ಮಾನವನ ದೇಹ ಪಂಚಮಹಾಭೂತ ಗಳಿಂದ ತಯಾರಾಗಿದೆ. ವ್ಯಕ್ತಿಯ ಸಾಧನೆ ಹೆಚ್ಚಾಗುತ್ತಾ ಹೋದಂತೆ ದೇಹದಲ್ಲಿನ ಪಂಚಮಹಾಭೂತಗಳು ಜಾಗೃತವಾಗ ತೊಡಗುತ್ತವೆ. ವ್ಯಕ್ತಿಯ ಸಾಧನೆಗನುಸಾರ ಮತ್ತು ಕಾರ್ಯದ ಆವಶ್ಯಕತೆಗನುಸಾರ ದೇಹದಲ್ಲಿ ವಿಶಿಷ್ಟ ತತ್ತ್ವದ ಪ್ರಮಾಣ ಹೆಚ್ಚು-ಕಡಿಮೆ ಆಗುತ್ತಿರುತ್ತದೆ. ಸಾಧನೆಯಿಂದ ಸಂತರ ದೇಹದಲ್ಲಿ ಈಶ್ವರೀ ತತ್ತ್ವವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಆದುದರಿಂದ ಇಂತಹ ಸಾತ್ತ್ವಿಕ ದೇಹದ ಮೇಲೆ ಪಂಚಮಹಾಭೂತಗಳಿಂದಾದ ಪರಿಣಾಮಗಳು ಸಾಧನೆಯನ್ನು ಮಾಡುವ ಇತರ ಸಾತ್ತ್ವಿಕ ಜೀವಗಳಿಗೆ ಸಹಜವಾಗಿ ಗೋಚರಿಸುತ್ತವೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರು ಸಾಧಕರಿಗೆ ಈಶ್ವರಪ್ರಾಪ್ತಿ ಆಗಬೇಕೆಂದು ಅಖಂಡ ಮಾರ್ಗದರ್ಶನ ಮಾಡುತ್ತಿರುತ್ತಾರೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಿ ಎಲ್ಲೆಡೆ ಸಾತ್ತ್ವಿಕ ರಾಜ್ಯ ಬರಬೇಕು, ರಾಷ್ಟ್ರಕ್ಕೆ ಧರ್ಮದ ಅಧಿಷ್ಠಾನ ಲಭಿಸಬೇಕು, ಎಂಬ ಸಂಕಲ್ಪದಿಂದ ಅವರು ಕಾರ್ಯನಿರತರಾಗಿದ್ದಾರೆ. ಅವರ ಈ ಈಶ್ವರೀ ಕಾರ್ಯದಿಂದಾಗಿ ಅವರ ದೇಹವೂ ಈಶ್ವರೀ ತತ್ತ್ವದಿಂದ ತುಂಬಿಕೊಂಡಿದೆ. ಪರಾತ್ಪರ ಗುರು ಡಾ.ಆಠವಲೆಯವರ ದೇಹದಲ್ಲಿ ಕಾಲಕ್ಕನುಸಾರ, ಕಾರ್ಯಕ್ಕನುಸಾರ ವಿವಿಧ ಬುದ್ಧಿಅಗಮ್ಯ ಬದಲಾವಣೆಗಳು ಕಂಡುಬರುತ್ತವೆ. ಇತ್ತೀಚೆಗಷ್ಟೆ ಪರಾತ್ಪರ ಗುರು ಡಾ. ಆಠವಲೆಯವರ ದೇಹದಲ್ಲಿನ ತೇಜತತ್ತ್ವರೂಪಿ ಪ್ರಕಾಶದ (ಬೆಳಕಿನ) ಸಂದರ್ಭದಲ್ಲಿ ಗೋವಾದ ಸನಾತನದ ರಾಮನಾಥಿ ಆಶ್ರಮದಲ್ಲಿ ವಿವಿಧ ಪ್ರಯೋಗಗಳನ್ನು ಮಾಡಲಾಯಿತು. ಈ ಪ್ರಯೋಗಗಳಿಂದ ವಿವಿಧ ಬುದ್ಧಿಅಗಮ್ಯ ಅನುಭೂತಿಗಳ ಹೊಸ ಭಂಡಾರವನ್ನೇ ಅಖಿಲ ಮನುಕುಲಕ್ಕಾಗಿ ತೆರೆದಿಡಲಾಯಿತು. ಈ ಪ್ರಯೋಗ, ಅದರ ಛಾಯಾಚಿತ್ರಗಳು, ಚಿತ್ರೀಕರಣ ಮತ್ತು ಅದರ ಹಿಂದಿನ ಅಧ್ಯಾತ್ಮಶಾಸ್ತ್ರ ಇತ್ಯಾದಿ ವಿಷಯಗಳನ್ನು ಈ ಲೇಖನದಿಂದ ನಾವು ತಿಳಿದುಕೊಳ್ಳುವವರಿದ್ದೇವೆ.
