ಚಿಕ್ಕ ವಯಸ್ಸಿನಿಂದ ಸ್ಮಾರ್ಟ ಫೋನ್ ಉಪಯೋಗಿಸಿದರೆ ಮಾನಸಿಕ ರೋಗಗಳ ಪ್ರಮಾಣ ಅಧಿಕ ! – ಸಂಶೋಧನೆ

ಪುರುಷರಿಗಿಂತ ಸ್ತ್ರೀಯರ ಮೇಲೆ ಹೆಚ್ಚು ಪರಿಣಾಮ

ಅಧ್ಯಾತ್ಮ ಇಲ್ಲದ ತಂತ್ರಜ್ಞಾನದ ಅತಿರೇಕದ ಉಪಯೋಗದ ಪರಿಣಾಮ !

ವಾಶಿಂಗ್ಟನ್ (ಅಮೇರಿಕಾ) – ಇಲ್ಲಿಯ `ಸೇಪಿಯನ ಲಾಬ್ಜ’ ಈ ಸಂಸ್ಥೆಯು ಒಂದು ಮಹತ್ವಪೂರ್ಣ ಸಂಶೋಧನೆಯನ್ನು ನಡೆಸಿದ್ದು, `ತಂತ್ರಜ್ಞಾನ ಚಿಕ್ಕ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಯಾವ ರೀತಿ ದುಷ್ಪರಿಣಾಮ ಬೀರುತ್ತದೆ?’ ಎನ್ನುವುದು ಅದರಿಂದ ಬಹಿರಂಗವಾಗಿದೆ. ಒಂದು ವೇಳೆ ಚಿಕ್ಕ ಮಕ್ಕಳ ಕೈಯಲ್ಲಿ `ಸ್ಮಾರ್ಟಫೋನ’ ಕೊಟ್ಟರೆ, ದೊಡ್ಡವರಾದ ಬಳಿಕ ಅವರಿಗೆ ಗಂಭೀರ ಸ್ವರೂಪದ ಮಾನಸಿಕ ರೋಗ ಬರುವ ಸಾಧ್ಯತೆಯಿದೆ. ಅದರಲ್ಲಿಯೂ ಪುರುಷರಿಗಿಂತ ಸ್ತ್ರೀಯರ ಮಾನಸಿಕ ಆರೋಗ್ಯದ ಮೇಲೆ ಇದರ ಪರಿಣಾಮ ಅಧಿಕವಿರುತ್ತದೆಯೆಂದು ಈ ಸಂಶೋಧನೆಯಿಂದ ಕಂಡು ಬಂದಿದೆ.

1. ಸಂಶೋಧನೆಯ ಅನುಸಾರ ಎಷ್ಟು ತಡವಾಗಿ ಹುಡುಗರ ಕೈಯಲ್ಲಿ ಸ್ಮಾರ್ಟ ಫೋನ ಇರುತ್ತದೆಯೋ ಅಷ್ಟು ಅವರ ಆತ್ಮವಿಶ್ವಾಸ ಮತ್ತು ಇತರರೊಂದಿಗೆ ಸಕಾರತ್ಮಕತೆಯಿಂದ ಸಂಬಂಧ ಹೊಂದುವ ಅವರ ಕ್ಷಮತೆ ಹೆಚ್ಚಾಗಿರುವುದು ಕಂಡು ಬಂದಿತು. ಹಾಗೆಯೇ ಯಾವ ಹುಡುಗಿಯರಿಗೆ ತಡವಾಗಿ ಸ್ಮಾರ್ಟಫೋನ ಸಿಗುತ್ತದೆಯೋ, ಅವರ ದೃಷ್ಟಿಕೋನದ ಅನುಕೂಲತೆ ಮತ್ತು ಉತ್ಸಾಹ ಹೆಚ್ಚು ಇರುವುದು ಗಮನಕ್ಕೆ ಬಂದಿತು.

2. ಒಂದು ವೇಳೆ ಹುಡುಗರು ಅತಿ ಚಿಕ್ಕ ವಯಸ್ಸಿನಲ್ಲಿ ಸ್ಮಾರ್ಟಫೋನ ಸಿಕ್ಕರೆ, ಅವರಲ್ಲಿ ಆತ್ಮಹತ್ಯೆಯ ವಿಚಾರ, ಇತರರ ಬಗ್ಗೆ ಆಕ್ರಮಣಕಾರಿ ಭಾವನೆ, ವಾಸ್ತವದಿಂದ ದೂರವಿರುವುದು, ಇಂತಹ ಅನೇಕ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಂಡು ಬಂದಿದೆ.

3. `ಏಜ್ ಆಫ್ ಫಸ್ಟ ಸ್ಮಾರ್ಟಫೋನ ಅಂಡ್ ಮೆಂಟಲ್ ವೆಲಬಿಯೀಂಗ್ ಔಟಕಮ್ಸ’ (ಸ್ಮಾರ್ಟಫೋನ ಮೊದಲು ಉಪಯೋಗಿಸುವವರ ವಯಸ್ಸು ಮತ್ತು ಮಾನಸಿಕ ಆರೋಗ್ಯದ ಮೇಲೆ ಅದರ ಮೇಲಾಗುವ ಪರಿಣಾಮ) ಈ ಹೆಸರಿನಲ್ಲಿ ಒಂದು ಸಂಶೋಧನೆಯನ್ನು ಮೇ 14 ರಂದು ಪ್ರಕಟಿಸಲಾಗಿದೆ.

