ಚೆನ್ನಾಗಿ ಪ್ರಯತ್ನಿಸುವವರನ್ನು ಪ್ರೋತ್ಸಾಹಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ದೂರಚಿತ್ರವಾಹಿನಿಯಲ್ಲಿನ ಸುಪ್ರಸಿದ್ಧ ‘ಮಹಾಭಾರತ’ ಮಾಲಿಕೆಯಲ್ಲಿ ಶ್ರೀಕೃಷ್ಣನ ಪಾತ್ರವನ್ನು ಸಾಕಾರಗೊಳಿಸಿದ ಸೌರಭ ಜೈನ್ ಇವರು ಪತ್ನಿ ರಿದ್ಧಿಮಾ ಮತ್ತು ಕುಟುಂಬ ಸಮೇತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರನ್ನು ಭೇಟಿಯಾದರು. ಅವರು ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಅಧ್ಯಾತ್ಮದ ವಿಷಯದಲ್ಲಿ ವಿವಿಧ ಪ್ರಶ್ನೆಗಳನ್ನು ಕೇಳಿ ಸಂದೇಹ ನಿವಾರಣೆ ಮಾಡಿಕೊಂಡರು. ಅಭಿನಯದ ಮೂಲಕ ಈಶ್ವರನ ತನಕ ತಲುಪುವ ದೃಷ್ಟಿಯಿಂದ ಸೌರಭ ರಾಜ ಜೈನ್ ಇವರು ಮಾಡುತ್ತಿರುವ ಪ್ರಯತ್ನವನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಅವರನ್ನು ಪ್ರಶಂಸಿಸಿದರು.