೧. ಪರಾತ್ಪರ ಗುರು ಡಾ. ಆಠವಲೆಯವರ ಕೈಗಳ ಬೆರಳುಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಮತ್ತು ಬಿಳಿ ಪ್ರಕಾಶ ಹೊರಬರುವುದು ಕಾಣಿಸುತ್ತದೆ
ಪರಾತ್ಪರ ಗುರು ಡಾ. ಆಠವಲೆ ಯವರಿಗೆ ಸುಮಾರು ಜನವರಿ ೨೦೨೨ ರಲ್ಲಿ ಮಂದ ಬೆಳಕಿನಲ್ಲಿ ಅವರು ತಮ್ಮ ಕೈಗಳನ್ನು ನೋಡಿದಾಗ ಕೈಬೆರಳು ಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು. ಆಗ ಅವರು ಇದರ ಬಗ್ಗೆ ಜೊತೆಯಲ್ಲಿದ್ದ ಸಾಧಕರಿಗೆ ಕೇಳಿದರು, ಆಗ ಅವರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಬೆರಳುಗಳ ತುದಿಗಳಿಂದ ಊದುಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು. ಕೆಲವೊಮ್ಮೆ ಅವರ ಅಂಗೈ ಮತ್ತು ಮಣಿಕಟ್ಟಿನ ಮುಂದೆ ೧೦-೧೨ ಸೆಂ.ಮೀ. ನವರೆಗೂ ಈ ಹೊಗೆ ಬರುವುದು ಕಾಣಿಸುತ್ತದೆ. ಇದೊಂದು ಬುದ್ಧಿಅಗಮ್ಯ ಘಟನೆ ಎಂದು ಗಮನಕ್ಕೆ ಬಂದಿದ್ದರೂ, ಪರಾತ್ಪರ ಗುರು ಡಾಕ್ಟರರು ಅತ್ಯಂತ ಜಿಜ್ಞಾಸೆಯಿಂದ ಈ ವಿಷಯದಲ್ಲಿ, ಈ ಮುಂದಿನ ಸಂಶೋಧನೆಗಳನ್ನು ಮಾಡಿದರು. ಈ ಘಟನೆಯ ನಂತರ ಅವರು ಸಾಧಕರನ್ನು ಭೇಟಿಯಾದಾಗಲೆಲ್ಲ, ಅವರಿಂದ ಈ ಪ್ರಯೋಗವನ್ನು ಮಾಡಿಸಿಕೊಂಡರು. ಆಗ ಆ ಸತ್ಸಂಗದಲ್ಲಿನ ಸಾಧಕರಿಗೂ ಪರಾತ್ಪರ ಗುರು ಡಾ. ಆಠವಲೆಯವರ ಎರಡೂ ಕೈಗಳ ಬೆರಳುಗಳಿಂದ ಊದುಬತ್ತಿಯ ಹೊಗೆಯಂತೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು.