4. ಜನವರಿಯಿಂದ ಎಪ್ರಿಲ್ 2023 ಕಾಲಾವಧಿಯಲ್ಲಿ 18 ರಿಂದ 24 ವರ್ಷ ವಯಸ್ಸಿನ 27 ಸಾವಿರ 969 ಮಕ್ಕಳ ಮಾನಸಿಕ ಆರೋಗ್ಯದ ಅಧ್ಯಯನ ನಡೆಸಲಾಯಿತು. ಉತ್ತರ ಅಮೇರಿಕಾ, ಯುರೋಪ, ಲ್ಯಾಟಿನ ಅಮೇರಿಕಾ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ 41 ದೇಶಗಳಲ್ಲಿ ಈ ಸಮೀಕ್ಷೆ ನಡೆಸಲಾಯಿತು. ಭಾರತದಲ್ಲಿರುವ 4 ಸಾವಿರ ಯುವಕರನ್ನು ಈ ಸಂಶೋಧನೆಯಲ್ಲಿ ಸಮಾವೇಶಗೊಳಿಸಲಾಗಿತ್ತು.


ಸಂಶೋಧನೆಯ ಫಲಿತಾಂಶವನ್ನು ತಿಳಿಸುವ ಕೋಷ್ಠಕ

ಸ್ಮಾರ್ಟ್ ಫೋನ್ ಉಪಯೋಗದ ಆರಂಭ ಹುಡುಗ/ಹುಡುಗಿ ಮಾನಸಿಕ ಆರೋಗ್ಯ ಸಮಸ್ಯೆಯ ಪ್ರಮಾಣ (ಶೇಕಡಾವಾರು)
6 ವರ್ಷ ಹುಡುಗ 42
ಹುಡುಗಿ 74
18 ವರ್ಷ ಹುಡುಗ 36
ಹುಡುಗಿ 46

 

ಭಾರತದಂತಹ ಯುವ ದೇಶಕ್ಕೆ ಅತ್ಯಂತ ಆತಂಕದ ಅಂಶ

`ಸೇಪಿಯನ ಲಾಬ್ಜ’ ಈ ನಿರ್ದೇಶಕರಾದ ಶೈಲೇಂದರ ಸ್ವಾಮಿನಾಥನ್ ಇವರು ಈ ಸಂಶೋಧನೆಯಲ್ಲಿ, ತಂತ್ರಜ್ಞಾನದ ಅತಿರೇಕ ಚಿಕ್ಕ ಮಕ್ಕಳು ಮತ್ತು ಯುವಕರ ಮಾನಸಿಕ ಆರೋಗ್ಯದ ಮೇಲೆ ಎಷ್ಟು ಪರಿಣಾಮ ಬೀರುತ್ತದೆ ? ಎನ್ನುವುದು ಈ ಸಂಶೋಧನೆಯಿಂದ ಕಂಡು ಬರುತ್ತದೆ. ಭಾರತದಂತಹ ದೇಶಕ್ಕೆ ಈ ಸಂಶೋಧನೆ ಅತ್ಯಂತ ಮಹತ್ವಪೂರ್ಣವಾಗಿದೆ. ಭಾರತದಲ್ಲಿ 15 ರಿಂದ 25 ವಯಸ್ಸಿನ ಮಕ್ಕಳ ಸಂಖ್ಯೆ ಸುಮಾರು 20 ಕೋಟಿಯಷ್ಟಿದೆ. ಈ ಹಿನ್ನೆಲೆಯಲ್ಲಿ ಈ ಸಂಶೋಧನೆಯ ಫಲಿತಾಂಶ ಶಾಲೆ, ಪೋಷಕರು ಮತ್ತು ಇತರರಿಗೆ ಮಾರ್ಗದರ್ಶಕವಾಗಲಿದೆ.

ಭಾರತದಿಂದ ಕೇವಲ 4 ಸಾವಿರ ಮಕ್ಕಳು ಈ ಸಂಶೋಧನೆಯಲ್ಲಿ ಭಾಗಿಯಾಗಿದ್ದರೂ, ಈ ಪ್ರಮಾಣ ಆತಂಕ ಸೃಷ್ಠಿಸುವಂತಹದ್ದಾಗಿದೆ. ಭಾರತದಲ್ಲಿ 10 ರಿಂದ 14 ವಯಸ್ಸಿನ ಒಟ್ಟು ಶೇ. 83 ರಷ್ಟು ಮಕ್ಕಳ ಕೈಯಲ್ಲಿ ಸ್ಮಾರ್ಟಫೋನ ಇದೆ. ಅಂತರರಾಷ್ಟ್ರೀಯ ಪ್ರಮಾಣಕ್ಕಿಂತ ಈ ಸಂಖ್ಯೆ ಶೇ. 76 ರಷ್ಟು ಅಧಿಕವಿದೆ.