‘ದಿ ಡೈರಿ ಆಫ್ ವೇಸ್ಟ್ ಬಂಗಾಳ’ ನ ನಿರ್ದೇಶಕ ಸನೋಜ ಮಿಶ್ರಾ ಇವರು ವ್ಯಕ್ತಪಡಿಸಿದ ಭಯ !
ಮುಂಬಯಿ – ಬಂಗಾಳದ ತೃಣಮೂಲ ಕಾಂಗ್ರೆಸ್ ಸರಕಾರವು ‘ದ ಡೈರಿ ಆಫ್ ವೇಸ್ಟ್ ಬಂಗಾಲ’ ಈ ಸಿನೆಮಾದ ಸಹ ನಿರ್ಮಾಪಕರು ಮತ್ತು ನಿರ್ದೇಶಕರಾದ ಸನೋಜ ಮಿಶ್ರಾ ಇವರ ವಿರುದ್ಧ ದೂರು ದಾಖಲಾಗಿದೆ. ಈ ಚಲನಚಿತ್ರದಲ್ಲಿ ನುಸುಳುಖೋರ ರೋಹಿಂಗ್ಯಾ ಮುಸಲ್ಮಾನರಿಗೆ ಸರಕಾರದಿಂದ ಎಲ್ಲಾ ರೀತಿಯ ಸಹಾಯ ನೀಡಲಾಗುವ ಆರೋಪ ಮಾಡಲಾಗಿದೆ. ಇದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಮೇ ೩೦ ವರೆಗೆ ಮಿಶ್ರಾಯುವರೆಗೆ ಪೊಲೀಸ ವಿಚಾರಣೆಗಾಗಿ ಉಪಸ್ಥಿತರಿರಲು ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದ ಸನೋಜ ಮಿಶ್ರಾ ಇವರು ಪತ್ರಕರ್ತರಿಗೆ, ನಾನು ಬಂಗಾಳಗೆ ಹೋದರೆ, ಅಲ್ಲಿಂದ ಹಿಂತಿರುಗಿ ಬರಲು ಸಾಧ್ಯವಿಲ್ಲ. ನನ್ನನ್ನು ಸುಳ್ಳು ಆರೋಪದಲ್ಲಿ ಸಿಲುಕಿಸಲಾಗುವುದು. ನಾನು ಅಪರಾಧಿ ಅಥವಾ ಭಯೋತ್ಪಾದಕನೆಂದು ಹೇಳಿ ಅಂತಹ ಕಲಂ ನಲ್ಲಿ ನನಗೆ ಸಿಲುಕಿಸಲಾಗುವುದು ಎಂದು ಹೇಳಿದರು, ಮಿಶ್ರಾ ತಮ್ಮ ಮಾತನ್ನು ಮುಂದುವರೆಸುತ್ತಾ, ನಾನು ಪ್ರಧಾನಮಂತ್ರಿ ಮತ್ತು ಗೃಹಸಚಿವರಿಗೆ ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಒತ್ತಾಯಿಸುತ್ತೇನೆ. ಬಂಗಾಳದಲ್ಲಿ ಹತ್ಯೆ, ಬಲಾತ್ಕಾರ ಮತ್ತು ಹಿಂದೂಗಳ ಪಲಾಯನದ ಘಟನೆಗಳು ಹೆಚ್ಚುತ್ತಿವೆ. ನಾನು ಸಂಪೂರ್ಣ ಸಂಶೋಧನೆ ಮಾಡಿದ್ದೇನೆ. ಸಂಪೂರ್ಣ ಚಲನಚಿತ್ರ ಸತ್ಯವಾದ ಮಾಹಿತಿಯ ಆಧಾರದಲ್ಲಿ ಇರುವುದು. ಬರುವ ಆಗಸ್ಟ್ ನಲ್ಲಿ ನಾವು ಈ ಚಲನಚಿತ್ರ ಬಿಡುಗಡೆಗೊಳಿಸುವೆವು ಎಂದು ಹೇಳಿದರು.
‘The Diary of West Bengal’ director #SanojMishra has been summoned over ‘attempt to defame state’ | #WestBengal #TheDiaryOfWestBengal https://t.co/S6SmUoMrF1
— Republic (@republic) May 26, 2023
ಸಂಪಾದಕರ ನಿಲುವುಬಂಗಾಳದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ತೃಣಮೂಲ ಕಾಂಗ್ರೆಸ್ ಸರಕಾರದಿಂದ ಸರ್ವಾಧಿಕಾರ ನಡೆಯುತ್ತಿದೆ. ಅವರೇ ಭಯಪಡಿಸುತ್ತಿದ್ದಾರೆ ! ಇಂತಹ ಸರಕಾರ ಆದಷ್ಟು ಬೇಗನೆ ವಿಸರ್ಜಿಸುವುದು ಅವಶ್ಯಕ ! |