೨. ಕಡಿಮೆ ಬೆಳಕಿನಲ್ಲಿ ಸಾಧಕನ ಅಂಗೈಯ ತುಲನೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಂಗೈ ಸ್ಪಷ್ಟವಾಗಿ ಕಾಣಿಸುವುದು
ಕೈಗಳ ಅಂಗೈಗಳ ಪ್ರಯೋಗವನ್ನು ಮಾಡುವಾಗ ಒಂದು ದಿನ ಪರಾತ್ಪರ ಗುರು ಡಾಕ್ಟರರು ಸಾಧಕರಿಂದ ಇನ್ನೂ ಒಂದು ಪ್ರಯೋಗವನ್ನು ಮಾಡಿಸಿಕೊಂಡರು. ‘ಕಡಿಮೆ ಬೆಳಕಿನಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರ ಹಾಗೆಯೇ ಬಿಳಿವರ್ಣದ ಸಾಧಕ ಇವರಲ್ಲಿ ಯಾರ ಅಂಗೈ ಎದ್ದು ಕಾಣಿಸುತ್ತದೆ ?, ಎಂಬ ಒಂದು ತುಲನಾತ್ಮಕ ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗದಲ್ಲಿ ಅನೇಕ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರ ಅಂಗೈ ಕಡಿಮೆ ಬೆಳಕಿನಲ್ಲಿಯೂ ಕಾಣಿಸುತ್ತಿತ್ತು ಮತ್ತು ಅದರಿಂದ ಊದು ಬತ್ತಿಯ ಹೊಗೆಯ ಹಾಗೆ ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು ಕಾಣಿಸಿತು. ಪ್ರಯೋಗಕ್ಕಾಗಿ ಕುಳಿತಿದ್ದ ಸಾಧಕನ ಕೈ ಇತರ ಸಾಧಕರಿಗೆ ಅದೇ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸಲಿಲ್ಲ, ಹಾಗೆಯೇ ಪರಾತ್ಪರ ಗುರು ಡಾಕ್ಟರರ ಕೈಯಿಂದ ಬರುವ (ಹೊಗೆ ಬರುವುದು ಮತ್ತು ಬಿಳಿ ಪ್ರಕಾಶ ಹೊರಗೆ ಬರುವುದು) ಅನುಭೂತಿಗಳೂ ಬರಲಿಲ್ಲ.
೩. ಪರಾತ್ಪರ ಗುರು ಡಾ. ಆಠವಲೆಯವರ ಮುಖ, ಅಂಗೈ ಮತ್ತು ಅಂಗಾಲು ಇವುಗಳನ್ನು ಮಂದ ಬೆಳಕಿನಲ್ಲಿ ಒಟ್ಟಿಗೆ ನೋಡಿದಾಗ ಅಂಗಾಲು ಎಲ್ಲಕ್ಕಿಂತ ಹೆಚ್ಚು ಎದ್ದು ಕಾಣಿಸುವುದು
ತೇಜತತ್ತ್ವದ ಪ್ರಯೋಗದ ಅಂತರ್ಗತ ಇನ್ನೂ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರ ಮುಖ, ಅಂಗೈ ಮತ್ತು ಅಂಗಾಲು ಕತ್ತಲೆಯಲ್ಲಿ ಎಷ್ಟು ಸ್ಪಷ್ಟವಾಗಿ ಕಾಣಿಸುತ್ತವೆ ಮತ್ತು ಆ ಮೂರರಲ್ಲಿ ಯಾವುದು ಹೆಚ್ಚು ಸ್ಪಷ್ಟ ಕಾಣಿಸುತ್ತದೆ ?, ಇವುಗಳ ಅಧ್ಯಯನವನ್ನು ಮಾಡಲಾಯಿತು. ಈ ಪ್ರಯೋಗದಲ್ಲಿ ಮಂದ ಬೆಳಕಿನಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಮುಖಮಂಡಲ ಸ್ಪಷ್ಟವಾಗಿ ಕಾಣಿಸಿತು. ಅದಕ್ಕಿಂತ ಹೆಚ್ಚು ಅವರ ಕೈಗಳ ಅಂಗೈಗಳು ಪ್ರಕಾಶಮಾನ ಮತ್ತು ಸುಸ್ಪಷ್ಟ ಕಾಣಿಸಿದವು. ಮುಖಮಂಡಲ ಮತ್ತು ಅಂಗೈಗಳಿಗಿಂತ ಅವರ ಚರಣಗಳ ಅಂಗಾಲುಗಳು ಹೆಚ್ಚು ಪ್ರಕಾಶಮಾನವಾಗಿ ಕಾಣಿಸಿದವು. ಈ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಂಗೈ ಮತ್ತು ಅಂಗಾಲುಗಳು ಎಣ್ಣೆ ಹಚ್ಚಿದಂತೆ ನುಣುಪಾಗಿ ಹಾಗೆಯೇ ಹೊಳೆಯುವುದು ಕಾಣಿಸಿತು. ಇದಕ್ಕೆ ಅನುಕ್ರಮವಾಗಿ ಅವರ ದೇಹದಲ್ಲಿರುವ ವಾಯುತತ್ತ್ವ ಮತ್ತು ತೇಜತತ್ತ್ವ ಕಾರಣವಾಗಿದೆ !
