ಅಮೇರಿಕಾವು ಲಕ್ಷಾಂತರ ಭಾರತೀಯ ಮೂಲದ ಯುವಕರನ್ನು ದೇಶದಿಂದ ಗಡೀಪಾರು ಮಾಡುವ ಸಾಧ್ಯತೆ !

`ಡಾಕ್ಯುಮೆಂಟೆಡ್ ಡ್ರೀಮರ್ಸ’ ಎಂದರೆ ಏನು?

ವಾಶಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿರುವ ಎರಡೂವರೆ ಲಕ್ಷ `ಡಾಕ್ಯುಮೆಂಟೆಡ್ ಡ್ರೀಮರ್ಸ’ ರ ಭವಿಷ್ಯ ಅಪಾಯಕ್ಕೀಡಾಗಿದ್ದು, ಅವರಿಗೆ ಅಮೇರಿಕಾದಿಂದ ಗಡಿಪಾರು ಮಾಡುವ ಅಪಾಯ ಎದುರಾಗಿದೆ. ಈ `ಡಾಕ್ಯುಮೆಂಟೆಡ್ ಡ್ರೀಮರ್ಸ’ನಲ್ಲಿ ಹೆಚ್ಚಿನ ಮಕ್ಕಳು ಭಾರತೀಯ ಮೂಲದವರಾಗಿದ್ದಾರೆ. ಈ ಯುವಕರಿಗೆ ಭರವಸೆ ನೀಡಲು ಅಮೇರಿಕಾದ `ಚಿಲ್ಡ್ರನ್ ಆಕ್ಟ’ ಆದಷ್ಟು ಬೇಗನೆ ಅನುಮೋದಿಸುವಂತೆ ಅಮೇರಿಕಾ ಸರಕಾರಕ್ಕೆ ಕೋರಲಾಗುತ್ತಿದೆ. `ಇಂಪ್ರೂವ್ ದಿ ಡ್ರೀಮ’ ಸಂಘಟನೆಯ ಸಂಸ್ಥಾಪಕ ಮತ್ತು ಭಾರತೀಯ ಮೂಲದ ದೀಪ ಪಟೇಲ ಇವರು ಮಾತನಾಡುತ್ತಾ, ಅಮೇರಿಕಾದ `ಚಿಲ್ಡ್ರನ್ ಆಕ್ಟ’ ಆದಷ್ಟು ಬೇಗನೆ ಅನುಮೋದಿಸಿ, ಈ ಸಮಸ್ಯೆಯನ್ನು ಶಾಶ್ವತವಾಗಿ ಮುಕ್ತಾಯಗೊಳಿಸಬೇಕಾದ ಸಮಯ ಬಂದಿದೆ. ಈ ಎರಡೂವರೆ ಲಕ್ಷ `ಡಾಕ್ಯುಮೆಂಟೆಡ್ ಡ್ರೀಮರ್ಸ’ ನಲ್ಲಿ ಶೇ. 90 ರಷ್ಟು ಮಕ್ಕಳು ವಿಜ್ಞಾನ, ತಂತ್ರಜ್ಞಾನ, ಇಂಜನಿಯರಿಂಗ ಮತ್ತು ಗಣಿತ ವಿಷಯದಲ್ಲಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಈ ವರ್ಷವೂ `ಚಿಲ್ಡ್ರನ್ ಆಕ್ಟ’ ಅನುಮೋದಿಸದಿದ್ದರೆ, 10 ಸಾವಿರ ಯುವಕರನ್ನು ಅಮೇರಿಕಾದಿಂದ ಗಡಿಪಾರು ಮಾಡುವ ಸಾಧ್ಯತೆಯಿದೆಯೆಂದು ದೀಪ ಪಟೇಲ ಇವರು ಹೇಳಿದ್ದಾರೆ.

ಸಂಪಾದಕರ ನಿಲುವು

ಜಗತ್ತಿನಾದ್ಯಂತ ಸಾಕಷ್ಟು ಜನರು `ನಾನ್ ಇಮಿಗ್ರೆಂಟ’ ವೀಸಾ ಮೇಲೆ ಅಥವಾ ದೀರ್ಘಾವಧಿ ವೀಸಾದಲ್ಲಿ ಅಮೇರಿಕಾದಲ್ಲಿ ಕೆಲಸ ಮಾಡುತ್ತಾರೆ. ಈ ಜನರ ಮಕ್ಕಳಿಗೆ ಅಮೇರಿಕಾದಲ್ಲಿ `ಡಾಕ್ಯುಮೆಂಟೆಡ್ ಡ್ರೀಮರ್ಸ’ ಎಂದು ಕರೆಯುತ್ತಾರೆ. ವಾಸ್ತವಿಕವಾಗಿ ಈ ಮಕ್ಕಳು 21 ವರ್ಷದ ವರೆಗೆ ಪೂರ್ಣ ಕಾನೂನಿನ ಅಧಿಕಾರದೊಂದಿಗೆ ಅಮೇರಿಕಾದಲ್ಲಿ ವಾಸಿಸಿ ಶಿಕ್ಷಣವನ್ನು ಪಡೆದುಕೊಳ್ಳಬಹುದು. ಈ ಮಕ್ಕಳಿಗೆ ಅಥವಾ ಅವರ ಪೋಷಕರಿಗೆ ಅವರ 21ನೇ ವರ್ಷ ಪೂರ್ಣಗೊಳ್ಳುವ ಮೊದಲೇ ನಾಗರಿಕತ್ವ ದೊರತರೆ ಒಳ್ಳೆಯದು ಇಲ್ಲವಾದರೆ ಈ ಮಕ್ಕಳಿಗೆ ಅಮೇರಿಕಾವನ್ನು ಬಿಡಬೇಕಾಗುತ್ತದೆ.