ಯುದ್ಧದ ಮೇಲೆ ಉಪಾಯಗಳನ್ನು ಕಂಡು ಹಿಡಿಯಲು ಭಾರತ ಕೈಲಾದಷ್ಟು ಪ್ರಯತ್ನ ಮಾಡಲಿದೆ ! – ಪ್ರಧಾನಮಂತ್ರಿ ಮೋದಿ

ಜಪಾನ್ ನಲ್ಲಿ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಉಕ್ರೇನ ರಾಷ್ಟ್ರಾಧ್ಯಕ್ಷ ಝೆಲೆಂಕ್ಸಿಯವರ ಭೇಟಿ

ಪ್ರಧಾನಿ ನರೇಂದ್ರ ಮೋದಿ

ಟೋಕಿಯೋ (ಜಪಾನ) – ಇಲ್ಲಿ `ಜಿ 7’ ದೇಶಗಳ ವಾರ್ಷಿಕ ಶಿಖರ ಸಮ್ಮೇಳನದಲ್ಲಿ ಭಾಗವಹಿಸಲು ತೆರಳಿದ್ದ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಲ್ಲಿ ಉಕ್ರೇನ ರಾಷ್ಟ್ರಾಧ್ಯಕ್ಷ ವ್ಲೋದಿಮಿರ ಝೆಲೆಂಕ್ಸಿಯವರನ್ನು ಭೇಟಿ ಮಾಡಿದರು. ಇಬ್ಬರು ಮುಖಂಡರ ನಡುವೆ ಚರ್ಚೆ ನಡೆಯಿತು. ಪ್ರಧಾನಮಂತ್ರಿ ಮೋದಿಯವರು, ಉಕ್ರೇನ ಮತ್ತು ರಷ್ಯಾದ ನಡುವೆ ನಡೆದಿರುವ ಯುದ್ಧ ಜಗತ್ತಿಗೆ ಮಹತ್ವದ್ದ ವಿಷಯವಾಗಿದೆ. ನಾನು ಇದನ್ನು ಕೇವಲ ಅರ್ಥವ್ಯವಸ್ಥೆ ಮತ್ತು ರಾಜಕೀಯ ಅಂಶಗಳೆಂದು ನಂಬುವುದಿಲ್ಲ. ಬದಲಾಗಿ ನನಗೆ ಅದು ಮಾನವಿಯತೆಯ ವಿಷಯವಾಗಿದೆ. ಈ ಯುದ್ಧವನ್ನು ನಿಲ್ಲಿಸಲು ಉಪಾಯಗಳನ್ನು ಕಂಡು ಹಿಡಿಯಲು ನಮ್ಮಿಂದ ಏನು ಸಾಧ್ಯವಿದೆಯೋ, ಅವೆಲ್ಲವನ್ನೂ ನಾವು ಮಾಡುತ್ತೇವೆ, ಎಂದು ಹೇಳಿದರು.