೩ ಅ. ಛಾಯಾಚಿತ್ರಗಳನ್ನು ತೆಗೆಯುವಾಗ ತೆಗೆದುಕೊಳ್ಳಲಾದ ಕಾಳಜಿ !
‘ಪರಾತ್ಪರ ಗುರು ಡಾ.ಆಠವಲೆಯವರ ಮುಖಮಂಡಲ ಮತ್ತು ಅಂಗೈಗಳ ತುಲನೆಯಲ್ಲಿ ಅಂಗಾಲುಗಳು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತವೆ, ಎಂಬುದನ್ನು ತೋರಿಸಲಿಕ್ಕಾಗಿಯೆ ಅವುಗಳ ಛಾಯಾಚಿತ್ರಗಳನ್ನು ತೆಗೆಯಲಾಗಿದೆ. ಈ ಛಾಯಾಚಿತ್ರಗಳನ್ನು ತೆಗೆಯುವಾಗ ಮುಂದಿನ ಕಾಳಜಿ ತೆಗೆದುಕೊಳ್ಳಲಾಯಿತು.
೩ ಅ ೧. ಬಟ್ಟೆಗಳ ಬಣ್ಣದಿಂದ ಪ್ರಯೋಗದ ಮೇಲೆ ಪರಿಣಾಮವಾಗ ಬಾರದೆಂದು ಪರಾತ್ಪರ ಗುರು ಡಾ. ಆಠವಲೆಯವರ ಮುಖಮಂಡಲ, ಅಂಗೈ ಮತ್ತು ಅಂಗಾಲುಗಳನ್ನು ಬಿಟ್ಟು ಶರೀರದ ಉಳಿದ ಭಾಗಗಳ ಮೇಲೆ ಕಪ್ಪು ಬಟ್ಟೆಯನ್ನು ಹಾಕಲಾಗಿತ್ತು.
೩ ಅ ೨. ಚಿತ್ರೀಕರಣ ಕಕ್ಷೆಯ ಹಿಂದಿನ ಗೋಡೆಗೆ ಕಪ್ಪು ಬಣ್ಣದ ಬಟ್ಟೆಯನ್ನು ಕಟ್ಟಲಾಗಿತ್ತು.
೩ ಆ. ಛಾಯಾಚಿತ್ರೀಕರಣದ ಮಿತಿ : ಇದು ಅಲ್ಪ ಬೆಳಕಿನಲ್ಲಿನ ಛಾಯಾಚಿತ್ರ (ಟoತಿ ಟighಣ ಠಿhoಣogಡಿಚಿಠಿhಥಿ) ಆಗಿರುವುದರಿಂದ ಈ ಛಾಯಾಚಿತ್ರಗಳ ಗುಣಮಟ್ಟ ಸ್ವಲ್ಪ ಕಡಿಮೆಯಿದೆ. ಪ್ರಕಾಶ ಕಡಿಮೆ ಇರುವುದರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮುಖದ ಮೇಲೆ ಸ್ವಲ್ಪ ಕೆಂಪುತನವೂ ಬಂದಿದೆ; ಆದರೆ ಪ್ರಯೋಗವನ್ನು ಅಲ್ಪ ಬೆಳಕಿನಲ್ಲಿಯೇ ಮಾಡಬೇಕಾಗಿದ್ದರಿಂದ ಈ ಹೊಂದಾಣಿಕೆಯನ್ನು ಸ್ವೀಕರಿಸಲಾಯಿತು.
