾನೆ (ಟಿಪ್ಪಣಿ), ಉದಾ. ಯಾವುದಾದರೊಂದು ಹುಣ್ಣಿಮೆಗೆ ಸಾಯಂಕಾಲ ೬.೩೦ ಗಂಟೆಗೆ ಚಂದ್ರೊದಯವಾದರೆ ಅದರ ಮರುದಿನ ಸಾಯಂಕಾಲ ಸುಮಾರು ೭.೨೨ ರ ಸಮಯಕ್ಕೆ ಉದಯಿಸುತ್ತಾನೆ. ಅದರ ಮರುದಿನ ರಾತ್ರಿ ಸುಮರು ೮.೧೪ ಗಂಟೆಗೆ ಉದಯಿಸುತ್ತಾನೆ, ಅದರ ಮರುದಿನ ರಾತ್ರಿ ಸುಮಾರು ೮.೧೪ ಗಂಟೆಗೆ ಉದಯಿಸುತ್ತಾನೆ ಇತ್ಯಾದಿ.
ಟಿಪ್ಪಣಿ – ಪೃಥ್ವಿಯ ಸುತ್ತಲೂ ಚಂದ್ರನ ಸಂಚರಿಸುವ ವೇಗವು ಒಂದೇ ರೀತಿ ಇರುವುದಿಲ್ಲ; ಏಕೆಂದರೆ ಚಂದ್ರನ ಸುತ್ತುವ ಕಕ್ಷೆಯು ಲಂಬವರ್ತುಳಾಕಾರವಾಗಿದ್ದೂ ಅದು ಪೃಥ್ವಿಯ ಮಧ್ಯಭಾಗದಲ್ಲಿಲ್ಲ. ಆದ್ದರಿಂದ ಚಂದ್ರನು ಪೃಥ್ವಿಯ ಹತ್ತಿರ ಹೋಗುವಾಗ ಅವನ ವೇಗವು ಹೆಚ್ಚುತ್ತದೆ ಮತ್ತು ಪೃಥ್ವಿಯಿಂದ ದೂರದಿಂದ ಹೋಗುವಾಗ ಅವನ ವೇಗವು ಕಡಿಮೆಯಾಗುತ್ತದೆ. ಆದ್ದರಿಂದ ಚಂದ್ರನು ಪ್ರತಿದಿನ ೪೬ ರಿಂದ ೫೮ ನಿಮಿಷ ತಡವಾಗಿ ಉದಯಿಸುತ್ತಾನೆ. ಇದರ ಸರಾಸರಿ ಸಮಯ ೫೨ ನಿಮಿಷಗಳಾಗುತ್ತವೆ.
೨. ಖಗೋಳಶಾಸ್ತ್ರದ ದೃಷ್ಟಿಯಲ್ಲಿ ಮಹತ್ವದ ತಿಥಿಗಳಲ್ಲಿ ಚಂದ್ರೋದಯವಾಗುವ ಸಮಯ
‘ಅಮಾವಾಸ್ಯೆ, ಶುಕ್ಲ ಅಷ್ಟಮಿ, ಹುಣ್ಣಿಮೆ ಮತ್ತು ಕೃಷ್ಣ ಅಷ್ಟಮಿ, ಈ ೪ ತಿಥಿಗಳು ಖಗೋಳಶಾಸ್ತ್ರದ ದೃಷ್ಟಿಯಲ್ಲಿ ಮಹತ್ವದ್ದಾಗಿವೆ; ಏಕೆಂದರೆ ಸೂರ್ಯ ಮತ್ತು ಚಂದ್ರ ಇವರಲ್ಲಿನ ಕೋನವು (ಚಿಟಿgಟe) ಅಮವಾಸ್ಯೆಯಂದು ‘೦ ಡಿಗ್ರಿ, ಶುಕ್ಲ ಅಷ್ಟಮಿಯಂದು ‘೯೦ ಡಿಗ್ರಿ, ಹುಣ್ಣಿಮೆಯಂದು ‘೧೮೦ ಡಿಗ್ರಿ ಮತ್ತು ಕೃಷ್ಣ ಅಷ್ಟಮಿಯಂದು ‘೨೭೦ ಡಿಗ್ರಿ ಇರುತ್ತದೆ. ಸಮುದ್ರದ ಅಲೆಗಳ ಉಬ್ಬರವಿಳಿತ ಪ್ರತಿದಿನ ಇರುತ್ತವೆ; ಆದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಅಲೆಗಳ ಉಬ್ಬರವಿಳಿತದ ತೀವ್ರತೆಯು ಅತ್ಯಧಿಕವಾಗಿದ್ದರೆ, ಶುಕ್ಲ ಮತ್ತು ಕೃಷ್ಣ ಅಷ್ಟಮಿಯಂದು ಉಬ್ಬರವಿಳಿತದ ತೀವ್ರತೆಯು ಎಲ್ಲಕ್ಕಿಂತ ಕಡಿಮೆ ಇರುತ್ತದೆ. ಈ ೪ ತಿಥಿಗಳಲ್ಲಿ ಚಂದ್ರನು ಸ್ಥಳಿಯ ಸಮಯಕ್ಕನುಸಾರ ಸಾಮಾನ್ಯವಾಗಿ ಯಾವಾಗ ಉದಯಿಸುತ್ತಾನೆ, ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಮೇಲಿನ ಕೋಷ್ಟಕದಿಂದ ಗಮನಕ್ಕೆ ಬರುವುದೇನೆಂದರೆ, ಅಮಾವಾಸ್ಯೆಯಂದು ಚಂದ್ರನು ಸೂರ್ಯೋದಯಕ್ಕೆ ಉದಯಿಸುತ್ತಿರುವುದರಿಂದ ಚಂದ್ರನ ಹಿಂದಿನ ಬದಿ ಬೆಳಕಾಗಿ ಮುಂದಿನ ಬದಿಯಲ್ಲಿ ಕತ್ತಲು ಇರುತ್ತದೆ; ಆದ್ದರಿಂದ ಅವನು ಗೋಚರಿಸುವುದಿಲ್ಲ. ಶುಕ್ಲ ಅಷ್ಟಮಿಯಂದು ಚಂದ್ರನು ಮಧ್ಯಾಹ್ನದ ಸಮಯದಲ್ಲಿ ಉದಯಿಸುತ್ತಾನೆ, ಆದ್ದರಿಂದ ಸೂರ್ಯಾಸ್ತವಾದ ನಂತರ ಅವನು ಸುಮಾರು ೬ ಗಂಟೆಗಳ ವರೆಗೆ ಗೋಚರಿಸುತ್ತಾನೆ. ಹುಣ್ಣಿಮೆಯಂದು ಚಂದ್ರನು ಸೂರ್ಯಾಸ್ತದ ಸಮಯದಲ್ಲಿ ಉದಯಿಸುತ್ತಾನೆ, ಆದ್ದರಿಂದ ಅವನು ರಾತ್ರಿಯಿಡೀ ಗೋಚರಿಸುತ್ತಾನೆ. ಕೃಷ್ಣ ಅಷ್ಟಮಿಯಂದು ಚಂದ್ರನು ಮಧ್ಯರಾತ್ರಿ ಉದಯಿಸುತ್ತಾನೆ, ಆದ್ದರಿಂದ ಸೂರ್ಯೋದಯವಾಗುವ ಮೊದಲು ಸುಮಾರು ೬ ಗಂಟೆಗಳ ವರೆಗೆ ಗೋಚರಿಸುತ್ತಾನೆ,
– ಶ್ರೀ. ರಾಜ ಕರ್ವೆ, ಜ್ಯೋತಿಷ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೨.೧.೨೦೨೩)