೪. ಅಲ್ಪ ಬೆಳಕಿನಲ್ಲಿ ಸಾಧಕನ ತುಲನೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಹೆಚ್ಚು ಸ್ಪಷ್ಟ ಕಾಣಿಸುವುದು
ಮೊದಲಿನ ಪ್ರಯೋಗಗಳ ಮುಂದಿನ ಹಂತವೆಂದು ‘ಅಲ್ಪ ಬೆಳಕಿನಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರಷ್ಟೇ ಬೆಳ್ಳಗಿರುವ ಸಾಧಕನ ಕಡೆಗೆ ನೋಡುವುದು ಇಂತಹ ಪ್ರಯೋಗವನ್ನು ಮುಂದಿನ ಕೆಲವು ಸತ್ಸಂಗಗಳಲ್ಲಿ ತೆಗೆದುಕೊಳ್ಳಲಾಯಿತು. ಈ ಪ್ರಯೋಗಗಳಲ್ಲಿ ಸಾಧಕರಿಗೆ ಪರಾತ್ಪರ ಗುರು ಡಾ. ಆಠವಲೆಯವರು ಕಡಿಮೆ ಬೆಳಕಿನಲ್ಲಿಯೂ ಸ್ಪಷ್ಟವಾಗಿ ಕಾಣಿಸಿದರು. ಪರಾತ್ಪರ ಗುರು ಡಾಕ್ಟರರ ಜುಬ್ಬಾ ಬಂದಿತು ಹಾಗೆಯೇ ಅವರ ಕಣ್ಣು, ಮೂಗು, ಕಿವಿ ಇವು ಕೂಡ ಕಡಿಮೆ ಬೆಳಕಿನಲ್ಲಿ ಸ್ಪಷ್ಟವಾಗಿ ಕಾಣಿಸುತ್ತವೆ; ಆದರೆ ಅವರ ಜೊತೆಗಿದ್ದ ಸಾಧಕನ ದೇಹದ ಕೇವಲ ಬಾಹ್ಯರೇಖೆ ಮಾತ್ರ ಕಾಣಿಸುತ್ತದೆ. ಆಗ ಸಾಧಕನ ಮುಖ, ಕಣ್ಣು, ಕಿವಿ ಇತ್ಯಾದಿ ಸ್ಪಷ್ಟವಾಗಿ ಕಾಣದೆ ಗಲ್ಲದ ಮೇಲಿನ ಎತ್ತರ ಭಾಗಗಳು ಕಾಣಿಸುತ್ತವೆ.
ಇದೇ ರೀತಿ ‘ಪರಾತ್ಪರ ಗುರು ಡಾ. ಆಠವಲೆ ಮತ್ತು ಒಬ್ಬ ಸಾಧಕ ಕತ್ತಲೆಯಿಂದ ಬೆಳಕಿನ ಕಡೆಗೆ ನಡೆಯುತ್ತಾ ಮುಂದೆ ಮುಂದೆ ಬರುವುದು, ಈ ಪ್ರಯೋಗವನ್ನೂ ಮಾಡಲಾಯಿತು. ಈ ಪ್ರಯೋಗ ದಲ್ಲಿಯೂ ‘ಸಾಧಕನ ತುಲನೆಯಲ್ಲಿ ಪರಾತ್ಪರ ಗುರು ಡಾಕ್ಟರರು ಮಂದ ಬೆಳಕಿನಲ್ಲಿಯೂ ಹೆಚ್ಚು ಸ್ಪಷ್ಟವಾಗಿ ಕಾಣಿಸುತ್ತಾರೆ, ಎಂಬುದು ಗಮನಕ್ಕೆ ಬಂದಿತು.
೪ ಅ. ಕತ್ತಲೆಯಿಂದ ಬೆಳಕಿನ ದಿಕ್ಕಿನಲ್ಲಿ ನಡೆದುಕೊಂಡು ಬರುವಾಗ ಮಾಡಿದ ನಿರೀಕ್ಷಣೆ
ಕತ್ತಲೆಯಿಂದ ಬೆಳಕಿನ ಕಡೆಗೆ ನಡೆದುಕೊಂಡು ಬರುವುದು, ಈ ಪ್ರಯೋಗದ ಸಮಯದಲ್ಲಿ ಕೆಮರಾದ ಮುಂದಿನ ಭಾಗದಲ್ಲಿ ಕತ್ತಲೆಯಿತ್ತು ಮತ್ತು ಕೆಮರಾದ ಹಿಂದೆ ಮಂದ ಬೆಳಕಿನ ದೀಪವನ್ನು ಹಚ್ಚಲಾಗಿತ್ತು. ಈ ಪ್ರಯೋಗದಲ್ಲಿ ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರಂತಹ ಗೌರವರ್ಣದ ಒಬ್ಬ ಸಾಧಕ ಕೆಮರಾದಿಂದ ೮.೫ ಮೀಟರ್ ಅಂತರದಿಂದ (ಕತ್ತಲೆಯ ಸ್ಥಳದಿಂದ) ಕೆಮರಾದ ಕಡೆಗೆ (ಬೆಳಕಿರುವ ಸ್ಥಳದ ಕಡೆಗೆ) ನಡೆದುಕೊಂಡು ಬಂದರು. ಅವರಿಬ್ಬರೂ ಮುಂದೆ ಮುಂದೆ ನಡೆದುಕೊಂಡು ಹೋಗುವಾಗ ಮಾಡಿದ ನಿರೀಕ್ಷಣೆಗಳನ್ನು ಈ ಕೆಳಗಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಈ ಪ್ರಯೋಗದ ಛಾಯಾಚಿತ್ರಗಳನ್ನು ಮುದ್ರಿಸಲು ತಾಂತ್ರಿಕ ಮಿತಿ ಇರುವುದರಿಂದ ಅವುಗಳನ್ನು ಮುದ್ರಿಸಿಲ್ಲ. ಈ ಪ್ರಯೋಗದ ಚಲನಚಿತ್ರ (ವಿಡಿಯೋ) ಸನಾತನ ಸಂಸ್ಥೆಯ ಬಳಿ ಲಭ್ಯವಿದೆ
೪ ಆ. ಪ್ರಯೋಗ ಮಾಡುವಾಗ ತೆಗೆದುಕೊಂಡ ಕಾಳಜಿ
೪ ಆ ೧. ಚಿತ್ರೀಕರಣ ಕಕ್ಷೆಯ ಹಿಂದಿನ ಭಾಗದಲ್ಲಿ (ಪರಾತ್ಪರ ಗುರು ಡಾ. ಆಠವಲೆ ಮತ್ತು ಅವರ ಜೊತೆಗೆ ಒಬ್ಬ ಸಾಧಕ ನಡೆದುಕೊಂಡು ಬರುವಾಗ ಅವರ ಹಿಂದೆ) ಇರುವ ಗೋಡೆಗೆ ಕಪ್ಪು ಬಟ್ಟೆಯನ್ನು ಕಟ್ಟಲಾಗಿತ್ತು.
೪ ಆ ೨. ಕೆಮರಾದ ಹಿಂದೆ ಮಂದ ಬೆಳಕಿನ ದೀಪವನ್ನು ಹಚ್ಚಲಾಗಿತ್ತು.
೪ ಆ ೩. ಪರಾತ್ಪರ ಗುರು ಡಾ. ಆಠವಲೆ ಮತ್ತು ಪ್ರಯೋಗದಲ್ಲಿ ಭಾಗವಹಿಸಿದ ಸಾಧಕ ಇಬ್ಬರೂ ಒಂದೇ ಬಣ್ಣದ (ಬಾದಾಮಿ) ಜುಬ್ಬಾ ಧರಿಸಿದ್ದರು.
೪ ಇ. ಪ್ರಯೋಗದಲ್ಲಿ ಭಾಗವಹಿಸುವ ವ್ಯಕ್ತಿಗಳ ಆಧ್ಯಾತ್ಮಿಕ ಮಟ್ಟಕ್ಕನುಸಾರ ಅವರ ಮಂದ ಬೆಳಕಿನಲ್ಲಿನ ದೃಷ್ಟಿ ಗೋಚರತ್ವ (ಕಾಣಿಸುವ ಪ್ರಮಾಣ) ಹೆಚ್ಚು-ಕಡಿಮೆ ಇರಬಹುದು
ಪರಾತ್ಪರ ಗುರು ಡಾ. ಆಠವಲೆಯವರ ಜೊತೆಗೆ ಪ್ರಯೋಗದಲ್ಲಿ ಭಾಗವಹಿಸಿದ ಸಾಧಕನ ಆಧ್ಯಾತ್ಮಿಕ ಮಟ್ಟ ಶೇ. ೬೩ ರಷ್ಟಿದೆ. ವ್ಯಕ್ತಿಯ ಆಧ್ಯಾತ್ಮಿಕ ಮಟ್ಟ ಇದಕ್ಕಿಂತ ಹೆಚ್ಚಿದ್ದರೆ ಅವನಲ್ಲಿನ ಚೈತನ್ಯ ಹೆಚ್ಚುತ್ತಿರುವುದರಿಂದ ಆ ವ್ಯಕ್ತಿಯ ದೃಷ್ಟಿ ಗೋಚರತ್ವ (ಕಾಣಿಸುವ ಪ್ರಮಾಣ) ಮಂದ ಬೆಳಕಿನಲ್ಲಿ ಹೆಚ್ಚು ಇರಬಹುದು. – (ಸದ್ಗುರು) ಡಾ. ಮುಕುಲ ಗಾಡಗೀಳ, ಪಿ.ಎಚ್.ಡಿ. ಗೋವಾ. (೪.೬.೨೦೨೨)
ತಜ್ಞರು, ಅಧ್ಯಯನಕಾರರು ಮತ್ತು ವೈಜ್ಞಾನಿಕ ದೃಷ್ಟಿಯಿಂದ ಸಂಶೋಧನೆ ಮಾಡುವವರಿಗೆ ವಿನಂತಿ !ಸಂತರ ದೇಹದಲ್ಲಿನ ಬುದ್ಧಿಅಗಮ್ಯ ಬದಲಾವಣೆಯ ವಿಷಯದಲ್ಲಿ ಸಂಶೋಧನೆಯನ್ನು ಮಾಡಿ ಅವುಗಳ ಕಾರ್ಯಕಾರಣಭಾವವನ್ನು ಕಂಡುಹಿಡಿಯಲು ಸಾಧಕರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿ ೧. ಪರಾತ್ಪರ ಗುರು ಡಾ. ಆಠವಲೆಯವರ ಕೈಬೆರಳುಗಳಿಂದ ಊದುಬತ್ತಿಯನ್ನು ಉರಿಸಿದಾಗ ಬರುವ ಹಾಗೆ ಹೊಗೆ ಮತ್ತು ಬಿಳಿ ಪ್ರಕಾಶ ಹೊರ ಸೂಸುವುದರ ಹಿಂದಿನ ಕಾರಣವೇನು ? ೨. ಅಲ್ಪ ಬೆಳಕಿನಲ್ಲಿ ಸಾಧಕನ ಅಂಗೈಯ ತುಲನೆಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಅಂಗೈ ಸ್ಪಷ್ಟವಾಗಿ ಕಾಣಿಸುವುದರ ಹಿಂದಿನ ಕಾರಣವೇನು ? ೩. ಪರಾತ್ಪರ ಗುರು ಡಾ. ಆಠವಲೆಯವರ ಮುಖ, ಅಂಗೈ ಮತ್ತು ಅಂಗಾಲು ಇವು ಮಂದ ಬೆಳಕಿನಲ್ಲಿ ಒಟ್ಟಿಗೆ ನೋಡಿದರೆ ಅಂಗಾಲು ಅತೀ ಹೆಚ್ಚು ಎದ್ದು ಕಾಣುವುದರ ಹಿಂದಿನ ಕಾರಣವೇನು ? ಈ ಬಗ್ಗೆ ತಜ್ಞರು, ಅಧ್ಯಯನಕಾರರು, ಈ ವಿಷಯದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ವೈಜ್ಞಾನಿಕ ದೃಷ್ಟಿಯಲ್ಲಿ ಸಂಶೋಧನೆ ಮಾಡುವವರ ಸಹಾಯ ನಮಗೆ ಲಭಿಸಿದರೆ ನಾವು ಕೃತಜ್ಞರಾಗಿರುವೆವು. – ವ್ಯವಸ್ಥಾಪಕರು, ಸನಾತನ ಆಶ್ರಮ, ರಾಮನಾಥಿ ಗೋವಾ. ಸಂಪರ್ಕ: ಶ್ರೀ. ಆಶಿಷ್ ಸಾವಂತ ವಿ-ಅಂಚೆ : [email protected] |